ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಭಾರತದ ಜಿ-20 ಅಧ್ಯಕ್ಷತೆಯು ಜಾಗತಿಕ ವ್ಯಾಪಾರವನ್ನು ಅಂತರ್ಗತ ಮತ್ತು ಪ್ರಗತಿಶೀಲವಾಗಿಸಲು ಸಹಕಾರಿ ಮಾರ್ಗಸೂಚಿಯನ್ನು ಬೆಂಬಲಿಸುತ್ತದೆ
ಬೆಂಗಳೂರಿನಲ್ಲಿ ನಡೆದ ಎರಡನೇ ಜಿ-20 ಟಿಐಡಬ್ಲ್ಯುಜಿ ಸಭೆ ಮುಕ್ತಾಯ
Posted On:
25 MAY 2023 9:34PM by PIB Bengaluru
ಜಾಗತಿಕ ವ್ಯಾಪಾರವನ್ನು ಅಂತರ್ಗತ ಮತ್ತು ಪ್ರಗತಿಶೀಲವಾಗಿಸಲು ಸಹಕಾರಿ ಮಾರ್ಗಸೂಚಿಯ ನಿರ್ಧಾರದೊಂದಿಗೆ ಎರಡನೇ ಜಿ-20 ವ್ಯಾಪಾರ ಮತ್ತು ಹೂಡಿಕೆ ಕಾರ್ಯಕಾರಿ ಗುಂಪಿನ (ಟಿಐಡಬ್ಲ್ಯುಜಿ) ಸಭೆಯು ಇಂದು ಬೆಂಗಳೂರಿನಲ್ಲಿ ಮುಕ್ತಾಯವಾಯಿತು. ಸಮ್ಮೇಳನದ ಸಮಯದಲ್ಲಿ ಚರ್ಚೆಗಳು ಡಬ್ಲ್ಯುಟಿಒ ಸುಧಾರಣೆಗಳು, ಭಾರತದ ಜಿ-20 ಅಧ್ಯಕ್ಷತೆ ಅಡಿಯಲ್ಲಿ 5 ನೇ ಆದ್ಯತೆಯ ವಿಷಯವನ್ನು ಒಳಗೊಂಡವು. ಈ ವರ್ಷದ ಆರಂಭದಲ್ಲಿ ಮುಂಬೈನಲ್ಲಿ ನಡೆದ ಮೊದಲ ಟಿಐಡಬ್ಲ್ಯುಜಿ ಸಭೆಯ ಒಪ್ಪಿಗೆಯ ತೀರ್ಮಾನಗಳ ಸುತ್ತ ಚರ್ಚೆಗಳು ನಡೆದವು.
ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಡಬ್ಲ್ಯುಟಿಒದ ನಿರ್ಣಾಯಕ ಪಾತ್ರವನ್ನು ಭಾರತದ ಅಧ್ಯಕ್ಷತೆ ಗುರುತಿಸುತ್ತದೆ ಎಂದು ವಾಣಿಜ್ಯ ಇಲಾಖೆಯ ಕಾರ್ಯದರ್ಶಿ ಶ್ರೀ ಸುನಿಲ್ ಬರ್ತ್ವಾಲ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಎಲ್ಲಾ ಸದಸ್ಯರ ಹಿತಾಸಕ್ತಿಗಳನ್ನು ವಿಶೇಷವಾಗಿ ಅಭಿವೃದ್ಧಿಶೀಲ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳ ಹಿತಾಸಕ್ತಿಗಳನ್ನು ಕಾಪಾಡುವ ಪಾರದರ್ಶಕ, ಅಂತರ್ಗತ ಮತ್ತು ಅಭಿವೃದ್ಧಿ-ಆಧಾರಿತ ಸುಧಾರಣೆಗಳ ಕಡೆಗೆ ಸಹಯೋಗದೊಂದಿಗೆ ಕೆಲಸ ಮಾಡುವುದು ಈ ಕಾರ್ಯಕಾರಿ ಗುಂಪಿನ ಸಭೆಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಮುಂಬೈನಲ್ಲಿ ನಡೆದ ಮೊದಲ ಟಿಐಡಬ್ಲ್ಯುಜಿ ಸಭೆಯ ಚರ್ಚೆಗಳನ್ನು ಮುಂದುವರಿಸುತ್ತಾ, ಮೂರು ದಿನಗಳ ಕಾರ್ಯಕ್ರಮದಲ್ಲಿ ಐದು ತಾಂತ್ರಿಕ ಅಧಿವೇಶನಗಳನ್ನು ಆಯೋಜಿಸಲಾಯಿತು. ವ್ಯಾಪಾರ ದಾಖಲೆಗಳ ಡಿಜಿಟಲೀಕರಣದ ಉನ್ನತ ಮಟ್ಟದ ತತ್ವಗಳು; ಎಂ ಎಸ್ ಎಂ ಇ ಗಳಿಗೆ ಮೆಟಾ ಮಾಹಿತಿ ಪೋರ್ಟಲ್ ರಚಿಸಲು ಕ್ರಿಯಾ ಯೋಜನೆ; ಜಿವಿಸಿಗಳನ್ನು ಮ್ಯಾಪಿಂಗ್ ಮಾಡಲು ಚೌಕಟ್ಟು; ಪರಸ್ಪರ ಗುರುತಿಸುವಿಕೆ ಒಪ್ಪಂದಗಳು ಮತ್ತು ಜಿ-20 ನಿಯಂತ್ರಕ ಸಂಭಾಷಣೆಯ ಮೇಲಿನ ಅತ್ಯುತ್ತಮ ಅಭ್ಯಾಸಗಳ ಸಂಕಲನ ಇವುಗಳಲ್ಲಿ ಸೇರಿದ್ದವು.
ವ್ಯಾಪಾರ ದಾಖಲೆಗಳ ಡಿಜಿಟಲೀಕರಣದ ಮೇಲಿನ ಉನ್ನತ ಮಟ್ಟದ ತತ್ವಗಳ ಮೇಲೆ, ಭಾರತೀಯ ವಿದೇಶೀ ವ್ಯಾಪಾರ ಸಂಸ್ಥೆ, ಯು ಎನ್ ಎಸ್ ಸಿ ಎ ಪಿ ಮತ್ತು ಒ ಸಿ ಇ ಡಿ ಯಿಂದ ಕಾಗದ ರಹಿತ ವ್ಯವಸ್ಥೆಯ ಸಂಭಾವ್ಯ ಪ್ರಯೋಜನವನ್ನು ತರುವ ಕುರಿತು ಜಂಟಿ ಪ್ರಸ್ತುತಿಯನ್ನು ಮಾಡಲಾಯಿತು.
ವೆಚ್ಚ ಕಡಿತ, ಹೆಚ್ಚಿನ ದಕ್ಷತೆ ಮತ್ತು ಸುಧಾರಿತ ಪಾರದರ್ಶಕತೆಯನ್ನು ಒಳಗೊಂಡಿರುವ ಈ ಕೆಲವು ಪ್ರಯೋಜನಗಳನ್ನು ಜಿ-20 ಸದಸ್ಯರು, ಆಹ್ವಾನಿತ ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಒಪ್ಪಿಕೊಂಡಿವೆ ಎಂದು ಶ್ರೀ ಬರ್ತ್ವಾಲ್ ಮಾಹಿತಿ ನೀಡಿದರು. ಹಲವಾರು ಸದಸ್ಯ ರಾಷ್ಟ್ರಗಳು ಕಾಗದರಹಿತ ವ್ಯಾಪಾರದ ಕಡೆಗೆ ಪರಿವರ್ತನೆಯನ್ನು ವೇಗಗೊಳಿಸಲು ತಮ್ಮ ಬೆಂಬಲವನ್ನು ವಿಸ್ತರಿಸಿದವು ಎಂದು ಅವರು ಹೇಳಿದರು.
ಮಾಹಿತಿಯ ಪ್ರವೇಶಕ್ಕೆ ಸಂಬಂಧಿಸಿದಂತೆ ಸದಸ್ಯ ರಾಷ್ಟ್ರಗಳಾದ್ಯಂತ ಎಂ ಎಸ್ ಎಂ ಇ ಗಳು ಎದುರಿಸುತ್ತಿರುವ ಸವಾಲುಗಳನ್ನು ಜಿ-20 ಸದಸ್ಯರು ಒಟ್ಟಾಗಿ ಗುರುತಿಸಿದ್ದಾರೆ. ICRIER ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಕೇಂದ್ರ (ಐಟಿಸಿ) ಜಂಟಿ ಪ್ರಸ್ತುತಿಯನ್ನು ಅನುಸರಿಸಿ ಎಂ ಎಸ್ ಎಂ ಇ ಗಳಿಗೆ ಮೆಟಾ ಮಾಹಿತಿ ಪೋರ್ಟಲ್ ಅನ್ನು ರಚಿಸಲು ಕ್ರಿಯಾ ಯೋಜನೆಯನ್ನು ಜಾರಿಗೆ ತರಲಾಗುತ್ತದೆ. ಈ ಸವಾಲನ್ನು ಎದುರಿಸುವ ಭಾರತದ ಉಪಕ್ರಮಗಳನ್ನು ಹಲವು ದೇಶಗಳು ಬೆಂಬಲಿಸಿದವು ಎಂದು ಅವರು ಹೇಳಿದರು.
ಐಟಿಸಿ ಜಾಗತಿಕ ವ್ಯಾಪರ ಹೆಲ್ಪ್‌ಡೆಸ್ಕ್‌ನಂತಹ ಅಸ್ತಿತ್ವದಲ್ಲಿರುವ ಉಪಕ್ರಮಗಳೊಂದಿಗೆ ಸಂಭವನೀಯ ದ್ವಂದ್ವತೆಯ ಬಗ್ಗೆ ಕೆಲವು ಸದಸ್ಯರು ವ್ಯಕ್ತಪಡಿಸಿದ ಕಳವಳಗಳನ್ನು ಭಾರತದ ಅಧ್ಯಕ್ಷತೆಯು ಗಮನಿಸಿದೆ. ಚರ್ಚೆಯ ಸಮಯದಲ್ಲಿ, ಭಾರತದ ಅಧ್ಯಕ್ಷತೆಯು ಜಿ-20 ಸದಸ್ಯರು ನೀಡುವ ಮೌಲ್ಯವರ್ಧನೆಯನ್ನು ಸ್ಪಷ್ಟವಾಗಿ ಗುರುತಿಸುತ್ತದೆ. ಜೊತೆಗೆ, ಜಿ-20 ಜಾಗತಿಕ ವ್ಯಾಪಾರದಲ್ಲಿ ಎಂ ಎಸ್ ಎಂ ಇ ಗಳು ಎದುರಿಸುತ್ತಿರುವ ಮಾಹಿತಿ ಅಸಮತೆಯನ್ನು ಪರಿಹರಿಸುವ ಮೂಲಕ ಏಕೀಕರಣವನ್ನು ವೇಗಗೊಳಿಸಲು ಗಮನಾರ್ಹ ಅವಕಾಶವನ್ನು ನೀಡುವ ಕುರಿತು ಒಮ್ಮತವು ಮೂಡಿತು.
ಜಿ-20 ಸದಸ್ಯರು ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ಮಾಡಿದ ಜಿವಿಸಿಗಳಿಗಾಗಿ ಮ್ಯಾಪಿಂಗ್ ಚೌಕಟ್ಟನ್ನು ಅಭಿವೃದ್ಧಿಪಡಿಸುವ ಭಾರತದ ಪ್ರಯತ್ನಗಳ ಪ್ರಸ್ತುತಿಯನ್ನು ಶ್ಲಾಘಿಸಿದರು. ತಾಂತ್ರಿಕ ಸವಾಲುಗಳು ಮತ್ತು ಡೇಟಾ ಭದ್ರತೆ ಸಮಸ್ಯೆಗಳ ಬಗ್ಗೆ ಕೆಲವು ಸದಸ್ಯರು ವ್ಯಕ್ತಪಡಿಸಿದ ಕಳವಳಗಳನ್ನು ಭಾರತದ ಅಧ್ಯಕ್ಷತೆಯು ಗಮನಿಸಿದೆ.
ಅಡೆತಡೆಗಳು ಮತ್ತು ಭವಿಷ್ಯದ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಜಿವಿಸಿಗಳ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ಜಿ-20 ಒಂದು ಅರ್ಥಪೂರ್ಣ ವೇದಿಕೆಯಾಗುತ್ತದೆ ಎಂದು ಪ್ರತಿನಿಧಿಗಳು ಒಪ್ಪಿಕೊಂಡರು.
ಆರ್ಥಿಕ ಬೆಳವಣಿಗೆಯ ಸಂಸ್ಥೆಯು ಸದಸ್ಯ ರಾಷ್ಟ್ರಗಳೊಂದಿಗೆ ಚರ್ಚೆಗಳನ್ನು ಆರಂಭಿಸಿತು, ವೃತ್ತಿಪರ ಸೇವೆಗಳಲ್ಲಿ ಎಂ ಆರ್ ಎ ಗಳ ಅನುಭವಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿತು. ಎಂ ಆರ್ ಎ ಗಳನ್ನು ಕುರಿತ ಸಂಕಲನವನ್ನು ವಿಶಾಲವಾದ ಸೇವಾ ಕ್ಷೇತ್ರಗಳಿಗೆ ವಿಸ್ತರಿಸಬೇಕು ಮತ್ತು ಸಂಕಲನವನ್ನು ಅಭಿವೃದ್ಧಿಪಡಿಸುವಲ್ಲಿ ಹೆಚ್ಚಿನ ಸಹಕಾರಕ್ಕಾಗಿ ಕರೆ ನೀಡಬೇಕು ಎಂದು ಕೆಲವು ಸದಸ್ಯರು ಹೇಳಿದರು. ಎಂ ಆರ್ ಎ ಗಳ ಬಗೆಗಿನ ಸಂಕಲನವು ಅಭಿವೃದ್ಧಿಯ ಬಗ್ಗೆ ವಿವಿಧ ದೇಶಗಳಲ್ಲಿನ ವೃತ್ತಿಪರ ಸಂಸ್ಥೆಗಳ ಸಂವೇದನಾಶೀಲತೆಗೆ ಪ್ರಯೋಜನಕಾರಿಯಾಗಿದೆ ಎಂದು ಚರ್ಚೆಗಳು ಎತ್ತಿ ತೋರಿಸಿದವು.
ಸದಸ್ಯ ರಾಷ್ಟ್ರಗಳು ವ್ಯಾಪಾರ ಮತ್ತು ಹೂಡಿಕೆಯ ವಿವಿಧ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ನಿಯಮಗಳ ಕುರಿತು ನಿಯಮಿತ ಸಂವಾದ ಮತ್ತು ಮಾಹಿತಿಯ ವಿನಿಮಯದ ಪ್ರಯೋಜನಗಳನ್ನು ಒಪ್ಪಿಕೊಂಡವು. ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಹೂಡಿಕೆ ಪರಿಸರದ ಮೇಲೆ ಪ್ರಭಾವ ಬೀರುವ ಅತ್ಯಂತ ನಿರ್ಣಾಯಕ ನಿಯಂತ್ರಣ ಸವಾಲುಗಳ ಮೇಲೆ ಈ ಸಂವಾದವನ್ನು ಕೇಂದ್ರೀಕರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಭಾರತದ ಅಧ್ಯಕ್ಷತೆಯು ಭರವಸೆ ನೀಡಿತು.
3 ನೇ ಟಿಐಡಬ್ಲ್ಯುಜಿ ಸಭೆಯು ಈ ವರ್ಷದ ಜುಲೈ 10 ರಿಂದ 12 ರವರೆಗೆ ಗುಜರಾತ್‌ನ ಕೆವಾಡಿಯಾದಲ್ಲಿ ನಡೆಯಲಿದೆ. ಎಲ್ಲಾ ಜಿ-20 ಸದಸ್ಯ ರಾಷ್ಟ್ರಗಳು ಮತ್ತು ಮಧ್ಯಸ್ಥಗಾರರ ಬೆಂಬಲದೊಂದಿಗೆ ಈಗಾಗಲೇ ಚರ್ಚಿಸಲಾದ ಕ್ಷೇತ್ರಗಳಲ್ಲಿ ಭರವಸೆಯ ಫಲಿತಾಂಶವನ್ನು ಪಡೆಯುವ ಬಗ್ಗೆ ಭಾರತದ ಅಧ್ಯಕ್ಷತೆಯು ಆಶಾದಾಯಕವಾಗಿದೆ. ಈ ಗುರಿಯು "ವಸುಧೈವ ಕುಟುಂಬಕಂ" ಎಂಬ ಭಾರತದ ಅಧ್ಯಕ್ಷತೆಯ ಧ್ಯೇಯವನ್ನು ಪ್ರತಿಧ್ವನಿಸುತ್ತದೆ.
ಜಿ-20 ಸದಸ್ಯ ರಾಷ್ಟ್ರಗಳು, ಆಹ್ವಾನಿತ ದೇಶಗಳು, ಪ್ರಾದೇಶಿಕ ಗುಂಪುಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ 75 ಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
*****
(Release ID: 1927425)
Visitor Counter : 103