ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ವ್ಯಾಪಾರ ಮತ್ತು ತಂತ್ರಜ್ಞಾನ ಕುರಿತ ಜಿ-20 ವಿಚಾರಸಂಕಿರಣ, 2 ನೇ ವ್ಯಾಪಾರ ಮತ್ತು ಹೂಡಿಕೆ ಕಾರ್ಯಕಾರಿ ಗುಂಪು, ಬೆಂಗಳೂರು
Posted On:
22 MAY 2023 9:08PM by PIB Bengaluru
ಭಾರತದ ಜಿ-20 ಆಧ್ಯಕ್ಷತೆಯ ಅಡಿಯಲ್ಲಿ ಮುಂಬೈನಲ್ಲಿ ಮೊದಲನೇ ವ್ಯಾಪಾರ ಮತ್ತು ಹೂಡಿಕೆ ಕಾರ್ಯಕಾರಿ ಗುಂಪಿನ (ಟಿಐಡಬ್ಲ್ಯುಜಿ) ಸಭೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಎರಡನೇ ಟಿಐಡಬ್ಲ್ಯುಜಿ ಅನ್ನು ಬೆಂಗಳೂರಿನಲ್ಲಿ ಮೇ 23 ರಿಂದ 25 ರವರೆಗೆ ನಿಗದಿಪಡಿಸಲಾಗಿದೆ. ಮೂರು ದಿನಗಳ ಸಭೆಯಲ್ಲಿ, ಜಿ-20 ದೇಶಗಳಿಂದ ಸುಮಾರು 75 ಪ್ರತಿನಿಧಿಗಳು, ಆಹ್ವಾನಿತ ದೇಶಗಳು ಮತ್ತು ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಹೂಡಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕುರಿತು ಒಪ್ಪಿತ ಪರಿಹಾರಗಳನ್ನು ಕಂಡುಕೊಳ್ಳುವ ಚರ್ಚೆಗಳಲ್ಲಿ ಭಾಗವಹಿಸುತ್ತವೆ.
ಮೊದಲ ದಿನ, ಅಂತರ್ಗತ ಬೆಳವಣಿಗೆ ಮತ್ತು ಚೇತರಿಕೆಯ ವ್ಯಾಪಾರವನ್ನು ಚಾಲನೆ ಮಾಡುವಲ್ಲಿ ತಂತ್ರಜ್ಞಾನದ ಪಾತ್ರವನ್ನು ಕುರಿತ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ವಿಚಾರ ಸಂಕಿರಣವನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವ ಶ್ರೀ ಸೋಮ್ ಪ್ರಕಾಶ್ ಅವರು ಉದ್ಘಾಟಿಸಲಿದ್ದು, ಪ್ರಧಾನ ಭಾಷಣ ಮಾಡಲಿದ್ದಾರೆ. ಭಾರತ ಸರ್ಕಾರದ ವಾಣಿಜ್ಯ ಇಲಾಖೆಯ ಕಾರ್ಯದರ್ಶಿ ಶ್ರೀ ಸುನಿಲ್ ಬರ್ತ್ವಾಲ್ ಅವರು ಉದ್ಘಾಟನಾ ಭಾಷಣವನ್ನು ಮಾಡಲಿದ್ದಾರೆ.
ವಿಚಾರಸಂಕಿರಣದ ಸಮಯದಲ್ಲಿ, ಜಿ20 ಸದಸ್ಯ ರಾಷ್ಟ್ರಗಳ ಸುಮಾರು 200 ಪ್ರತಿನಿಧಿಗಳು, ಆಹ್ವಾನಿತ ದೇಶಗಳು, ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ತಂತ್ರಜ್ಞಾನ ವಲಯ ಮತ್ತು ವ್ಯಾಪಾರ ಸಮುದಾಯದ ಪ್ರತಿನಿಧಿಗಳು ವ್ಯಾಪಾರ ಮತ್ತು ತಂತ್ರಜ್ಞಾನ ಕುರಿತ ಚರ್ಚೆಯಲ್ಲಿ ಭಾಗವಹಿಸುತ್ತಾರೆ.
ವಿಚಾರಸಂಕಿರಣವು ಎರಡು ತಂಡ ಚರ್ಚೆಗಳನ್ನು ಒಳಗೊಂಡಿರುತ್ತದೆ. ಮೊದಲನೆಯದು ತಂತ್ರಜ್ಞಾನವು ವ್ಯಾಪಾರವನ್ನು ಹೇಗೆ ಮರುರೂಪಿಸುತ್ತಿದೆ ಎಂಬುದನ್ನು ಕುರಿತು ಇರುತ್ತದೆ. ಇದನ್ನು ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸೌರಭ್ ಚಂದ್ರ ಅವರು ನಡೆಸಿಕೊಡಲಿದ್ದಾರೆ. ಈ ಅಧಿವೇಶನದ ಚರ್ಚಾ ತಂಡದ ಸದಸ್ಯರೆಂದರೆ: ಶ್ರೀ ಅಲೋಕ್ ನಂದಾ, ಸಿಟಿಒ, ಜಿಇ ದಕ್ಷಿಣ ಏಷ್ಯಾ ಮತ್ತು ಸಿಇಒ ಜಿಇ ಭಾರತ ತಂತ್ರಜ್ಞಾನ ಕೇಂದ್ರ, ಶ್ರೀ ಎಸ್ಕೆ ಬೊ ಕ್ನುಡ್ಸೆನ್ ರೋಸೆನ್ಬರ್ಗ್, ಕಾನ್ಸುಲ್ ಜನರಲ್ ಮತ್ತು ವ್ಯಾಪಾರ ಮತ್ತು ನಾವೀನ್ಯತೆ ಕೇಂದ್ರದ ಮುಖ್ಯಸ್ಥ, ಡೆನ್ಮಾರ್ಕ್, ಶ್ರೀ ಪ್ಯಾಟ್ರಿಕ್ ಪೀಸ್ಕರ್, ಭಾರತೀಯ ನಾಯಕ & ಆರ್ & ಡಿ, ಮಿಟೆಲ್ ಮುಖ್ಯಸ್ಥ, ಶ್ರೀ ರಾಜೇಶ್ ನಂಬಿಯಾರ್, ಅಧ್ಯಕ್ಷ ಮತ್ತು ಎಂಡಿ, ಕಾಗ್ನಿಜೆಂಟ್ ಟೆಕ್ನಾಲಜೀಸ್ ಇಂಡಿಯಾ, ಶ್ರೀ ವಾರೆನ್ ಹ್ಯಾರಿಸ್, ಸಿಇಒ ಮತ್ತು ಎಂಡಿ, ಟಾಟಾ ಟೆಕ್ನಾಲಜೀಸ್.
ಎರಡನೇ ತಂಡದ ಚರ್ಚೆಗೆ ಉತ್ಪಾದನೆ ಮತ್ತು ವ್ಯಾಪಾರವನ್ನು ಕ್ರಾಂತಿಗೊಳಿಸುವ ಪರಿವರ್ತಕ ಸಾಧನಗಳು ಎಂದು ಹೆಸರಿಸಲಾಗಿದೆ. ಈ ಅಧಿವೇಶನವನ್ನು ಇಂಡೋ-ಜರ್ಮನ್ ಚೇಂಬರ್ ಆಫ್ ಕಾಮರ್ಸ್‌ನ ಡೈರೆಕ್ಟರ್ ಜನರಲ್ ಶ್ರೀ ಸ್ಟೀಫನ್ ಹಲುಸಾ ಅವರು ನಡೆಸಿಕೊಡಲಿದ್ದಾರೆ. ಚರ್ಚಾ ತಂಡದ ಸದಸ್ಯರು: ಶ್ರೀಮತಿ ಆನಂದಿ ಅಯ್ಯರ್, ಫ್ರೌನ್‌ಹೋಫರ್ ಇಂಡಿಯಾ ನಿರ್ದೆಶಕಿ ಮತ್ತು STEM ಜಿ-20 ಎಂಪವರ್ ವರ್ಕಿಂಗ್ ಗ್ರೂಪ್‌ನ ಅಧ್ಯಕ್ಷೆ, ಶ್ರೀಮತಿ ಆರತಿ ಸಿಂಗ್, ಬೋಯಿಂಗ್ ಇಂಡಿಯಾದ ಮುಖ್ಯ ಮಾಹಿತಿ ಅಧಿಕಾರಿ, ಡಾ. ರೆನೆ ವ್ಯಾನ್ ಬರ್ಕೆಲ್, UNIDO, ಭಾರತದ ಮುಖ್ಯ ಪ್ರತಿನಿಧಿ, ಶ್ರೀ ಪೌಲ್ ವಿ ಜೆನ್ಸನ್, ಮ್ಯಾನೇಜಿಂಗ್ ಡೈರೆಕ್ಟರ್, ಯುರೋಪಿಯನ್ ಬಿಸಿನೆಸ್ & ಟೆಕ್ನಾಲಜಿ ಸೆಂಟರ್.
******
(Release ID: 1926644)
Visitor Counter : 95