ಸಹಕಾರ ಸಚಿವಾಲಯ
azadi ka amrit mahotsav

ಕರ್ನಾಟಕದಲ್ಲಿರುವ ಸಹಕಾರ ಸಂಘಗಳು, ಪ್ರಾಥಮಿಕ ಕೃಷಿ ಸಾಲ ಸಂಘಗಳು ಮತ್ತು ವಿವಿಧೋದ್ದೇಶ ಸಹಕಾರ ಸಂಘಗಳು

Posted On: 23 MAR 2023 6:08PM by PIB Bengaluru

ಕರ್ನಾಟಕದ ಸಹಕಾರ ಸಂಘಗಳ ನೋಂದಾವಣೆ (ನೋಂದಣಿ) ಅಧಿಕಾರಿಗಳಿಂದ ಪಡೆದ ಮಾಹಿತಿಯ ಪ್ರಕಾರ, ಕರ್ನಾಟಕ ರಾಜ್ಯದಲ್ಲಿ‌ರುವ 6,040 ಪ್ರಾಥಮಿಕ ಕೃಷಿ ಸಾಲ ಸಂಘಗಳು (ಪಿ.ಎ.ಸಿ.ಎಸ್.) ಸೇರಿದಂತೆ ವಿವಿಧ ವಲಯಗಳಲ್ಲಿ ಸುಮಾರು ಒಟ್ಟು 45,926 ಸಹಕಾರ ಸಂಘಗಳಿವೆ. ಪಿ.ಎ.ಸಿ.ಎಸ್. ಸೇರಿದಂತೆ ಸಹಕಾರ ಸಂಘಗಳ ಜಿಲ್ಲಾವಾರು ಪಟ್ಟಿಯನ್ನು ಅನುಬಂಧದಲ್ಲಿ ಲಗತ್ತಿಸಲಾಗಿದೆ.

ಕರ್ನಾಟಕ ರಾಜ್ಯ ಸೇರಿದಂತೆ ದೇಶದಾದ್ಯಂತ ಕ್ರಿಯಾತ್ಮಕ ಚಟುವಟಿಕೆಗಳಲ್ಲಿರುವ ಪ್ರಾಥಮಿಕ ಕೃಷಿ ಸಾಲ ಸಂಘಗಳು (ಪಿ.ಎ.ಸಿ.ಎಸ್.)/ ಬೃಹತ್‌  ಪ್ರದೇಶದ ಬಹುಪಯೋಗಿ ಸಂಘ(ಎಲ್.ಎ.ಎಂ.ಪಿ.ಎಸ್.‌)ಗಳ ಗಣಕೀಕರಣಕ್ಕಾಗಿ ಒಟ್ಟು ರೂ. 2,516 ಕೋಟಿ ಮೊತ್ತದ ಕೇಂದ್ರ ಪ್ರಾಯೋಜಿತ ಯೋಜನೆಯು ಅನುಷ್ಠಾನ ಹಂತದಲ್ಲಿದೆ. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಪ್ರಾಜೆಕ್ಟ್ ಮಾನಿಟರಿಂಗ್ ಯುನಿಟ್‌ಗಳನ್ನು (ಪಿ.ಎಂ.ಯು.) ಸ್ಥಾಪಿಸಲಾಗಿದೆ ಮತ್ತು ನಬಾರ್ಡ್‌ನಿಂದ ಸಾಫ್ಟ್‌ವೇರ್ ಅಭಿವೃದ್ಧಿಯನ್ನು ಸಹ ಪ್ರಾರಂಭಿಸಲಾಗಿದೆ. ಯೋಜನೆಯ ಮಾರ್ಗಸೂಚಿಗಳ ಪ್ರಕಾರ, 63,000 ಪಿ.ಎ.ಸಿ.ಎಸ್. ಗಳ ಗಣಕೀಕರಣವನ್ನು ಪೂರ್ಣಗೊಳಿಸುವ ಗುರಿಯು 31.3.2025 ಆಗಿದೆ ಮತ್ತು ಯೋಜನೆಯ ಮಾಹಿತಿ ತುಂಬಿ ತಾಂತ್ರಿಕ ಸಹಾಯ(ಹ್ಯಾಂಡ್‌ ಹೋಲ್ಡಿಂಗ್) ಬೆಂಬಲಕ್ಕಾಗಿ ದಿನಾಂಕ 31.3.2027 ಆಗಿದೆ.

ಕರ್ನಾಟಕ ರಾಜ್ಯದಲ್ಲಿ 5,491 ಪಿ.ಎ.ಸಿ.ಎಸ್. ಗಳ ಗಣಕೀಕರಣದ ಪ್ರಸ್ತಾವನೆಯನ್ನು ನಬಾರ್ಡ್ ಶಿಫಾರಸು ಮಾಡಿದೆ ಮತ್ತು ಹಾರ್ಡ್‌ವೇರ್ ಖರೀದಿ, ಬೆಂಬಲ ವ್ಯವಸ್ಥೆ ಸ್ಥಾಪನೆ ಇತ್ಯಾದಿಗಳಿಗಾಗಿ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದ ಪಾಲಿನ ಮೊದಲನೇ ಕಂತಾಗಿ ರೂ. 25.45 ಕೋಟಿ ಬಿಡುಗಡೆ ಮಾಡಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಗಣಕೀಕರಣಕ್ಕಾಗಿ ಶಿಫಾರಸು ಮಾಡಲಾದ ಪಿ.ಎ.ಸಿ.ಎಸ್. ಗಳ ಜಿಲ್ಲಾವಾರು ಸಂಖ್ಯೆಯನ್ನು ಸಹ ಕೆಳಗಿನ ಅನುಬಂಧದಲ್ಲಿ ಲಗತ್ತಿಸಲಾಗಿದೆ.

ಸಂಬಂಧಿತ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಿ ಸಹಕಾರ ಸಚಿವಾಲಯವು ಪಿ.ಎ.ಸಿ.ಎಸ್. ಅನ್ನು ವಿವಿಧೋದ್ದೇಶ ಸಹಕಾರಿ ಸಂಘಗಳಾಗಿ ಪರಿವರ್ತಿಸಲು ಅನುಕೂಲವಾಗುವಂತೆ ತಮ್ಮ ಚಟುವಟಿಕೆಗಳನ್ನು ವೈವಿಧ್ಯಗೊಳಿಸಲು ಮಾದರಿ ಉಪ-ಕಾನೂನುಗಳನ್ನು ಸಿದ್ಧಪಡಿಸಿದೆ. ಕರ್ನಾಟಕ ರಾಜ್ಯ ಸೇರಿದಂತೆ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ತಮ್ಮ ರಾಜ್ಯ ಸಹಕಾರ ಸಂಘಗಳ ಕಾಯಿದೆಗಳಿಗೆ ಒಳಪಟ್ಟು ಮಾದರಿ ಬೈಲಾಗಳನ್ನು 05.01.2023 ರಂದು ಪಿ.ಎ.ಸಿ.ಎಸ್. ಮೂಲಕ ಅಳವಡಿಸಿಕೊಳ್ಳಲಾಗಿದೆ. ಡೈರಿ, ಮೀನುಗಾರಿಕೆ, ಆಹಾರ ಧಾನ್ಯ ಸಂಗ್ರಹಣೆ, ಎಲ್‌ಪಿಜಿ /ಸಿಎನ್‌ಜಿ/ ಪೆಟ್ರೋಲ್/ ಡೀಸೆಲ್ ವಿತರಕತ್ವ, ಸಾಮಾನ್ಯ ಸೇವಾ ಕೇಂದ್ರಗಳು, ನ್ಯಾಯಬೆಲೆ ಅಂಗಡಿಗಳು (ಎಫ್‌.ಪಿ.ಎಸ್.) ಮುಂತಾದ 25 ಕ್ಕೂ ಹೆಚ್ಚು ವ್ಯಾಪಾರ- ವ್ಯವಹಾರಿಕ ಚಟುವಟಿಕೆಗಳನ್ನು ಕೈಗೊಳ್ಳಲು ಮಾದರಿ ಉಪ-ಕಾನೂನುಗಳು ಅಳವಡಿಸಿ ಪಿ.ಎ.ಸಿ.ಎಸ್. ಅನ್ನು ಇನ್ನೂ ಸಕ್ರಿಯಗೊಳಿಸುತ್ತದೆ.

ಈ ಮೇಲಿನವುಗಳ ಜೊತೆಗೆ, ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕ ರಾಜ್ಯ ಸೇರಿದಂತೆ ದೇಶಾದ್ಯಂತ ಪ್ರತಿ ಪಂಚಾಯತ್/ ಗ್ರಾಮವನ್ನು ಒಳಗೊಂಡಂತೆ ಅಸ್ತಿತ್ವದಲ್ಲಿರುವ ವಿವಿಧ ಯೋಜನೆಗಳ ಎಲ್ಲಾ ಪ್ರಯೋಜನಗಳನ್ನು ಪಡೆಯುವ ಮೂಲಕ, ಎರಡು ಲಕ್ಷ ಹೊಸ ಬಹುಪಯೋಗಿ ಪಿ.ಎ.ಸಿ.ಎಸ್. ಅಥವಾ ಪ್ರಾಥಮಿಕ ಡೈರಿ ಅಥವಾ ಮೀನುಗಾರಿಕೆ ಸಹಕಾರ ಸಂಘಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರದಿಂದ ಪ್ರಸ್ತಾವನೆಯನ್ನು ಅನುಮೋದಿಸಲಾಗಿದೆ.  

 ಕರ್ನಾಟಕ ರಾಜ್ಯದಲ್ಲಿರುವ ಪ್ರಾಥಮಿಕ ಕೃಷಿ ಸಾಲ ಸಂಘಗಳ (ಪಿ.ಎ.ಸಿ.ಎಸ್.) ಜಿಲ್ಲಾವಾರು ಪಟ್ಟಿ

ಕ್ರ.ಸಂ

ಜಿಲ್ಲೆಯ ಹೆಸರು

ಸಹಕಾರ ಸಂಘಗಳ ಸಂಖ್ಯೆ

ಪ್ರಾಥಮಿಕ ಕೃಷಿ ಸಾಲ ಸಂಘಗಳ (ಪಿ.ಎ.ಸಿ.ಎಸ್.) ಸಂಖ್ಯೆ

ಮೊದಲ ಹಂತದ ಗಣಕೀಕರಣ ಕಾರ್ಯದಲ್ಲಿ ಪರಿಗಣಿಸಲಾದ ಪ್ರಾಥಮಿಕ ಕೃಷಿ ಸಾಲ ಸಂಘಗಳ (ಪಿ.ಎ.ಸಿ.ಎಸ್.) ಸಂಖ್ಯೆ

1

ಬೆಂಗಳೂರು ನಗರ

2776

46

37

2

ಬೆಂಗಳೂರು ಗ್ರಾಮಾಂತರ

1127

78

69

3

ರಾಮನಗರ

1334

101

98

4

ಬಾಗಲಕೋಟೆ

1989

284

265

5

ಬೆಳಗಾವಿ

6111

1318

1156

6

ಬಳ್ಳಾರಿ

1568

197

177

7

ಬೀದರ್

1305

188

188

8

ಚಿಕ್ಕಮಗಳೂರು

616

129

128

9

ಚಿತ್ರದುರ್ಗ

1028

165

149

10

ದಾವಣಗೆರೆ

1456

181

176

11

ಹಾಸನ

1977

228

215

12

ಧಾರವಾಡ

1076

165

152

13

ಗದಗ್

1083

179

160

14

ಹಾವೇರಿ

1323

231

227

15

ಕಲಬುರಗಿ

1543

231

179

16

ಯಾದಗಿರಿ

871

108

86

17

ಕೊಡಗು

342

76

76

18

ಕೋಲಾರ

1609

104

85

19

ಚಿಕ್ಕಬಳ್ಳಾಪುರ

1575

159

116

20

ಮೈಸೂರು

2526

201

176

21

ಚಾಮರಾಜನಗರ

820

105

103

22

ಮಂಡ್ಯ

2217

235

227

23

ಉತ್ತರ ಕನ್ನಡ

941

179

156

24

ರಾಯಚೂರು

1288

140

135

25

ಕೊಪ್ಪಳ

829

125

115

26

ಶಿವಮೊಗ್ಗ

1268

176

167

27

ದಕ್ಷಿಣ ಕನ್ನಡ

871

122

121

28

ತುಮಕೂರು

681

57

56

29

ತುಮಕೂರು

2222

242

230

30

ವಿಜಯಪುರ

1554

290

266

 

ಒಟ್ಟು

45926

6040

5491

 

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಕೇಂದ್ರ ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಈ ಮಾಹಿತಿಯನ್ನು ನೀಡಿದ್ದಾರೆ  

*****

 


(Release ID: 1910185) Visitor Counter : 2348
Read this release in: English , Urdu