ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ಐಪಿಸಿಸಿ ಎಆರ್ 6 ಸಂಶ್ಲೇಷಣಾ ವರದಿ


ಸಂಶ್ಲೇಷಣಾ ವರದಿ ಅನುಮೋದನೆಗಾಗಿ ಐಪಿಸಿಸಿ -58 ನೇ ಅಧಿವೇಶನ, ಇಂಟರ್ಲೇಕೆನ್, ಸ್ವಿಟ್ಜರ್ಲೆಂಡ್ (2023ರ ಮಾರ್ಚ್ 13-19)

ಐಪಿಸಿಸಿ ಎಆರ್ 6 ಸಂಶ್ಲೇಷಣಾ ವರದಿಯು ಇಂಗಾಲದ ಬಜೆಟ್ ಮತ್ತು ಅತಿಯಾದ ಹೊರಸೂಸುವಿಕೆಯನ್ನು ನಿಯಂತ್ರಿಸಲು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಐತಿಹಾಸಿಕ ಜವಾಬ್ದಾರಿಯ ಬಗ್ಗೆ ಭಾರತದ ನಿಲುವನ್ನು ವೈಜ್ಞಾನಿಕವಾಗಿ ದೃಢೀಕರಿಸುತ್ತದೆ, ಸುಮಾರು 1750 ರಿಂದ ಐತಿಹಾಸಿಕ (ಬಾಕಿ ಇರುವ)  ಹೊರಸೂಸುವಿಕೆಗಳು ಮತ್ತು ನಿರಂತರ ಹೊರಸೂಸುವಿಕೆಗಳು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಗೆ ಕೊಡುಗೆ ನೀಡುವ ಪ್ರಮುಖ ಅಂಶಗಳಾಗಿವೆ, ಇದು ಸುಸ್ಥಿರವಲ್ಲದ ಇಂಧನ ಬಳಕೆ, ಜೀವನಶೈಲಿ ಮತ್ತು ಸುಸ್ಥಿರವಲ್ಲದ ಉತ್ಪಾದನೆ ಮತ್ತು ಬಳಕೆಯಿಂದ ಪ್ರೇರಿತವಾಗಿದೆ. ಸುಸ್ಥಿರವಲ್ಲದ ಜೀವನಶೈಲಿ ಮತ್ತು ಬಳಕೆ ಮತ್ತು ಉತ್ಪಾದನೆಯ ಮಾದರಿಗಳ ಪಾತ್ರವನ್ನು ವರದಿಯು ಪುನರುಚ್ಚರಿಸುತ್ತದೆ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಉತ್ತೇಜಿಸಲು  ಹೊರಸೂಸುವಿಕೆಯನ್ನು ಉಂಟುಮಾಡುವ ಇಂಧನ ಬಳಕೆಯನ್ನು ತೀವ್ರವಾದ ರೀತಿಯಲ್ಲಿ  ಕಡಿಮೆ ಮಾಡುವ ಅನೇಕ ಆಯ್ಕೆಗಳಿವೆ ಎಂಬುದನ್ನೂ ಸೂಚಿಸುತ್ತದೆ.

ಜಾಗತಿಕ ಜನಸಂಖ್ಯೆಯ 17% ಕ್ಕಿಂತ ಹೆಚ್ಚು ಜನರಿಗೆ ಭಾರತವು ನೆಲೆಯಾಗಿದ್ದರೂ, ಜಾಗತಿಕ ಸಂಚಿತ ಇಂಗಾಲ (CO2) ಹೊರಸೂಸುವಿಕೆಯಲ್ಲಿ ಅದರ ಕೊಡುಗೆ 4% ಕ್ಕಿಂತ ಕಡಿಮೆ ಎಂದು ಸಂಶ್ಲೇಷಣಾ ವರದಿಯು ಮತ್ತೊಮ್ಮೆ ದೃಢಪಡಿಸಿದೆ. ಐತಿಹಾಸಿಕ ಹೊರಸೂಸುವಿಕೆಗಳು ಈಗಾಗಲೇ ಜಾಗತಿಕ ಇಂಗಾಲದ ಬಜೆಟಿನ ಐದನೇ ನಾಲ್ಕು ಅಂಶದಷ್ಟು ಕಡಿಮೆಯಾಗಿವೆ ಮತ್ತು ಆ ಮೂಲಕ ಹವಾಮಾನ ಸ್ಥಿತಿಸ್ಥಾಪಕ ಅಭಿವೃದ್ಧಿಗೆ ಲಭ್ಯವಿರುವ ಆಯ್ಕೆಗಳನ್ನು ಮಿತಿಗೊಳಿಸಿವೆ ಮತ್ತು ಇದರಲ್ಲಿ ಭಾರತವೂ ಸೇರಿದೆ ಎಂದು ಸಂಶ್ಲೇಷಣಾ ವರದಿ ಹೇಳುತ್ತದೆ.

ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹವಾಮಾನಕ್ಕೆ ಸಂಬಂಧಿಸಿದ ಕ್ರಮಗಳು ಮತ್ತು ಬೆಳವಣಿಗೆ ಹಾಗು ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಹವಾಮಾನ ನ್ಯಾಯ ಮತ್ತು ಸಮಾನತೆಗಳು ಪ್ರಮುಖ ಅನುವುಗಾರ ಸಂಗತಿಗಳಾಗಿವೆ. ಅಭಿವೃದ್ಧಿ ಹೊಂದಿದ ದೇಶಗಳಿಂದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಆರ್ಥಿಕ ಬೆಂಬಲವು ಹವಾಮಾನಕ್ಕೆ ಸಂಬಂಧಿಸಿದ ಕ್ರಮಕ್ಕೆ ಅನುವು ಮಾಡಿಕೊಡುವ ನಿರ್ಣಾಯಕ ಅಂಶವಾಗಿದೆ ಎಂದು ವರದಿ ದೃಢಪಡಿಸುತ್ತದೆ, ಇದು ಪ್ರಸ್ತುತ ಹಣಕಾಸು ಹರಿವು ಅಸಮರ್ಪಕವಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಇದು ಭರವಸೆ ನೀಡಿದ ಆದರೆ ಎಂದಿಗೂ ಲಭ್ಯವಾಗದೇ ಇರುವ 100 ಬಿಲಿಯನ್ ಯುಎಸ್. ಡಾಲರನ್ನು ಒಳಗೊಂಡಿದೆ.

ಹೊರಸೂಸುವಿಕೆ ಪ್ರಮಾಣ ಕಡಿತ ಮತ್ತು ಹಣಕಾಸು ಕ್ರೋಢೀಕರಣ ಹಾಗು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಇತ್ತೀಚಿನ ತಂತ್ರಜ್ಞಾನ ಲಭ್ಯವಾಗುವಂತೆ ಮಾಡುವ ವಿಷಯದಲ್ಲಿ ಹವಾಮಾನ ನ್ಯಾಯ ಮತ್ತು ಸಮಾನತೆಯ ತತ್ವಗಳ ಆಧಾರದ ಮೇಲೆ ಅಭಿವೃದ್ಧಿ ಹೊಂದಿದ ದೇಶಗಳಿಗೆ ತ್ವರಿತ ಹವಾಮಾನ ಕ್ರಮಗಳು ಬೇಕಾಗುತ್ತವೆ.

ಪರಿಸರವನ್ನು ರಕ್ಷಿಸಲು ಮತ್ತು ಕಾಪಿಡಲು ಪರಿಸರ ಸ್ನೇಹಿ ಜೀವನಶೈಲಿಯನ್ನು ಉತ್ತೇಜಿಸುವ ಜಾಗತಿಕ ಸಾಮೂಹಿಕ ಆಂದೋಲನವಾದ "ಲೈಫ್" ಅಥವಾ ಪರಿಸರಕ್ಕಾಗಿರುವ ಜೀವನಶೈಲಿಗಾಗಿ ಪ್ರಧಾನ ಮಂತ್ರಿಯವರ ಚಿಂತನೆಯ ದೃಷ್ಟಿಕೋನವನ್ನು ಸಂಶ್ಲೇಷಣಾ ವರದಿಯು ಪ್ರತಿಧ್ವನಿಸಿದೆ. ಸಾಮಾಜಿಕ ಯೋಗಕ್ಷೇಮಕ್ಕಾಗಿ ಇತರ ಪ್ರಯೋಜನಗಳ ಜೊತೆ ವರ್ತನೆ ಯಾ ನಡವಳಿಕೆ ಮತ್ತು ಜೀವನಶೈಲಿ ಬದಲಾವಣೆಗಳು ಸೇರಿದಂತೆ ಹೊರಸೂಸುವಿಕೆ-ತೀವ್ರ ಪ್ರಮಾಣದಲ್ಲಿರುವ ಇಂಧನದ ಬಳಕೆಯನ್ನು ಕಡಿಮೆ ಮಾಡಲು ಅನೇಕ ಆಯ್ಕೆಗಳು ಲಭ್ಯವಿವೆ ಎಂಬುದನ್ನೂ ವರದಿಯು ಹೆಚ್ಚಿನ ವಿಶ್ವಾಸದಿಂದ ಹೇಳಿದೆ.

Posted On: 20 MAR 2023 9:04PM by PIB Bengaluru

ಸ್ವಿಟ್ಜರ್ಲ್ಯಾಂಡಿನ  ಇಂಟರ್ಲಾಕೆನ್ ನಲ್ಲಿ ನಡೆದ ಹವಾಮಾನ ಬದಲಾವಣೆಗಾಗಿರುವ ಅಂತರ ಸರಕಾರಿ ಸಮಿತಿ (ಐಪಿಸಿಸಿ)ಯ 58 ನೇ ಅಧಿವೇಶನದಲ್ಲಿ 2023 ರ ಮಾರ್ಚ್ 19 ರಂದು ಎಲ್ಲಾ ಸದಸ್ಯ ರಾಷ್ಟ್ರಗಳು ಅಂಗೀಕರಿಸಿದ ಸಮಿತಿಯ (ಐಪಿಸಿಸಿ) ಆರನೇ ಮೌಲ್ಯಮಾಪನ ವೃತ್ತದ (ಎಆರ್ 6) ಸಂಶ್ಲೇಷಣಾ ವರದಿಯನ್ನು ಸ್ವಾಗತಿಸಿದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು, ವರದಿಯು ಹವಾಮಾನ ಬದಲಾವಣೆಯ ಜ್ಞಾನದ, ಅರಿವಿನ  ಪರಿಸ್ಥಿತಿ, ಅದರ ವ್ಯಾಪಕ ಪರಿಣಾಮಗಳು ಮತ್ತು ಅಪಾಯಗಳು ಹಾಗು ಹವಾಮಾನ ಬದಲಾವಣೆ ತಗ್ಗಿಸುವಿಕೆ ಮತ್ತು ಹೊಂದಾಣಿಕೆಯನ್ನು ಸಂಕ್ಷಿಪ್ತವಾಗಿ ತಿಳಿಸಿದೆ  ಎಂಬ ಅಂಶವನ್ನು ಗುರುತಿಸಿದರು.  

ಇದು ಮೂರು ಕಾರ್ಯ ಗುಂಪುಗಳು ಮತ್ತು ಮೂರು ವಿಶೇಷ ವರದಿಗಳ ಕೊಡುಗೆಗಳ ಆಧಾರದ ಮೇಲೆ ಆರನೇ ಮೌಲ್ಯಮಾಪನ ವರದಿಯ (ಎಆರ್ 6) ಮುಖ್ಯ ಸಂಶೋಧನೆಗಳನ್ನು ಅಡಕಗೊಳಿಸುತ್ತದೆ. ವರದಿಯು ಹವಾಮಾನ, ಪರಿಸರ ವ್ಯವಸ್ಥೆಗಳು ಮತ್ತು ಜೀವವೈವಿಧ್ಯತೆ ಮತ್ತು ಮಾನವ ಸಮಾಜಗಳ ಪರಸ್ಪರ ಅವಲಂಬನೆಯನ್ನು ಗುರುತಿಸುತ್ತದೆ; ಜ್ಞಾನದ ವೈವಿಧ್ಯಮಯ ರೂಪಗಳ ಮೌಲ್ಯವನ್ನು ; ಮತ್ತು ಹವಾಮಾನ ಬದಲಾವಣೆಯ ಜೊತೆ ಹೊಂದಾಣಿಕೆ ನಿಟ್ಟಿನಲ್ಲಿ , ಅದರ ತಗ್ಗಿಸುವಿಕೆ, ಪರಿಸರ ವ್ಯವಸ್ಥೆಯ ಆರೋಗ್ಯ, ಮಾನವ ಯೋಗಕ್ಷೇಮ ಮತ್ತು ಸುಸ್ಥಿರ ಅಭಿವೃದ್ಧಿಯ ನಡುವಿನ ನಿಕಟ ಸಂಪರ್ಕಗಳು ಹಾಗು  ಹವಾಮಾನ ಕ್ರಿಯೆಗೆ ಸಂಬಂಧಿಸಿದ  ವೈವಿಧ್ಯಮಯ ಅಂಶಗಳನ್ನು ಪ್ರತಿಬಿಂಬಿಸುತ್ತದೆ.

ಹವಾಮಾನ ಬದಲಾವಣೆಯ ವಿರುದ್ಧದ ಅಭಿವೃದ್ಧಿಯು ಅಂದರೆ ಹವಾಮಾನ ಬದಲಾವಣೆಯನ್ನು ತಡೆಯುವ ಅಭಿವೃದ್ಧಿಯು ನಮ್ಮ ಮೊದಲ ಆದ್ಯತೆಯಾಗಿದೆ ಮತ್ತು ಹೊರಸೂಸುವಿಕೆ ಕಡಿತ ಹಾಗು ಹಣಕಾಸು ಸಂಗ್ರಹಿಸುವಿಕೆ ಹಾಗು  ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಇತ್ತೀಚಿನ ತಂತ್ರಜ್ಞಾನವನ್ನು ಲಭ್ಯವಾಗುವಂತೆ ಮಾಡುವ ವಿಷಯದಲ್ಲಿ ಹವಾಮಾನ ನ್ಯಾಯ ಮತ್ತು ಸಮಾನತೆಯ ತತ್ವಗಳ ಆಧಾರದ ಮೇಲೆ ಅಭಿವೃದ್ಧಿ ಹೊಂದಿದ ದೇಶಗಳು ತುರ್ತು ಮತ್ತು ತ್ವರಿತ ಹವಾಮಾನ ಕ್ರಮಗಳನ್ನು  ಕೈಗೊಳ್ಳುವ ಅಗತ್ಯವಿದೆ ಎಂಬ ಭಾರತದ ನಿಲುವನ್ನು ವರದಿ ಮತ್ತೆ ಒತ್ತಿ ಹೇಳಿದೆ. 

ಕಾರ್ಬನ್ ಡೈಆಕ್ಸೈಡ್ ಪ್ರಾಥಮಿಕ ಜಿ.ಎಚ್.ಜಿ. (ಹಸಿರು ಮನೆ ಅನಿಲ) ಆಗಿದೆ ಮತ್ತು ಅದನ್ನು ಬಹಳ ತೀವ್ರವಾಗಿ ಕಡಿಮೆ ಮಾಡಬೇಕಾಗಿದೆ ಎಂಬ ವೈಜ್ಞಾನಿಕ ದೃಷ್ಟಿಕೋನವನ್ನು ವರದಿಯು ಬಲಪಡಿಸುತ್ತದೆ. ಮಾನವ ಚಟುವಟಿಕೆಯಿಂದ ಹೊರಸೂಸುವ ಪ್ರತಿ 1000 ಜಿಟಿಸಿಒ 2 (GtCO2-- ಕಾರ್ಬನ್ ಡೈಆಕ್ಸೈಡಿನ ಗಿಗಾಟನ್ ಪ್ರಮಾಣ )ಗೆ ಪ್ರತಿಯಾಗಿ ಜಾಗತಿಕ ಮೇಲ್ಮೈ ತಾಪಮಾನವು 0.45 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಾಗುತ್ತದೆ (ಇದರ ಪರಿಮಾಣವು ಅಂದಾಜು, 0.27 ರಿಂದ 0.63 ಡಿಗ್ರಿ ಸೆಲ್ಸಿಯಸ್ ವರೆಗೆ ಇರಬಹುದು). 2020 ರ ಆರಂಭದಿಂದ ಬಾಕಿ ಉಳಿದ ಇಂಗಾಲದ ಬಜೆಟ್ ಗಳನ್ವಯ  ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್ಸಿಗೆ ಸೀಮಿತಗೊಳಿಸುವ 50% ಸಂಭವನೀಯತೆಗೆ  ಹೊರಸೂಸುವಿಕೆ ಪ್ರಮಾಣ 500 ಜಿಟಿಸಿಒ 2 (GtCO2 ) ಆಗಿದ್ದು ಮತ್ತು ತಾಪಮಾನವನ್ನು 2 ಡಿಗ್ರಿ ಸೆಲ್ಸಿಯಸ್ಸಿನಷ್ಟು ಅಥವಾ ಅದಕ್ಕಿಂತ  ಕಡಿಮೆ ಮಾಡಲು 67% ಸಂಭವನೀಯತೆಗಾಗಿ ಈ ಪ್ರಮಾಣವು 1150 ಜಿಟಿಸಿಒ 2 (GtCO2) ಆಗಿದೆ.  ನಿವ್ವಳ ಶೂನ್ಯ CO2 ಅಥವಾ ಶೂನ್ಯ ಹಸಿರು ಮನೆ ಅನಿಲ (GHG) ಹೊರಸೂಸುವಿಕೆಯನ್ನು ಸಾಧಿಸಲು  ಪ್ರಾಥಮಿಕವಾಗಿ ಕಾರ್ಬನ್ ಡೈಆಕ್ಸೈಡ್ (CO2) ನ ಒಟ್ಟು ಹೊರಸೂಸುವಿಕೆಯಲ್ಲಿ ತೀವ್ರವಾದ ಮತ್ತು ತ್ವರಿತ ಕಡಿತದ ಅಗತ್ಯವಿರುತ್ತದೆ, ಜೊತೆಗೆ CO2 ಅಲ್ಲದ ಹಸಿರು ಮನೆ ಅನಿಲಗಳ ( GHG ) ಹೊರಸೂಸುವಿಕೆಯನ್ನೂ ಗಣನೀಯವಾಗಿ ಕಡಿಮೆ ಮಾಡಬೇಕಾಗುತ್ತದೆ.

ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹವಾಮಾನ ಕ್ರಮ  ಮತ್ತು ಬೆಳವಣಿಗೆ ಹಾಗು  ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಹವಾಮಾನ ನ್ಯಾಯ ಮತ್ತು ಸಮಾನತೆಯು ಪ್ರಮುಖ ಅವಕಾಶವನ್ನು ಮಾಡಿಕೊಡುತ್ತದೆ. ಮಾದರಿ ಸನ್ನಿವೇಶಗಳು ಸೀಮಿತ ಸಂಖ್ಯೆಯ ಪರಿಹಾರಗಳನ್ನು ಮಾತ್ರ ಅನ್ವೇಷಿಸುತ್ತವೆ ಮತ್ತು ಭವಿಷ್ಯವಾಣಿಗಳು ಅಥವಾ ಮುನ್ಸೂಚನೆಗಳಿಗಾಗಿ ಅವುಗಳನ್ನು ತಪ್ಪಾಗಿ ಗ್ರಹಿಸುವುದರ ಬಗ್ಗೆಯೂ ಎಚ್ಚರಿಕೆ ಅಗತ್ಯ  ಎಂದು ವರದಿ ಹೇಳುತ್ತದೆ. ಹವಾಮಾನ ನೀತಿ ನಿರ್ಧಾರದಲ್ಲಿ ಎಲ್ಲಾ ನಿರ್ಣಾಯಕ ಅಂಶಗಳಾದ ಸಮಾನತೆ, ಪರಿಸರ ನ್ಯಾಯ ಮತ್ತು ಆದಾಯ ವಿತರಣೆಯನ್ನು ಮಾದರಿಗಳು ಸ್ಪಷ್ಟವಾಗಿ ಲೆಕ್ಕಿಸುವುದಿಲ್ಲ ಎಂಬುದನ್ನೂ  ವಿಜ್ಞಾನಿಗಳು ದೃಢಪಡಿಸಿದ್ದಾರೆ.

ಸಂಶ್ಲೇಷಣಾ ವರದಿಯು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅತಿದೊಡ್ಡ ಹವಾಮಾನ ಹಣಕಾಸು ಅಂತರಗಳಿರುವುದರತ್ತ ಗಮನ ಸೆಳೆದಿದೆ.  ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಅಭಿವೃದ್ಧಿ ಹೊಂದಿದ ದೇಶಗಳಿಂದ ಮತ್ತು ಇತರ ಮೂಲಗಳಿಂದ ಹಣಕಾಸು ಬೆಂಬಲವನ್ನು ತ್ವರಿತಗೊಳಿಸುವುದರಿಂದ   ಹವಾಮಾನ ವೈಪರಿತ್ಯದ ಪರಿಣಾಮಗಳನ್ನು ತಗ್ಗಿಸುವ ಕ್ರಮಗಳನ್ನು ಹೆಚ್ಚಿಸಲು ಅನುವು ಮಾಡಿಕೊಟ್ಟಂತಾಗುತ್ತದೆ ಎಂದೂ ಅದು ಹೇಳಿದೆ. ಹವಾಮಾನ ಬದಲಾವಣೆಗೆ ಸಂಬಂಧಿಸಿ ಅದರ ಖರ್ಚು, ನಿಯಮಗಳು ಮತ್ತು ಷರತ್ತುಗಳು ಹಾಗು  ಆರ್ಥಿಕ ದುರ್ಬಲತೆ ಸೇರಿದಂತೆ ಹಣಕಾಸು ಅಸಮಾನತೆಯನ್ನು ನಿವಾರಿಸಲು  ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಇದರಿಂದ ನಿರ್ಣಾಯಕ ಶಕ್ತಿ ದೊರೆಯುತ್ತದೆ ಎಂಬ ಅಂಶದತ್ತಲೂ ವರದಿ  ಗಮನ ಸೆಳೆದಿದೆ.

ಎಲ್ಲಾ ಕ್ಷೇತ್ರಗಳು ಮತ್ತು ಪ್ರದೇಶಗಳಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅಭಿವೃದ್ಧಿ ಹೊಂದಿದ ದೇಶಗಳಿಂದ ಹಣಕಾಸು ಹರಿವು ಹವಾಮಾನ ಗುರಿಗಳನ್ನು ಪೂರೈಸಲು ಅಗತ್ಯವಾದ ಪ್ರಮಾಣಕ್ಕಿಂತ  ಕಡಿಮೆ ಇದೆ ಎಂದೂ ವರದಿ ಹೇಳಿದೆ. ಹವಾಮಾನ ವೈಪರಿತ್ಯವನ್ನು, ಹೊರಸೂಸುವಿಕೆಯನ್ನು ತಗ್ಗಿಸುವ ಅರ್ಥಪೂರ್ಣ ಕ್ರಮಗಳು  ಮತ್ತು ಅವುಗಳ ಅನುಷ್ಠಾನದ ಪಾರದರ್ಶಕತೆಯ ಹಿನ್ನೆಲೆಯಲ್ಲಿ 2020 ರ ವೇಳೆಗೆ ವರ್ಷಕ್ಕೆ 100 ಬಿಲಿಯನ್ ಡಾಲರ್ ಸಂಗ್ರಹಿಸುವ ಮತ್ತು ಯುಎನ್ಎಫ್ ಸಿಸಿಸಿ ಹಾಗು  ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಅಭಿವೃದ್ಧಿ ಹೊಂದಿದ ದೇಶಗಳಿಂದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಸರಕಾರಿ  ಮತ್ತು ಸಾರ್ವಜನಿಕವಾಗಿ ಒಗ್ಗೂಡಿಸಿದ ಖಾಸಗಿ ಹವಾಮಾನ ಹಣಕಾಸು ಹರಿವು ಸಾಮೂಹಿಕ ಗುರಿಗಿಂತ ಕೆಳಗಿದೆ ಎಂಬುದರತ್ತಲೂ  ಅದು ಗಮನ ಸೆಳೆದಿದೆ.

ಮಾನವ-ಪ್ರೇರಿತ ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮಗಳು ತೀವ್ರಗೊಳ್ಳುತ್ತಲೇ ಹೋಗುತ್ತವೆ. ಸದ್ಯೋಭವಿಷ್ಯದಲ್ಲಿ  ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ತುತ್ತಾಗುವ  ಸಾಧ್ಯತೆಯು ಅಭಿವೃದ್ಧಿಯ ಮಟ್ಟಗಳನ್ನು ಬಲವಾಗಿ ಅವಲಂಬಿಸಿರುತ್ತದೆ, ಮತ್ತು ಹೆಚ್ಚಿನ ತಾಪಮಾನದ ತೀವ್ರ ಹವಾಮಾನ ಮತ್ತು ವಾತಾವರಣದ ಘಟನೆಗಳಿಗೆ ಒಡ್ಡಿಕೊಳ್ಳುವಂತಹ ಪರಿಸ್ಥಿತಿಯು  ಹೆಚ್ಚಾಗುತ್ತದೆ ಎಂದೂ ವರದಿ ಹೇಳಿದೆ. ಈ ಸಂಶೋಧನೆಗಳು ನಾವು ಸುಸ್ಥಿರ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂಬ ಭಾರತದ ನಿಲುವನ್ನು ಒತ್ತಿಹೇಳುತ್ತವೆ.

ಹವಾಮಾನ ಬದಲಾವಣೆಯ ಪರಿಣಾಮವನ್ನು  ತಗ್ಗಿಸುವಿಕೆಯ ಮಹತ್ವಾಕಾಂಕ್ಷೆ , ಹೊಂದಾಣಿಕೆ ಮತ್ತು ಹವಾಮಾನ ಸ್ಥಿತಿಸ್ಥಾಪಕ ಅಭಿವೃದ್ಧಿಯನ್ನು ಸಾಧಿಸಲು ಅಂತರರಾಷ್ಟ್ರೀಯ ಸಹಕಾರವು ನಿರ್ಣಾಯಕ ಶಕ್ತಿ  ಎಂದು ವರದಿಯು ಹೆಚ್ಚಿನ ವಿಶ್ವಾಸದಿಂದ ಉಲ್ಲೇಖಿಸಿದೆ. ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳು, ದುರ್ಬಲ ಪ್ರದೇಶಗಳು, ವಲಯಗಳು ಮತ್ತು ಗುಂಪುಗಳಿಗೆ ಹಣಕಾಸು ಲಭ್ಯತೆಯನ್ನು ಒದಗಿಸುವುದು ಮತ್ತು ಹೆಚ್ಚಿಸುವುದು ಹಾಗು ಮಹತ್ವಾಕಾಂಕ್ಷೆಯ ಮಟ್ಟದಲ್ಲಿ  ಅಗತ್ಯಗಳಿಗೆ ಅನುಗುಣವಾಗಿ ಹವಾಮಾನ ಕ್ರಮಕ್ಕಾಗಿ ಹಣಕಾಸು ಹರಿವನ್ನು ಸರಿಹೊಂದಿಸುವುದು ಸೇರಿದಂತೆ ಹೆಚ್ಚಿನ  ಅಂತರರಾಷ್ಟ್ರೀಯ ಸಹಕಾರದಿಂದ ಹವಾಮಾನ ಸ್ಥಿತಿಸ್ಥಾಪಕ ಅಭಿವೃದ್ಧಿಯನ್ನು ಸಾಧಿಸಬಹುದಾಗಿದೆ ಎಂಬುದನ್ನೂ ವರದಿಯು ಉಲ್ಲೇಖಿಸಿದೆ. 

ಹವಾಮಾನ ಬದಲಾವಣೆಯು ವ್ಯಾಪಕವಾದ ಪ್ರತಿಕೂಲ ಪರಿಣಾಮಗಳನ್ನು ಬೀರಿದೆ ಮತ್ತು ನಷ್ಟವನ್ನು ಮಾಡಿದೆ. ಪ್ರಕೃತಿ ಹಾಗು  ಜನರಿಗೆ ಹಾನಿಯನ್ನು ತಂದಿದೆ. ಇದು ವ್ಯವಸ್ಥೆಗಳು, ವಲಯಗಳು ಮತ್ತು ಕ್ಷೇತ್ರಗಳಲ್ಲಿ ಅಸಮಾನವಾಗಿ ಹಂಚಿಕೆಯಾಗಿದೆ ಎಂಬುದನ್ನೂ  ವರದಿ ಗಮನಿಸಿದೆ.

ತುರ್ತು, ಪರಿಣಾಮಕಾರಿ ಮತ್ತು ನ್ಯಾಯಸಮ್ಮತ ತಗ್ಗಿಸುವಿಕೆ ಮತ್ತು ಹೊಂದಾಣಿಕೆ ಕ್ರಮಗಳಿಲ್ಲದಿದ್ದರೆ, ಹವಾಮಾನ ಬದಲಾವಣೆಯು ಪರಿಸರ ವ್ಯವಸ್ಥೆಗಳು, ಜೀವವೈವಿಧ್ಯತೆ ಮತ್ತು ಪ್ರಸ್ತುತ ಹಾಗು ಭವಿಷ್ಯದ ಪೀಳಿಗೆಯ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಬೆದರಿಕೆಯನ್ನು ತರಲಿದೆ  ಎಂದು ವರದಿ ಹೇಳಿದೆ. ತ್ವರಿತ ತಗ್ಗಿಸುವಿಕೆ ಮತ್ತು ಹೊಂದಾಣಿಕೆಯ ಕ್ರಮಗಳ ಅನುಷ್ಠಾನವು ಮಾನವ ಜನಾಂಗ  ಮತ್ತು ಪರಿಸರ ವ್ಯವಸ್ಥೆಗಳಿಗೆ ಯೋಜಿತ ನಷ್ಟವುಂಟಾಗುವುದನ್ನು  ಮತ್ತು ಹಾನಿಗಳನ್ನು ಕಡಿಮೆ ಮಾಡುತ್ತದೆ.

ಪರಿಸರವನ್ನು ರಕ್ಷಿಸಲು ಮತ್ತು ಕಾಪಿಡಲು ಪರಿಸರ ಸ್ನೇಹಿ ಜೀವನಶೈಲಿಯನ್ನು ಉತ್ತೇಜಿಸುವ ಜಾಗತಿಕ ಸಾಮೂಹಿಕ ಆಂದೋಲನವಾದ "ಲೈಫ್" ಅಥವಾ ಪರಿಸರಕ್ಕಾಗಿ ಜೀವನಶೈಲಿ ಎಂಬ  ಪ್ರಧಾನ ಮಂತ್ರಿಯವರ ಚಿಂತನೆಯ ದೃಷ್ಟಿಕೋನವನ್ನು ಸಂಶ್ಲೇಷಣಾ ವರದಿಯು ಪ್ರತಿಧ್ವನಿಸಿದೆ. ತೀವ್ರ ಹೊರಸೂಸುವಿಕೆಯ ಇಂಧನಗಳ ಬಳಕೆಯನ್ನು ಕಡಿಮೆ ಮಾಡಲು ಸಾಮಾಜಿಕ ಯೋಗಕ್ಷೇಮಕ್ಕಾಗಿ ನಡವಳಿಕೆ ಮತ್ತು ಜೀವನಶೈಲಿ ಬದಲಾವಣೆಗಳು ಸೇರಿದಂತೆ ಅನೇಕ ಆಯ್ಕೆಗಳು ಲಭ್ಯವಿವೆ  ಎಂಬುದನ್ನೂ  ವರದಿಯು ಹೆಚ್ಚಿನ ವಿಶ್ವಾಸದಿಂದ ಗುರುತಿಸಿದೆ.

****


(Release ID: 1909134) Visitor Counter : 167


Read this release in: English