ಕಲ್ಲಿದ್ದಲು ಸಚಿವಾಲಯ

ಕಲ್ಲಿದ್ದಲು ಅನಿಲೀಕರಣವನ್ನು ಉತ್ತೇಜಿಸಲು ಪ್ರೋತ್ಸಾಹಕ

Posted On: 13 FEB 2023 3:34PM by PIB Bengaluru

ಕಲ್ಲಿದ್ದಲು ಅನಿಲೀಕರಣ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಖಾಸಗಿ ವಲಯದ ಕಂಪನಿಗಳನ್ನು ಉತ್ತೇಜಿಸಲು ಕಲ್ಲಿದ್ದಲು ಸಚಿವಾಲಯವು ಒಂದು ನೀತಿಯನ್ನು ರೂಪಿಸಿದೆ, ಇದರಲ್ಲಿ, ಅನಿಲೀಕರಣಕ್ಕಾಗಿ ಬಳಸಲಾಗುವ ಕಲ್ಲಿದ್ದಲು ಪ್ರಮಾಣವು ಒಟ್ಟು ಕಲ್ಲಿದ್ದಲು ಉತ್ಪಾದನೆಯ ಕನಿಷ್ಠ ಶೇಕಡಾ 10 ಆಗಿದ್ದರೆ ಅನಿಲೀಕರಣ ಉದ್ದೇಶಕ್ಕಾಗಿ ಬಳಸಲಾಗುವ ಕಲ್ಲಿದ್ದಲು ಭವಿಷ್ಯದ ಎಲ್ಲಾ ವಾಣಿಜ್ಯ ಕಲ್ಲಿದ್ದಲು ಬ್ಲಾಕ್ ಹರಾಜುಗಳಿಗೆ ಆದಾಯದ ಪಾಲಿನಲ್ಲಿ ಶೇಕಡಾ 50ರಷ್ಟು ರಿಯಾಯಿತಿಯನ್ನು ನೀಡುವ ಸಾಧ್ಯತೆಯನ್ನು ರೂಪಿಸಲಾಗಿದೆ. ಇದಲ್ಲದೆ, ಹೊಸ ಕಲ್ಲಿದ್ದಲು ಅನಿಲೀಕರಣ ಘಟಕಗಳಿಗೆ ಕಲ್ಲಿದ್ದಲು ಲಭ್ಯವಾಗುವಂತೆ ಮಾಡಲು ನಿಯಂತ್ರಿತವಲ್ಲದ ವಲಯ-NRS ಅಡಿಯಲ್ಲಿ ಪ್ರತ್ಯೇಕ ಹರಾಜು ಮಾರ್ಗವನ್ನು ರಚಿಸಲಾಗಿದೆ. ಈ ಪ್ರೋತ್ಸಾಹಕದಿಂದ, ಇದು ಯೋಜನೆಗಳಿಗೆ ಒಣ ಇಂಧನದ ಬೇಡಿಕೆಯನ್ನು ಪೂರೈಸುತ್ತದೆ.

ಇಂಗ್ಲೆಂಡಿನ ಗ್ಲಾಸ್ಗೋದಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಚೌಕಟ್ಟಿನ ಸಮಾವೇಶದ (COP 26) 26 ನೇ ಅಧಿವೇಶನದಲ್ಲಿ, ಐದು ಅಮೃತ ಅಂಶಗಳನ್ನು ಜಗತ್ತಿಗೆ ಪ್ರಸ್ತುತಪಡಿಸುವ ಮೂಲಕ ಹವಾಮಾನ ಬದಲಾವಣೆಯ ಸವಾಲನ್ನು ಎದುರಿಸಲು ಭಾರತದ ಪ್ರಯತ್ನಗಳನ್ನು ತೀವ್ರಗೊಳಿಸುವುದಾಗಿ ಪ್ರಧಾನಮಂತ್ರಿ ಮೋದಿಯವರು ಹೇಳಿದ್ದರು. 2070ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ದೇಶ ಸಾಧಿಸುವುದು ಈ ಅಂಶಗಳಲ್ಲಿ ಒಂದಾಗಿದೆ. ಇದು ನಮ್ಮ ದೀರ್ಘಕಾಲೀನ ಕಡಿಮೆ ಹಸಿರುಮನೆ ಅನಿಲ ಹೊರಸೂಸುವಿಕೆ ಅಭಿವೃದ್ಧಿ ಕಾರ್ಯತಂತ್ರಗಳಿಗೆ ದೂರದೃಷ್ಟಿಯನ್ನು ಪ್ರಸ್ತುತಪಡಿಸುತ್ತದೆ. ಹವಾಮಾನ ಬದಲಾವಣೆಯ ಪರಿಣಾಮಗಳಿಂದ ಭವಿಷ್ಯದ ಪೀಳಿಗೆಯನ್ನು ಮತ್ತು ಗ್ರಹಗಳನ್ನು ರಕ್ಷಿಸಲು ಹವಾಮಾನ ನ್ಯಾಯ ಮತ್ತು ಹವಾಮಾನ ಸ್ನೇಹಿ ಜೀವನಶೈಲಿಯ ಅಗತ್ಯವನ್ನು ಅವರು ಒತ್ತಿ ಹೇಳಿದರು. ಜಾಗತಿಕ ಜನಸಂಖ್ಯೆಯ ಶೇಕಡಾ 17ಕ್ಕಿಂತ ಹೆಚ್ಚು ಜನರಿಗೆ ಭಾರತ ದೇಶ ನೆಲೆಯಾಗಿದ್ದರೂ ಕೂಡ ಇಲ್ಲಿನ ಐತಿಹಾಸಿಕ ಸಂಚಿತ ಹೊರಸೂಸುವಿಕೆ ಮತ್ತು ತಲಾ ಹೊರಸೂಸುವಿಕೆ ತುಂಬಾ ಕಡಿಮೆಯಾಗಿದೆ ಎಂದು ಪ್ರಧಾನ ಮಂತ್ರಿಗಳು ಅಭಿವ್ಯಕ್ತಪಡಿಸಿದ್ದರು. 

ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

*****



(Release ID: 1899143) Visitor Counter : 91


Read this release in: English , Urdu