ಆಯುಷ್
azadi ka amrit mahotsav g20-india-2023

​​​​​​​ವೈದ್ಯಕೀಯ ಸಸ್ಯಗಳ ಸಂರಕ್ಷಣೆ, ಅಭಿವೃದ್ಧಿ ಮತ್ತು ಸುಸ್ಥಿರ ನಿರ್ವಹಣೆಗಾಗಿ ಯೋಜನೆ

Posted On: 10 FEB 2023 4:58PM by PIB Bengaluru

ಆಯುಷ್ ಸಚಿವಾಲಯದ ರಾಷ್ಟ್ರೀಯ ವೈದ್ಯಕೀಯ ಸಸ್ಯಗಳ ಮಂಡಳಿ – ಎನ್ಎಂಪಿಬಿ ಈವರೆಗೆ ದೇಶದಲ್ಲಿ ಕೇಂದ್ರೀಯ ವಲಯದ ಯೋಜನೆಯಡಿ ವೈದ್ಯಕೀಯ ಸಸ್ಯಗಳ ಸಂರಕ್ಷಣೆ, ಅಭಿವೃದ್ಧಿ ಮತ್ತು ಸುಸ್ಥಿರ ನಿರ್ವಹಣೆಗಾಗಿ 1498 ಯೋಜನೆಗಳಿಗೆ ಬೆಂಬಲ ನೀಡಿದೆ. ಈ ಯೋಜನೆಯಡಿ ಆಯುಷ್ ಸಚಿವಾಲಯದ ಎನ್ಎಂಪಿಬಿ 103026.32 ಹೆಕ್ಟೇರ್ ಪ್ರದೇಶದಲ್ಲಿ ಆಂತರಿಕ ಮತ್ತು ಬಾಹ್ಯ ಪ್ರದೇಶಗಳಲ್ಲಿ ಔಷಧೀಯ ಸಸ್ಯೆಗಳ ಸಂರಕ್ಷಣೆ ಮಾಡಿದೆ ಮತ್ತು 24 ಸಾವಿರ ಗಿಡಮೂಲಿಕೆ ತೋಟಗಳು, 1175 ಜೆಎಫ್ಎಂಸಿಗಳು, 233 ವಿಚಾರ ಸಂಕಿರಣಗಳು/ ಕಾಯಾಗಾರಗಳು/ ಸಮ್ಮೇಳನಗಳು/ ಖರೀದಿದಾರರು, ಮಾರಾಟಗಾರರ ಸಭೆಗಳು/ ತರಬೇತಿ ಶಿಬಿರಗಳ ಮೂಲಕ ಸಂಪನ್ಮೂಲ ವರ್ಧನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಹಾಗೂ 57 ನರ್ಸರಿಗಳನ್ನು ಸಜ್ಜುಗೊಳಿಸಲಾಗಿದೆ. ಇದಲ್ಲದೇ ಔಷದೀಯ ಸಸ್ಯಗಳ ವ್ಯಾಪಾರ ಮತ್ತು ಸುಲಭವಾಗಿ ಮಾರುಕಟ್ಟೆ ಪ್ರವೇಶ ಒದಗಿಸಲು ಎನ್ಎಂಪಿಬಿ ಇ-ಚರಕ್ ಎಂಬ ಅಪ್ಲಿಕೇಶನ್ ಅಭಿವೃದ್ದಿಪಡಿಸಿದೆ ಮತ್ತು ಸಿಡಿಎಸಿ ಹೈದರಾಬಾದ್ ಸಹಯೋಗದೊಂದಿಗೆ ಎನ್ಎಂಪಿಬಿ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ.

ಒಟ್ಟು 220 ನರ್ಸರಿಗಳು, 354 ಕೋಯ್ಲೋತ್ತರ ನಿರ್ವಹಣಾ ಘಟಕಗಳು, 25 ಸಂಸ್ಕರಣಾ ಘಟಕಗಳು, 42 ಗ್ರಾಮೀಣ/ಜಿಲ್ಲಾ ಸಂಗ್ರಹಣಾ ಕೇಂದ್ರಗಳು/ ಚಿಲ್ಲರೆ ಮಾರಾಟ ಮಳಿಗೆಗಳು, 10 ಬೀಜ ಅಭಿವೃದ್ಧಿ ಕೇಂದ್ರಗಳು, 15 ಪ್ರಾತ್ಯಕ್ಷಿಕೆ ಕೇಂದ್ರಗಳನ್ನು 56,305 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗಿದೆ. 2015-16 ರಿಂದ 2020-21 ರ ಆರ್ಥಿಕ ವರ್ಷದಲ್ಲಿ ಇವುಗಳನ್ನು ಆಯುಷ್ ಮಿಷನ್ [ನಾಮ್]ನ ಔಷಧೀಯ ಸಸ್ಯಗಳ ಘಟಕದಡಿ ಸ್ಥಾಪಿಸಲಾಗಿದೆ.

ಆಯುಷ್ ಸಚಿವಾಲಯದಡಿ ರಾಷ್ಟ್ರೀಯ ವೈದ್ಯಕೀಯ ಸಸ್ಯಗಳ ಮಂಡಳಿ “ಕೇಂದ್ರೀಯ ವಲಯದ ಸಂರಕ್ಷಣಾ ಕಾಯಕ್ರಮ, ಅಭಿವೃದ್ದಿ ಮತ್ತು ವೈದ್ಯಕೀಯ ಸಸ್ಯಗಳ ಸುಸ್ಥಿರ ನಿರ್ವಹಣೆ” ಎಂಬ ಹೆಸರಿನಡಿ ಯೋಜನೆಯನ್ನು ಜಾರಿಗೊಳಿಸಿದೆ. ವೈದ್ಯಕೀಯ ಸಸ್ಯಗಳ ಯೋಜನೆಯಡಿ ಈ ಕೆಳಕಂಡ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ:

     i.        ಸಮೀಕ್ಷೆ, ಆವಿಷ್ಕಾರ, ಔಷಧೀಯ ಸಸ್ಯಗಳ ರಕ್ಷಣೆ ಮತ್ತು ಅಭಿವೃದ್ದಿ ಪ್ರದೇಶಗಳ ಮೂಲಕ [ಎಂಪಿಡಿಸಿಎ] ಆಂತರಿಕ ಸಂರಕ್ಷಣೆ ಮತ್ತು ಸಂಪನ್ಮೂಲ ವರ್ಧನೆ.

   ii.        ಗಿಡಮೂಲಿಕೆ ಉದ್ಯಾನ [ಎಚ್ ಜಿ], ಶಾಲಾ ಗಿಡಮೂಲಿಕೆ ಉದ್ಯಾನ [ಎಸ್ಎಚ್ ಜಿ] ಮತ್ತು ಮನೆಗಳಲ್ಲಿ ಗಿಡಮೂಲಿಕೆ ಉದ್ಯಾನ [ಎಚ್ಎಚ್ ಜಿ]

 iii.        ಜಂಟಿ ಅರಣ್ಯ ನಿರ್ವಹಣಾ ಸಮಿತಿಗಳು/ ಪಂಚಾಯತ್ ಗಳು, ವನ ಪಂಚಾಯತ್ ಗಳು/ ಜೀವ ವೈವಿಧ್ಯತೆಯ ನಿರ್ವಹಣಾ ಸಮಿತಿಗಳು/ ಪಶು ಸಂಗೋಪನೆ, ಪ್ರಾಥಮಿಕ ಸಂಸ್ಕರಣೆ, ಸಂಗ್ರಹ ಮತ್ತಿತರೆ ವಲಯಗಳಲ್ಲಿ ಸ್ವಯಂ ಸೇವಾ ಸಂಘಗಳಿಗೆ ಮೌಲ್ಯ ವರ್ಧನೆ ಚಟುವಟಿಕೆಗಳು. ವೈದ್ಯಕೀಯ ಸಸ್ಯಗಳು ಮತ್ತು ಈ ಮೂಲಕ ಈ ಸಮುದಾಯಗಳಿಗೆ ಜೀವನೋಪಾಯವನ್ನು ಸೃಜಿಸಲಾಗಿದೆ.

 iv.        ಸಂಶೋಧನೆ ಮತ್ತು ಅಭಿವೃದ್ದಿ

   v.        ಮಾಹಿತಿ, ಶಿಕ್ಷಣ ಮತ್ತು ಸಂಪರ್ಕ [ಐಇಸಿ] ಇತರೆ.

 vi.        ನರ್ಸರಿಗಳ ಸ್ಥಾಪನೆ ಮೂಲಕ ಉತ್ತೇಜನಾ ಚಟುವಟಿಕೆಗಳು

2015-16 ರಿಂದ 2020-21ರ ಹಣಕಾಸು ವರ್ಷಗಳಿಗೆ ಭಾರತ ಸರ್ಕಾರದ ಪ್ರಾಯೋಜಕತ್ವದಡಿ ಆಯುಷ್ ಸಚಿವಾಲಯ ರಾಷ್ಟ್ರೀಯ ಆಯುಷ್ ಅಭಿಯಾನ [ಎನ್ಎಎಂ]ವನ್ನು ಆರಂಭಿಸಿದ್ದು, ಇದರಡಿ ವೈದ್ಯಕೀಯ ಸಸ್ಯಗಳ ಕೃಷಿಯನ್ನು ಉತ್ತೇಜಿಸಲಾಗುತ್ತಿದೆ. ವೈದ್ಯಕೀಯ ಸಸ್ಯಗಳ ವಲಯದಡಿ ಕ್ಲಸ್ಟರ್/ವಲಯವಾರು ಗುರುತಿಸಿರುವ ಮಾರುಕಟ್ಟೆ ಆಧಾರಿತ 140 ಆದ್ಯತೆಯ ವೈದ್ಯಕೀಯ ಸಸ್ಯಗಳನ್ನು ಗುರುತಿಸಲಾಗಿದೆ ಮತ್ತು ದೇಶದ ಆಯ್ದ ರಾಜ್ಯಗಳ ಅನುಷ್ಠಾನ ಸಂಸ್ಥೆಗಳ ಸಹಯೋಗದಡಿ ಅಭಿಯಾನದ ಮಾದರಿಯಲ್ಲಿ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ. ಕಾರ್ಯಕ್ರಮದ ಮಾರ್ಗಸೂಚಿಯಡಿ ಬೆಂಬಲವನ್ನು ಒದಗಿಸಲಾಗಿದೆ:

     i.        ರೈತರ ಭೂಮಿಯಲ್ಲಿ ಆದ್ಯತಾ ಪಟ್ಟಿಯಲ್ಲಿರುವ ಔಷಧೀಯ ಸಸ್ಯಗಳ ಕೃಷಿ

   ii.        ಗುಣಮಟ್ಟದ ನಾಟಿ ಸಾಮಗ್ರಿಗಳನ್ನು ಬೆಳೆಸಲು ಮತ್ತು ಪೂರೈಸಲು ಸಂರ್ಪಕ ವ್ಯವಸ್ಥೆ ಹೊಂದಿರುವ ನರ್ಸರಿಗಳ ಸ್ಥಾಪನೆ

 iii.        ಮುಂದುವರೆದ ಸಂಪರ್ಕ ವ್ಯವಸ್ಥೆಗಳೊಂದಿಗೆ ಸುಗ್ಗಿ ನಂತರದ ನಿರ್ವಹಣೆ

 iv.        ಪ್ರಾಥಮಿಕ ಸಂಸ್ಕರಣೆ, ಇತರೆ ಮಾರುಕಟ್ಟೆ ಮೂಲ ಸೌಕರ್ಯ

“ಕೇಂದ್ರೀಯ ವಲಯದ ಸಂರಕ್ಷಣೆ ಕಾರ್ಯಕ್ರಮ, ಅಭಿವೃದ್ಧಿ ಮತ್ತು ವೈದ್ಯಕೀಯ ಸಸ್ಯಗಳ ಸುಸ್ಥಿರ ನಿರ್ವಹಣೆ”ಯಡಿ ಮಾಹಿತಿ, ಶಿಕ್ಷಣ ಮತ್ತು ಸಂಪರ್ಕ [ಐಇಸಿ] ಚಟುವಟಿಕೆಗಳನ್ನು [ತರಬೇತಿ ಕಾರ್ಯಕ್ರಮಗಳು, ಖರೀದಿ, ಮಾರಾಟಗಾರರ ಸಭೆಗಳು, ಕಾರ್ಯಾಗಾರಗಳು, ವಿಚಾರ ಸಂಕಿರಣಗಳು, ಸಮ್ಮೇಳನಗಳು, ಇತರೆ] ಮತ್ತು ನರ್ಸರಿಗಳ ಸ್ಥಾಪನೆ ಮತ್ತು ರೈತರಲ್ಲಿ ಔಷಧೀಯ ಸಸ್ಯಗಳ ಕೃಷಿಯನ್ನು ಉತ್ತೇಜಿಸಲು ಪ್ರಾದೇಶಿಕ ಮತ್ತು ಸೌಲಭ್ಯ ಕೇಂದ್ರಗಳ ಸ್ಥಾಪನೆ.

ರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿ [ಎನ್ಎಂಪಿಬಿ] ಮಾಹಿತಿ, ಶಿಕ್ಷಣ ಮತ್ತು ಸಂಪರ್ಕ [ಐಇಸಿ]ದಡಿ 233 ಯೋಜನೆಗಳನ್ನು ಬೆಂಬಲಿಸಿದ್ದು, ವೈದ್ಯಕೀಯ ಸಸ್ಯಗಳ ಬಗ್ಗೆ ಸ್ಥಳೀಯ ಸಮೂಹದಲ್ಲಿ ಅರಿವು ಮೂಡಿಸುವ, 19 ಔಷಧೀಯ ಸಸ್ಯಗಳ ಮಾರುಕಟ್ಟೆ, ಈ ಕಾರ್ಯಕ್ರಮ ಆರಂಭವಾದ ನಂತರದಲ್ಲಿ ಗುಣಮಟ್ಟದ ಗಿಡ ನೆಡುವ ಪರಿಕರಗಳನ್ನು ಒದಗಿಸಲು 57 ಯೋಜನೆಗಳನ್ನು ಬೆಂಬಲಿಸಲಾಗಿದೆ.

ಇದರ ಜೊತೆಗೆ ಆಯುಷ್ ಸಚಿವಾಲಯದ ರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿಯ ಪ್ರಾದೇಶಿಕ ಸೌಲಭ್ಯ ಕೇಂದ್ರಗಳ [ಆರ್ ಸಿಎಫ್ ಸಿಗಳು] ಮೂಲಕ ವಿವಿಧ ರಾಜ್ಯಗಳ ರೈತರು ಮತ್ತು ಇತರೆ ಪಾಲುದಾರರಿಗೆ ಗುಣಮಟ್ಟದ ಔಷಧೀಯ ಮತ್ತು ಗಿಡಮೂಲಿಕೆ ಸಸ್ಯಗಳ ಪರಿಕರಗಳನ್ನು ಒದಗಿಸಲಾಗುತ್ತಿದೆ. ಯೋಜನೆಯ ಮಾರ್ಗಸೂಚಿಯಡಿ ಎನ್ಎಂಪಿಬಿ 7 ಪ್ರಾದೇಶಿಕ ಸೌಲಭ್ಯ ಕೇಂದ್ರಗಳನ್ನು [ಆರ್ ಸಿಎಫ್ ಸಿಗಳು] ದೇಶದ ವಿವಿಧ ವಲಯಗಳು/ ಪ್ರದೇಶಗಳಲ್ಲಿ ವೈದ್ಯಕೀಯ ಸಸ್ಯಗಳ ಚಟುವಟಿಕೆಗಳನ್ನು ಉತ್ತೇಜಿಸಲು ಬಳಸಲಾಗುತ್ತಿದೆ.

2015-16 ರಿಂದ 2020-21ರ ಹಣಕಾಸು ವರ್ಷಗಳಲ್ಲಿ ರಾಷ್ಟ್ರೀಯ ಆಯುಷ್ ಅಭಿಯಾನ [ಎನ್ಎಎಂ] ನ ಕೇಂದ್ರೀಯ ಪ್ರಾಯೋಜಕತ್ವ ಯೋಜನೆಯಡಿ ವೈದ್ಯಕೀಯ ಸಸ್ಯಗಳ ಕೃಷಿ ಚಟುವಟಿಕೆಯನ್ನು ಉತ್ತೇಜಿಸಲಾಗುತ್ತಿದೆ. ಸಚಿವಾಲಯ 235 ಕಾರ್ಯಾಗಾರಗಳು/ ಖರೀದಿ – ಮಾರಾಟ ಸಭೆಗಳು/ ಐಇಸಿ ಚಟುವಟಿಕೆಯಡಿ ಪ್ರಾತ್ಯಕ್ಷಿಕೆ ಕೇಂದ್ರಗಳಿಗೆ ಭೇಟಿ ಹಾಗೂ  2015-16 ರಿಂದ 2020-21ರ ಹಣಕಾಸು ವರ್ಷದಲ್ಲಿ ರಾಷ್ಟ್ರೀಯ ಆಯುಷ್ ಅಭಿಯಾನದ ವೈದ್ಯಕೀಯ ಸಸ್ಯಗಳ ಘಟಕದಡಿ 19061 ರೈತರ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಆಯುಷ್ ಸಚಿವ ಶ್ರೀ ಸರ್ಬಾನಂದ ಸೋನೆವಾಲ್ ಅವರು ಲೋಕಸಭೆಗಿಂದು ಲಿಖಿತ ಮೂಲಕ ಈ ಮಾಹಿತಿ ನೀಡಿದ್ದಾರೆ.

*****



(Release ID: 1898158) Visitor Counter : 137


Read this release in: English , Urdu