ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ಪರಿಸರ ವ್ಯವಸ್ಥೆಯ ಮರುಸ್ಥಾಪನೆ ಮತ್ತು ಜೀವವೈವಿಧ್ಯ ಹೆಚ್ಚಳ ಕುರಿತ ಕಾರ್ಯಕ್ರಮದೊಂದಿಗೆ ಬೆಂಗಳೂರಿನಲ್ಲಿ ಮೊದಲ ಪರಿಸರ ಮತ್ತು ಹವಾಮಾನ ಸುಸ್ಥಿರತೆಯ ಕಾರ್ಯಕಾರಿ ಗುಂಪಿನ (ಇ ಸಿ ಎಸ್‌ ಡಬ್ಲ್ಯು ಜಿ) ಚರ್ಚೆಗಳು ಪ್ರಾರಂಭವಾದವು


ಸ್ಥಿರ ಮತ್ತು ಸುಸ್ಥಿರ ಹವಾಮಾನ, ಪರಿಸರ ಮತ್ತು ಜೀವವೈವಿಧ್ಯವನ್ನು ಬೆಂಬಲಿಸುವ ಹೊಸ ಅಭಿವೃದ್ಧಿ ಮಾದರಿಯನ್ನು ಸಾಮೂಹಿಕವಾಗಿ ಬೆಂಬಲಿಸುವ ಗುರಿಯನ್ನು ಇ ಸಿ ಎಸ್‌ ಡಬ್ಲ್ಯು ಜಿ ಹೊಂದಿದೆ

Posted On: 09 FEB 2023 1:50PM by PIB Bengaluru

ಜಿ-20 ಶೆರ್ಪಾ ಟ್ರ್ಯಾಕ್‌ನಡಿಯಲ್ಲಿ ಪರಿಸರ ಮತ್ತು ಹವಾಮಾನ ಸುಸ್ಥಿರತೆ ಕಾರ್ಯಕಾರಿ ಗುಂಪು (ಇ ಸಿ ಎಸ್‌ ಡಬ್ಲ್ಯು ಜಿ) ನ ಚರ್ಚೆಗಳು ಇಂದು ಬೆಂಗಳೂರಿನಲ್ಲಿ ಇ ಸಿ ಎಸ್‌ ಡಬ್ಲ್ಯು ಜಿ ಯ ಮೊದಲ ಸಭೆಯೊಂದಿಗೆ ಪ್ರಾರಂಭವಾದವು. ಇ ಸಿ ಎಸ್‌ ಡಬ್ಲ್ಯು ಜಿ ಸಭೆಗಳಿಗೆ ಬುನಾದಿಯಾಗಿ, ಭಾರತದ ಅಧ್ಯಕ್ಷತೆಯ ವಸುಧೈವ ಕುಟುಂಬಕಂ - ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ- ಧ್ಯೇಯವು ನೈಸರ್ಗಿಕ ಸಂಪನ್ಮೂಲಗಳ ಮಾಲೀಕತ್ವದ ಪ್ರಜ್ಞೆಯಿಂದ ಟ್ರಸ್ಟಿಶಿಪ್, ಸುಸ್ಥಿರ ಜೀವನಶೈಲಿ, ಸೇರ್ಪಡೆ ಮತ್ತು ಸಾರ್ವತ್ರಿಕ ಏಕತೆಯ ಕಡೆಗೆ ಮೂಲಭೂತ ಮನಸ್ಥಿತಿಯನ್ನು ಹೇಗೆ ಬದಲಾಯಿಸುತ್ತಿದೆ ಎಂಬುದರ ಕುರಿತು ಚರ್ಚೆಯನ್ನು ನಡೆಸಲಾಯಿತು.

ಅರಣ್ಯ ಇಲಾಖೆ  ಮಹಾನಿರ್ದೇಶಕರು ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ವಿಶೇಷ ಕಾರ್ಯದರ್ಶಿ ಶ್ರೀ ಚಂದ್ರ ಪ್ರಕಾಶ್ ಗೋಯಲ್,  ಸಭೆಯ ಸಂದರ್ಭವನ್ನು ವಿವರಿಸಿದರು ಮತ್ತು ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ, ಹಣಕಾಸು, ಸಾಮಾಜಿಕ ಮತ್ತು ಪರಿಸರ ಸಮಸ್ಯೆಗಳನ್ನು ಕುರಿತು ವ್ಯವಹರಿಸುವಾಗ ಜಿ-20 ಹೇಗೆ ಪ್ರಮುಖ ಪಾತ್ರವನ್ನು ವಹಿಸಿದೆ ಎಂಬುದರ ಕುರಿತು ಒತ್ತಿಹೇಳಿದರು. ಸ್ಪಷ್ಟವಾದ ಪ್ರಭಾವವನ್ನು ಸೃಷ್ಟಿಸಲು ಹಿಂದಿನ ಜಿ-20 ಅಧ್ಯಕ್ಷತೆಗಳ ಶ್ಲಾಘನೀಯ ಉಪಕ್ರಮಗಳನ್ನು ಮುಂದುವರಿಸಲು ಭಾರತದ ಅಧ್ಯಕ್ಷತೆಯು ಸಾಮೂಹಿಕ ನಾಯಕತ್ವಕ್ಕೆ ಪ್ರೋತ್ಸಾಹ ನೀಡುತ್ತದೆ ಎಂದು ಅವರು ಹೇಳಿದರು.

ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿಯ (ಐ ಸಿ ಎಫ್ ಆರ್‌ ಇ) ಮಹಾನಿರ್ದೇಶಕ ಶ್ರೀ ಎ, ಎಸ್‌. ರಾವತ್ ಅವರು ವಿಶೇಷವಾಗಿ ಗಣಿಗಾರಿಕೆ ಮತ್ತು ಕಾಡ್ಗಿಚ್ಚು ಪೀಡಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ಪರಿಸರ ಪುನಃಸ್ಥಾಪನೆಯ ಅಂಶಗಳ ಜಾಗತಿಕ ದೃಷ್ಟಿಕೋನಗಳನ್ನು ಕುರಿತು ಚರ್ಚಿಸಿದರು. ಈ ಅಧಿವೇಶನದಲ್ಲಿ, ಜಿ-20 ದೇಶಗಳ ಪ್ರತಿನಿಧಿಗಳು ಗಣಿಗಾರಿಕೆ ಮತ್ತು ಕಾಡ್ಗಿಚ್ಚು ಪೀಡಿತ ಪ್ರದೇಶಗಳ ಮರುಸ್ಥಾಪನೆ ಕುರಿತು ತಮ್ಮ ಅನುಭವಗಳನ್ನು ಮತ್ತು ಉತ್ತಮ ಅಭ್ಯಾಸಗಳ ಕುರಿತು‌ ಮಾಹಿತಿ ನೀಡಿದರು. ಯುಎನ್‌ಡಿಪಿಯ ಡಾ. ರುಚಿ ಪಂತ್ ಅವರು ಗಣಿಗಾರಿಕೆ ಪೀಡಿತ ಪ್ರದೇಶದಲ್ಲಿ ಪರಿಸರ ವ್ಯವಸ್ಥೆಗಳ ರಕ್ಷಣೆ ಮತ್ತು ಸಂರಕ್ಷಣೆ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು, ನಿರ್ದಿಷ್ಟವಾಗಿ ಭಾರತದಲ್ಲಿ ಮಾಡಿರುವ ಕೆಲಸವನ್ನು ಅವರು ವಿವರಿಸಿದರು. ಸಮಾರೋಪ ಭಾಷಣ ಮಾಡಿದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ವನ್ಯಜೀವಿ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ ಶ್ರೀ ಬಿವಾಶ್ ರಂಜನ್ ಅವರು ಇಂದಿನ ಸಭೆಯಲ್ಲಿ ಚರ್ಚೆಯಾದ ಪ್ರಮುಖ ಅಂಶಗಳನ್ನು ವಿವರಿಸಿದರು. ಮೂರು ದಿನಗಳ ಇ ಸಿ ಎಸ್‌ ಡಬ್ಲ್ಯು ಜಿ ಸಭೆಯ ಮೊದಲ ಅಧಿವೇಶನವು ಪ್ರಪಂಚವು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಭವಿಷ್ಯವನ್ನು ರೂಪಿಸಲು ಎಲ್ಲ ಪ್ರತಿನಿಧಿಗಳ ನಡುವೆ ಫಲಪ್ರದ ಸಂವಾದವನ್ನು ಸೃಷ್ಟಿಸುವ ಭರವಸೆಯ ಟಿಪ್ಪಣಿಯೊಂದಿಗೆ ಮುಕ್ತಾಯವಾಯಿತು.

ಮುಂದಿನ ಎರಡು ದಿನಗಳಲ್ಲಿ, ಜಿ-20 ಸದಸ್ಯರು ಇಸಿಎಸ್‌ಡಬ್ಬ್ಲ್ಯುಜಿ ಗುರುತಿಸಿರುವ ಮೂರು ಪ್ರಮುಖ ಆದ್ಯತೆಗಳನ್ನು ಕುರಿತು ಮತ್ತಷ್ಟು ಚರ್ಚೆ ನಡೆಸುತ್ತಾರೆ.

https://twitter.com/moefcc/status/1623558361626341376?s=48&t=86Siq7f8IN_IO31-nogF6g
ಅಧಿವೇಶನದಲ್ಲಿ ಚರ್ಚಿಸಲಾದ ವಿಷಯಗಳ ಕುರಿತು ಅರಣ್ಯ ಇಲಾಖೆಯ ಮಹಾನಿರ್ದೇಶಕರು ಹಾಗು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ವಿಶೇಷ ಕಾರ್ಯದರ್ಶಿ ಶ್ರೀ ಚಂದ್ರ ಪ್ರಕಾಶ್ ಗೋಯಲ್, ಮಾಧ್ಯಮ ಸಂವಾದ ನಡೆಸಿದರು.

 

ದಿನದ ದ್ವಿತೀಯಾರ್ಧದಲ್ಲಿ, ಪ್ರತಿನಿಧಿಗಳು ಬೆಂಗಳೂರಿನ ಕಲ್ಕೆರೆ ಅರ್ಬೊರೇಟಂ (ಮರಗಳ ಉದ್ಯಾನ) ಮತ್ತು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡುತ್ತಾರೆ. ಕಲ್ಕೆರೆ ಅರ್ಬೊರೇಟಂನಲ್ಲಿ, ಪ್ರತಿನಿಧಿಗಳು ಕರ್ನಾಟಕ ರಾಜ್ಯದ ನಾಲ್ಕು ಪ್ರಧಾನ ಅರಣ್ಯ ಪರಿಸರ ವ್ಯವಸ್ಥೆಗಳ ಬಗ್ಗೆ ಮಾಹಿತಿ‌ಮತ್ತು ವಿವರ ಪಡೆಯುತ್ತಾರೆ. ಪ್ರತಿನಿಧಿಗಳಿಗೆ ಈ ಪರಿಸರ ವ್ಯವಸ್ಥೆಗಳಲ್ಲಿ ಅಳವಡಿಸಿಕೊಂಡ ಅರಣ್ಯ ಮರುಸ್ಥಾಪನೆಯ ಮಾದರಿಗಳನ್ನು ಮತ್ತು ಈ ಪ್ರದೇಶಗಳಲ್ಲಿ ಪ್ರಾಣಿಗಳ ಜೀವವೈವಿಧ್ಯದ ಯಶಸ್ವಿ ಪುನರುಜ್ಜೀವವನ್ನು ತೋರಿಸಲಾಗುತ್ತದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರತಿನಿಧಿಗಳಿಗೆ ಅತ್ಯಾಧುನಿಕ ಚಿಟ್ಟೆ ಉದ್ಯಾನ ಮತ್ತು ವನ್ಯಜೀವಿ ಸಫಾರಿಗಳ ಭೇಟಿ ಯೋಜಿಸಲಾಗಿದೆ. ಇದು ತನ್ನ ಶ್ರೀಮಂತ ಅರಣ್ಯ ಪರಿಸರ ವ್ಯವಸ್ಥೆಗಳನ್ನು ಮತ್ತು ಅದರ ಯಶಸ್ವಿ ಪರಿಸರ ಪ್ರವಾಸೋದ್ಯಮ ಮಾದರಿಯನ್ನು ಜಗತ್ತಿಗೆ ಪ್ರದರ್ಶಿಸಲು ಕರ್ನಾಟಕಕ್ಕೆ ಒಂದು ಅವಕಾಶವಾಗಿದೆ.

MJPS/SSV

*****


(Release ID: 1897639)
Read this release in: English