ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಒಂದು ಜಿಲ್ಲೆ ಒಂದು ಉತ್ಪನ್ನದ ಯೋಜನೆಯಡಿಯಲ್ಲಿ ದೇಶದ ಎಲ್ಲಾ 765 ಜಿಲ್ಲೆಗಳನ್ನೂಉತ್ಪನ್ನಗಳ ರಫ್ತು ಸಾಮರ್ಥ್ಯವನ್ನು ಹೊಂದಿರುವ ಜಿಲ್ಲಾ ರಫ್ತು ಕೇಂದ್ರಗಳಾಗಿ (ಒ.ಡಿ.ಒ.ಪಿ-ಡಿ.ಇ.ಹೆಚ್.) ಮಾರ್ಪಡಿಸುವ ಉಪಕ್ರಮ
Posted On:
08 FEB 2023 5:47PM by PIB Bengaluru
ಒಂದು ಜಿಲ್ಲೆ ಒಂದು ಉತ್ಪನ್ನ-ಜಿಲ್ಲೆಗಳ ರಫ್ತು ಕೇಂದ್ರ ಉಪಕ್ರಮದ (ಒ.ಡಿ.ಒ.ಪಿ-ಡಿ.ಇ.ಹೆಚ್ ) ಅಡಿಯಲ್ಲಿ, ದೇಶದ ಎಲ್ಲಾ 765 ಜಿಲ್ಲೆಗಳಿಂದ ರಫ್ತು ಸಾಮರ್ಥ್ಯ ಹೊಂದಿರುವ ಪ್ರತ್ಯೇಕ ಪ್ರತ್ಯೇಕವಾದ ಅನನ್ಯ ಒಂದೊಂದು ಉತ್ಪನ್ನಗಳನ್ನು ಗುರುತಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಶ್ರೀ ಸೋಮ್ ಪ್ರಕಾಶ್ ಅವರು ಇಂದು ಸಂಸತ್ತಿನ ಪ್ರಶ್ನೆಗೆ ಉತ್ತರಿಸಿದರು. ಒಂದು ಜಿಲ್ಲೆ ಒಂದು ಉತ್ಪನ್ನ - ಜಿಲ್ಲಾ ರಫ್ತು ಕೇಂದ್ರ ಉಪಕ್ರಮ (ಒ.ಡಿ.ಒ.ಪಿ-ಡಿ.ಇ.ಹೆಚ್.) ಎಂಬುದು ಕೇವಲ ಒಂದು ಯೋಜನೆಯಲ್ಲ ಬದಲಿಗೆ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಸ್ಪಷ್ಟ ಗುರಿಯನ್ನು ಹೊಂದಿರುವ ಸಂಕಲ್ಪವಾಗಿದೆ. ಎಲ್ಲಾ ಪ್ರದೇಶಗಳಾದ್ಯಂತ ಸಮಗ್ರ ಸಾಮಾಜಿಕ ಆರ್ಥಿಕ ಬೆಳವಣಿಗೆಯನ್ನು ಸಕ್ರಿಯಗೊಳಿಸಲು ದೇಶದ ಪ್ರತಿ ಜಿಲ್ಲೆಯಿಂದ (ಒಂದು ಜಿಲ್ಲೆ - ಒಂದು ಉತ್ಪನ್ನ) ಒಂದು ಉತ್ಪನ್ನವನ್ನು ಆಯ್ಕೆ ಮಾಡುವುದು, ಬ್ರ್ಯಾಂಡ್ ಮಾಡುವುದು ಮತ್ತು ಪ್ರಚಾರ ಮಾಡುವುದು ಈ ಯೋಜನೆಯ ಚಿಂತನೆಯಾಗಿದೆ. ಕೇಂದ್ರ ವಾಣಿಜ್ಯ ಇಲಾಖೆ ನಡೆಸುತ್ತಿರುವ 'ಜಿಲ್ಲಾ ರಫ್ತು ಕೇಂದ್ರ ಉಪಕ್ರಮʼ ಅನ್ನು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರವನ್ನು ಉತ್ತೇಜಿಸುವ ಇಲಾಖೆಯೊಂದಿಗೆ (ಡಿ.ಪಿ.ಐ.ಐ.ಟಿ) ಪ್ರಮುಖ ಪಾಲುದಾರರಾಗಿ ವಿಲೀನಗೊಳಿಸಿ ಒ.ಡಿ.ಒ.ಪಿ. ಅನ್ನು ಜೊತೆಗೂಡಿಸಲಾಗಿದೆ.
ಒಂದು ಉತ್ಪನ್ನ - ಜಿಲ್ಲಾ ರಫ್ತು ಕೇಂದ್ರ ಉಪಕ್ರಮ (ಒ.ಡಿ.ಒ.ಪಿ-ಡಿ.ಇ.ಹೆಚ್.) ಅಡಿಯಲ್ಲಿ, ಮಹಾರಾಷ್ಟ್ರ ರಾಜ್ಯದ ಎಲ್ಲಾ 36 ಜಿಲ್ಲೆಗಳಿಂದ ಒಂದೊಂದು ಉತ್ಪನ್ನಗಳನ್ನು ಗುರುತಿಸಲಾಗಿದೆ.
ಒಂದು ಉತ್ಪನ್ನ - ಜಿಲ್ಲಾ ರಫ್ತು ಕೇಂದ್ರ ಉಪಕ್ರಮವು ಜಿಲ್ಲಾ ಉತ್ಪನ್ನಗಳನ್ನು ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವನ್ನು ಹೆಚ್ಚಿಸಲು ಜಿಲ್ಲೆಗಳಾದ್ಯಂತ ತಯಾರಕರು/ನಿರ್ಮಾಪಕರೊಂದಿಗೆ ಸಂಪರ್ಕ ಜೋಡಿಸಿ ವಿನ್ಯಾಸ, ತಯಾರಿ, ಉತ್ಪಾದನೆ, ಪ್ಯಾಕೇಜಿಂಗ್ ಮತ್ತು ಮಾರುಕಟ್ಟೆ ವ್ಯವಸ್ಥೆ ರಚನೆಯಂತಹ ಅವಕಾಶಗಳ ಸೃಷ್ಟಿಸುವ ಕೆಲಸ ಮಾಡುತ್ತಿದೆ.
ಕೇಂದ್ರ ವಾಣಿಜ್ಯ ಇಲಾಖೆ ನಡೆಸುತ್ತಿರುವ 'ಜಿಲ್ಲಾ ರಫ್ತು ಕೇಂದ್ರ ಉಪಕ್ರಮʼ ಅನ್ನು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರವನ್ನು ಉತ್ತೇಜಿಸುವ ಇಲಾಖೆಯೊಂದಿಗೆ (ಡಿ.ಪಿ.ಐ.ಐ.ಟಿ) ಪ್ರಮುಖ ಪಾಲುದಾರರಾಗಿ ವಿಲೀನಗೊಳಿಸಿ ಒ.ಡಿ.ಒ.ಪಿ. ಅನ್ನು ಜೊತೆಗೂಡಿಸಲಾಗಿದೆ. ದೇಶದ ಪ್ರತಿ ಜಿಲ್ಲೆಯಲ್ಲಿರುವ ಸಂಭಾವ್ಯ ಮತ್ತು ವೈವಿಧ್ಯಮಯ ಉತ್ಪನ್ನಗಳನ್ನು ರಫ್ತು ಕೇಂದ್ರವನ್ನಾಗಿ ಮಾಡಲು ಅಗತ್ಯ ವ್ಯವಸ್ಥೆಗಳನ್ನು 'ಜಿಲ್ಲಾ ರಫ್ತು ಕೇಂದ್ರ ಉಪಕ್ರಮʼ ಹೊಂದಿರುತ್ತದೆ. ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (ಡಿಜಿಎಫ್‌ಟಿ) ಮೂಲಕ 'ಜಿಲ್ಲಾ ರಫ್ತು ಕೇಂದ್ರ ಉಪಕ್ರಮʼವು ಜಿಲ್ಲೆಗಳಿಂದ ಗುರುತಿಸಲ್ಪಟ್ಟ ಉತ್ಪನ್ನಗಳು/ಸೇವೆಗಳನ್ನು ರಫ್ತು ಮಾಡಲು ಅನುಕೂಲವಾಗುವಂತೆ ಸಾಂಸ್ಥಿಕ ಕಾರ್ಯವಿಧಾನಗಳನ್ನು ರಚಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಜಿಲ್ಲೆಗಳೊಂದಿಗೆ ನೇರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಉಪಕ್ರಮದ ಅಡಿಯಲ್ಲಿ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಿ ದೇಶದ 734 ಜಿಲ್ಲೆಗಳಲ್ಲಿ ರಫ್ತು ಸಾಮರ್ಥ್ಯವನ್ನು ಹೊಂದಿರುವ ಉತ್ಪನ್ನಗಳು ಮತ್ತು ಸೇವೆಗಳನ್ನು ಗುರುತಿಸಲಾಗಿದೆ.
ಜಿಲ್ಲೆಗಳ ರಫ್ತು ಕ್ರಿಯಾ ಯೋಜನೆಗಳನ್ನು ಸಾಗರೋತ್ತರ ಮಾರುಕಟ್ಟೆಗಳಿಗೆ ಗುರುತಿಸಲಾದ ಉತ್ಪನ್ನಗಳು ಮತ್ತು ಸೇವೆಗಳಿಗೆ ಅನುಗುಣವಾಗಿ ಸಿದ್ಧಪಡಿಸಲಾಗಿದೆ. ಇದು ಗುರುತಿಸಿದ ಉತ್ಪನ್ನಗಳನ್ನು ಸಾಕಷ್ಟು ಪ್ರಮಾಣದಲ್ಲಿ ಮತ್ತು ಅಗತ್ಯವಿರುವ ಗುಣಮಟ್ಟದೊಂದಿಗೆ ಉತ್ಪಾದಿಸಲು/ತಯಾರಿಸಲು ಸ್ಥಳೀಯ ರಫ್ತುದಾರರು / ತಯಾರಕರನ್ನು ಸೂಚಿಸುತ್ತದೆ. ಭಾರತದ ಹೊರಗಿನ ನಾನಾ ದೇಶಗಳ ಸಂಭಾವ್ಯ ಖರೀದಿದಾರರನ್ನು ತಲುಪಲು ನಿರ್ದಿಷ್ಟ ಕ್ರಮವ್ಯವಸ್ಥೆಗಳನ್ನು ಒಳಗೊಂಡಿದೆ. ಅಂತಹ ಗುರುತಿಸಲಾದ ಉತ್ಪನ್ನಗಳು/ಸೇವೆಗಳ ರಫ್ತಿಗೆ ಇರುವ ಅಡಚಣೆ-ಸವಾಲುಗಳನ್ನು ಎದುರಿಸುವುದು, ಮೂಲಸೌಕರ್ಯ ಮೂಲಕ ಅಡಚಣೆಗಳ ನಿವಾರಣೆ, ಪೂರೈಕೆ ಸರಪಳಿ ಅಂತರವನ್ನು ಗುರುತಿಸುವುದು, ಮಾರುಕಟ್ಟೆಯ ಪ್ರವೇಶವನ್ನು ಸುಧಾರಿಸುವುದು ಮತ್ತು ರಫ್ತುಗಳನ್ನು ಹೆಚ್ಚಿಸಲು ಬೆಂಬಲಪೂರ್ವ ಸಹಾಯ (ಹ್ಯಾಂಡ್ ಹೋಲ್ಡಿಂಗ್) ಮಾಡುವ ಮೂಲಕ ಉತ್ಪಾದಕರು ಮತ್ತು ತಯಾರಕರು ಇಬ್ಬರಿಗೂ ಪ್ರಯೋಜನವನ್ನು ನೀಡುವುದು ಇದರ ಗುರಿಯಾಗಿದೆ.
'ಜಿಲ್ಲಾ ರಫ್ತು ಕೇಂದ್ರ ಉಪಕ್ರಮʼ ಮೂಲಕ, ಭಾರತ ಸರ್ಕಾರವು ನಗರ ಪ್ರದೇಶಗಳಿಂದ ಉತ್ಪಾದನೆ ಮತ್ತು ರಫ್ತುಗಳನ್ನು ಗಣನೀಯವಾಗಿ ಹೆಚ್ಚಿಸುತ್ತಿದೆ ಮತ್ತು ಹೊಸ ವ್ಯವಹಾರಗಳನ್ನು ರಫ್ತಿಗೆ ಸೇರಿಸಲು ಗ್ರಾಮೀಣ ಒಳನಾಡಿನಲ್ಲಿ ರಫ್ತು ಕುರಿತು ಆಸಕ್ತಿ ರೂಪಿಸುವುದು ಮತ್ತು ಆರ್ಥಿಕ ಚಟುವಟಿಕೆಯನ್ನು ಉತ್ಪಾದಿಸುವತ್ತ ಗಮನಹರಿಸುತ್ತದೆ.
ಒಂದು ಉತ್ಪನ್ನ - ಜಿಲ್ಲಾ ರಫ್ತು ಕೇಂದ್ರ ಉಪಕ್ರಮ (ಒ.ಡಿ.ಒ.ಪಿ-ಡಿ.ಇ.ಹೆಚ್.) ಅಡಿಯಲ್ಲಿ ಯಾವುದೇ ಹಣಕಾಸಿನ ನೆರವು ಒದಗಿಸಲಾಗುವುದಿಲ್ಲ, ಇದು ಹಣಕಾಸು ನೀಡುವ ಒಂದು ಯೋಜನೆಯಲ್ಲ.
ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕ: ಒಂದು ಉತ್ಪನ್ನ - ಜಿಲ್ಲಾ ರಫ್ತು ಕೇಂದ್ರ ಉಪಕ್ರಮ (ಒ.ಡಿ.ಒ.ಪಿ-ಡಿ.ಇ.ಹೆಚ್.) ಅಡಿಯಲ್ಲಿ ಉತ್ಪನ್ನಗಳ ಸಂಗ್ರಹಣೆಯನ್ನು ಸುಗಮಗೊಳಿಸಿ ಕ್ರೊಯೇಷಿಯಾ, ನೈಜೀರಿಯಾ, ಅರ್ಜೆಂಟೀನಾ, ಇತ್ಯಾದಿಗಳಲ್ಲಿನ ಭಾರತೀಯ ರಾಯಭಾರ ಕಚೇರಿ ಸೇರಿದಂತೆ ಇತರ ಕಡೆಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳ ಉಡುಗೊರೆ ಮತ್ತು ಆವಶ್ಯ ಬಳಕೆಗಾಗಿ ಉತ್ಪನ್ನಗಳ ನಿಯೋಜನೆಯಾಗಲಿದೆ.
ರಫ್ತು ತರಬೇತಿ ಕಾರ್ಯಾಗಾರ: ಒಂದು ಉತ್ಪನ್ನ - ಜಿಲ್ಲಾ ರಫ್ತು ಕೇಂದ್ರ ಉಪಕ್ರಮವು (ಒ.ಡಿ.ಒ.ಪಿ-ಡಿ.ಇ.ಹೆಚ್.) ಅಂಚೆ ಇಲಾಖೆಯ ಸಹಯೋಗದೊಂದಿಗೆ 11 ಜನವರಿ 2023 ರಂದು ಮೊದಲ ರಫ್ತು ತರಬೇತಿ ಕಾರ್ಯಾಗಾರವನ್ನು ಆಯೋಜಿಸಿದೆ. ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಜಮ್ಮ&ಕಾಶ್ಮೀರ, ಮತ್ತು ಮೇಘಾಲಯ ಸೇರಿದಂತೆ ಈ 5 ರಾಜ್ಯಗಳಿಂದ 160+ ರಫ್ತು ಸಂಸ್ಥೆಗಲು ಭಾಗವಹಿಸಿದ್ದವು. ಅಂಚೆ ರಫ್ತು ಕೇಂದ್ರ( ಡಾಕ್ ಘರ್ ನಿರ್ಯತ್ ಕೇಂದ್ರ) ಜಾಲತಾಣ ಬಳಕೆ ಮಾಡಿ ತರಬೇತಿ ಕಾರ್ಯಾಗಾರವನ್ನು ನಡೆಸಲಾಯಿತು. ಪ್ರಮುಖ ಮಾರುಕಟ್ಟೆ ಅವಕಾಶಗಳ ಜೊತೆಗೆ ರಫ್ತಿಗೆ ಮೂಲಭೂತ ಅವಶ್ಯಕತೆಗಳನ್ನು ತರಬೇತಿ ಒಳಗೊಂಡಿದೆ.
ಲಕಾಡಾಂಗ್ ಅರಿಶಿನ, ಪಶ್ಚಿಮ ಜೈನ್ತಿಯಾ ಹಿಲ್ಸ್, ಮೇಘಾಲಯ :- ಫೆಬ್ರವರಿ 2022 ರಲ್ಲಿ ಮೇಘಾಲಯದ ಶಿಲ್ಲಾಂಗ್‌ನಿಂದ 30 ಟನ್‌ಗಳಷ್ಟು ಲಕಾಡಾಂಗ್ ಅರಿಶಿನದ ರವಾನೆಯನ್ನು ಸುಗಮಗೊಳಿಸಿ ರಫ್ತು ಮಾಡಲಾಗಿದೆ.
ಇಂಡೋ-ಜಪಾನ್ ಮಾವು ಉತ್ಸವ, ಟೋಕಿಯೋ, ಜಪಾನ್: - ಭಾರತದ ರಾಯಭಾರ ಕಚೇರಿ, ಟೋಕಿಯೋ, ಜಪಾನ್ ಮತ್ತು ಕೇಂದ್ರ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ಇವುಗಳ ನಿರಂತರ ಪ್ರಯತ್ನಗಳ ಪರಿಣಾಮವಾಗಿ - ಜಪಾನ್‌ನ ಟೋಕಿಯೊದಲ್ಲಿ ಭಾರತದ ಮಾವು ಉತ್ಸವದ ಎರಡು ಆವೃತ್ತಿಗಳ ಅಡಿಯಲ್ಲಿ ಜಪಾನ್‌ನಲ್ಲಿ ಭಾರತೀಯ ಮಾವುಗಳಿಗೆ ವ್ಯಾಪಾರ ಹಾಗೂ ಪ್ರಚಾರವನ್ನು ಕೈಗೊಳ್ಳಲಾಗಿದೆ. ಈ ಪ್ರಯತ್ನಗಳ ಪರಿಣಾಮವಾಗಿ ಲಾಸನ್‌ನ 127 ಮಳಿಗೆಗಳಲ್ಲಿ (29 ಮಾರ್ಚ್ 2022) ಮತ್ತು ನಿಶಿಕಸಾಯಿ ಹಾಗೂ ಅಕಿತಾ ಪ್ರಿಫೆಕ್ಚರ್‌ನ ಸಗಟು ಮಾರುಕಟ್ಟೆಗಳಲ್ಲಿ (28 ಮಾರ್ಚ್ 2022) ಸುಗಂಧಭರಿತ, ರುಚಿಕರವಾದ ಮತ್ತು ಪೌಷ್ಟಿಕಾಂಶದ ಭಾರತೀಯ ಮಾವಿನಹಣ್ಣುಗಳನ್ನು ಬಿಡುಗಡೆ ಮಾಡಲಾಗಿದೆ, ಇದು ಈ ಉಪಕ್ರಮದ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ.
ವಾಲ್‌ನಟ್ಸ್, ಬಡ್ಗಾಮ್, ಜಮ್ಮು ಮತ್ತು ಕಾಶ್ಮೀರ (26ನೇ ಸೆಪ್ಟೆಂಬರ್ 2021) :- ಜಿಕೆಪಿಒ ಸಹಭಾಗಿತ್ವದಲ್ಲಿ ಈ ಉಪಕ್ರಮದಡಿಯಲ್ಲಿ 26ನೇ ಸೆಪ್ಟೆಂಬರ್ 2021 ರಂದು ಕಾಶ್ಮೀರದ ಬುಡ್ಗಾಮ್‌ನಿಂದ ಕರ್ನಾಟಕದ ಬೆಂಗಳೂರಿಗೆ 2000 ಕೆಜಿಗೂ ಹೆಚ್ಚು ವಾಲ್‌ನಟ್‌ಗಳ ಆಮದು –ಸಾಗಾಟ ಪರ್ಯಾಯ ವ್ಯವಸ್ಥೆಯನ್ನು ಸುಗಮಗೊಳಿಸಿದೆ.
ಸುಯಿ ಧಾಗಾ:- ಜವಳಿ ಉತ್ಪನ್ನಗಳಿಗಾಗಿ ಭಾರತ-ರಷ್ಯಾ ಖರೀದಿದಾರರ ಮಾರಾಟಗಾರರ ಸಭೆ (22 ಸೆಪ್ಟೆಂಬರ್ 2021) ನಡೆಯಿತು. ಮಾಸ್ಕೋದಲ್ಲಿ ಭಾರತದ ರಾಯಭಾರ ಕಚೇರಿಯ ಸಹಭಾಗಿತ್ವದಲ್ಲಿ ರೇಯಾನ್ ಮತ್ತು ಪಾಲಿಯೆಸ್ಟರ್ ಮೇಲೆ ಕೇಂದ್ರೀಕರಿಸುವ ಜವಳಿ ಉತ್ಪನ್ನಗಳ ಖರೀದಿದಾರ-ಮಾರಾಟಗಾರರ ಸಭೆಯನ್ನು ಆಯೋಜಿಸಲಾಯಿತು.
ಜನವರಿ 2023 ರಂದು ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಒಂದು ಉತ್ಪನ್ನ - ಜಿಲ್ಲಾ ರಫ್ತು ಕೇಂದ್ರ ಉಪಕ್ರಮ (ಒ.ಡಿ.ಒ.ಪಿ-ಡಿ.ಇ.ಹೆಚ್.) ಅಡಿಯಲ್ಲಿ ಬಹು ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು
2022 ರ ಜೂನ್ 21 ರಂದು ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ನ್ಯೂಯಾರ್ಕ್‌ನ ಭಾರತೀಯ ರಾಯಭಾರಿ ಕಚೇರಿಯ ಸಹಯೋಗದೊಂದಿಗೆ ಒ.ಡಿ.ಒ.ಪಿ-ಡಿ.ಇ.ಹೆಚ್. ಅಡಿಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿ, ಪ್ರದರ್ಶಿಸಿ ಮತ್ತು ಬೆಂಬಲಿಸಲಾಯಿತು.
* ***
(Release ID: 1897612)
Visitor Counter : 334