ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ವಿಶ್ವದ ಆರ್ಥಿಕತೆ ಮತ್ತು ಮಾನವೀಯತೆಯ ಭವಿಷ್ಯವು ಯುವಕರ ಕೈಯಲ್ಲಿದೆ: ಶ್ರೀ ಅನುರಾಗ್ ಸಿಂಗ್ ಠಾಕೂರ್
ಯುವ-20(ವೈ20) ಶೃಂಗಸಭೆ, ಲಾಂಛನ ಮತ್ತು ಜಾಲತಾಣ ಇವುಗಳ ಥೀಮ್ ಗಳನ್ನುಯುವ-20(ವೈ20) ಭಾರತ ಶೃಂಗಸಭೆಯ ಪೂರ್ವ ಸಮಾರಂಭದಲ್ಲಿ ಕೇಂದ್ರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಚಾಲನೆಗೊಳಿಸಿದರು
ಭಾರತ ಕೇವಲ ಮಾತನಾಡುವುದಿಲ್ಲ; ಜೊತೆಗೆ ಪ್ರಪಂಚದಾದ್ಯಂತದ ಯುವ ಪ್ರೇಕ್ಷಕರಿಗಾಗಿ ಯುವ(ವೈ)20 ಶೃಂಗಸಭೆಯಲ್ಲಿ ವೇದಿಕೆಯ ಅವಕಾಶವನ್ನು ಒದಗಿಸುತ್ತದೆ: ಶ್ರೀ ಅನುರಾಗ್ ಠಾಕೂರ್
"ಯುವಕರು ಅವರು ನಿರ್ಮಿಸಿಕೊಳ್ಳುವ ಭವಿಷ್ಯವನ್ನು ತಾವೇ ಅನುಭವಿಸುತ್ತಾರೆ"
Posted On:
06 JAN 2023 7:04PM by PIB Bengaluru
ಪ್ರಮುಖ ಮುಖ್ಯಾಂಶಗಳು:
* ಯುವ-20(ವೈ20) ಶೃಂಗಸಭೆಯು ಯುವಜನರಿಗೆ ರಚನಾತ್ಮಕ ನೀತಿಯ ಒಳಹರಿವುಗಳನ್ನು ಒದಗಿಸಲು ಮತ್ತು ಜಾಗತಿಕ ಪ್ರೇಕ್ಷಕರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ವೇದಿಕೆಯನ್ನು ಬಳಸಿಕೊಳ್ಳಲುವ ಒಂದು ಅನನ್ಯ ಅವಕಾಶವಾಗಿದೆ: ಕೇಂದ್ರ ಯುವ ವ್ಯವಹಾರಗಳ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್
* ಅಂತಿಮ ಯುವ-20 ಶೃಂಗಸಭೆಯ ವರೆಗೆ, ಮುಂದಿನ 8 ತಿಂಗಳುಗಳ ಕಾಲ, ಭಾರತದಾದ್ಯಂತ ಎಲ್ಲಾ ರಾಜ್ಯಗಳ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವಿವಿಧ ಚರ್ಚೆಗಳು ಮತ್ತು ಸೆಮಿನಾರ್‌ಗಳ ಜೊತೆಗೆ ಐದು ಯುವ 20(ವೈ-20) ವಿಷಯಗಳ ಕುರಿತು ಪೂರ್ವ ಶೃಂಗಸಭೆಗಳು ನಡೆಯಲಿವೆ.
ಇಂದು ನವದೆಹಲಿಯಲ್ಲಿ ನಡೆದ ಭಾರತ ಯುವ-20 ಶೃಂಗಸಭೆಯ ಪೂರ್ವ ಸಮಾರಂಭದಲ್ಲಿ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಯುವ(ವೈ)20 ಶೃಂಗಸಭೆ, ಲಾಂಛನ ಮತ್ತು ಜಾಲತಾಣಗಳ ಥೀಮ್‌ಗಳನ್ನು ಬಿಡುಗಡೆ ಮಾಡಿದರು. ಕೇಂದ್ರ ಯುವ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ಮೀತಾ ಆರ್. ಲೋಚನ್, ಭಾರತ ಯುವ-20 ಶೃಂಗಸಭೆಯ ಮಾರ್ಗದರ್ಶಿ ಡಾ ವಿಜಯ್ ಚೌತೈವಾಲೆ, ಯುವ-20 ಎಂಗೇಜ್‌ಮೆಂಟ್ ಗ್ರೂಪ್ ನ ಅಧ್ಯಕ್ಷ ಶ್ರೀ ಅನ್ಮೋಲ್ ಸೋವಿತ್ ಮತ್ತು ಸಚಿವಾಲಯಗಳ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಭಾರತವು ಮೊದಲ ಬಾರಿಗೆ ಯುವ(ವೈ)20 ಶೃಂಗಸಭೆಯನ್ನು ಆಯೋಜಿಸುತ್ತಿದೆ. ಇಂದಿನ ಕಾರ್ಯಕ್ರಮದ ಎರಡನೇ ಅಧಿವೇಶನದಲ್ಲಿ "ಭಾರತವು ತನ್ನ ಯುವ ಜನಸಂಖ್ಯೆಯನ್ನು ಹೇಗೆ ಸೂಪರ್ ಪವರ್ ಆಗಿ ಬಳಸಿಕೊಳ್ಳಬಹುದು" ಎಂಬ ಸಮಗ್ರ ಚರ್ಚೆಯನ್ನು ನಡೆಸಲಾಯಿತು.
ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ತಮ್ಮ ಭಾಷಣದಲ್ಲಿ, “ಭಾರತದಲ್ಲಿ ಜಿ20 ಶೃಂಗಸಭೆಯು 43 ನಿಯೋಗಗಳ ಮುಖ್ಯಸ್ಥರನ್ನು ಒಟ್ಟುಗೂಡಿಸುತ್ತದೆ. ಈ ವರ್ಷದ ಸೆಪ್ಟೆಂಬರ್ ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಅಂತಿಮ ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ ನಿಯೋಗಗಳ ಮುಖ್ಯಸ್ಥರ ಸಂಖ್ಯೆಯು ಇದುವರೆಗಿನ ಅತಿದೊಡ್ಡ ನಿಯೋಗವಾಗಿದೆ. ಜಿ20 ಶೃಂಗಸಭೆಯು ಫೈನಾನ್ಸ್ ಟ್ರ್ಯಾಕ್ ಮತ್ತು ಶೆರ್ಪಾ ಟ್ರ್ಯಾಕ್ ಎಂಬ ಎರಡು ಸಮಾನಾಂತರ ಟ್ರ್ಯಾಕ್ ಗಳನ್ನು ಒಳಗೊಂಡಿದೆ. ಇದರ ಶೆರ್ಪಾ ಟ್ರ್ಯಾಕ್ ನಲ್ಲಿ 13 ಕೆಲಸದ ತಂಡಗಳು, 2 ಉಪಕ್ರಮಗಳು ಇದ್ದು, ಈ ಶೆರ್ಪಾ ಟ್ರ್ಯಾಕ್ ತಂಡವು ರಿಸರ್ಚ್ ಇನ್ನೋವೇಶನ್ ಇನಿಶಿಯೇಟಿವ್ ಗ್ಯಾದರಿಂಗ್ ತಂಡ ಮತ್ತು ಜಿ20 ಸಬಲೀಕರಣ ತಂಡ, ಮತ್ತು ವಿವಿಧ ಕಾರ್ಯಕ್ರಮ ರೂಪಿಸುವ ತಂಡಗಳಿಂದ ಮಾಹಿತಿಗಳನ್ನು ಸಂಗ್ರಹಿಸಿ ಮೇಲ್ವಿಚಾರಣೆ ಮಾಡುತ್ತದೆ. ಯುವ20 ಅಥವಾ ವೈ20 ಭಾಗವಾಗಿರುವ ವಿವಿಧ ಕಾರ್ಯಕ್ರಮ ರೂಪಿಸುವ ತಂಡಗಳು ನಾಗರಿಕ ಸಮಾಜಗಳು, ಸಂಸದರು, ಚಿಂತಕರು, ಮಹಿಳೆಯರು, ಯುವಕರು, ಕಾರ್ಮಿಕರು, ವ್ಯವಹಾರಗಳು ಮತ್ತು ಜಿ20 ದೇಶಗಳ ಸಂಶೋಧಕರನ್ನು ಒಟ್ಟುಗೂಡಿಸುತ್ತದೆ.” ಎಂಬ ಮಾಹಿತಿಯನ್ನು ನೀಡಿದರು
“ಜಗತ್ತಿನ ಆರ್ಥಿಕತೆ ಮತ್ತು ಮಾನವೀಯತೆಯ ಭವಿಷ್ಯವು ಮುಂದಿನ ಜನಾಂಗದ ಕೈಯಲ್ಲಿದೆ, ಇಂದಿನ ಯುವಕರು ಅನಿಶ್ಚಿತತೆ, ಅಗಾಧ ವೇಗ, ಸಾಮರ್ಥ್ಯ ಮತ್ತು ಮಿತಿಯಿಲ್ಲದ ಸಾಧ್ಯತೆಗಳಿಂದ ತುಂಬಿದ ಡಿಜಿಟಲ್, ಜಾಗತೀಕರಣ ಮತ್ತು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜನಿಸಿದ್ದಾರೆ! ಇಂದಿನ ಯುವಕರು ವರ್ತಮಾನದಲ್ಲಿ ಪಾಲುದಾರರು ಮತ್ತು ನಾಳಿನ ನಿರ್ಮಾಪಕರು. ನಾವು ಆತ್ಮ ನಿರ್ಭರ ಭಾರತ್ ಮತ್ತು ಏಕ್ ಭಾರತ್ ಶ್ರೇಷ್ಠ ಭಾರತ್ ನ ಸ್ಫೂರ್ತಿಯೊಂದಿಗೆ ಕ್ಷೇತ್ರಗಳಾದ್ಯಂತ ಪ್ರಗತಿ ಸಾಧಿಸಿದ್ದೇವೆ. ದೇಶದಲ್ಲಿ ಸ್ಟಾರ್ಟ್ ಅಪ್ ಕ್ರಾಂತಿಯಾಗುತ್ತಿದೆ. ಯುವಕರು ಅವರಾಗಿ ನಿರ್ಮಿಸುವ ಅವರ ಭವಿಷ್ಯವನ್ನು ಅವರಾಗಿ ಅನುಭವಿಸುತ್ತಾರೆ” ಎಂದು ಕೇಂದ್ರ ಸಚಿವ ಶ್ರೀ ಠಾಕೂರ್ ಅವರು ಹೇಳಿದರು
“ಯುವ(ವೈ)20 ಶೃಂಗಸಭೆಯು ಯುವಜನರಿಗೆ ರಚನಾತ್ಮಕ ನೀತಿಯ ಒಳಹರಿವುಗಳನ್ನು ಒದಗಿಸಲು ಮತ್ತು ವಿಶ್ವ ಪ್ರೇಕ್ಷಕರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ವೇದಿಕೆಯನ್ನು ಬಳಸಿಕೊಳ್ಳಲು ಒಂದು ಅನನ್ಯ ಅವಕಾಶವಾಗಿದೆ. ಯುವ 20 ಭಾರತ ಶೃಂಗಸಭೆಯು ಜಿ20 ದೇಶಗಳಾದ್ಯಂತದ ಇರುವ ಯುವಜನತೆಯನ್ನು ಒಟ್ಟುಗೂಡಿಸಿ, ಯುವ ಪೀಳಿಗೆಯ ಭವಿಷ್ಯ ನಿರ್ಧರಿಸುವ ವಿಷಯಗಳಲ್ಲಿ, ವಿಶೇಷವಾಗಿ ಸಾಮಾಜಿಕ ಅಭಿವೃದ್ಧಿಯ ಕ್ಷೇತ್ರದಲ್ಲಿ ನವೀನ, ಸಮರ್ಥನೀಯ ಮತ್ತು ಕಾರ್ಯಸಾಧ್ಯವಾದ ಪರಿಹಾರಗಳನ್ನು ಉದ್ದೇಶಪೂರ್ವಕವಾಗಿ ಚರ್ಚಿಸಲು ಮತ್ತು ನಿರ್ಣಯಿಸಲು ವಿಶೇಷ ಅವಕಾಶ ಕಲ್ಪಿಸುತ್ತದೆ. ಯುವ(ವೈ)20 ಶೃಂಗಸಭೆಯಲ್ಲಿ ಭಾರತವು ಕೇವಲ ಮಾತನಾಡುವುದಿಲ್ಲ; ಜೊತೆಗೆ ಪ್ರಪಂಚದಾದ್ಯಂತದ ಯುವ ನಾಯಕರಿಗೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದೊಂದಿಗೆ ಭವಿಷ್ಯದ ಸ್ಪರ್ಧಾತ್ಮಕ ವೇದಿಕೆ ಹಾಗೂ ಪ್ರೇಕ್ಷಕರನ್ನು ಒದಗಿಸುತ್ತದೆ.” ಎಂದು ಕೇಂದ್ರ ಸಚಿವ ಶ್ರೀ ಠಾಕೂರ್ ಅವರು ವಿವರಿಸಿದರು.
ಯುವ(ವೈ)20 ಇದರ ಥೀಮ್ ಕುರಿತು ಮಾತನಾಡಿದ ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು, ಅವುಗಳ ಕುರಿತು ವಿವರಣೆ ನೀಡಿದರು. ಅವುಗಳೆಂದರೆ ,
i) ಕೆಲಸದ ಭವಿಷ್ಯ: ಉದ್ಯಮ 4.0, ನಾವೀನ್ಯತೆ ಮತ್ತು 21 ನೇ ಶತಮಾನದ ಕೌಶಲ್ಯಗಳು, ii) ಹವಾಮಾನ ಬದಲಾವಣೆ ಮತ್ತು ವಿಪತ್ತು ಅಪಾಯ ಕಡಿಮೆಗೊಳಿಸುವುದು: ಸುಸ್ಥಿರತೆಯನ್ನು ಜೀವನ ವಿಧಾನವಾಗಿ ಮಾಡುವುದು, iii) ಶಾಂತಿ ನಿರ್ಮಾಣ ಮತ್ತು ಸಮನ್ವಯ: ಯುದ್ಧವಿಲ್ಲದ ಯುಗದತ್ತ ಸಾಗುವುದು, iv) ಹಂಚಿಕೆಯ ಭವಿಷ್ಯ: ಪ್ರಜಾಪ್ರಭುತ್ವದಲ್ಲಿ ಯುವಕರು ಮತ್ತು ಆಡಳಿತ ಮತ್ತು ಆರೋಗ್ಯ, ಯೋಗಕ್ಷೇಮ ಮತ್ತು ಕ್ರೀಡೆ: ಯುವಕರಿಗಾಗಿ ಕಾರ್ಯಸೂಚಿ.
“ಯುವ(ವೈ)20 ಶೃಂಗಸಭೆಯ ಈ ಆದ್ಯತೆಯ ಕ್ಷೇತ್ರಗಳು ಬದುಕುಳಿಯುವ ಮತ್ತು ಅಭಿವೃದ್ಧಿ ಹೊಂದುವ ನಮ್ಮ ಅನ್ವೇಷಣೆಯಲ್ಲಿ, ಬದಲಾಗುತ್ತಿರುವ ಸಮಯದ ವಾಸ್ತವದೊಂದಿಗೆ, ಜಗತ್ತು ಸಮನ್ವಯಗೊಳಿಸಬೇಕಾದ ತುರ್ತುಸ್ಥಿತಿಯನ್ನು ಸೂಚಿಸುತ್ತವೆ” ಎಂದು ಕೇಂದ್ರ ಸಚಿವರು ಹೇಳಿದರು.
“ಈ ಶೃಂಗಸಭೆಯು ಯುವಜನರಿಗೆ ಮತ್ತು ಜಗತ್ತಿಗೆ ನಾವು ವಿಕಸನಗೊಳ್ಳುವ ವಿಧಾನವನ್ನು ರೂಪಿಸಲು ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ. ಯುವ20 ಅವಕಾಶವನ್ನು ಬಳಸಿಕೊಂಡು ಜಿ20 ನಾಯಕರಿಗೆ ನೀವು ಅಂತಿಮವಾಗಿ ಪ್ರಸ್ತುತಪಡಿಸುವ ಘೋಷಣೆಯು, ಜಗತ್ತಿನ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಎಲ್ಲಾ ಯುವಕರ ಭರವಸೆ ಮತ್ತು ಕನಸುಗಳನ್ನು, ಗ್ರಾಮೀಣ ಮತ್ತು ನಗರಗಳ ಯುವಯನತೆಯ ಭರವಸೆ ಮತ್ತು ಕನಸುಗಳನ್ನು ಪೂರೈಸುತ್ತದೆ ಎಂದು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದ್ದೀರಿ ಎಂದು ನಾನು ಭಾವಿಸುತ್ತೇನೆ. ಯುವಜನರ ಧ್ವನಿಯನ್ನು ವರ್ಧಿಸಿ ಜಗತ್ತಿಗೆ ತಲುಪಿಸಲು ಯುವ20 ಒಂದು ಅದ್ಭುತ ಮಾರ್ಗವಾಗಿದೆ. ಜಗತ್ತು ನಿಮ್ಮ ಮಾತನ್ನು ಬಹಳ ಎಚ್ಚರಿಕೆಯಿಂದ ಕೇಳುತ್ತದೆ. ನೀವು ಭವಿಷ್ಯದ ಟ್ರಸ್ಟಿಗಳು ಎಂದು ನಾನು ದೃಢವಾಗಿ ನಂಬುತ್ತೇನೆ, ಇಂದಿನ ಯುವಜನತೆ ಶಾಂತಿಯನ್ನು ಎತ್ತಿಹಿಡಿಯುತ್ತಾರೆ, ಲಿಂಗ ಸಮಾನತೆಯನ್ನು ಖಚಿತಪಡಿಸುತ್ತಾರೆ, ಹವಾಮಾನ ಬದಲಾವಣೆಯನ್ನು ಕಡಿಮೆಗೊಳಿಸುತ್ತಾರೆ, ಅಂತರ್ ಸಾಂಸ್ಕೃತಿಕ ವೈವಿಧ್ಯತೆಯನ್ನು ಉತ್ಸಾಹದಿಂದ ಆವಿಷ್ಕರಿಸುತ್ತಾರೆ, ಜಾಗತಿಕವಾಗಿ ಹರಡುತ್ತಾರೆ ಮತ್ತು ಬೆಳೆದಂತೆ ಸಹನೆ-ಹೀರಿಕೊಳ್ಳುವ ಗುಣಬೆಳೆಸಿಕೊಳ್ಳುತ್ತಾರೆ” ಎಂದು ಕೇಂದ್ರ ಸಚಿವ ಶ್ರೀ ಠಾಕೂರ್ ಅವರು ಹೇಳಿದರು.
“ಯುವಜನರು ಜಗತ್ತಿಗೆ ಅಗತ್ಯವಿರುವ ಬದಲಾವಣೆಯ ಏಜೆಂಟ್ ಗಳಾಗಿದ್ದಾರೆ ಎಂದು ಕೇಂದ್ರ ಸಚಿವ ಶ್ರೀ ಠಾಕೂರ್ ಅವರು ಹೇಳಿದರು. ಏಜೆಂಟನಲ್ಲಿರುವ - “ಎ” ಎಂದರೆ: ನೀವು ನಂಬುವ ವಿಷಯದ ನ್ಯಾಯವಾದಿಗಳು, “ಜಿ” ಎಂದರೆ: ಹಸಿರಿನತ್ತ ಸಾಗುವುದು ಮತ್ತು ಸುಸ್ಥಿರ ಜೀವನಶೈಲಿಯನ್ನು ಸ್ವೀಕರಿಸುವುದು, “ಇ” ಎಂದರೆ: ಸಮಾನತೆ ಮತ್ತು ಒಳಗೊಳ್ಳುವಿಕೆ - ಅವು ವೈವಿಧ್ಯಮಯವಾಗಿವೆ, ಅಂತರ್ ಜನಾಂಗೀಯವಾಗಿವೆ, ಅಂತರ್ಗತವಾಗಿವೆ ಎಂದು ಖಚಿತಪಡಿಸಿಕೊಳ್ಳುವುದು, “ಎನ್” ಎಂದರೆ: ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಪೋಷಿಸುವುದು, “ಟಿ” ಎಂದರೆ: ತಂತ್ರಜ್ಞಾನದ ಆವಿಷ್ಕಾರ (ಟೆಕ್-ಇನ್ನೋವೇಶನ್) - ಸಾಮಾಜಿಕ ಒಳಿತಿಗಾಗಿ ಮತ್ತು ವಾಣಿಜ್ಯೋದ್ಯಮ ಮನೋಭಾವವನ್ನು ಹೆಚ್ಚಿಸಲು ಮಾನವೀಯತೆಯ ಸುಧಾರಣೆಗಾಗಿ ತಂತ್ರಜ್ಞಾನಗಳ ಆವಿಷ್ಕಾರ ಮತ್ತು ಬಳಕೆ ಮಾಡುವುದು” ಎಂದು ಕೇಂದ್ರ ಸಚಿವ ಶ್ರೀ ಠಾಕೂರ್ ಅವರು ಹೇಳಿದರು.
“ಭಾರತದ ಅಧ್ಯಕ್ಷತೆಯಲ್ಲಿ ಯುವ(ವೈ)20 ಶೃಂಗಸಭೆಯು ಕೈಗೊಳ್ಳಲಿರುವ ಚಟುವಟಿಕೆಗಳು, ಜಾಗತಿಕ ಯುವ ನಾಯಕತ್ವ ಮತ್ತು ಪಾಲುದಾರಿಕೆಯನ್ನು ಕೇಂದ್ರೀಕರಿಸುತ್ತವೆ. ಮುಂದಿನ 8 ತಿಂಗಳುಗಳ ಕಾಲ, ಅಂತಿಮ ಯುವ-20 ಶೃಂಗಸಭೆಯ ವರೆಗೆ ಭಾರತದಾದ್ಯಂತ ಎಲ್ಲಾ ರಾಜ್ಯಗಳ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವಿವಿಧ ಚರ್ಚೆಗಳು ಮತ್ತು ಸೆಮಿನಾರ್‌ಗಳ ಜೊತೆಗೆ ಐದು ಯುವ 20(ವೈ-20) ವಿಷಯಗಳ ಕುರಿತು ಪೂರ್ವ ಶೃಂಗಸಭೆಗಳು ನಡೆಯಲಿವೆ.” ಎಂದು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಯುವ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ಮೀತಾ ಆರ್.ಲೋಚನ್ ಅವರು ಹೇಳಿದರು.
ಭಾರತಕ್ಕೆ ಸಂಬಂಧಿಸಿದಂತೆ, ಜಿ20 ಅಧ್ಯಕ್ಷೀಯತೆಯು "ಅಮೃತಕಾಲ್" ನ ಆರಂಭವನ್ನು ಗುರುತಿಸುತ್ತದೆ, ಹಾಗೂ ಮುಂದಿನ 25 ವರ್ಷಗಳ ಅವಧಿಯು 15 ಆಗಸ್ಟ್ 2022 ರಂದು ತನ್ನ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವ ದಿನದಿಂದ ಪ್ರಾರಂಭವಾಗಿದೆ. ಭಾರತದ ಸ್ವಾತಂತ್ರ್ಯದ ಶತಮಾನೋತ್ಸವದವರೆಗಿನ ಪಯಣದಲ್ಲಿ ಭವಿಷ್ಯದ ಸಮೃದ್ಧ, ಅಂತರ್ಗತ ಮತ್ತು ಅಭಿವೃದ್ಧಿ ಹೊಂದಿದ ಸಮಾಜ ನಿರ್ಮಿಸಬೇಕಾಗಿದೆ, ಹಾಗೂ ಅದು ಮೂಲದಲ್ಲಿ ಮಾನವ-ಕೇಂದ್ರಿತ ವಿಧಾನದಿಂದ ಭಿನ್ನವಾಗಿರುತ್ತದೆ. “ವಸುಧೈವ ಕುಟುಂಬಕಂ” ಕಲ್ಪನೆಯನ್ನು ಸಾಕಾರಗೊಳಿಸುವ ಸಮಗ್ರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಸಾಧ್ಯವಾದ ಸಮಕಾಲೀನ ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ಭಾರತವು ಮಹತ್ವದ ಪಾತ್ರವನ್ನು ವಹಿಸುತ್ತಿದೆ.
ಸಂಬಂಧಿತ ಟ್ವೀಟ್ ಗಳು:
https://twitter.com/Anurag_Office/status/1611341065759653888
https://twitter.com/Anurag_Office/status/1611335598429851648
https://twitter.com/Anurag_Office/status/1611333326434074625
ಸಂಬಂಧಿತ ಕೊಂಡಿಗಳು:
https://www.pib.gov.in/PressReleasePage.aspx?PRID=1888811
******
(Release ID: 1889290)
Visitor Counter : 188