ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಐಎಫ್‌ಎಫ್‌ಐ ಉತ್ಸವದಲ್ಲಿ ಸ್ಪೇನ್ಗೆ ನಮಸ್ಕಾರಗಳು!
ಕಾರ್ಲೋಸ್ ಸೌರಾ ಅವರಿಗೆ 53 ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ಸ್ಪೇನ್ ಮತ್ತು ಗೋವಾ ಹಲವು ಸಾಮ್ಯಗಳನ್ನು ಹೊಂದಿವೆ. ಸೂರ್ಯನಿಂದ ಬೆಚ್ಚಗಾಗುವ ಅದ್ಭುತವಾದ ಕಡಲತೀರಗಳಿಂದ, ರುಚಿಕರವಾದ ಖಾದ್ಯಗಳಿಂದ ಹಿಡಿದು ಶಾಂತವಾದ ಮಧ್ಯಾಹ್ನದ ನಿದ್ರೆಯವರೆಗೆ. ಈ ನವೆಂಬರ್ ನಲ್ಲಿ ಈ ಎರಡು ಸ್ಥಳಗಳಿಗೆ ಪರಸ್ಪರ ಗೌರವಿಸುವ ಯೋಗ ಬಂದಿದೆ. ನವೆಂಬರ್ 20 ರಿಂದ 28, 2022 ರವರೆಗೆ ಗೋವಾದಲ್ಲಿ ನಡೆಯಲಿರುವ 53 ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್ಐ) ಸ್ಪ್ಯಾನಿಷ್ ಚಲನಚಿತ್ರ ನಿರ್ದೇಶಕ ಕಾರ್ಲೋಸ್ ಸೌರಾ ಅವರಿಗೆ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಈ ಉತ್ಸವವು 'ರೆಟ್ರೋಸ್ಪೆಕ್ಟಿವ್ಸ್' ವಿಭಾಗದಲ್ಲಿ ನಿರ್ದೇಶಕ ಸೌರ ಅವರ ಕೆಲವು ಅತ್ಯುತ್ತಮ ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ.
ಕಾರ್ಲೋಸ್ ಸೌರಾ ಅವರಿಗೆ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು
ಚಲನಚಿತ್ರಗಳು ಮಾನವನ ಭಾವನೆಗಳನ್ನು ವ್ಯಕ್ತಪಡಿಸುವ ಅತ್ಯಂತ ಶಕ್ತಿಶಾಲಿ ಮಾಧ್ಯಮಗಳಲ್ಲಿ ಒಂದಾಗಿದೆ. ಕಾರ್ಲೋಸ್ ಸೌರಾ ಅವರ ಚಲನಚಿತ್ರಗಳು ಸ್ಪ್ಯಾನಿಷ್ ಸಮಾಜದ ಹೋರಾಟಗಳ ಹಿನ್ನೆಲೆಯಲ್ಲಿ ದೇಶವು ಸರ್ವಾಧಿಕಾರದಿಂದ ಪ್ರಜಾಪ್ರಭುತ್ವಕ್ಕೆ ಪರಿವರ್ತನೆಯಾದಾಗ ಈ ಭಾವನೆಗಳನ್ನು ಚಿತ್ರಿಸುವ ನಿಷ್ಠುರ ಚಿತ್ರಣಕ್ಕಾಗಿ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ಸೌರಾ ಅವರು ಛಾಯಾಗ್ರಹಣದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಕೈಗಾರಿಕಾ ಇಂಜಿನಿಯರಿಂಗ್ ಅನ್ನು ಅಧ್ಯಯನ ಮಾಡಿದರು. ಆದಾಗ್ಯೂ ಅವರು ಬಹಳ ಬೇಹ ಜಾಗತಿಕ ವೇದಿಕೆಯಲ್ಲಿ ಚಲನಚಿತ್ರ ನಿರ್ಮಾಪಕರಾಗಿ ತಮ್ಮ ಛಾಪು ಮೂಡಿಸಿದರು ಮತ್ತು ಅವರ ಮೂರನೇ ಚಿತ್ರ ಲಾ ಕಾಜಾ (1966) ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಿಲ್ವರ್ ಬೇರ್ ಪ್ರಶಸ್ತಿಯನ್ನು ಪಡೆದುಕೊಂಡಿತು. ನಂತರ ಬಂದ ಅವರ ಚಲನಚಿತ್ರಗಳಾದ ಡೆಪ್ರಿಸಾ ಡೆಪ್ರಿಸಾ (1981), ಕಾರ್ಮೆನ್ (1983), ಟ್ಯಾಕ್ಸಿ (1997), ಟ್ಯಾಂಗೋ (1998) ಮತ್ತುಇತರ ಅನೇಕ ಚಿತ್ರಗಳು ಅವರಿಗೆ ಆಸ್ಕರ್ ಮತ್ತು ಕಾನ್ ಚಿತ್ರೋತ್ಸವ ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳನ್ನು ತಂದಿವೆ. ಅವರ ಪ್ರತಿಭೆಯು ಕಾಲ ಮತ್ತು ಸ್ಥಳದ ಅತ್ಯಾಧುನಿಕ ಅಭಿವ್ಯಕ್ತಿಗಳನ್ನು ರಚಿಸುವಲ್ಲಿ ಅಡಗಿದೆ, ಅಲ್ಲಿ ಆಗಾಗ್ಗೆ ವಾಸ್ತವ ಮತ್ತು ಕಲ್ಪನಾಲೋಕವು ಉದ್ದೇಶಪೂರ್ವಕವಾಗಿ ಸಂಕೀರ್ಣವಾದ ನಿರೂಪಣೆಯಲ್ಲಿ ಒಟ್ಟಿಗೆ ಬೆಸೆದುಕೊಂಡಿದೆ. ಕಾರ್ಲೋಸ್ ಸೌರಾ ಸ್ಪೇನ್ನಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅವರ ಸೃಜನಶೀಲ ಪ್ರತಿಭೆಗಾಗಿ ವಿಮರ್ಶಕರು ಮತ್ತು ಚಲನಚಿತ್ರ ಪ್ರೇಮಿಗಳ ಪ್ರೀತಿ ಪಾತ್ರರಾಗಿದ್ದಾರೆ. ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ 53 ನೇ ಆವೃತ್ತಿಯು ಅವರ 8 ಆಯ್ದ ಚಲನಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಅವರನ್ನು ಗೌರವಿಸುತ್ತದೆ - 7ನೇ ದಿನ, ಅನ್ನಾ ಅಂಡ್ ದಿ ವೂಲ್ಫ್ಸ್, ಪೆಪ್ಪರ್ಮಿಂಟ್ ಫ್ರಾಪ್ಪೆ, ಕಾರ್ಮೆನ್, ಕ್ರಿಯಾ ಕ್ವಾರ್ವೋಸ್, ಇಬೇರಿಯಾ, ಲಾ ಕಾಜಾ ಮತ್ತು ದಿ ವಾಲ್ಸ್ ಕ್ಯಾನ್ ಟಾಕ್ - 'ರೆಟ್ರೋಸ್ಪೆಕ್ಟಿವ್ಸ್' ಎನ್ನುವ ವಿಭಾಗದಲ್ಲಿ ಪ್ರದರ್ಶಿತವಾಗುತ್ತವೆ.
Carlos Saura
Poster – The Hunt Poster - Carmen
ಚಲನಚಿತ್ರೋತ್ಸವದಲ್ಲಿ ಸ್ಪ್ಯಾನಿಷ್ ಉಪಸ್ಥಿತಿಯು ಕಾರ್ಲೋಸ್ ಸೌರಾ ಬಗ್ಗೆ ಮಾತ್ರ ಸೀಮಿತವಾಗಿಲ್ಲ. 7 ಸಮಕಾಲೀನ ಸ್ಪ್ಯಾನಿಷ್ ಚಲನಚಿತ್ರಗಳು ಉತ್ಸವಕ್ಕೆ ಬರುವವರನ್ನು ಬೆರಗುಗೊಳಿಸಲು ಕಾಯುತ್ತಿವೆ. ಇವುಗಳಲ್ಲಿ ಎಡ್ವರ್ಡೊ ಕ್ಯಾಸನೋವಾ ಅವರ ಲಾ ಪಿಯೆಟಾ(2022), ಕಾರ್ಲೋಸ್ ವರ್ಮುಟ್ ಅವರ ಮ್ಯಾಂಟಿಕೋರ್ (2022), ಆಲ್ಬರ್ಟೊ ರಾಡ್ರಿಗಸ್ ಅವರ ಪ್ರಿಸನ್ 77(2022), ಕಾರ್ಲಾ ಸಿಮೊನ್ ಅವರ ಅಲ್ಕಾರ್ಸ್ (2022) (ಇಟಲಿಯೊಂದಿಗೆ ಸಹ-ನಿರ್ಮಾಣ), ಸ್ಟೋರೀಸ್ ನಾಟ್ ಟು ಬಿ ಟೋಲ್ಡ್ (2022)) ) ಸೆಸ್ಕ್ ಗೇ ಅವರಿಂದ, ಪ್ಯಾಸಿಫಿಕೇಶನ್ (2022) ಆಲ್ಬರ್ಟ್ ಸೆರ್ರಾ (ಫ್ರಾನ್ಸ್, ಜರ್ಮನಿ ಮತ್ತು ಪೋರ್ಚುಗಲ್ನೊಂದಿಗೆ ಸಹ-ನಿರ್ಮಾಣ) ಮತ್ತು ಜೌಮ್ ಬಾಲಗುರೊ ಅವರ ವೀನಸ್ (2022) ಸೇರಿವೆ. ಇವೆಲ್ಲವನ್ನೂ ನೋಡಿ ಆನಂದಿಸಿ ಸ್ಪೇನ್ಗೆ ನಮಸ್ಕಾರ ಎಂದು ಸ್ಪಾನಿಷ್‌ನಲ್ಲಿ ಐಎಫ್ಎಫ್ಐ 53 ಫಿಯೆಸ್ಟಾ ಹೋಲಾ (!) ಎಂದು ಹೇಳಿರಿ .
Still from ‘Alcarràs’
Still from ‘Prison -77’ Still from ‘Manticore’
ಐಎಫ್ಎಫ್ಐ ಬಗ್ಗೆ
1952 ರಲ್ಲಿ ಸ್ಥಾಪನೆಯಾದ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (ಐಎಫ್‌ಎಫ್ಐ), ಏಷ್ಯಾದ ಪ್ರಮುಖ ಚಲನಚಿತ್ರೋತ್ಸವಗಳಲ್ಲಿ ಒಂದಾಗಿದೆ. ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ದೇಶವು ಚಲನಚಿತ್ರಗಳ ಪ್ರದರ್ಶನ, ಅವುಗಳು ಹೇಳುವ ಕಥೆಗಳು ಮತ್ತು ಅವುಗಳಿಗೆ ಶ್ರಮಿಸಿದ ತೆರೆಯ ಹಿಂದಿನ ಜನರನ್ನೂ ಗೌರವಿಸುವುದಾಗಿದೆ. ಉತ್ಸವದ ಮೂಲಕ ಚಲನಚಿತ್ರಗಳ ಬಗ್ಗೆ ವ್ಯಾಪಕವಾದ, ಆಳವಾದ ಮೆಚ್ಚುಗೆ ಮತ್ತು ಉತ್ಕಟ ಪ್ರೀತಿಯನ್ನು ಬೆಳೆಸಲು, ಪ್ರಚಾರ ಮಾಡಲು ಪ್ರಯತ್ನಿಸಲಾಗುತ್ತದೆ. ಇದು ಜನರ ನಡುವೆ ಪ್ರೀತಿಯ ಸೇತುವೆಗಳನ್ನು ನಿರ್ಮಿಸುತ್ತದೆ, ಪರಸ್ಪರ ಅರ್ಥಮಾಡಿಕೊಳ್ಳಲು ವೇದಿಕೆಯಾಗುತ್ತದೆ ಮತ್ತು ವೈಯಕ್ತಿಕ, ಸಾಮೂಹಿಕ ಶ್ರೇಷ್ಠತೆಯ ಹೊಸ ಎತ್ತರವನ್ನು ತಲುಪಲು ಅವರನ್ನು ಪ್ರೇರೇಪಿಸುತ್ತದೆ.
ಉತ್ಸವವನ್ನು ಪ್ರತಿ ವರ್ಷ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಆತಿಥೇಯ ರಾಜ್ಯವಾದ ಗೋವಾ ಸರ್ಕಾರದ ಎಂಟರ್ಟೈನ್ಮೆಂಟ್ ಸೊಸೈಟಿ ಆಫ್ ಗೋವಾ ಸಹಯೋಗದೊಂದಿಗೆ ನಡೆಸುತ್ತದೆ. 53ನೇ ಐಎಫ್‌ಎಫ್ಐ ಚಿತ್ರೋತ್ಸವದ ಎಲ್ಲಾ ಸಂಬಂಧಿತ ತಾಜಾ ಸುದ್ದಿಗಳನ್ನು ಉತ್ಸವದ ಜಾಲತಾಣhttp://www.iffigoa.orgಯಲ್ಲಿ, ಪಿಐಬಿ ಜಾಲತಾಣ https://pib.gov.inನಲ್ಲಿ, ಟಿಟ್ಟರ್, ಫೆಸ್‌ಬುಕ್ ಮತ್ತು ಇನ್ಸ್ಟಾಗ್ರಾಂ ನಲ್ಲಿ ಐಎಫ್‌ಎಫ್ಐ ನ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಪಿಐಬಿ ಗೋವಾದ ಸಾಮಾಜಿಕ ಮಾಧ್ಯಮಗಳಿಂದ ಪಡೆಯಬಹುದು. ವಿಕ್ಷಿಸುತ್ತಿರಿ, ಸಿನಿಮಾ ಉತ್ಸವದ ಸಂಭ್ರಮಾಚರಣೆಯಿಂದ ನಾವು ಯಥೇಚ್ಛವಾಗಿ ಕಲೆಯನ್ನು ಸೃಜನಶೀಲತೆಯನ್ನು ಆಸ್ವಾದಿಸೋಣ...ಮತ್ತು ಅದರ ಸಂತೋಷವನ್ನು ಹಂಚಿಕೊಳ್ಳೋಣ.
*****
(Release ID: 1876766)
Visitor Counter : 160