ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ

“ನಾಗರಿಕ-ಕೇಂದ್ರಿತ ಇಂಧನ ಪರಿವರ್ತನೆ; ಈಜಿಪ್ಟ್‌ನ ಮಿಷನ್ ಲೈಫ್‌ನೊಂದಿಗೆ ನಾಗರಿಕರ ಸಬಲೀಕರಣ” ಕುರಿತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವಾಲಯ ಮತ್ತು ಇಂಧನ ಸಚಿವಾಲಯದಿಂದ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜನೆ; 


·      ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಶೃಂಗಸಭೆ(ಸಿಒಪಿ 27)ಯಲ್ಲಿ ಭಾರತವು ದೂರದೃಷ್ಟಿಯ ನಾಗರಿಕ-ಕೇಂದ್ರಿತ ಇಂಧನ ಲಭ್ಯತೆ,  ಪರಿವರ್ತನೆ, ಭದ್ರತೆ ಮತ್ತು ನ್ಯಾಯ-ಸಂಬಂಧಿತ ಉಪಕ್ರಮಗಳನ್ನು ಪ್ರದರ್ಶಿಸಲಿದೆ
 
·      ಜಾಗತಿಕ ಇಂಧನ ಪರಿವರ್ತನೆ ಸುಲಭಗೊಳಿಸಲು ಮತ್ತು ಬಲಪಡಿಸಲು,  ಇಂಧನ ದಕ್ಷತೆ ಹೆಚ್ಚಿಸಲು ಮತ್ತು ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡುವ ತಂತ್ರಜ್ಞಾನಗಳ ನಿಯೋಜನೆ ತ್ವರಿತಗೊಳಿಸಲು ಮತ್ತು ಮಾರುಕಟ್ಟೆ ಹೂಡಿಕೆಗೆ ಇರುವ ಮಾರ್ಗೋಪಾಯಗಳ ಕುರಿತು ಸಮ್ಮೇಳನ ಚರ್ಚೆ ನಡೆಸಲಿದೆ

Posted On: 08 NOV 2022 4:58PM by PIB Bengaluru

ಈಜಿಪ್ಟ್‌ನ ಶರ್ಮ್-ಎಲ್-ಶೇಖ್‌ನಲ್ಲಿ ನವೆಂಬರ್ 6ರಿಂದ 18ರ ವರೆಗೆ ನಡೆಯುತ್ತಿರುವ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತು ಶೃಂಗಸಭೆ(ಸಿಒಪಿ-27)ಯಲ್ಲಿ ಭಾರತವು ಇಂದು "ನಾಗರಿಕ-ಕೇಂದ್ರಿತ ಇಂಧನ ಪರಿವರ್ತನೆ: ಈಜಿಪ್ಟ್‌ನ ಮಿಷನ್ ಲೈಫ್ (ಪರಿಸರಕ್ಕಾಗಿ ಜೀವನಶೈಲಿಗಳು) ಕಾರ್ಯಸೂಚಿಯ ಜತೆಗೆ ನಾಗರಿಕರ ಸಬಲೀಕರಣ" ವಿಷಯ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಿದೆ.

ಭಾರತ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ವಿದ್ಯುತ್ ಸಚಿವಾಲಯ, ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (ಐಆರ್ ಇಡಿಎ), ಭಾರತೀಯ ಸೌರಶಕ್ತಿ ನಿಗಮ(ಎಸ್ಇಸಿಐ) ಮತ್ತು ಇಂಧನ, ಪರಿಸರ ಮತ್ತು ಜಲ ಪರಿಷತ್ತಿನ (ಸಿಇಇಡಬ್ಲ್ಯು) ಸಹಭಾಗಿತ್ವದಲ್ಲಿ ಭಾರತವು ಇಂದು ಸಿಒಪಿ-27 ಸಮ್ಮೇಳನದ ‘ಇಂಡಿಯಾ ಪೆವಿಲಿಯನ್’ನಲ್ಲಿ ಈ ಕಾರ್ಯಕ್ರಮ ಆಯೋಜಿಸಿದೆ.

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಭೂಪಿಂದರ್ ಸಿಂಗ್ ಭಲ್ಲಾ ಅವರ ಅಧ್ಯಕ್ಷತೆಯಲ್ಲಿ, ಈ ವಿಶೇಷ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮವು ದೂರದೃಷ್ಟಿಯ ನಾಗರಿಕ-ಕೇಂದ್ರಿತ ಇಂಧನ ಲಭ್ಯತೆ, ಪರಿವರ್ತನೆ, ಭದ್ರತೆ ಮತ್ತು ನ್ಯಾಯ-ಸಂಬಂಧಿತ ಉಪಕ್ರಮಗಳನ್ನು ಪ್ರದರ್ಶಿಸಲಿದೆ. ಈ ಉಪಕ್ರಮಗಳು ಲಕ್ಷಾಂತರ ಜನರ ಜೀವನವನ್ನು ಉತ್ತಮಗೊಳಿಸಿವೆ ಮತ್ತು ಮಿಷನ್ ಲೈಫ್ ನ ಉತ್ತಮ ಅಭ್ಯಾಸಗಳ(ನಡವಳಿಕೆಗಳು) ತತ್ವಗಳನ್ನು ಸಾಕಾರಗೊಳಿಸಿದೆ, ಮಾರುಕಟ್ಟೆಗಳನ್ನು ಸಕ್ರಿಯಗೊಳಿಸುವ ಜತೆಗೆ, ನೀತಿಗಳ ಮೇಲೆ ಪ್ರಭಾವ ಬೀರಿವೆ.  ಜಾಗತಿಕ ಇಂಧನ ಪರಿವರ್ತನೆಯನ್ನು ಸುಲಭಗೊಳಿಸಲು ಮತ್ತು ಬಲಪಡಿಸಲು, ಇಂಧನ ದಕ್ಷತೆ ಹೆಚ್ಚಿಸಲು ಮತ್ತು ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡುವ ತಂತ್ರಜ್ಞಾನಗಳ ನಿಯೋಜನೆ ತ್ವರಿತಗೊಳಿಸಲು ಇರುವ ಮಾರ್ಗೋಪಾಯಗಳ ಕುರಿತು ಸಮ್ಮೇಳನವು ಚರ್ಚೆ ನಡೆಸುತ್ತಿದೆ.
 
ಅಂತಾರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಏಜೆನ್ಸಿ(ಐಆರ್ ಇಎನ್ಎ)ಯ ಉಪಮಹಾನಿರ್ದೇಶಕರಾದ ಡಾ. ಗೌರಿ ಸಿಂಗ್ ಮತ್ತು ಅಂತಾರಾಷ್ಟ್ರೀಯ ಸೌರಶಕ್ತಿ ಮೈತ್ರಿಕೂಟ(ಐಎಸ್ಎ)ದ ಮಹಾನಿರ್ದೇಶಕ ಡಾ.ಅಜಯ್ ಮಾಥುರ್ ಮತ್ತು ಭಾರತೀಯ ಉದ್ಯಮ ರಂಗದ ಮುಖ್ಯ ಕಾರ್ಯ ನಿರ್ವಾಹಕರು ಅಧಿವೇಶನದಲ್ಲಿ ಭಾಗವಹಿಸಿದ್ದಾರ.

*****



(Release ID: 1874557) Visitor Counter : 128


Read this release in: English