ವಾರ್ತಾ ಮತ್ತು ಪ್ರಸಾರ ಸಚಿವಾಲಯ

"ಬೆಂಬಲ ಹಾಗೂ ಮೇಲ್ವಿಚಾರಣಾ ಕೋಶದ ಸ್ಥಾಪನೆ (ಎಚ್ ಎಂ ಸಿ)”

Posted On: 06 OCT 2022 4:33PM by PIB Bengaluru

ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ರಡಿಯಲ್ಲಿ, ರಾಷ್ಟ್ರೀಯ ಮಾನ್ಯತಾ ಪರಿಷತ್ತನ್ನು(ಎನ್ ಎ ಸಿ), ಸಮಗ್ರವಾದ ಮಾನ್ಯತಾ ಸಂಸ್ಥೆಯಾಗಿ(ಮೆಟಾ ಮಾನ್ಯತಾ  ಸಂಸ್ಥೆ)ಯಾಗಿ ಪರಿಗಣಿಸುವ ಪ್ರಸ್ತಾವನೆಯು ಸಲ್ಲಿಸಲ್ಪಟ್ಟಿದೆ. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಈಗಾಗಲೇ ಸಮಿತಿಯೊಂದನ್ನು ನೇಮಿಸಿ ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್ತು(ನ್ಯಾಕ್), ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್ ಬಿ ಎ) ಮತ್ತು ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (ಎಂ ಐ ಆರ್ ಎಫ್) ಈ ಮೂರೂ ಸಂಸ್ಥೆಗಳ ನಡುವೆ ಸಂಯೋಜನೆ ತಂದು ರಾಷ್ಟ್ರೀಯ ಮಾನ್ಯತಾ ಪರಿಷತ್ತಿಗೆ ಒಂದು ಸಾಮಾನ್ಯ ಚೌಕಟ್ಟು ಮತ್ತು ಮಾರ್ಗಸೂಚಿಯನ್ನು ರೂಪಿಸುವ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿದೆ.ರಾಷ್ಟ್ರೀಯ ಶಿಕ್ಷಣ ನೀತಿ-2020 ರಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತ ಶ್ರೇಣಿಗಳನ್ನು ಹಂತ- ಹಂತವಾಗಿ ಮಂಜೂರು ಮಾಡುವ ವಿಧಾನವನ್ನು ಕಲ್ಪಿಸಲಾಗಿದೆ ಮತ್ತು ದೂರಗಾಮಿಯಾಗಿ, ಮಾನ್ಯತೆಯು ಅವಳಿ (ಬೈನರಿ) ಪ್ರಕ್ರಿಯೆಯಾಗಲಿದೆ. ಸಂಸ್ಥೆಗಳ ಮಾನ್ಯತೆ ಪ್ರಾಥಮಿಕವಾಗಿ ಸಂಸ್ಥೆಗಳ  ಮೂಲಭೂತ ಮಾರ್ಗಸೂಚಿಗಳು, ಸಂಸ್ಥೆಗಳ ಸಾರ್ವಜನಿಕ ಸ್ವಯಂ-ಘೋಷಣೆ, ಉತ್ತಮ ಆಡಳಿತ ಮತ್ತು ಫಲಿತಾಂಶಗಳ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಈ ಪ್ರಕ್ರಿಯೆಯು ಸಂಸ್ಥೆಗಳಿಗೆ ಮಾನ್ಯತೆ ನೀಡುವ ಸ್ವತಂತ್ರ ಪರಿಸರ ವ್ಯವಸ್ಥೆಯ ಮೂಲಕ ಮತ್ತು ರಾಷ್ಟ್ರೀಯ ಮಾನ್ಯತಾ ಮಂಡಳಿಯ ಮೇಲುಸ್ತುವಾರಿ ಮತ್ತು ಮೇಲ್ವಿಚಾರಣೆಗೆ ಒಳಪಟ್ಟು ಕೈಗೊಳ್ಳಲ್ಪಡುತ್ತದೆ.

ಮಾನ್ಯತಾ ಗಾರರಾಗಿ ಕಾರ್ಯನಿರ್ವಹಿಸಲು ಸೂಕ್ತ ಸಂಖ್ಯೆಯ ಸಂಸ್ಥೆಗಳಿಗೆ ಪರವಾನಗಿಯನ್ನು ಸಹಾ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ಮಂಜೂರು ಮಾಡಲ್ಪಡುತ್ತದೆ. ಒಟ್ಟಾರೆ ಶಿಕ್ಷಣ ಸಂಸ್ಥೆಗಳು ನಿಗದಿತ ಗುಣಮಟ್ಟವನ್ನು ತಲುಪುವಂತೆ, ಸ್ವಯಂ-ಆಡಳಿತ ಮತ್ತು ಸ್ವಾಯತ್ತತೆ ಗಳಿಸುವಂತೆ ಗುರಿ ಸಾಧಿಸಲು, ಅವಶ್ಯಕವಾದ ಶ್ರೇಯಾಂಕ ಮಾನ್ಯತೆ ನೀಡುವ ನಿರ್ದಿಷ್ಟವಾದ ಮಾನದಂಡಗಳನ್ನೊಳಗೊಂಡ ಸದೃಢ ವ್ಯವಸ್ಥೆಯ ಸ್ಥಾಪನೆಯ ಅವಶ್ಯಕತೆಯಿದೆ. ಇದು ಮೌಲ್ಯಮಾಪನ ಮತ್ತು ಮಾನ್ಯತೆ (ಎ  & ಎ ) ಪ್ರಕ್ರಿಯೆ ವ್ಯವಸ್ಥೆಯಲ್ಲಿ ಹಲವಾರು ವಿಶೇಷ ಸುಧಾರಣೆಗಳನ್ನು ತರಬೇಕಾಗಿದೆ.  ಈ ಅಂಶಗಳನ್ನು ಇತ್ತೀಚೆಗೆ ನ್ಯಾಕ್ ನಿಂದ ಬಿಡುಗಡೆಯಾದ  ಶ್ವೇತಪತ್ರದಲ್ಲಿ ಈ ಬಗ್ಗೆ ಮಾರ್ಗಸೂಚಿಗಳನ್ನು ಪ್ರಸ್ತಾಪಿಸಲ್ಪಟ್ಟಿದೆ.

ನ್ಯಾಕ್ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಡಾ ಭೂಷಣ್ ಪಟವರ್ಧನ್ ಈ ಉದ್ದೇಶಿತ ಸುಧಾರಣೆಯ ಪ್ರಸ್ತಾವನೆಯ ಬಗ್ಗೆ, ಮಾನ್ಯತೆಯ ಪ್ರಾಮುಖ್ಯತೆಯ ಬಗ್ಗೆ, ಶಿಕ್ಷಣ ಗುಣಮಟ್ಟ ವರ್ಧನೆಯ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ ಅವಶ್ಯಕತೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದೂ ಅಲ್ಲದೆ ಶ್ರೀಯುತರು, ಹೆಚ್ಚು ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳು ಮಾನ್ಯತೆಗೆ ಒಳಪಡಲು ಸ್ವಯಂ ಪ್ರೇರಿತವಾಗಿ ಮುಂದೆ ಬರಲು ಪ್ರೋತ್ಸಾಹಿಸಬೇಕೆಂದು ಎಂದು ಅವರು ಒತ್ತಿ ಹೇಳಿದರು. ನ್ಯಾಕ್ ಸಂಸ್ಥೆಯು ಮಾನ್ಯತೆಗೆ ಒಳಪಟ್ಟ ಸಂಸ್ಥೆಗಳ ಸಂಖ್ಯೆಯನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ನ್ಯಾಕ್ ನಿರ್ದೇಶಕರಾದ ಡಾ.ಎಸ್.ಸಿ.ಶರ್ಮಾ ರವರು  " ವಿಜಯ ದಶಮಿಯ ಈ ಶುಭದಿನದಂದು ನ್ಯಾಕ್ ಸಂಸ್ಥೆಯು ಹೆಚ್ಚು ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳು ಮೌಲ್ಯಮಾಪನ ಮತ್ತು ಮಾನ್ಯತಾ ಪ್ರಕ್ರಿಯೆಗೆ ಮುಂಬರುವಂತೆ ಪ್ರೋತ್ಸಾಹಿಸಲು " ಬೆಂಬಲ ಹಾಗೂ ಮೇಲ್ವಿಚಾರಣಾ ಕೋಶವೊಂದನ್ನು ಸ್ಥಾಪಿಸಲು  ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ."

ಈ ಮಧ್ಯೆ ಕೆಲವು ಏಜೆನ್ಸಿಗಳು ಅಥವಾ ಸಲಹಾ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕಿಸಿ ಅವರಿಗೆ ಮಾನ್ಯತೆಯನ್ನು ದೊರಕಿಸಿಕೊಡುವ ಹಾಗೂ ಅದೇ ಸಮಯದಲ್ಲಿ ಹಲವಾರು ಆಮಿಷಗಳನ್ನು ಮತ್ತು ಒಪ್ಪಂದಗಳು ಹಾಗೂ ಭರವಸೆಗಳನ್ನು ನೀಡುತ್ತಿರುವುದರ ಬಗ್ಗೆ ಈಗಾಗಲೇ  ಎಚ್ಚರಿಕೆಯನ್ನು ನೀಡಲಾಗಿದೆ.

ಪರಿಷತ್ತು ಯಾವುದೇ ಮಧ್ಯವರ್ತಿ ಅಥವಾ ಏಜನ್ಸಿಯನ್ನು ಮಾನ್ಯತಾ ಪ್ರಕ್ರಿಯೆಯ ಬಗ್ಗೆ ಅಧಿಕೃತವಾಗಿ ನೇಮಿಸಿಲ್ಲ. ಯಾವುದೇ ಶಿಕ್ಷಣ ಸಂಸ್ಥೆ ತಾನೇ ಮಾನ್ಯತೆಗಾಗಿ ಅವಶ್ಯಕತೆ ಸಿದ್ಧತೆಗಳನ್ನ ಪೂರೈಸೆಬೇಕೇ ವಿನಃ  ಯಾವುದೇ ಹೊರಗುತ್ತಿಗೆ ನೀಡತಕ್ಕದ್ದಲ್ಲ ಎಂದು ನ್ಯಾಕ್ ನಿರೀಕ್ಷಿಸುತ್ತದೆ.

 ಶಿಕ್ಷಣ ಸಂಸ್ಥೆಗಳು ಈ ರೀತಿಯ ಅನಧಿಕೃತ ಏಜೆಂಟ್‌ಗಳನ್ನು ಅವಾವಾಕ್ಷ ನೀಡಬಾರದು. ಡಾ ಪಟವರ್ಧನ್ ಅವರು ಸಹಾ ಅಂತಹ ತುರ್ತಾಗಿ ಇಂತಹ ಮೋಸದ ಏಜೆನ್ಸಿಗಳ ಸಂಪರ್ಕ ಮಾಡುವುದನ್ನು ತಪ್ಪಿಸಬೇಕು ಮತ್ತು ಅವರು ಅಧಿಕೃತವಾಗಿ ನ್ಯಾಕ್ ಮತ್ತು ಎಚ್ ಎಂ ಸಿ ಗಳು ನೀಡುತ್ತಿರುವ ಸೇವೆಯ ಪ್ರಯೋಜನ ಪಡೆಯಬೇಕು ಎಂಬುದಾಗಿ ತಿಳಿಸಿದ್ದಾರೆ. ಅವರು ನ್ಯಾಕ್-ಎಚ್ ಎಂ ಸಿ ಯು ಭೌಗೋಳಿಕವ್ವಾಗಿ ಎಲ್ಲೆಡೆ ಅದರಲ್ಲೂ ವಿಶೇಷವಾಗಿ ಕಡಿಮೆ ಮುಂದುವರೆದ ದೇಶಗಳಲ್ಲಿ ಇರುವ ಶಿಕ್ಷಣ ಸಂಸ್ಥೆಗಳಿಗೂ ಸಹಾ ಮಾರ್ಗದರ್ಶನ ನೀಡುವ ನಿರೀಕ್ಷೆ ಹೊಂದಿದೆ. ಯಾವುದೇ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಶ್ರೇಣಿಯ(ಮಾರ್ಗದರ್ಶನ ಶಿಕ್ಷಣ ಸಂಸ್ಥೆ)ಮಾನ್ಯತೆಯನ್ನು ಸತತ ಎರಡು ಬಾರಿ ಪಡೆದಿದ್ದು, ಹಾಗೂ ಕನಿಷ್ಟ ಎರಡು ಮಾನ್ಯತಾ ಆವರ್ತನಗಳನ್ನು ಪೂರೈಸಿದ್ದರೆ, ಅಂತಹ ಸಂಸ್ಥೆಗಳು ಈ ಉದ್ದೇಶದಲ್ಲಿ ಭಾಗವಹಿಸಬಹುದಾಗಿದೆ. ಡಾ. ಶರ್ಮರವರು ಶಿಕ್ಷಣ ಸಂಸ್ಥೆಗಳು ಅದರಲ್ಲೂ ವಿಶೇಷವಾಗಿ, ಮಾನ್ಯತೆ ಪಡೆದಿರುವ ಸಂಸ್ಥೆಗಳು ಸಹಾಯ ಅಥವಾ ಮಾರ್ಗದರ್ಶನ ಬೇಕಾದಲ್ಲಿ, ನ್ಯಾಕ್ ಜಾಲತಾಣದಲ್ಲಿ ಲಭ್ಯವಿರುವ ನಿಗದಿತನಮುನೆಯಲ್ಲಿ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು ಎಂಬುದಾಗಿ ತಮ್ಮ ಮನವಿಯಲ್ಲಿ ಸ್ವಾಗತಿಸಿದ್ದಾರೆ.  

 

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿ

ವಿ. ಲಕ್ಷ್ಮಣ್

ಹಿರಿಯ ಸಂವಹನಾಧಿಕಾರಿ, ನ್ಯಾಕ್

080-23005222, 9880024881

*****



(Release ID: 1865618) Visitor Counter : 179


Read this release in: English