ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಸರ್ಕಾರಿ ಇ-ಮಾರುಕಟ್ಟೆ (ಜಿಇಎಂ) ಮಾರಾಟಗಾರರ ಸಂವಾದ ಬೆಂಗಳೂರಿನಲ್ಲಿಂದು ನಡೆಯಿತು

Posted On: 19 SEP 2022 9:29PM by PIB Bengaluru

ದೇಶದ ರಾಷ್ಟ್ರೀಯ ಸಾರ್ವಜನಿಕ ಖರೀದಿ ಪೋರ್ಟಲ್ ಸರ್ಕಾರಿ ಇ - ಮಾರುಕಟ್ಟೆ (ಜಿಇಎಂ), ಸರಕು ಮತ್ತು ಸೇವೆಗಳ ಖರೀದಿಗಾಗಿ ಇರುವ ಆನ್‌ಲೈನ್ ಮಾರುಕಟ್ಟೆಯಾಗಿದೆ. ಗೌರವಾನ್ವಿತ ಪ್ರಧಾನ ಮಂತ್ರಿಯವರ ದೂರದೃಷ್ಟಿಯ ಭಾಗವಾಗಿ ಇದನ್ನು ಆಗಸ್ಟ್ 9, 2016 ರಂದು ಪ್ರಾರಂಭಿಸಲಾಯಿತು. ಸಾರ್ವಜನಿಕ ಖರೀದಿಯನ್ನು ಮರುವ್ಯಾಖ್ಯಾನಿಸಲು ಮತ್ತು ಸರ್ಕಾರಿ ಖರೀದಿದಾರರು ಮತ್ತು ಸಾರ್ವಜನಿಕ ವಲಯದ ಉದ್ಯಮಗಳ ಖರೀದಿಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರಲು ಜಿಇಎಂ ಸಮರ್ಥವಾಗಿದೆ. ಇದು ಸಂಪರ್ಕರಹಿತ, ಕಾಗದರಹಿತ ಮತ್ತು ನಗದುರಹಿತ ವ್ಯವಸ್ಥೆಯಾಗಿದೆ. ಜಿಇಎಂ ದಕ್ಷತೆ, ಪಾರದರ್ಶಕತೆ ಮತ್ತು ಒಳಗೊಳ್ಳುವಿಕೆ ಎಂಬ ಮೂರು ಸ್ತಂಭಗಳ ಮೇಲೆ ನಿಂತಿದೆ.

"ಜಿಇಎಂನ ಖರೀದಿದಾರರ ನೆಲೆಯು ಎಲ್ಲಾ ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳು, ಸಹಕಾರ ಸಂಘಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳನ್ನು ಒಳಗೊಂಡಿದೆ. ಜಿಇಎಂನ ಮಾರಾಟಗಾರರ ನೆಲೆಯ ವೈವಿಧ್ಯತೆಯು "ಒಳಗೊಳ್ಳುವಿಕೆ" ಯ ಸ್ಥಾಪಕ ಸ್ತಂಭವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ ಎಂದು ಭಾರತ ಸರ್ಕಾರದ ವಾರ್ತಾಶಾಖೆ (ಪಿಐಬಿ ಬೆಂಗಳೂರು)ಯ ಹೆಚ್ಚುವರಿ ಮಹಾನಿರ್ದೇಶಕ ಶ್ರೀ ಎಸ್. ಜಿ. ರವೀಂದ್ರ ಹೇಳಿದರು. ಇಂದು ಬೆಂಗಳೂರಿನಲ್ಲಿ ಜಿಇಎಂ ಸರ್ಕಾರಿ ಇ-ಮಾರುಕಟ್ಟೆ ಆಯೋಜಿಸಿದ್ದ "ಮಾರಾಟಗಾರರ ಸಂವಾದ" ಕಾರ್ಯಕ್ರಮದಲ್ಲಿ ಸಭಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

 

ಜೆಮ್ ಕುರಿತಂತೆ ಕೆಲವು ಮಾಹಿತಿಗಳು,  2021-22 ನೇ ಆರ್ಥಿಕ ವರ್ಷವೊಂದರಲ್ಲೇ 1 ಲಕ್ಷ ಕೋಟಿ ರೂ. ಖರೀದಿ ಮೌಲ್ಯದ ಮೈಲಿಗಲ್ಲನ್ನು ಜಿಇಎಂ ದಾಟಿದೆ ಎಂಬುದು ಗಮನಾರ್ಹವಾದುದು. ಒಟ್ಟು 2.82 ಲಕ್ಷ ಕೋಟಿ ರೂ.ಮೌಲ್ಯದ 1 ಕೋಟಿಗೂ ಹೆಚ್ಚು ವಹಿವಾಟುಗಳನ್ನು ಜಿಇಎಂ ಸುಗಮಗೊಳಿಸಿದೆ. ದೇಶಾದ್ಯಂತ ಖರೀದಿದಾರರು ಮತ್ತು ಮಾರಾಟಗಾರರು ಸೇರಿದಂತೆ ಎಲ್ಲಾ ಭಾಗೀದಾರರ ಬೆಂಬಲದಿಂದ ಇದು ಸಾಧ್ಯವಾಗಿದೆ ಜಿಇಎಂನಲ್ಲಿ ಕರ್ನಾಟಕದಿಂದ 2,82,000 ಕ್ಕೂ ಹೆಚ್ಚು ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರು ನೋಂದಾಯಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

 

ಜಿಇಎಂ ಮಾರಾಟಗಾರರ ನೆಲೆಯು ಬೃಹತ್‌ ಕಂಪನಿಗಳು ಮತ್ತು ಸಂಘಟಿತ ವ್ಯಾಪಾರಿ ಸಂಸ್ಥೆಗಳು ಸೇರಿದಂತೆ, ದೇಶದಾದ್ಯಂತದ ಮಹಿಳಾ ಉದ್ಯಮಿಗಳು, ಸ್ವಸಹಾಯ ಗುಂಪುಗಳು ಮತ್ತು ಎಂಎಸ್‌ಎಂಇ ಮಾರಾಟಗಾರರನ್ನು ಒಳಗೊಂಡಿದೆ. ಇದಲ್ಲದೆ, ಎಂಎಸ್‌ಎಂಇಗಳು ಮತ್ತು ಸ್ವಸಹಾಯ ಗುಂಪುಗಳಿಗೆ ತಡೆರಹಿತ ಆನ್‌ಬೋರ್ಡಿಂಗ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಜಿಇಎಂ ಪೋರ್ಟಲ್‌ನಲ್ಲಿ ವಿಶೇಷ ಅವಕಾಶಗಳನ್ನು ಸಹ ರೂಪಿಸಲಾಗಿದೆ. 61 ಸಾವಿರ ನೋಂದಾಯಿತ ಸರ್ಕಾರಿ ಖರೀದಿದಾರರು ಮತ್ತು 48.6 ಲಕ್ಷ ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರು ಜಿಇಎಂ ಕಾರ್ಯಾಚರಣೆಗಳ ಗಾತ್ರ ಮತ್ತು ಪ್ರಮಾಣಕ್ಕೆ ಕಾರಣರಾಗಿದ್ದಾರೆ.

 

 

ಜಿಇಎಂ ಆರಂಭವಾದಾಗಿನಿಂದಲೂ, ಹೊಸ ಉತ್ಪನ್ನ ಮತ್ತು ಸೇವಾ ವಿಭಾಗಗಳನ್ನು ನಿರಂತರವಾಗಿ ಸೇರಿಸುವುದರೊಂದಿಗೆ ಸ್ಥಿರವಾಗಿ ಬೆಳೆಯುತ್ತಿದೆ. ಪ್ರಸ್ತುತ, ಸುಮಾರು 300 ಸೇವಾ ವಿಭಾಗಗಳು ಮತ್ತು 10000ಕ್ಕೂ ಹೆಚ್ಚು ಉತ್ಪನ್ನ ವಿಭಾಗಗಳು ಜಿಇಎಂನಲ್ಲಿ ಲಭ್ಯವಿವೆ. ಈ ವರ್ಗಗಳು ಉತ್ಪನ್ನ ಮತ್ತು ಸೇವೆಗಳ ಸುಮಾರು 44 ಲಕ್ಷ ಕ್ಯಾಟಲಾಗ್‌ಗಳನ್ನು ಒಳಗೊಂಡಿವೆ. ಇದಲ್ಲದೆ, ಜಿಇಎಂ ಒಂದು ವಿಕಸನಗೊಳ್ಳುತ್ತಿರುವ ವೇದಿಕೆಯಾಗಿದೆ ಮತ್ತು ಪೋರ್ಟಲ್‌ಗೆ ಹೊಸ ವೈಶಿಷ್ಟ್ಯಗಳು ಮತ್ತು ಕಾರ್ಯಚಟುವಟಿಕೆಗಳನ್ನು ಸೇರಿಸಲು ಸತತವಾಗಿ ಕೆಲಸ ಮಾಡುತ್ತಿದೆ. ಈ ತತ್ವಕ್ಕೆ ಅನುಗುಣವಾಗಿ, ಕಳೆದ 24 ತಿಂಗಳುಗಳಲ್ಲಿ ಸರಿಸುಮಾರು 2000 ಸಣ್ಣ ಮತ್ತು 460ಕ್ಕೂ ಹೆಚ್ಚು ಪ್ರಮುಖ ಕಾರ್ಯಚಟುವಟಿಕೆಗಳನ್ನು ಪರಿಚಯಿಸಲಾಗಿದೆ.

 

ಈ ಚಿಂತನೆಯೊಂದಿಗೆ, ಭಾರತದ ಸಾರ್ವಜನಿಕ ಖರೀದಿ ಪರಿಸರ ವ್ಯವಸ್ಥೆಯಲ್ಲಿ ದೊಡ್ಡ ಪ್ರಮಾಣದ ಮಾರಾಟಗಾರರ ಮೇಲೆ ಜಿಇಎಂ ಪ್ರಭಾವ ಬೀರಲು ಸಮರ್ಥವಾಗಿದೆ ಎಂದು ಭಾವಿಸಲಾಗಿದೆ. ಅಂತೆಯೇ, ಜಿಇಎಂ ಮಾರಾಟಗಾರರೊಂದಿಗೆ ಸಂವಹನ ನಡೆಸಲು ಭಾರತದಾದ್ಯಂತ "ಮಾರಾಟಗಾರರ ಸಂವಾದ" ವನ್ನು ಯೋಜಿಸಲಾಗಿದೆ ಮತ್ತು ಹೊಸ ಜಿಇಎಂ ವೈಶಿಷ್ಟ್ಯಗಳು ಹಾಗೂ ಪೋರ್ಟಲ್‌ನಲ್ಲಿ ಕಾರ್ಯನಿರ್ವಹಿಸಲು ಮತ್ತಷ್ಟು ಅನುಕೂಲಕರವಾಗಿರುವ ಕಾರ್ಯಚಟುವಟಿಕೆಗಳ ಬಗ್ಗೆ ಮಾರಾಟಗಾರರಿಗೆ ಅರಿವು ಮೂಡಿಸಲಾಗುತ್ತಿದೆ. ಸಂವಾದದ ಮೂಲಕ, ಮಾರಾಟಗಾರರು ತಮ್ಮ ಅನುಭವಗಳ ಬಗ್ಗೆ ಮಾತನಾಡಲು, ಕಲಿಯಲು, ಸ್ಫೂರ್ತಿ ಪಡೆಯಲು ಮತ್ತು ಇತರರೊಂದಿಗೆ ಹಂಚಿಕೊಳ್ಳಲು ಅವಕಾಶವಿದೆ.

ಶ್ರೀ ಅನಘ್ ದತ್ ಜಿಇಎಂ ನಿರ್ದೇಶಕರು, ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸಂವಾದದಲ್ಲಿ ಪಾಲ್ಗೊಂಡರು. ಮಹಿಳಾ ಉದ್ಯಮಿಗಳು, ಎಂಎಸ್‌ಎಂಇಗಳು ಮತ್ತು ನವೋದ್ಯಮಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಮಾರಾಟಗಾರರು ಜಿಇಎಂನಲ್ಲಿ ತಮ್ಮ ಯಶೋಗಾಥೆಗಳನ್ನು ಹಂಚಿಕೊಂಡರು.

 

*****

 



(Release ID: 1860706) Visitor Counter : 127


Read this release in: English