ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್-19 ಲಸಿಕೆ ಲಭ್ಯತೆಯ ಕುರಿತು ಹೊಸ ಮಾಹಿತಿ


ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 196.86 ಕೋಟಿಗೂ ಹೆಚ್ಚು ಲಸಿಕೆ ಡೋಸ್ ಗಳನ್ನು ಒದಗಿಸಲಾಗಿದೆ

7.32 ಕೋಟಿಗೂ ಹೆಚ್ಚು ಬಾಕಿ ಮತ್ತು ಬಳಕೆಯಾಗದ ಲಸಿಕೆ ಡೋಸ್ಗಳು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ ಲಭ್ಯವಿದೆ

Posted On: 05 AUG 2022 9:21AM by PIB Bengaluru

ಕೇಂದ್ರ ಸರ್ಕಾರವು ದೇಶಾದ್ಯಂತ ಕೋವಿಡ್-19 ಲಸಿಕೆ ನೀಡುವ ಕಾರ್ಯದ ವೇಗವನ್ನು ಹೆಚ್ಚಿಸಲು ಮತ್ತು ವ್ಯಾಪ್ತಿಯನ್ನು ವಿಸ್ತರಿಸಲು ಬದ್ಧವಾಗಿದೆ. ರಾಷ್ಟ್ರವ್ಯಾಪಿ ಕೋವಿಡ್-19 ಲಸಿಕೆ ನೀಡುವಿಕೆ 16 ಜನವರಿ 2021 ರಂದು ಪ್ರಾರಂಭವಾಯಿತು. ಕೋವಿಡ್-19 ಲಸಿಕೆ ನೀಡುವ ಸಾರ್ವತ್ರಿಕೀಕರಣದ ಹೊಸ ಹಂತವು 21 ಜೂನ್ 2021 ರಿಂದ ಪ್ರಾರಂಭವಾಯಿತು. ಹೆಚ್ಚಿನ ಲಸಿಕೆಗಳ ಲಭ್ಯತೆ, ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ಲಸಿಕೆಗಳ ಬೇಡಿಕೆಯ ಮುಂಗಡ ಯೋಜನೆ ಮತ್ತು ಲಭ್ಯತೆಯ ಮೂಲಕ ಲಸಿಕೆ ನೀಡುವ ಕಾರ್ಯಕ್ರಮವನ್ನು ಹೆಚ್ಚಿಸಲಾಗಿದೆ ಇದರಿಂದಾಗಿ ಆಡಳಿತದ ಉತ್ತಮ ಯೋಜನೆಯನ್ನು ಸಕ್ರಿಯಗೊಳಿಸುವುದು ಮತ್ತು ಲಸಿಕೆ ಪೂರೈಕೆ ಸರಪಳಿಯನ್ನು ಸುಗಮಗೊಳಿಸುವುದು.

ರಾಷ್ಟ್ರವ್ಯಾಪಿ ಲಸಿಕೆ ನೀಡುವ ಕಾರ್ಯಕ್ರಮದ ಭಾಗವಾಗಿ, ಭಾರತ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಉಚಿತವಾಗಿ ನೀಡುವ ಮೂಲಕ ಬೆಂಬಲಿಸುತ್ತಿದೆ. ಕೋವಿಡ್-19 ಲಸಿಕೆ ನೀಡುವಿಕೆ ಕಾರ್ಯಕ್ರಮದ ಸಾರ್ವತ್ರೀಕರಣದ ಹೊಸ ಹಂತದಲ್ಲಿ, ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ದೇಶದಲ್ಲಿ ಲಸಿಕೆ ತಯಾರಕರು ಉತ್ಪಾದಿಸುವ 75% ಲಸಿಕೆಗಳನ್ನು (ಉಚಿತವಾಗಿ) ಸಂಗ್ರಹಿಸುತ್ತದೆ ಮತ್ತು ಪೂರೈಸುತ್ತದೆ.

ಲಸಿಕೆ ಡೋಸುಗಳು (5 ಆಗಸ್ಟ್ 2022 ರಂತೆ)

ಸರಬರಾಜು ಮಾಡಿರುವುದು

1,96,86,41,625

ಬಾಕಿ ಉಳಿದಿರುವುದು

7,32,14,660

ಇಲ್ಲಿಯವರೆಗೆ, ಸುಮಾರು 196.86 ಕೋಟಿ (1,96,86,41,625) ಡೋಸ್ ಲಸಿಕೆಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರವು ಉಚಿತ ಮತ್ತು ನೇರ ರಾಜ್ಯ ಸರ್ಕಾರದ ಸಂಗ್ರಹಣೆ ಮಾರ್ಗಗಳ ಮೂಲಕ ಲಭ್ಯವಾಗುವಂತೆ ಮಾಡಿದೆ.

ಪ್ರಸ್ತುತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 7.32 ಕೋಟಿ (7,32,14,660) ಹೆಚ್ಚುವರಿ ಮತ್ತು ಬಳಕೆಯಾಗದ ಕೋವಿಡ್-19 ಲಸಿಕೆಗಳು ಲಭ್ಯವಿವೆ.

 

****

 

 

 

 

 

 (Release ID: 1848899) Visitor Counter : 239