ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ 31 ಮೇ 2022 ರಂದು ಸರ್ಕಾರಿ ಯೋಜನೆಗಳ ಕುರಿತು ಫಲಾನುಭವಿಗಳೊಂದಿಗೆ ಚರ್ಚಿಸಲಿರುವ ಪ್ರಧಾನಮಂತ್ರಿಯವರು


ಗರೀಬ್ ಕಲ್ಯಾಣ್ ಸಮ್ಮೇಳನದಡಿ ದೇಶಾದ್ಯಂತದ ವಿವಿಧ ಜಿಲ್ಲೆಗಳ ಫಲಾನುಭವಿಗಳೊಂದಿಗೆ ಮಾತನಾಡಲಿರುವ ಕೇಂದ್ರ ಸಚಿವರು ಮತ್ತು ಜನಪ್ರತಿನಿಧಿಗಳು

Posted On: 30 MAY 2022 6:10PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಅಂಗವಾಗಿ ಭಾರತ ಸರ್ಕಾರದ ಒಂಬತ್ತು ಸಚಿವಾಲಯಗಳು ಮತ್ತು ಇಲಾಖೆಗಳ ವ್ಯಾಪ್ತಿಯ ಸುಮಾರು ಹದಿನಾರು ಯೋಜನೆಗಳು ಮತ್ತು ಕಾರ್ಯಕ್ರಮಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. “ಗರೀಬ್ ಕಲ್ಯಾಣ್ ಸಮ್ಮೇಳನ” ಎಂಬ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮವು 31 ಮೇ 2022 ರಂದು ಶಿಮ್ಲಾದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ದೇಶಾದ್ಯಂತದ ಫಲಾನುಭವಿಗಳೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನೇರವಾಗಿ ಸಂವಾದ ನಡೆಸಲಿದ್ದಾರೆ. ರೂ.21,000 ಕೋಟಿಗೂ ಹೆಚ್ಚು ಮೊತ್ತದ ಕಿಸಾನ್ ಸಮ್ಮಾನ್ ನಿಧಿಯ 11ನೇ ಕಂತನ್ನು ಕೂಡಾ ಪ್ರಧಾನಮಂತ್ರಿ ಬಿಡುಗಡೆ ಮಾಡಲಿದ್ದಾರೆ.  ರಾಜ್ಯ ರಾಜಧಾನಿಗಳು, ಜಿಲ್ಲಾ ಕೇಂದ್ರಗಳು ಮತ್ತು ಕೆವಿಕೆ ಕೇಂದ್ರಗಳಲ್ಲಿ ಏಕಕಾಲದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮಗಳ ಸರಣಿಯಡಿ, ಯೋಜನೆಯ ಫಲಾನುಭವಿಗಳು ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯ ಸಚಿವರು, ಸಂಸದರು, ವಿಧಾನಸಭಾ ಸದಸ್ಯರು ಮತ್ತು ಇತರ ಚುನಾಯಿತ ಜನ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಎರಡು ಹಂತದಲ್ಲಿ ಆಯೋಜಿಸಲಾದ ರಾಜ್ಯ/ಜಿಲ್ಲೆ/ಕೆವಿಕೆ ಮಟ್ಟದ ಕಾರ್ಯಕ್ರಮವು ಬೆಳಗ್ಗೆ 9.45 ಕ್ಕೆ ಆರಂಭವಾಗಲಿದೆ. ರಾಷ್ಟ್ರೀಯ ಕಾರ್ಯಕ್ರಮವನ್ನು ದೂರದರ್ಶನದ ರಾಷ್ಟ್ರೀಯ ಮತ್ತು ಪ್ರಾದೇಶಿಕ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಹಾಗು ಮೈ ಗೌ ಮೂಲಕ ರಾಷ್ಟ್ರೀಯ ಕಾರ್ಯಕ್ರಮವನ್ನು ವೆಬ್‌ಕಾಸ್ಟ್ ಮಾಡಲು ಸಹ ಅವಕಾಶ ಕಲ್ಪಿಸಲಾಗಿದೆ. ಇದನ್ನು ಇತರ ಸಾಮಾಜಿಕ ಮಾಧ್ಯಮಗಳಾದ ಯೂಟ್ಯೂಬ್, ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾ ಗ್ರಾಮ್ ಇತ್ಯಾದಿಗಳ ಮೂಲಕವೂ ವೀಕ್ಷಿಸಬಹುದು.

ಈ ಸಂವಾದವು ಕೇವಲ ನಾಗರಿಕರ ಜೀವನ ಸುಲಭಗೊಳಿಸಲು ಕಾರಣವಾಗುವ ಈ ಯೋಜನೆಗಳ ಜನ-ಕೇಂದ್ರಿತ ವಿಧಾನವನ್ನು ಎತ್ತಿ ತೋರಿಸುವುದು ಮಾತ್ರವಲ್ಲದೆ, ಜನರ ಆಕಾಂಕ್ಷೆಗಳ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಸಿಕೊಡುತ್ತದೆ ಮತ್ತು ರಾಷ್ಟ್ರ ಪ್ರಗತಿಯ ಹಾದಿಯಲ್ಲಿ ಯಾರೂ ಹಿಂದುಳಿದಿಲ್ಲ ಎಂದು ಖಚಿತಪಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಕರ್ನಾಟಕದಲ್ಲಿ ಶ್ರೀ ಪ್ರಹ್ಲಾದ್ ಜೋಷಿ, ಕೇಂದ್ರ ಸಂಸದೀಯ ವ್ಯವಹಸರಗಳು, ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವರು ಧಾರವಾಡದಲ್ಲಿ, ಮಣಿಪಾಲ ರಜತಾದ್ರಿಯ ಅಟಲ್‌ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಕೇಂದ್ರ ಸಚಿವೆ ಸುಶ್ರೀ ಶೋಭಾ ಕರಂದ್ಲಾಜೆ, ಚಿತ್ರದುರ್ಗದ ತರಾಸು ರಂಗ ಮಂದಿರದಲ್ಲಿ ಕೇಂದ್ರ ಸಚಿವರಾದ  ಶ್ರೀ ನಾರಾಯಣ ಸ್ವಾಮಿ ಹಾಗು ಬೀದರ್‌ ಜಿಲ್ಲೆಯಲ್ಲಿ ಕೇಂದ್ರ ಸಚಿವರಾದ  ಶ್ರೀ ಭಗವಂತ ಖೂಬ ಅವರು ಶ್ರೀ ಚನ್ನಬಸವೇಶ್ವರ ಪಟ್ಟದೇವರ ರಂಗಮಂದಿರದಲ್ಲಿ ಫಲಾನುಭವಿಗಳೊಂದಿಗೆ ಸಂವಾದ ನಡೆಸುವರು.

ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು  ಪ್ರಧಾನಮಂತ್ರಿಯವರ ಕಾರ್ಯಕ್ರಮದೊಂದಿಗೆ ಬೆಳಿಗ್ಗೆ 11 ಕ್ಕೆ ಸರಿಯಾಗಿ  ಸಂಪರ್ಕ ಕಲ್ಪಿಸಲಾಗುವುದು.  ಪ್ರಧಾನಮಂತ್ರಿಯವರು ಸಿಮ್ಲಾದಿಂದ  ದೇಶಾದ್ಯಂತ  ಫಲಾನುಭವಿಗಳೊಂದಿಗೆ  ಚರ್ಚೆಯಲ್ಲಿ ಪಾಲ್ಗೊಳ್ಳುವರು

ಈ ಯೋಜನೆಗಳು ಬಡ ವರ್ಗದ ಮತ್ತು ಕಡುಬಡವರ ಮೂಲಭೂತ ಸಮಸ್ಯೆಗಳಾದ ವಸತಿ, ಕುಡಿಯುವ ನೀರಿನ ಲಭ್ಯತೆ, ಆಹಾರ, ಆರೋಗ್ಯ ಮತ್ತು ಪೋಷಣೆ, ಜೀವನೋಪಾಯ ಮತ್ತು ಆರ್ಥಿಕ ಒಳಗೊಳ್ಳುವಿಕೆ ಮುಂತಾದ ಸಮಸ್ಯೆಗಳನ್ನು ಪರಿಹರಿಸುತ್ತಿವೆ. ಈ ಸಂವಾದವು ಸರ್ಕಾರದ ಯೋಜನೆಗಳ ಒಮ್ಮುಖ ಮತ್ತು ಶುದ್ಧತ್ವದ ಸಾಧ್ಯತೆಯ ಮೇಲೆ ಬೆಳಕು ಚೆಲ್ಲುತ್ತದೆ ಮತ್ತು 2047 ರಲ್ಲಿ ದೇಶ ಸ್ವಾತಂತ್ರ್ಯದ 100 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದ ಕುರಿತು ನಾಗರಿಕರ ಆಕಾಂಕ್ಷೆಯನ್ನು ನಿರ್ಣಯಿಸುವ ಅವಕಾಶವನ್ನು ನೀಡುತ್ತದೆ. ಈ ಸಮ್ಮೇಳನವು ಎಲ್ಲಾ ಜಿಲ್ಲೆಗಳನ್ನು ಒಳಗೊಂಡಂತೆ ಇಲ್ಲಿಯವರೆಗೆ ರಾಷ್ಟ್ರವ್ಯಾಪಿ ಆಯೋಜಿಸಲಾದ ಅತಿದೊಡ್ಡ ಏಕಮಾತ್ರ ಕಾರ್ಯಕ್ರಮವಾಗಿದೆ.

 

 

***

 

 

ಯೋಜನೆಗಳು/ಕಾರ್ಯಕ್ರಮಗಳ ಪಟ್ಟಿ

 1. ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ ಮತ್ತು ನಗರ)
 2. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ
 3. ಪ್ರಧಾನಮಂತ್ರಿ  ಉಜ್ವಲ ಯೋಜನೆ
 4. ಪೋಷಣ್ ಅಭಿಯಾನ
 5. ಪ್ರಧಾನಮಂತ್ರಿ  ಮಾತೃ ವಂದನಾ ಯೋಜನೆ
 6. ಸ್ವಚ್ಛ ಭಾರತ ಯೋಜನೆ (ಗ್ರಾಮೀಣ ಮತ್ತು ನಗರ)
 7. ಜಲ ಜೀವನ್ ಮಿಷನ್ ಮತ್ತು ಅಮೃತ್
 8. ಪ್ರಧಾನಮಂತ್ರಿ ಸ್ವಾನಿಧಿ ಸ್ಕೀಂ
 9. ಒಂದು ರಾಷ್ಟ್ರ ಒಂದು ಪಡಿತರ ಚೀಟಿ
 10. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ
 11. ಆಯುಷ್ಮಾನ್ ಭಾರತ್ ಪಿ ಎಂ ಜನ ಆರೋಗ್ಯ  ಯೋಜನೆ
 12. ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಕ್ಷೇಮ ಕೇಂದ್ರ
 13. ಪ್ರಧಾನಮಂತ್ರಿ  ಮುದ್ರಾ ಯೋಜನೆ

 

****(Release ID: 1829523) Visitor Counter : 138


Read this release in: English