ಭಾರೀ ಕೈಗಾರಿಕೆಗಳ ಸಚಿವಾಲಯ

ಭಾರತವನ್ನು "ಜಾಗತಿಕ ಉತ್ಪಾದನಾ ಕೇಂದ್ರ" ವನ್ನಾಗಿ ಮಾಡಲು  ಕೇಂದ್ರೀಯ ಉತ್ಪಾದನಾ ತಂತ್ರಜ್ಞಾನ ಸಂಸ್ಥೆ (ಸಿಎಂಟಿಐ) ಕೊಡುಗೆ ನೀಡಬೇಕು: ಕೇಂದ್ರ ಸಚಿವ ಡಾ. ಮಹೇಂದ್ರ ನಾಥ್ ಪಾಂಡೆ

Posted On: 12 APR 2022 6:24PM by PIB Bengaluru

ಭಾರತವನ್ನು ಸಂಪೂರ್ಣ ಸ್ವಾವಲಂಬಿಯನ್ನಾಗಿ ಮಾಡಲು ಮತ್ತು "ಜಾಗತಿಕ ಉತ್ಪಾದನಾ ಕೇಂದ್ರ" ವನ್ನಾಗಿ ಮಾಡುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಕನಸನ್ನು ನನಸಾಗಿಸಲು ಕೇಂದ್ರೀಯ ಉತ್ಪಾದನಾ ತಂತ್ರಜ್ಞಾನ ಸಂಸ್ಥೆ (ಸಿಎಂಟಿಐ) ಕೊಡುಗೆ ನೀಡಬೇಕು ಎಂದು ಕೇಂದ್ರ ಭಾರೀ ಕೈಗಾರಿಕೆಗಳ ಸಚಿವ ಡಾ. ಮಹೇಂದ್ರ ನಾಥ್ ಪಾಂಡೆ ಹೇಳಿದರು. 

ಅವರು ಬೆಂಗಳೂರಿನಲ್ಲಿಂದು ಸಿಎಂಟಿಐನ ವಜ್ರಮಹೋತ್ಸವ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ ವಜ್ರಮಹೋತ್ಸವದ ಲೋಗೋ ಮತ್ತು ಕಾರ್ಯಕ್ರಮಗಳ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ಗೌರವಾನ್ವಿತ ಭಾರೀ ಕೈಗಾರಿಕೆಗಳ ರಾಜ್ಯ ಸಚಿವ ಶ್ರೀ ಕೃಷ್ಣ ಪಾಲ್ ಗುರ್ಜರ್ ಅವರು ಉಪಸ್ಥಿತರಿದ್ದರು.
ಸಿಎಂಟಿಐ ಕಳೆದ 60 ವರ್ಷಗಳಲ್ಲಿ ರಕ್ಷಣೆ, ಏರೋಸ್ಪೇಸ್ ನಂತಹ ಕ್ಷೇತ್ರಗಳಲ್ಲಿ ತನ್ನ ಅಮೂಲ್ಯವಾದ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಮೂಲಕ ರಾಷ್ಟ್ರಕ್ಕೆ ನೀಡಿದ ಮಹತ್ವದ ಕೊಡುಗೆಯನ್ನು ಸಚಿವರು ಶ್ಲಾಘಿಸಿದರು.


ಭಾರತೀಯರ ಜೀವನ ಮಟ್ಟವನ್ನು ಹೆಚ್ಚಿಸಲು ಸಿಎಂಟಿಐ ತನ್ನ ತಾಂತ್ರಿಕ ಬೆಳವಣಿಗೆಗಳ ಮೂಲಕ ವಹಿಸಬಹುದಾದ ಪಾತ್ರದ ಬಗ್ಗೆಯೂ ಅವರು ಒತ್ತಿ ಹೇಳಿದರು.
  "ಸಿಎಂಟಿಐನ ಅಪಾರ ಪರಿಶ್ರಮವು ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡಬಹುದು ಮತ್ತು ಅದರ ತಾಂತ್ರಿಕ ಬೆಳವಣಿಗೆಗಳ ಮೂಲಕ ನಮ್ಮ ದೇಶದ ಜನರ ಜೀವನ ಮಟ್ಟವನ್ನು ಹೆಚ್ಚಿಸಲು ಕೊಡುಗೆ ನೀಡಬಹುದು" ಎಂದು ಕೇಂದ್ರ ಸಚಿವರು ಹೇಳಿದರು.
ಬಡವರ ಕಲ್ಯಾಣಕ್ಕಾಗಿ ಇರುವ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ವಿವರಿಸಿದ ಅವರು, ಸಾಂಕ್ರಾಮಿಕದ ಸಮಯದಲ್ಲಿ ಜನ್ ಧನ್ ಖಾತಾ ಯೋಜನೆ ಮತ್ತು ಆಯುಷ್ಮಾನ್ ಭಾರತ್ ನಿರ್ವಹಿಸಿದ ಪಾತ್ರದ ಬಗ್ಗೆ ಒತ್ತಿ ಹೇಳಿದರು. ಪ್ರತಿ ಗ್ರಾಮೀಣ ಮನೆಗಳಿಗೆ ಕುಡಿಯುವ ನೀರು ಒದಗಿಸಲು ಕೆಲಸ ಮಾಡುತ್ತಿರುವ ಸರ್ಕಾರದ ಹರ್ ಘರ್ ಜಲ್ ಯೋಜನೆಯ ಮಹತ್ವವನ್ನು ಅವರು ವಿವರಿಸಿದರು.


ಯುವ ಪೀಳಿಗೆ ಮತ್ತು ವಿಜ್ಞಾನಿಗಳು ಸರ್ಕಾರದ ವಿವಿಧ ನೀತಿಗಳ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳಬೇಕು, ಇದರಿಂದ ಅವರು ದೇಶ ಮತ್ತು ಜನರ ಜೀವನ ಸುಧಾರಣೆಗಾಗಿ ನವೀನ ಆಲೋಚನೆಗಳನ್ನು ಹಂಚಿಕೊಳ್ಳಬಹುದು ಎಂದು ಅವರು ಕರೆ ನೀಡಿದರು.

 


ಭಾರೀ ಕೈಗಾರಿಕೆಗಳ ರಾಜ್ಯ ಸಚಿವ ಶ್ರೀ ಕ್ರಿಶನ್ ಪಾಲ್ ಗುರ್ಜಾರ್ ಅವರು ಮಾತನಾಡಿ, ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಭಾರತವು ಸ್ವಾವಲಂಬಿ ರಾಷ್ಟ್ರವಾಗಲು ಸಿಎಂಟಿಐ ಭಾರತದಲ್ಲಿಯೇ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಬೇಕು ಎಂದು ಹೇಳಿದರು.

***



(Release ID: 1816146) Visitor Counter : 129


Read this release in: English