ಹಣಕಾಸು ಸಚಿವಾಲಯ
azadi ka amrit mahotsav

ಆದಾಯ ತೆರಿಗೆ ಕಾಯಿದೆ, 1961 (ಕಾಯಿದೆ) ನ ಪರಿಛೇದ 10(23ಸಿ), 12A ಅಥವಾ 80G ಅಡಿಯಲ್ಲಿ ನೋಂದಣಿ ಅಥವಾ ಅನುಮೋದನೆ ಪಡೆಯಲು ಫಾರ್ಮ್ ನಂ.10ಎ.ಬಿ.ಯನ್ನು ಸಲ್ಲಿಸಲು ಬಿ.ಡಿ.ಟಿ. ಕೊನೆಯ ದಿನಾಂಕವನ್ನು ವಿಸ್ತರಿಸುತ್ತದೆ.

Posted On: 31 MAR 2022 7:35PM by PIB Bengaluru

ಆದಾಯ ತೆರಿಗೆ ನಿಯಮಗಳು, 1962 ರ ನಿಯಮ 2ಸಿ ಅಥವಾ 11ಎ.ಎ ಅಥವಾ 17ಎ ಯಲ್ಲಿ ನಿಗದಿಪಡಿಸಿದಂತೆ ಫಾರ್ಮ್ ನಂ.10ಎ.ಬಿ.ಯ ಎಲೆಕ್ಟ್ರಾನಿಕ್ ಫೈಲಿಂಗ್‌ನಲ್ಲಿನ ತೊಂದರೆಗಳನ್ನು ಪರಿಗಣಿಸಿ, ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿ.ಬಿ.ಡಿ.ಟಿ.), ನಮೂನೆ ಸಂಖ್ಯೆ ವಿದ್ಯುನ್ಮಾನ ಫೈಲಿಂಗ್‌ ಗೆ ಕೊನೆಯ ದಿನಾಂಕವನ್ನು ವಿಸ್ತರಿಸುತ್ತದೆ.

 ಫಾರ್ಮ್ ನಂ.10ಎಬಿ ನಲ್ಲಿ ಪರಿಛೇದ 10(23ಸಿ), 12ಎ ಅಥವಾ 80ಜಿ ಕಾಯ್ದೆಯ ಅಡಿಯಲ್ಲಿ ನೋಂದಣಿ ಅಥವಾ ಅನುಮೋದನೆಗಾಗಿ ಅರ್ಜಿಯನ್ನು ಸಲ್ಲಿಸಲು ಈ ಮೊದಲು ಇದ್ದ  ಕೊನೆಯ ದಿನಾಂಕ 29ನೇ ಸೆಪ್ಟೆಂಬರ್, 2022 ವನ್ನು  ಮುಂದೂಡಲಾಗಿದ್ದು 30ನೇ ಸೆಪ್ಟೆಂಬರ್, 2022 ರವರೆಗೆ ವಿಸ್ತರಿಸಲಾಗಿದೆ.

ಈ ನಿಟ್ಟಿನಲ್ಲಿ ಸಿ.ಬಿ.ಡಿ.ಟಿ. ಯು ಸುತ್ತೋಲೆ ನಂ.08/2022 ರಲ್ಲಿ ಎಫ್ 197/59/2022-ಐ.ಟಿ.ಎ-I ಅನ್ನು ದಿನಾಂಕ 31.03.2022 ರಂದು  ಹೊರಡಿಸಲಾಗಿದೆ.

 

 ****


(Release ID: 1812157) Visitor Counter : 266


Read this release in: English , Hindi