ಹಣಕಾಸು ಸಚಿವಾಲಯ

ಕೇಂದ್ರ ಹಣಕಾಸು ಸಚಿವರಿಂದ ಸಿಬಿಐಸಿ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪ್ರಶಸ್ತಿ ಪ್ರದಾನ


2021 ಮತ್ತು 2022ನೇ ಸಾಲಿನ ರಾಷ್ಟ್ರಪತಿಗಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

Posted On: 07 MAR 2022 8:40PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಬೆಂಗಳೂರಿನಲ್ಲಿ ನಡೆದ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಕೇಂದ್ರೀಯ ಮಂಡಳಿಯ (ಸಿಬಿಐಸಿ) ಅಧಿಕಾರಿಗಳು ಮತ್ತು ಸಿಬ್ಬಂದಿಗೆ "ಜೀವ ಅಪಾಯ ಪಣಕ್ಕಿಟ್ಟು ಅಸಾಧಾರಣ ಪ್ರಶಂಸಾರ್ಹ ಸೇವೆ” ಸಲ್ಲಿಸಿದ್ದಕ್ಕೆ (ಎಕ್ಸೆಪ್ಷನಲಿ ಮೆರಿಟೋರಿಯಸ್‌  ಸರ್ವೀಸ್‌ ಅಟ್‌ ರಿಸ್ಕ್‌ ಟು ಲೈಫ್‌)  ಮತ್ತು "ವಿಶೇಷವಾಗಿ ವಿಶಿಷ್ಟ ಸೇವಾ ದಾಖಲೆ”ಗಾಗಿ ಅಭಿನಂದನೀಯ ಪ್ರಮಾಣ ಪತ್ರ ಮತ್ತು ಪದಕಗಳ ರೂಪದಲ್ಲಿ ರಾಷ್ಟ್ರಪತಿಗಳ ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. 
ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಶ್ರೀಯುತ ಪಂಕಜ್ ಚೌಧರಿ ಅವರು ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಕೇಂದ್ರ ಹಣಕಾಸು ಸಹಾಯಕ ಸಚಿವ ಶ್ರೀಯುತ  ಭಗವಂತ್ ಕಿಶನ್ ರಾವ್ ಕರಾಡ್‌,  ಭಾರತ ಸರ್ಕಾರದ ಕಂದಾಯ ಇಲಾಖೆಯ ಕಾರ್ಯದರ್ಶಿ ಶ್ರೀಯುತ ತರುಣ್ ಬಜಾಜ್; ಸಿಬಿಐಸಿ ಅಧ್ಯಕ್ಷ ಶ್ರೀಯುತ ವಿವೇಕ್ ಜೋಹ್ರಿ, ಸಿಬಿಐಸಿ ಮಂಡಳಿಯ ಇತರ ಸದಸ್ಯರು ಮತ್ತು ಇಲಾಖೆಯ ಹಲವಾರು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. 
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗೌರವಾನ್ವಿತ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಪ್ರಶಸ್ತಿ ವಿಜೇತರ ಪ್ರೊಫೈಲ್‌ಗಳನ್ನು ನೋಡಿದರೆ, ಈ ದಿಟ್ಟ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಎದುರಿಸಿದ ನಿಜವಾದ ಬೆದರಿಕೆಗಳು ಏನು ಎಂಬುದನ್ನು ತೋರಿಸುತ್ತದೆ ಎಂದು ಉಲ್ಲೇಖಿಸಿದರು. ಸಂಕಷ್ಟದ ಸ್ಥಿತಿಯಲ್ಲೂ ಕೋವಿಡ್ ಲಾಕ್‌ಡೌನ್‌ ಸಮಯದಲ್ಲಿ ಸೇವಾ ಮನೋಭಾವದ ಸ್ಫೂರ್ತಿಯೊಂದಿಗೆ ಕಾರ್ಯನಿರ್ವಹಿಸಿದರು. ಅತ್ಯಂತ ಕಷ್ಟದ ಸಮಯದಲ್ಲೂ ಅಗತ್ಯ ಸರಕುಗಳಿಗೆ ತ್ವರಿತ ಅನುಮತಿನೀಡುವಲ್ಲಿ ಸಿಬಿಐಸಿಯ ಎಲ್ಲಾ ಅಧಿಕಾರಿಗಳು ವಿಶೇಷವಾಗಿ ಕಸ್ಟಮ್ಸ್ ಅಧಿಕಾರಿಗಳು ಮಾಡಿದ ಪ್ರಯತ್ನಗಳನ್ನು ಸಚಿವರು ಶ್ಲಾಘಿಸಿದರು. ಅಧಿಕಾರಿಗಳ ಕುಟುಂಬ ಸದಸ್ಯರು, ಅದರಲ್ಲೂ ವಿಶೇಷವಾಗಿ ಪ್ರಶಸ್ತಿ ವಿಜೇತರ ಮಕ್ಕಳುಕೂಡ ಈ ಯಶಸ್ಸಿನ ಒಂದು ಭಾಗವಾಗಿದ್ದಾರೆಂದು ಹೇಳಬಹುದು. ಆ ಮೂಲಕ ಸೇವೆಯಉದಾತ್ತ ಮೌಲ್ಯಗಳನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಮುಂದುವರಿಸಿಕೊಂಡು ಹೋಗುವ ಮಹತ್ವವನ್ನೂ ಅವರು ಒತ್ತಿ ಹೇಳಿದರು. 
ಹಣಕಾಸು ಖಾತೆ ಸಹಾಯಕ ಸಚಿವ ಶ್ರೀಯುತ ಪಂಕಜ್ ಚೌಧರಿ ಅವರುತಮ್ಮ ಭಾಷಣದಲ್ಲಿ ಪ್ರಶಸ್ತಿಗಳ ಆಯ್ಕೆಗೆ ಅಧಿಕಾರಿಗಳನ್ನು ಗುರುತಿಸಿ ಆಯ್ಕೆ ಮಾಡುವಲ್ಲಿ ಸಿಬಿಐಸಿಪಟ್ಟ   ಮೌಲ್ಯಮಾಪನದ ಕಠಿಣಶ್ರಮ ಮತ್ತು ಪಾರದರ್ಶಕ ಪ್ರಕ್ರಿಯೆಯನ್ನುಮುಕ್ತ ಕಂಠದಿಂದ  ಶ್ಲಾಘಿಸಿದರು. ಅನೇಕ ಅಡೆತಡೆಗಳನಡುವೆಯೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕರ್ತವ್ಯಗಳನ್ನುದಿಟ್ಟವಾಗಿ ನಿರ್ವಹಿಸಲು ಪ್ರಶಸ್ತಿ ವಿಜೇತರು ಮತ್ತು ಅವರ ಕುಟುಂಬಸದಸ್ಯರು ಮಾಡಿದ ತ್ಯಾಗಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 
ಈ ವೇಳೆ ಮಾತನಾಡಿದ ಹಣಕಾಸು ಖಾತೆ ಸಹಾಯಕ ಸಚಿವ ಶ್ರೀಯುತ  ಭಗವಂತ್‌ ಕಿಶನ್ ರಾವ್ ಕರಾಡ್‌ ಅವರು, ಸದೃಢ ರಾಷ್ಟ್ರ ನಿರ್ಮಾಣದಲ್ಲಿ ತೆರಿಗೆ ಸಂಗ್ರಹದ ಮಹತ್ವವನ್ನು ಒತ್ತಿ ಹೇಳಿದರು. ಪ್ರಶಸ್ತಿ ಪುರಸ್ಕೃತರನ್ನು ಅದರಲ್ಲೂ ವಿಶೇಷವಾಗಿ ಪ್ರಶಸ್ತಿಗೆ ಭಾಜನರಾದ ಮಹಿಳಾ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ, ಅವರು ಒಂದು ಕಡೆ ತಮ್ಮ ಕುಟುಂಬ ಮತ್ತೊಂದು ಕಡೆ ಕಚೇರಿಯ ಕರ್ತವ್ಯಗಳನ್ನು ನಿಭಾಯಿಸುವ ಮೂಲಕ  ವಿಶೇಷವಾದ ಸಾಧನೆ ಮಾಡಿದ್ದಾರೆ ಎಂದರು. 
ಪ್ರಶಸ್ತಿ ವಿಜೇತರು ಮತ್ತು ಅವರ ಕುಟುಂಬಗಳನ್ನು ಶ್ರೀಯುತ ತರುಣ್ ಬಜಾಜ್ ಅವರು,ಬಿಡುವಿಲ್ಲದಕೆಲಸದ ಕಾರ್ಯ ಒತ್ತಡದಲ್ಲೂ ಮೌಲ್ಯಮಾಪನ ಉಪಕ್ರಮದ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿನ್ನಕಳ್ಳಸಾಗಣೆ, ಮಾದಕ ವಸ್ತುಗಳ ಕಳ್ಳಸಾಗಣೆ, ನಿಷೇಧಿತ ವನ್ಯಜೀವಿ ಉತ್ಪನ್ನಗಳ ಕಳ್ಳಸಾಗಣೆ ತಡೆಯಲು ಮತ್ತು ತೆರಿಗೆ ವಂಚಕರನ್ನು ಪತ್ತೆ ಹಚ್ಚಲು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಇಲಾಖೆನಡೆಸುತ್ತಿರುವ ವಿನೂತನ ಪ್ರಯತ್ನಗಳು ಶ್ಲಾಘನೀಯ ಎಂದರು. 
ಸಿಬಿಐಸಿ ಅಧ್ಯಕ್ಷ ಶ್ರೀಯುತ ವಿವೇಕ್ ಜೋಹ್ರಿ ಅವರು ತಮ್ಮ ಸ್ವಾಗತ ಭಾಷಣದಲ್ಲಿ ಗಣ್ಯರನ್ನು ಸ್ವಾಗತಿಸಿದರು. ಕಠಿಣ ಪರಿಶ್ರಮ ಮತ್ತು ಸ್ಥಿರ ಪ್ರದರ್ಶನಕ್ಕಾಗಿ ಎಲ್ಲಾ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ ಅವರು, ಸಿಬಿಐಸಿಯ ಎಲ್ಲಾ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಗಳನ್ನು ಗಣನೆಗೆ ತೆಗೆದುಕೊಂಡು ಪಾರದರ್ಶಕ ಮತ್ತು ಕಠಿಣ ಪ್ರಕ್ರಿಯೆಮೂಲಕ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. 
ಸಿಬಿಐಸಿ ಸದಸ್ಯ ಶ್ರೀಯುತ ಬಾಲೇಶ್ ಕುಮಾರ್ ಅವರು ವಂದನೆಗಳನ್ನು ಸಲ್ಲಿಸಿದರು..
ತಮ್ಮ ಜೀವಕ್ಕೆ ಹಾಗೂ ವೈಯಕ್ತಿಕ ಸುರಕ್ಷತೆಗೂ ಸನ್ನಿಹಿತ ಅಪಾಯದ ಸಾಧ್ಯತೆ ಇದ್ದರೂ ಕರ್ತವ್ಯದಲ್ಲಿ ಅಸಾಧಾರಣ ಸಂಕಲ್ಪ ಮತ್ತು ಸಮರ್ಪಣಾ ಭಾವ ತೋರಿದ ಇಬ್ಬರು ಅಧಿಕಾರಿಗಳಿಗೆ “ ದಿ ಪ್ರೆಸಿಡೆನ್ಷಿಯಲ್‌ ಸರ್ಟಿಫಿಕೇಟ್‌ ಆಫ್‌ ಅಪ್ರಿಸಿಯೇಷನ್‌ ಫಾರ್‌ ಎಕ್ಸೆಪ್ಷೆನಲಿ ಮೆರಿಟೋರಿಯಸ್‌ ಸರ್ವೀಸ್‌ ಅಟ್‌ ರಿಸ್ಕ್‌ ಟು ಲೈಫ್‌”  ಪುರಸ್ಕಾರ ನೀಡಿ ಗೌರವಿಸಲಾಗಿದೆ. 
"ಸ್ಪೆಷಲಿ ಡಿಸ್ಟಿಂಗ್ವಿಷ್ಡ್‌ ರೆಕಾರ್ಡ್‌ ಆಫ್‌ ಸರ್ವೀಸ್‌”ಗಾಗಿ ರಾಷ್ಟ್ರಪತಿಗಳ ಮೆಚ್ಚುಗೆಯ ಪ್ರಮಾಣ ಪತ್ರವನ್ನು 2021ನೇ ಸಾಲಿಗೆ 22 ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮತ್ತು 2022ನೇ ಸಾಲಿಗೆ 29 ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡಲಾಗಿದೆ. ಇದು ಆಯಾ ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅವರು ತೋರಿದ ಅನುಕರಣೀಯ ಕಾರ್ಯಕ್ಷಮತೆಯನ್ನು ಗುರುತಿಸಿ ನೀಡಲಾಗಿದೆ. ಈ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಲವಾರು ವರ್ಷಗಳಿಂದ, ವಿವಿಧ ಕೆಲಸ ಕಾರ್ಯಗಳಲ್ಲಿ, ಸೇವೆಯ ಎಲ್ಲಾ ಶ್ರೇಣಿಗಳಲ್ಲಿ ಸಲ್ಲಿಸಿದ ಅಸಾಧಾರಣ ಸೇವೆಯು ಸಾರ್ವಜನಿಕ ಸೇವಾ ವಿತರಣೆಯ ಸುಧಾರಣೆಯಲ್ಲಿ ಮತ್ತು ದೇಶದ ಆರ್ಥಿಕ ಮಜಲುಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ವಸ್ತುಗಳ ಕಳ್ಳಸಾಗಣೆ ತಡೆಗಟ್ಟುವಿಕೆ, ತೆರಿಗೆ ವಂಚನೆಪತ್ತೆ, ಅಕ್ರಮ ಹಣ ವರ್ಗಾವಣೆ ವಹಿವಾಟು ಮತ್ತು ವಿದೇಶಿ ವಿನಿಮಯ ಕಾಯಿದೆಯ ಉಲ್ಲಂಘನೆ ಪ್ರಕರಣಗಳನ್ನು ಪತ್ತೆಹಚ್ಚುವುದು, ತೆರಿಗೆ ನೀತಿ ರಚನೆ, ಆದಾಯ ಕ್ರೋಡೀಕರಣ, ವ್ಯಾಪಾರ ಪ್ರಕ್ರಿಯೆಗಳ ಯಾಂತ್ರೀಕರಣ, ಸಾಮರ್ಥ್ಯ ವರ್ಧನೆ ಮತ್ತು ತರಬೇತಿ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಈ ಅಧಿಕಾರಿಗಳು ವಿಶಿಷ್ಟ ಸೇವೆ ಸಲ್ಲಿಸಿರುವರು. ಇಂತಹ ಸಾಧನೆಗಾಗಿ ಈ ಕೆಳಗಿನ ಅಧಿಕಾರಿಗಳು ರಾಷ್ಟ್ರಪತಿಗಳಿಂದ ಪ್ರಶಂಸಾ ಪ್ರಶಸ್ತಿಗೆ ಭಾಜನರಾದರು. 

 2021ನೇ ಸಾಲಿನ ಪ್ರಶಸ್ತಿ ವಿಜೇತರು 
“ಎಕ್ಸೆಪ್ಷೆನಲಿ ಮೆರಿಟೋರಿಯಸ್‌ ಸರ್ವೀಸ್‌ ಅಟ್‌ ರಿಸ್ಕ್‌ ಟು ಲೈಫ್‌”
1. ಶ್ರೀಯುತ ವಿಪಿನ್ ಪಾಲ್, ಗುಪ್ತಚರ ಅಧಿಕಾರಿ, ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ ಐ), ದೆಹಲಿ ವಲಯ ಘಟಕ, ಜೋಧ್‌ಪುರ. 
2. ಶ್ರೀಯುತ ಆಲ್ಬರ್ಟ್ ಜಾರ್ಜ್, ಗುಪ್ತಚರ ಅಧಿಕಾರಿ, ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ ಐ), ಕೊಚ್ಚಿನ್‌ವಲಯ ಘಟಕ.
"ಸ್ಪೆಷಲಿ ಡಿಸ್ಟಿಂಗ್ವಿಷ್ಡ್‌ ರೆಕಾರ್ಡ್‌ ಆಫ್‌ ಸರ್ವೀಸ್‌”"
ಪ್ರಧಾನ ಆಯುಕ್ತರು/ಆಯುಕ್ತರು
1. ಶ್ರೀಯುತ ಎಸ್. ತಿರುನಾವುಕ್ಕರಸು, ಹೆಚ್ಚುವರಿ ಮಹಾನಿರ್ದೇಶಕರು, ಸಿಸ್ಟಮ್ಸ್ ಮಹಾನಿರ್ದೇಶನಾಲಯ, ಚೆನ್ನೈ. 
2. ಶ್ರೀಯುತ ಅಮಿತೇಶ್ ಭರತ್ ಸಿಂಗ್, ಹೆಚ್ಚುವರಿ ಮಹಾ ನಿರ್ದೇಶಕರು, ತೆರಿಗೆದಾರ ಸೇವೆಗಳ ಮಹಾನಿರ್ದೇಶನಾಲಯ, ಬೆಂಗಳೂರು. 
ಜಿಲ್ಲಾಧಿಕಾರಿಗಳು/ಸಹಾಯಕ ಆಯುಕ್ತರು
3. ಶ್ರೀಯುತ ವೇಣುಗೋಪಾಲನ್ ನಾಯರ್, ಸಹಾಯಕ ನಿರ್ದೇಶಕರು, ನ್ಯಾಷನಲ್ ಅಕಾಡೆಮಿ ಆಫ್ ಕಸ್ಟಮ್ಸ್, ಪರೋಕ್ಷ ತೆರಿಗೆಗಳು ಮತ್ತು ಮಾದಕ ವಸ್ತುಗಳು (ಎನ್ಎಸಿಐಎನ್), ವಲಯ ತರಬೇತಿ ಸಂಸ್ಥೆ, ಚೆನ್ನೈ 
4. ಶ್ರೀಯುತ ದಿಬ್ಯೆಂದು ದಾಸ್, ಸಹಾಯಕ ನಿರ್ದೇಶಕರು, ಮಾನವ ಸಂಪನ್ಮೂಲ ಅಭಿವೃದ್ಧಿ ಮಹಾನಿರ್ದೇಶನಾಲಯ,  ನವದೆಹಲಿ. 
5. ಶ್ರೀಯುತ ವಿಜಯಸಿಂಹ ಪ್ರತಾಪಸಿಂಹ ಬಿಹೋಲಾ, ಸಹಾಯಕ ನಿರ್ದೇಶಕರು, ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ ಐ), ಗಾಂಧಿಧಾಮ ಪ್ರಾದೇಶಿಕ ಘಟಕ. 
ಅಧೀಕ್ಷಕರು / ಹಿರಿಯ ಗುಪ್ತಚರ ಅಧಿಕಾರಿಗಳು
6.  ಶ್ರೀಯುತ ಹಿಮಾಂಶು ಶೇಖರ್‌ ಶಾ, ಹಿರಿಯ ಗುಪ್ತಚರ ಅಧಿಕಾರಿ, ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ಮಹಾ ನಿರ್ದೇಶನಾಲಯ (ಡಿಜಿಜಿಐ), ಭುವನೇಶ್ವರ. 
7. ಶ್ರೀಯುತ ರಾಜೀವ್ ರಂಜನ್ ಕುಮಾರ್, ಹಿರಿಯ ಗುಪ್ತಚರ ಅಧಿಕಾರಿ, ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ಮಹಾ ನಿರ್ದೇಶನಾಲಯ (ಡಿಜಿಜಿಐ) ಪ್ರಧಾನ ಕಚೇರಿ, ನವದೆಹಲಿ. 
8. ಶ್ರೀಯುತ ಮೋಹನನ್ ಮಲೋತ್ ವಾಲಪ್ಪಿಲ್, ಹಿರಿಯ ಗುಪ್ತಚರ ಅಧಿಕಾರಿ, ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ಮಹಾ ನಿರ್ದೇಶನಾಲಯ(ಡಿಜಿಜಿಐ), ಕೊಚ್ಚಿನ್ ವಲಯ ಘಟಕ
9.  ಶ್ರೀಯುತ ಸುವಕಾಂತ ಪ್ರಧಾನ್, ಹಿರಿಯ ಗುಪ್ತಚರ ಅಧಿಕಾರಿ, ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ ಐ), ಹೈದರಾಬಾದ್ ವಲಯ ಘಟಕ.
10. ಶ್ರೀಯುತ ಸುಹ್ರುದ್ ಅವಿನಾಶ್ ರಾಬ್ಡೆ, ಹಿರಿಯ ಗುಪ್ತಚರ ಅಧಿಕಾರಿ, ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ ಐ), ಮುಂಬೈ ವಲಯ ಘಟಕ. 
11. ಶ್ರೀಯುತ ರಮಾಕಾಂತ್ ಯಶವಂತ್ ಮೋರೆ, ಹಿರಿಯ ಗುಪ್ತಚರ ಅಧಿಕಾರಿ, ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ ಐ), ಮುಂಬೈ ವಲಯ ಘಟಕ. 
12. ಶ್ರೀಯುತ ಪಿ. ಕನ್ನಾಬಿರನ್, ಹಿರಿಯ ಗುಪ್ತಚರ ಅಧಿಕಾರಿ, ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ ಐ), ಚೆನ್ನೈ ವಲಯ ಘಟಕ, ಕೊಯಮತ್ತೂರು.
13.  ಶ್ರೀಯುತ ಎ. ಲಕ್ಷ್ಮಿ ಕಾಂತನ್, ಹಿರಿಯ ಗುಪ್ತಚರ ಅಧಿಕಾರಿ, ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ ಐ), ಚೆನ್ನೈ ವಲಯ ಘಟಕ, ಕೊಯಮತ್ತೂರು
14. ಶ್ರೀಯುತ ಎಸ್. ವಿಜಯಕುಮಾರ್, ಹಿರಿಯ ಗುಪ್ತಚರ ಅಧಿಕಾರಿ, ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ ಐ), ಚೆನ್ನೈ ವಲಯ ಘಟಕ, ಕೊಯಮತ್ತೂರು.
15. ಶ್ರೀಯುತ ಅರ್ಘ್ಯ ಭಟ್ಟಾಚಾರ್ಯ, ಹಿರಿಯ ಗುಪ್ತಚರ ಅಧಿಕಾರಿ, ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ ಐ), ಕೋಲ್ಕೊತ್ತಾ ವಲಯ ಘಟಕ.
16. ಶ್ರೀಯುತ ಎಂ.ಕೆ. ಮಧಿವಣನ್‌, ಅಧೀಕ್ಷಕರು,ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ, ಚೆನ್ನೈ. 
17. ಶ್ರೀಯುತ ಮಹೇಶ್ ಕುಮಾರ್, ಅಧೀಕ್ಷಕರು, ಕೇಂದ್ರ ಸರಕು ಮತ್ತು ಸೇವಾ ತೆರಿಗೆ, ಬೆಂಗಳೂರು.
18. ಶ್ರೀಮತಿ ಅನಿತಾ ಜಾಧವ್‌,  ಅಧೀಕ್ಷರು, ಕೇಂದ್ರ ಸರಕು ಮತ್ತು ಸೇವಾ ತೆರಿಗೆ, ಪುಣೆ.
ಇನ್ಸ್ ಪೆಕ್ಟರ್/ ಗುಪ್ತಚರ ಅಧಿಕಾರಿಗಳು
19.  ಶ್ರೀಯುತ ಅಜಿತ್ ಸುರೇಶ್ ಲಿಮಾಯೆ,ಗುಪ್ತಚರ ಅಧಿಕಾರಿ, ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ಮಹಾ ನಿರ್ದೇಶನಾಲಯದ (ಡಿಜಿಜಿಐ), ಪುಣೆ ವಲಯ ಘಟಕ.
ಸಚಿವಾಲಯ ಅಧಿಕಾರಿಗಳು
20. ಶ್ರೀಯುತ ಪ್ರಸನ್ನ ವಿ.ಎಸ್. ಜೋಯಿಸ್, ಹಿರಿಯ ತಾಂತ್ರಿಕ ಸಹಾಯಕರು (ದೂರಸಂಪರ್ಕ), ಕಸ್ಟಮ್ಸ್ ಬೆಂಗಳೂರು. 
21. ಶ್ರೀಯುತ ಮದನ್ ದಾಸ್, ಚಾಲಕ ದರ್ಜೆ- 1, ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ ಐ), ಕೋಲ್ಕೊತ್ತಾ ವಲಯ ಘಟಕ. 
22. ಶ್ರೀಯುತ ರಾಜ್ ಪಾಲ್ ಸಿಂಗ್, ಚಾಲಕ ದರ್ಜೆ- 1, ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ ಐ) ಪ್ರಧಾನ ಕಚೇರಿ, ನವದೆಹಲಿ.

2022ನೇ ಸಾಲಿನ ಪ್ರಶಸ್ತಿ ವಿಜೇತರು 
"ಸ್ಪೆಷಲಿ ಡಿಸ್ಟಿಂಗ್ವಿಷ್ಡ್‌ ರೆಕಾರ್ಡ್‌ ಆಫ್‌ ಸರ್ವೀಸ್‌”

ಪ್ರಧಾನ ಆಯುಕ್ತರು/ಆಯುಕ್ತರು
1.    ಶ್ರೀಯುತ ರಾಜೇಶ್ ಪಾಂಡೆ, ಪ್ರಧಾನ ಹೆಚ್ಚುವರಿ ಮಹಾ ನಿರ್ದೇಶಕರು, ಕಂದಾಯ ಗುಪ್ತಚರ ನಿರ್ದೇಶನಾಲಯ, ಮುಂಬೈ ವಲಯ ಘಟಕ.
2.    ಶ್ರೀಯುತ ವಿ.ಬಿ. ಪ್ರಭಾಕರ್,ನಿರ್ದೇಶಕರು, ಸಂಪುಟ ಸಚಿವಾಲಯ, ನವದೆಹಲಿ.
ಹೆಚ್ಚುವರಿ ಆಯುಕ್ತರು / ಜಂಟಿ ಆಯುಕ್ತರು
3.    ಶ್ರೀಯುತ ಬಿಪಿನ್ ಕುಮಾರ್ ಉಪಾಧ್ಯಾಯ, ಹೆಚ್ಚುವರಿ ನಿರ್ದೇಶಕರು, ಕಂದಾಯ ಗುಪ್ತಚರ ನಿರ್ದೇಶನಾಲಯ, ಬೆಂಗಳೂರು ವಲಯ ಘಟಕ.
4.    ಶ್ರೀಯುತ ಸಮರ್ ನಂದಾ, ಹೆಚ್ಚುವರಿ ನಿರ್ದೇಶಕರು, ಜನರಲ್‌ ಅನಾಲಿಟಿಕ್ಸ್ ಮತ್ತು ರಿಸ್ಕ್‌ ಮ್ಯಾನೇಜ್‌ಮೆಂಟ್‌ ಮಹಾ  ನಿರ್ದೇಶನಾಲಯ, ನವದೆಹಲಿ.
ಜಿಲ್ಲಾಧಿಕಾರಿಗಳು/ಸಹಾಯಕ ಆಯುಕ್ತರು
5.    ಶ್ರೀಯುತ ಎ. ವೆಂಕಟೇಶ್‌ ಬಾಬು, ಸಹಾಯಕ ಆಯುಕ್ತರು, ಕಸ್ಟಮ್ಸ್ (ತಡೆಗಟ್ಟುವ) ವಲಯ, ತಿರುಚಿರಾಪಳ್ಳಿ.
6.    ಶ್ರೀಯುತ ಆನಂದ್ ಕುಮಾರ್ ಸವಳಂ, ಸಹಾಯಕ ಆಯುಕ್ತರು, ಕಸ್ಟಮ್ಸ್ ವಲಯ, ಚೆನ್ನೈ.
ಅಧೀಕ್ಷಕರು / ಹಿರಿಯ ಗುಪ್ತಚರ ಅಧಿಕಾರಿಗಳು / ಹೆಚ್ಚುವರಿ ಸಹಾಯಕ ನಿರ್ದೇಶಕರು
7.     ಶ್ರೀಯುತ ವಂಡಾವಾಸಿ ದೊರಕಂಟಿ ಚಂದ್ರಶೇಖರ್, ಹಿರಿಯ ಗುಪ್ತಚರ ಅಧಿಕಾರಿ, ಸರಕು ಮತ್ತು ಸೇವೆಗಳ ತೆರಿಗೆ ಗುಪ್ತಚರ ಮಹಾ ನಿರ್ದೇಶನಾಲಯ, ವಿಶಾಖಪಟ್ಟಣಂ ವಲಯ ಘಟಕ.
8.    ಶ್ರೀಯುತ ಅಜಿತ್ ವಿಶ್ರಾಮ್ ಸಾವಂತ್, ಹಿರಿಯ ಗುಪ್ತಚರ ಅಧಿಕಾರಿ, ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ಮಹಾ ನಿರ್ದೇಶನಾಲಯ, ಮುಂಬೈ ವಲಯ ಘಟಕ; 
9.    ಶ್ರೀಮತಿ ನಿರ್ಮಲಾ ಮೆನನ್ ಕಾಳೆ, ಹೆಚ್ಚುವರಿ ಸಹಾಯಕ ನಿರ್ದೇಶಕಿ, ಮಾನವ ಸಂಪನ್ಮೂಲ ಅಭಿವೃದ್ಧಿ ಮಹಾ ನಿರ್ದೇಶನಾಲಯ, ನವದೆಹಲಿ.
10.     ಶ್ರೀಯುತ ಶರದ್ ಕುಮಾರ್ ತ್ರಿಪಾಠಿ, ಅಧೀಕ್ಷಕರು, ಕೇಂದ್ರ ಸರಕು ಮತ್ತು ಸೇವಾ ತೆರಿಗೆ ವಲಯ, ಭೋಪಾಲ್.
11.     ಶ್ರೀಮತಿ ಎಲ್.ಅಪರ್ಣಾ, ಅಧೀಕ್ಷಕರು, ಕೇಂದ್ರ ಸರಕು ಮತ್ತು ಸೇವಾ ತೆರಿಗೆ ವಲಯ, ಚೆನ್ನೈ.
12.     ಶ್ರೀಮತಿ ವೀಣಾ ರಾವ್, ಅಧೀಕ್ಷರು, ಕಸ್ಟಮ್ಸ್‌ (ತಡೆಗಟ್ಟುವ) ವಲಯ, ನವದೆಹಲಿ..
13.    ಶ್ರೀಯುತ ಅವಧೂತ್ ಬಿ.  ಖಾದಿಲ್ಕರ್, ಅಧೀಕ್ಷಕರು, ಕೇಂದ್ರ ಸರಕು ಮತ್ತು ಸೇವಾ ತೆರಿಗೆ ವಲಯ, ಪುಣೆ.
14.     ಶ್ರೀಯುತ ಎಸ್. ಕಲ್ಯಾಣಿ ಸುಂದರಿ ನಾಗರಾಜನ್, ಹಿರಿಯ ಗುಪ್ತಚರ ಅಧಿಕಾರಿ, ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ಮಹಾ ನಿರ್ದೇಶನಾಲಯ, ಕೊಯಮತ್ತೂರು ವಲಯ ಘಟಕ. 
15.     ಶ್ರೀಯುತ ಬ್ರಿಜೇಂದ್ರ ಸಿಂಗ್, ಹಿರಿಯ ಗುಪ್ತಚರ ಅಧಿಕಾರಿ, ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ಮಹಾ ನಿರ್ದೇಶನಾಲಯ, ಲಖನೌ ವಲಯ ಘಟಕ.
16.     ಶ್ರೀಯುತ ಎಸ್. ವೆಂಕಟ ಸುಬ್ರಮಣ್ಯಂ, ಅಧೀಕ್ಷಕರು, ಕೇಂದ್ರ ಸರಕು ಮತ್ತು ಸೇವಾ ತೆರಿಗೆ ವಲಯ, ಮುಂಬೈ.
17.     ಶ್ರೀಯುತ  ಶ್ರೀಶ್‌ ಟಿ.ಕೆ, ಹಿರಿಯ ಗುಪ್ತಚರ ಅಧಿಕಾರಿ, ಕಂದಾಯ ಗುಪ್ತಚರ ನಿರ್ದೇಶನಾಲಯ, ಕೊಚ್ಚಿನ್ ವಲಯ ಘಟಕ.
18.     ಶ್ರೀಯುತ ರಂಜನ್ ಸೇನ್, ಹಿರಿಯ ಗುಪ್ತಚರ ಅಧಿಕಾರಿ, ಕಂದಾಯ ಗುಪ್ತಚರ ನಿರ್ದೇಶನಾಲಯ, ಕೋಲ್ಕತ್ತಾ ವಲಯ ಘಟಕ.
19.     ಶ್ರೀಯುತ ಕರ್ರಿ ವೆಂಕಟ ಮೋಹನ್ ರಾವ್, ಹೆಚ್ಚುವರಿ ಸಹಾಯಕ ನಿರ್ದೇಶಕರು, ರಾಷ್ಟ್ರೀಯ ಕಸ್ಟಮ್ಸ್ ಅಕಾಡೆಮಿ, ಪರೋಕ್ಷ ತೆರಿಗೆ ಮತ್ತು ಮಾದಕ ವಸ್ತು, ವಿಶಾಖಪಟ್ಟಣಂ.
20.     ಶ್ರೀಯುತ ಗಿರೀಶ್‌  ಗುಪ್ತಾ, ಅಧೀಕ್ಷಕರು, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಖಾತೆ ಸಹಾಯಕ ಸಚಿವರ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ (ಸ್ವತಂತ್ರ ಉಸ್ತುವಾರಿ), ನವದೆಹಲಿ. 
21.     ಶ್ರೀಯುತ ವಿವೇಕ್ ವಿ. , ಅಧೀಕ್ಷಕರು, ಕಸ್ಟಮ್ಸ್ ಮತ್ತು ಕೇಂದ್ರ ಸರಕುಮತ್ತು ಸೇವಾ ತೆರಿಗೆ ವಲಯ, ತಿರುವನಂತಪುರಂ.
22.    ಶ್ರೀಮತಿ ಎನ್. ಕೃಷ್ಣವೇಣಿ, ಹಿರಿಯ ಗುಪ್ತಚರ ಅಧಿಕಾರಿ,ಕಂದಾಯ ಗುಪ್ತಚರ ನಿರ್ದೇಶನಾಲಯ, ಬೆಂಗಳೂರು ವಲಯ ಘಟಕ.
23.     ಶ್ರೀಯುತ ರಾಕೇಶ್ ರಂಜನ್, ಹಿರಿಯ ಗುಪ್ತಚರ ಅಧಿಕಾರಿ,ಕಂದಾಯ ಗುಪ್ತಚರ ನಿರ್ದೇಶನಾಲಯ, ಲಖನೌ ವಲಯ ಘಟಕ.
24.     ಶ್ರೀಯುತ  ಎಸ್. ಕರುಣಾಕರನ್, ಹಿರಿಯ ಗುಪ್ತಚರ ಅಧಿಕಾರಿ, ಕಂದಾಯ ಗುಪ್ತಚರ ನಿರ್ದೇಶನಾಲಯ, ಚೆನ್ನೈ ವಲಯ ಘಟಕ
25.     ಶ್ರೀಯುತ ವಿ. ಬಾಲಾಜಿ, ಹಿರಿಯ ಗುಪ್ತಚರ ಅಧಿಕಾರಿ, ಕಂದಾಯ ಗುಪ್ತಚರ ನಿರ್ದೇಶನಾಲಯ, ಚೆನ್ನೈ ವಲಯ ಘಟಕ.
ಇನ್ಸ್ ಪೆಕ್ಟರ್  / ಗುಪ್ತಚರ ಅಧಿಕಾರಿಗಳು
26.     ಶ್ರೀಯುತ ಸನ್ಸಾರ್‌ ಸಿಂಗ್, ಗುಪ್ತಚರ ಅಧಿಕಾರಿ, ಕಂದಾಯ ಗುಪ್ತಚರ ನಿರ್ದೇಶನಾಲಯ, ಕೇಂದ್ರ ಕಚೇರಿ, ನವದೆಹಲಿ.
ಸಚಿವಾಲಯ ಅಧಿಕಾರಿಗಳು
27.     ಶ್ರೀಯುತ ಪ್ರಬೋಧ್‌ ಕುಮಾರ್ ಉಪಾಧ್ಯಾಯ, ಹಿರಿಯ ಅನುವಾದಕ, ಕಾನೂನು ವ್ಯವಹಾರಗಳ ನಿರ್ದೇಶನಾಲಯ, ನವದೆಹಲಿ.
28.     ಶ್ರೀಯುತ ದೀಪಕ್ ಸಿಂಗ್, ಆಡಳಿತ ಅಧಿಕಾರಿ, ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ಮಹಾ ನಿರ್ದೇಶನಾಲಯ, ದೆಹಲಿ ವಲಯ ಘಟಕ.
29.    ಶ್ರೀಯುತ ಸೂರ್ಯಕಾಂತ್ ಕಾಶಿರಾಮ್ ವಾಜೆ, ಮುಖ್ಯಸ್ಥ ಹವಾಲ್ದಾರ್, ಕಂದಾಯ ಗುಪ್ತಚರ ನಿರ್ದೇಶನಾಲಯ, ಮುಂಬೈ ವಲಯ ಘಟಕ.

****



(Release ID: 1803841) Visitor Counter : 175


Read this release in: English