ನೌಕಾ ಸಚಿವಾಲಯ
azadi ka amrit mahotsav

ಮ್ಯಾರಿಟೈಮ್ ಇಂಡಿಯಾ ವಿಷನ್ 2030 ಅಡಿ ನವ ಮಂಗಳೂರಿನಲ್ಲಿ ಕೈಗೊಂಡಿರುವ ಹಸಿರು ಬಂದರು ಉಪಕ್ರಮಗಳು

Posted On: 30 JAN 2022 5:05PM by PIB Bengaluru

ಅರಬ್ಬೀ ಸಮುದ್ರದ ನೀಲ ಜಲ ಮತ್ತು ಪಶ್ಚಿಮ ಘಟ್ಟಗಳ ಹಸಿರು ಹೊದಿಕೆಯ ನಡುವೆ ನೆಲೆಸಿರುವ ನವ ಮಂಗಳೂರು ಬಂದರು, ಕಳೆದ ಐದು ದಶಕಗಳಲ್ಲಿ ಪರಿಸರದ ಪ್ರಮುಖ ಮತ್ತು ನಿರ್ಣಾಯಕ ಅಂಶಗಳಿಗೆ ಧಕ್ಕೆಯಾಗದಂತೆ ವ್ಯಾಪಾರ ಮತ್ತು ವಾಣಿಜ್ಯದ ವಿಷಯದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದೆ. ಬಂದರುಗಳು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವಾಲಯದ ಮಹತ್ವಾಕಾಂಕ್ಷೆಯ ಯೋಜನೆಯಾದ “ಮ್ಯಾರಿಟೈಮ್ ಇಂಡಿಯಾ ವಿಷನ್ 2030”, ಭಾರತೀಯ ಸಾಗರವನ್ನು ಕೂಲಂಕಷವಾಗಿ ಪರಿಶೀಲಿಸುವ ಉದ್ದೇಶದಿಂದ ಹಸಿರು ಬಂದರು ಉಪಕ್ರಮಗಳಿಗೆ ಒತ್ತು ನೀಡಿದೆ, ಅದರಡಿಯಲ್ಲಿ 2030ರ ವೇಳೆಗೆ ಶೇ.60ಕ್ಕೂ ಅಧಿಕ ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಪಾಲನ್ನು ಹೆಚ್ಚಿಸಿಕೊಳ್ಳುವ ಗುರಿಯೊಂದಿಗೆ ಹಸಿರು ಸುಸ್ಥಿರ ಬಂದರುಗಳ ಅಭಿವೃದ್ಧಿಯನ್ನು ಯೋಜಿಸಿದೆ. ಆ ನಿಟ್ಟಿನಲ್ಲಿ ನವ ಮಂಗಳೂರು ಬಂದರು ಸುಧಾರಿತ ಪರಿಸರ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ನಾನಾ ಉಪಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. 
ಬಂದರು ತನ್ನ ಸುತ್ತಮುತ್ತಲಿನ ಸುತ್ತಲೂ ಹಸಿರು ಹೊಂದಿಕೆಯನ್ನು ಹೊಂದಿದೆ ಮತ್ತು ಅದರ ಭೂ ಪ್ರದೇಶದ ಶೇ.33 ಅನ್ನು ಪ್ರತ್ಯೇಕವಾಗಿ ಹಸಿರಿಗಾಗಿ ಮೀಸಲಿಟ್ಟಿದೆ. ಕಳೆದ 5 ವರ್ಷಗಳಿಂದ 1 ಲಕ್ಷ ಸಸಿಗಳನ್ನು ನೆಡಲಾಗಿದೆ ಮತ್ತು ಆ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ. ಐಎಸ್ ಒ 14001 ಪ್ರಮಾಣೀಕೃತವಾಗಿರುವುದರಿಂದ, ಎನ್ ಎಂ ಪಿ ತನ್ನ ಯೋಜನೆ ಮತ್ತು ದೂರದೃಷ್ಟಿಯನ್ನು ಹೊಂದಿದ್ದು ಮತ್ತು ಉತ್ತಮ ಫಲಿತಾಂಶಗಳನ್ನು ಸಾಧಿಸಲು ಅಹರ್ನಿಶಿ ಶ್ರಮಿಸುತ್ತದೆ. ಮ್ಯಾನೇಜ್‌ಮೆಂಟ್‌ನ ಸಾಮೂಹಿಕ ದೃಷ್ಟಿಕೋನದಿಂದಾಗಿ ಬಂದರಿನಲ್ಲಿದ್ದ ‘ಕುಡಿಯುವ ನೀರು’ ಮತ್ತು ‘ಕೊಳಚೆನೀರಿನ ವ್ಯವಸ್ಥೆ’ ಸಮಸ್ಯೆಯನ್ನು ಪರಿಹರಿಸಲಾಗಿದೆ. ಬಂದರು ಪ್ರದೇಶದೊಳಗೆ 1.20 ಎಂಎಲ್ ಡಿ ಸಾಮರ್ಥ್ಯದ ಕೊಳಚೆನೀರಿನ ಸಂಸ್ಕರಣಾ ಘಟಕವನ್ನು ಅಭಿವೃದ್ಧಿಪಡಿಸಿದೆ. ಈ ಎಸ್ ಟಿಪಿ ಯು ಟೌನ್‌ಶಿಪ್‌ನ ಮತ್ತು ಬಂದರಿನ ಒಳಗೂ ಗೃಹಬಳಕೆಯ ಒಳಚರಂಡಿ ಹೊಂದುವುದನ್ನು ಸಕ್ರಿಯಗೊಳಿಸಲಾಗಿದೆ. ಸಂಸ್ಕರಿಸಿದ ನೀರನ್ನು ಹಸಿರು ವಲಯಕ್ಕೆ ನೀರುಣಿಸಲು ಮತ್ತು ಕಾರ್ಯಾಚರಣೆಯ ಪ್ರದೇಶಗಳಲ್ಲಿ ನೀರನ್ನು ಚಿಮುಕಿಸಲು ಬಳಸಲಾಗುತ್ತದೆ. ಬಂದರು ಬಂದರಿಗೆ ಭೇಟಿ ನೀಡುವ ಹಡಗುಗಳಿಗೆ ಸ್ಲೋಪ್ ರಿಸೆಪ್ಷನ್ ಸೌಲಭ್ಯವನ್ನು ಸ್ಥಾಪಿಸಿದೆ ಮತ್ತು ಅಪಾಯಕಾರಿ ತ್ಯಾಜ್ಯಗಳನ್ನು ಅಧಿಕೃತ ಮರುಬಳಕೆದಾರರ ಮೂಲಕ ಮಾತ್ರ ವಿಲೇವಾರಿ ಮಾಡುವುದನ್ನು ಖಚಿತಪಡಿಸುತ್ತದೆ. ತೈಲ ಸೋರಿಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿಯಂತ್ರಿಸಲು ಬಂದರು ತೈಲ ಸೋರಿಕೆ ನಿರ್ವಹಣಾ ಯೋಜನೆಯನ್ನು ಅಭಿವೃದ್ಧಿಪಡಿಸಿದೆ. 
ಎನ್ ಒಎಸ್ ಡಿಸಿಪಿಯ ಅನುಸರಣೆಯಲ್ಲಿ ತೈಲ ಮಾಲಿನ್ಯದ ಅಭ್ಯಾಸಗಳನ್ನು ನಿಯಮಿತವಾಗಿ ನಡೆಸಲಾಗುತ್ತದೆ ಮತ್ತು ಐಸಿಜಿಯು ಶ್ರೇಣಿ-I ಒಎಸ್ ಆರ್  ಸೌಲಭ್ಯವನ್ನು ಅನುಸರಿಸುವ ಮೂಲಕ 2017 ರಲ್ಲಿ ಅದರ ಒಎಸ್ ಸಿಪಿಆರ್ ಪಿಯ ಅನುಮೋದನೆಯನ್ನು ದಾಖಲಿಸಿದ ಮೊದಲ ಪೋರ್ಟ್ ಆಗಿದೆ. ನೀರಿನ ಅವಶ್ಯಕತೆಯನ್ನು ಪೂರೈಸಲು, ಬಂದರು ಮಳೆ ನೀರನ್ನು ಕೊಯ್ಲು ಮಾಡಲು ಸಮಗ್ರ ಯೋಜನೆಯನ್ನು ರೂಪಿಸಿದೆ. ಆ ದಿಕ್ಕಿನಲ್ಲಿ, ಬಂದರು ಪ್ರದೇಶದೊಳಗೆ 1,10,340 ಸಿಯುಎಂ ನೀರಿನ ಸಾಮರ್ಥ್ಯದೊಂದಿಗೆ 64,217 ಚದರ ಮೀಟರ್ ವ್ಯಾಪ್ತಿಯ ಜಲಾನಯನ ಪ್ರದೇಶಗಳಲ್ಲಿ 3 ದೊಡ್ಡ ಜಲಮೂಲಗಳನ್ನು ರಚಿಸಲಾಗಿದೆ. ಜಲಮೂಲಗಳ ಸೃಷ್ಟಿಯಿಂದಾಗಿ ಸಮೀಪದ ಗ್ರಾಮದ ಬಾವಿಗಳಲ್ಲಿಯೂ ನೀರಿನ ಮಟ್ಟ ಮರುಪೂರಣಗೊಂಡಿದೆ. ಬಂದರು ಈಗ ತನ್ನ ನೀರಿನ ಅವಶ್ಯಕತೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. 
ಬಂದರು ಕಟ್ಟಡಗಳ ಮೇಲ್ಭಾವಣಿಯಲ್ಲಿ ರೂಫ್ ಟಾಪ್ ಸೌರಫಲಕಗಳ ಜೊತೆಗೆ 5.2 ಎಂ.ವ್ಯಾಟ್ ಸೌರ ಸ್ಥಾವರವನ್ನು ಸ್ಥಾಪಿಸಿದೆ ಮತ್ತು ಒಟ್ಟು ರೂ. 33.75 ಕೋಟಿ ವೆಚ್ಚದಲ್ಲಿ ದಾಸ್ತಾನು ಶೆಡ್ ಗಳನ್ನು ನಿರ್ಮಿಸಿದೆ. ಬಂದರು ಡಿಸೆಂಬರ್ 2021 ರವರೆಗೆ ಒಟ್ಟು 34.95 ಮಿಲಿಯನ್ ಕೆಡಬ್ಲೂಎಚ್ ಸೌರ ಶಕ್ತಿಯನ್ನು ಉತ್ಪಾದಿಸಿದೆ ಮತ್ತು ಸೌರ ಫಲಕಗಳಿಂದ ತನ್ನ ವಿದ್ಯುತ್ ಅಗತ್ಯದ ಶೇ.100ರಷ್ಟನ್ನು ಪೂರೈಸುವ  ಕ್ರೆಡಿಟ್ ಅನ್ನು ಸಾಧಿಸಿದೆ. ಈ ಕಾರಣದಿಂದಾಗಿ ಸುಮಾರು 29,709 ಟನ್‌ಗಳಷ್ಟು ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡಲಾಗಿದೆ (ಡಿಸೆಂಬರ್ 2021 ರವರೆಗೆ) ಮತ್ತು 5 ವರ್ಷಗಳಲ್ಲಿ ಬಂದರಿಗೆ ಸರಿ ಸುಮಾರು 23 ಕೋಟಿ ವಿದ್ಯುತ್ ಬಿಲ್ ಉಳಿತಾಯವಾಗಿದೆ. 
ಬಂದರು ಎಲ್‌ಇಡಿ ವಿದ್ಯುತ್ ವ್ಯವಸ್ಥೆಗೆ ಪರಿವರ್ತನೆಗೊಂಡಿದೆ, ಇದು ಹೆಚ್ಚು ಪರಿಸರ ಸ್ನೇಹಿ ಮತ್ತು ವಿದ್ಯುತ್ ಉಳಿತಾಯದ್ದಾಗಿದೆ. ಎಂಐವಿ 2030ರ ಅಡಿಯಲ್ಲಿ ಹಸಿರು ಬಂದರು ಉಪಕ್ರಮಗಳ ಪ್ರಕಾರ ಕಾರ್ಯಾಚರಣೆಯ ಪ್ರದೇಶಗಳಲ್ಲಿ ಧೂಳಿನ ಮಾಲಿನ್ಯವನ್ನು ತಗ್ಗಿಸಲು ಬಂದರು ತನ್ನ ಕಾರ್ಯಾಚರಣೆಗಳಲ್ಲಿ ಸುಮಾರು ಶೇ.90 ರಷ್ಟು ಯಾಂತ್ರೀಕರಣಗೊಳಿಸಿದೆ. ಕಲ್ಲಿದ್ದಲು, ಐಒಪಿ, ಸಿಮೆಂಟ್ ಇತ್ಯಾದಿಗಳ ನಿರ್ವಹಣೆಯು ಈಗ ಸಂಪೂರ್ಣವಾಗಿ ಯಾಂತ್ರೀಕೃತಗೊಂಡಿದೆ. ಇ-ವಾಹನಗಳ ಬಳಕೆಯಲ್ಲಿಯೂ ಬಂದರು ಹಿಂದುಳಿದಿಲ್ಲ. ಎಲ್ಲಾ ಬಂದರು ವಾಹನಗಳನ್ನು ಹಂತ ಹಂತವಾಗಿ ಎಲೆಕ್ಟ್ರಿಕಲ್ ವಾಹನಗಳಾಗಿ ಬದಲಾಯಿಸಲಾಗುವುದು. ಬಹು-ಶುದ್ಧ ಇಂಧನ ವಾಹನಗಳನ್ನು ಅಳವಡಿಸಿಕೊಳ್ಳುವ ದೃಷ್ಟಿಯಿಂದ ಬಂದರಿನ ಒಳಗೆ ಕಾರ್ಯಾಚರಣೆಯ ಪ್ರದೇಶಗಳಲ್ಲಿ ಸಾರಿಗೆಗಾಗಿ ಎರಡು ಎಲೆಕ್ಟ್ರಿಕ್ ಬಸ್‌ಗಳನ್ನು ಬಾಡಿಗೆಗೆ ಪಡೆಯಲಾಗುತ್ತದೆ.
ಭವಿಷ್ಯದ ಯೋಜನೆಗಳ ಭಾಗವಾಗಿ ಬಂದರು ವಸತಿ ಪ್ರದೇಶ ಮತ್ತು ಬಂದರು ಆವರಣದಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯವನ್ನು ನಿರ್ವಹಿಸಲು ವಿಶೇಷವಾದ ಆಂತರಿಕ ಸೌಲಭ್ಯವನ್ನು ನಿರ್ಮಿಸುತ್ತದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳ ಪ್ರಕಾರ ಬಂದರಿನಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಅಧಿಕೃತ ಮರುಬಳಕೆದಾರರ ಮೂಲಕ ಪ್ರತ್ಯೇಕಿಸಿ ವಿಲೇವಾರಿ ಮಾಡಲಾಗುತ್ತದೆ. ಬಂದರಿನ ನೀರಿನಲ್ಲಿ ಡ್ರೆಡ್ಜಿಂಗ್ ಮೂಲಕ ಉತ್ಪತ್ತಿಯಾಗುವ ವಸ್ತುಗಳನ್ನು ಮರುಬಳಕೆ ಮಾಡುವ ದೃಷ್ಟಿಯಿಂದ ಕೆಲಸದ ಕಾರ್ಯಸಾಧ್ಯತೆಯ ಅಧ್ಯಯನವನ್ನು ಎನ್ ಟಿಸಿಪಿಡಬ್ಲೂ ಸಿ, ಐಐಟಿ (ಚೆನ್ನೈ) ಗೆ ವಹಿಸಲಾಗಿದೆ. ಎನ್‌ಎಂಪಿಗೆ ಬರುವಂತೆ ಮಾಡುವ ಹಡಗುಗಳ ಎಲ್‌ಎನ್‌ಜಿ ಬಂಕರ್‌ಗೆ ಅನುಕೂಲವಾಗುವಂತೆ ಎಲ್‌ಎನ್‌ಜಿ ಟರ್ಮಿನಲ್‌ನ ಸ್ಥಾಪನೆಯ ಸಾಧ್ಯತೆಗಳನ್ನು ಸಹ ಬಂದರು ಅನ್ವೇಷಿಸುತ್ತಿದೆ. 
ಅಲ್ಲದೆ, ಬಂದರು ಐಎಸ್ ಒ 14001 ಮತ್ತು ಮಾರ್ಪೋಲ್ ಅನ್ನು ಕಾರ್ಯಗತಗೊಳಿಸಿದೆ ಮತ್ತು ಅಂತಾರಾಷ್ಟ್ರೀಯ ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತಾ ನಿರ್ವಹಣಾ ಪ್ರಮಾಣೀಕರಣ ಒಎಚ್ ಎಸ್ ಎಚ್ ಎಸ್  18001 ಅನ್ನು ಕಾರ್ಯಗತಗೊಳಿಸಲು ಪ್ರಕ್ರಿಯೆ ಜಾರಿಯಲ್ಲಿದೆ. 
 ಬಂದರುಗಳು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವರಾದ ಮಾನ್ಯ ಶ್ರೀ ಸರ್ಬಾನಂದ ಸೋನೊವಾಲ್ ಅವರು ಇಂದು (29.01.2022) MIV 2030 ರ ಪ್ರಕಾರ ಜಾರಿಗೊಳಿಸಲಾಗುತ್ತಿರುವ ನಾನಾ ಹಸಿರು ಬಂದರು ಉಪಕ್ರಮಗಳ ಪ್ರಗತಿಯನ್ನು ಪರಿಶೀಲಿಸಲು ಎಲ್ಲಾ ಪ್ರಮುಖ ಬಂದರುಗಳು, ಸಿಎಸ್ ಐಎಲ್ ಮತ್ತು ಐಡಬ್ಲೂಎಐ ಗಳೊಂದಿಗೆ ವರ್ಚುವಲ್ ಸಭೆಯನ್ನು ನಡೆಸಿದರು. 

***


(Release ID: 1793685) Visitor Counter : 160


Read this release in: English