ವಿಶೇಷ ಸೇವೆ ಮತ್ತು ನುಡಿಚಿತ್ರ

ಇಂದಿನ ಸಂಕಷ್ಟದ ಸಂದರ್ಭದಲ್ಲಿ ಸ್ವಾವಲಂಬನೆ ಅತ್ಯಗತ್ಯ: ಸಚಿವೆ ಶೋಭಾ ಕರಂದ್ಲಾಜೆ

Posted On: 06 OCT 2021 6:00PM by PIB Bengaluru

ಸ್ವತಃ ನೂಲು ತೆಗೆದು ಬಟ್ಟೆ ತಯಾರಿಸಿ ಸ್ವಾವಲಂಬನೆಗೆ ಮಹತ್ವ ನೀಡಿದ್ದವರು ಗಾಂಧೀಜಿ. ಸ್ವದೇಶೀ ವಸ್ತುಗಳ ಬಳಕೆಗೆ ಕರೆ ನೀಡಿ ಜನರಲ್ಲಿ ಸ್ವದೇಶೀ ಚಿಂತನೆಗೆ ಜಾಗೃತಿ ಮೂಡಿಸಿದ ಗಾಂಧೀಜಿಯವರು ಕೇವಲ ಸ್ವಾತಂತ್ರ್ಯಹೋರಾಟವನ್ನು ಮಾತ್ರ ಮಾಡಲಿಲ್ಲ ಜತೆಗೆ ಭಾರತೀಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವತ್ತ ಕೂಡ ಪ್ರಾಮುಖ್ಯ ನೀಡಿದರು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಸುಶ್ರೀ ಶೋಭಾ ಕರಂದ್ಲಾಜೆ ಹೇಳಿದರು.

ಬೆಂಗಳೂರಿನಲ್ಲಿಂದು ಆರಂಭವಾದ ಐದು ದಿನಗಳ ಕರಕುಶಲ ಹಾಗು ಕೈಮಗ್ಗದ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟದ ಪವಿತ್ರ ವಸ್ತ್ರ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಭಾರತವನ್ನು ಸ್ವಾವಲಂಬೀ ರಾಷ್ಟ್ರವನ್ನಾಗಿಸಿ ಗ್ರಾಮರಾಜ್ಯದ ಮೂಲಕ ರಾಮರಾಜ್ಯದ ಕನಸನ್ನು ಕಂಡವರು ಗಂಧೀಜಿ. ಇಂದಿನ ಸಾಂಕ್ರಾಮಿಕದ ಸಂಕಷ್ಟದ ಸಂದರ್ಭದಲ್ಲಿ ಸ್ವಾವಲಂಬನೆಯ ಬದುಕು ಮುಖ್ಯ ಅದರಲ್ಲೂ ರೈತರು ಮತ್ತು ನೇಕಾರರು ಸ್ವಾವಲಂಬಿಗಳಾದಾಗ ಅದರಿಂದ ಬೇರೆ ಜನರಿಗೂ ಉದ್ಯೋಗ ದೊರೆಯುತ್ತದೆ. ನಿಟ್ಟಿನಲ್ಲಿ ಪ್ರಸನ್ನ ಅವರ ಪವಿತ್ರ ವಸ್ತ್ರ ಅಭಿಯಾನದ ಕಾರ್ಯ ಪ್ರಶಂಸನಾರ್ಹ. ಮೂಲಕ ಗಾಂಧೀ ಮಾರ್ಗ ಪ್ರಸ್ತುತಕ್ಕೂ ಅನಿವಾರ್ಯ ಎಂಬುದನ್ನು ತೋರಿಸಿದೆ ಎಂದರು."

ಕಾರ್ಯಕ್ರಮದಲ್ಲಿ ಮಾತನಾಡಿದ ರಂಗಕರ್ಮಿ ಹಾಗು ಕೈಮಗ್ಗ ವಸ್ತ್ರಗಳ ಹೋರಾಟಗಾರ ಪ್ರಸನ್ನ, ಕಲಬೆರಕೆ ಖಾದಿ, ಕೈಮಗ್ಗದ ತಡೆಯಲು ತಂತ್ರಜ್ಞಾನ ಅಭಿವೃದ್ಧಿ ಗೊಳಿಸಿರುವ ಕುರಿತು ಹಾಗೂ ಕರ್ನಾಟಕದ ಕಾರಾಗಾರಗಳಲ್ಲಿ ಮುಖ್ಯವಾಗಿ ಮಹಿಳೆಯರು ಕೈಮಗ್ಗ ಉತ್ಪಾದನೆ ಮಾಡುತ್ತಿದ್ದು ಅದನ್ನು ಪ್ರೋತ್ಸಾಹಿಸುವಂತೆ ಕೋರಿದರು.

ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಸಚಿವೆ ಸಂಬಂಧಪಟ್ಟ ಸಚಿವಾಲಯ ಗಮನಕ್ಕೆ ತಂದು ನಿಟ್ಟಿನೆಡೆಗೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಉಡುಪಿ ಸೀರೆ ನೇಕಾರರ ಪರವಾಗಿ ತಾವು ಪ್ರೋತ್ಸಾಹ ನೀಡಿದ್ದು, ಅದೇ ರೀತಿಯಲ್ಲಿ ಇತರ ನೇಕಾರರ ಪರವಾಗಿ ನಿಲ್ಲತ್ತೇನೆಂದರು.

ಪವಿತ್ರ ವಸ್ತ್ರ ಅಭಿಯಾನದಲ್ಲಿ ಚರಕ, ದೇಸಿ ಸಂಸ್ಥೆಯು ಕೋವಿಡ್ ಸಮಯದಲ್ಲಿ ಹೊರತಂದ  ನೈಸರ್ಗಿಕ ಬಣ್ಣದ ಹೊಸ ಶೈಲಿಯ, ಪ್ರಿಂಟ್ಗಳ ಪದಾರ್ಥಗಳೊಂದಿಗೆ, ದೇಶದ ಇತರೆ ಭಾಗಗಳಿಂದ ಬಂದಂತಹ ಸುಪ್ರಸಿದ್ಧ ಖಾದಿ ಸಂಸ್ಥೆ ಗಳಾದ ತಮಿಳುನಾಡಿನ ತುಲಾ ಖಾದಿ, ಮಹಾರಾಷ್ಟ್ರದ ಮಘನ್ ಖಾದಿ ಹಾಗೂ ಸುಮಧ ಖಾದಿ, ಆಂಧ್ರಪ್ರದೇಶದ ಟಿಂಬಕ್ಟು ಖಾದಿ ಹಾಗೂ ಕಲಾ ಸೀಮ ಪದಾರ್ಥಗಳು, ಕೈಮಗ್ಗ ನೇಕಾರರ ಒಕ್ಕೂಟದ ಸಾಂಪ್ರದಾಯಿಕ ಸೀರೆ, ಬಟ್ಟೆ, ಇತರೆ ಉಡುಪುಗಳು, ಫಾರ್ಮ್ ವೇದ, ಇಕ್ರಾ ಸಂಸ್ಥೆಯ ಕೃಷಿ ಉತ್ಪನ್ನಗಳು, ಸಹನಾ, ಚೇತನಾ, ಅಗಸ್ತ್ಯ‌ ಸಂಸ್ಥೆಯ ಕರಕುಶಲ ವಸ್ತುಗಳು ಮತ್ತು ವಿವಿಧ ಕೈಉತ್ಪನ್ನಗಳ ಉತ್ಪಾದಕರು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ.

ತುಲಾ ಖಾದಿ ಸಂಸ್ಥೆಯ ಸಂಸ್ಥಾಪಕರಾದ ಅನಂತೂ, ಚರಕ ಸಂಸ್ಥೆಯ ವಿನ್ಯಾಸಕಿ‌ ಹಾಗೂ ವ್ಯವಸ್ಥಾಪಕಿ ಪದ್ಮಶ್ರೀ, ದೇಸಿ ಸಂಸ್ಥೆಯ ವ್ಯವಸ್ಥಾಪಕ ಧರ್ಮದರ್ಶಿ ಕೃಷ್ಣ, ಸುಮಧ ಸಂಸ್ಥೆಯ ವೃಶಾಲಿ ಮತ್ತು ಚರಕ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ, ದೇಸಿ ಸಂಸ್ಥೆ, ಗ್ರಾಮ ಸೇವಾ ಸಂಘದ ಕಾರ್ಯಕರ್ತರಾದ ಆಶಾ, ಅಕ್ಷಯ್, ಸ್ಮಿತ, ಅಭಿಲಾಷ್, ದಿಲೀಪ್, ಕಾರ್ತಿಕ್, ಮಂಜು ಶಿಕಾರಿ, ಸಾಕ್ಷಿ, ಐಶ್ವರ್ಯ, ಹುಚ್ಚೇಶ್ ಇತರರು ಹಾಜರಿದ್ದರು.

***



(Release ID: 1761496) Visitor Counter : 160