ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಲಸಿಕೆ ಇಂದಿನ ಪರಿಷ್ಕೃತ ವರದಿ
ಭಾರತದಲ್ಲಿ ಒಟ್ಟು 53.24 ಕೋಟಿ ದಾಟಿದ ಕೋವಿಡ್ – 19 ಲಸಿಕೆ
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 2.25 ಕೋಟಿ ಗೂ ಹೆಚ್ಚು ಡೋಸ್ ಬಾಕಿ ಮತ್ತು ಬಳಕೆಯಾದ ಲಸಿಕೆ ಲಭ್ಯ
Posted On:
11 AUG 2021 9:29AM by PIB Bengaluru
ಕೇಂದ್ರ ಸರ್ಕಾರ ದೇಶಾದ್ಯಂತ ಕೋವಿಡ್-19 ಲಸಿಕೆಯ ವೇಗ ಹೆಚ್ಚಿಸಲು ಮತ್ತು ವ್ಯಾಪ್ತಿಯನ್ನು ವಿಸ್ತರಿಸಲು ಬದ್ಧವಾಗಿದೆ. ಕೋವಿಡ್-19 ಲಸಿಕೆಯ ಹೊಸ ಸಾರ್ವತ್ರೀಕರಣದ ಹಂತ 2021 ರ ಜೂನ್ 21 ರಿಂದ ಪ್ರಾರಂಭವಾಗಿದೆ. ಹೆಚ್ಚು ಲಸಿಕೆ ಲಭ್ಯತೆಯಿಂದಾಗಿ ಲಸಿಕಾ ಅಭಿಯಾನ ತೀವ್ರಗೊಂಡಿದ್ದು, ಮುಂದಾಗಿಯೇ ಲಸಿಕೆ ಪ್ರಮಾಣ ಗೋಚರವಾಗುತ್ತಿರುವ ಕಾರಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೂಕ್ತ ರೀತಿಯಲ್ಲಿ ಯೋಜನೆ ರೂಪಿಸಲು ಮತ್ತು ಲಸಿಕೆ ಪೂರೈಕೆ ಸರಪಳಿಯನ್ನು ಸುಗಮಗೊಳಿಸಲು ಸಹಕಾರಿಯಾಗಲಿದೆ.
ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನದ ಭಾಗವಾಗಿ ಭಾರತ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಕೋವಿಡ್ ಲಸಿಕೆ ಒದಗಿಸುತ್ತಿದೆ. ಹೊಸ ಸಾರ್ವತ್ರೀಕರಣದ ಕೋವಿಡ್-19 ಲಸಿಕೆ ಅಭಿಯಾನದಲ್ಲಿ ಕೇಂದ್ರ ಸರ್ಕಾರ ದೇಶದ ಲಸಿಕೆ ಉತ್ಪಾದಕರಿಂದ ಶೇ 75 ರಷ್ಟು ಲಸಿಕೆಯನ್ನು ಖರೀದಿಸುತ್ತಿದೆ ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಕೆ [ಉಚಿತವಾಗಿ] ಮಾಡುತ್ತಿದೆ.
ಲಸಿಕೆ ಡೋಸ್ ಗಳು
|
( 2021 ರ ಆಗಸ್ಟ್ 11 ರ ಮಾಹಿತಿ)
|
ಪೂರೈಕೆ
|
53,24,44,960
|
ಪೂರೈಕೆ ಮಾರ್ಗದಲ್ಲಿ
|
72,40,250
|
ಬಳಕೆ
|
51,56,11,035
|
ಬಾಕಿ ಲಭ್ಯತೆ
|
2,25,03,900
|
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ವರೆಗೆ 53.24 ಕೋಟಿ ಗೂ ಹೆಚ್ಚು (53,24,44,960) ಲಸಿಕೆಯನ್ನು ಎಲ್ಲಾ ಮೂಲಗಳ ಮೂಲಕ ಒದಗಿಸಲಾಗಿದೆ ಮತ್ತು 72,40,250 ಡೋಸ್ ಲಸಿಕೆ ಪೂರೈಕೆ ಮಾರ್ಗದಲ್ಲಿದೆ. ಈ ಪೈಕಿ ವ್ಯರ್ಥವಾದದ್ದು ಸೇರಿ ಈ ವರೆಗೆ [ ಇಂದು ಬೆಳಿಗ್ಗೆ 8 ಗಂಟೆಗೆ ದೊರೆತ ದತ್ತಾಂಶದ ಪ್ರಕಾರ] 51,56,11,035 ಡೋಸ್ ಲಸಿಕೆ ಬಳಕೆಯಾಗಿದೆ.
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬಾಕಿ ಉಳಿಕೆ ಮತ್ತು ಬಳಕೆಯಾಗದ 2.25 ಕೋಟಿ ಗೂ ಹೆಚ್ಚು (2,25,03,900) ಲಸಿಕಾ ಡೋಸ್ ಗಳು ಲಭ್ಯವಿದೆ.
***
(Release ID: 1744754)
Visitor Counter : 391