ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕೆ ಇಂದಿನ ಪರಿಷ್ಕೃತ ವರದಿ


ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ 52.56 ಕೋಟಿಗಿಂತ ಹೆಚ್ಚಿನ ಡೋಸ್ ಲಸಿಕೆ ಪೂರೈಕೆ

ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿದಿರುವ 2.07 ಕೋಟಿಗಿಂತ ಹೆಚ್ಚಿನ ಲಸಿಕೆ ಲಭ್ಯ

Posted On: 10 AUG 2021 9:37AM by PIB Bengaluru

ದೇಶಾದ್ಯಂತ ಭರದಿಂದ ಸಾಗಿರುವ ಬೃಹತ್ ಕೋವಿಡ್-19 ಲಸಿಕೆ ಅಭಿಯಾನದ ವ್ಯಾಪ್ತಿ ಹೆಚ್ಚಿಸಲು ಮತ್ತು ಕಾರ್ಯಕ್ರಮದ ಗತಿಗೆ ವೇಗ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ.

ಲಸಿಕೆ ಅಭಿಯಾನ ಸಾರ್ವತ್ರೀಕರಣದ ಹೊಸ ಹಂತ 2021 ಜೂನ್ 21ರಿಂದ ಆರಂಭವಾಗಲಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಲಭ್ಯತೆ ಖಾತ್ರಿಪಡಿಸುವ ಮೂಲಕ, ಲಸಿಕೆ ಲಭ್ಯತೆಯ ಮುಂಗಡ ಗೋಚರತೆಯನ್ನು ಖಚಿತಪಡಿಸುವ ಮೂಲಕ ಹಾಗೂ ಪೂರೈಕೆ ಸರಪಳಿಯನ್ನು ಸುಗಮಗೊಳಿಸುವ ಮೂಲಕ ಕೇಂದ್ರ ಸರ್ಕಾರವು ಲಸಿಕೆ ಅಭಿಯಾನಕ್ಕೆ ವೇಗ ನೀಡಿದೆ.

ದೇಶವ್ಯಾಪಿ ಲಸಿಕೆ ಆಂದೋಲನದ ಭಾಗವಾಗಿ, ಭಾರತ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಲಸಿಕೆ ಪೂರೈಸುತ್ತಿದೆ. ಅಭಿಯಾನ ಸಾರ್ವತ್ರೀಕರಣ ಹೊಸ ಹಂತದಲ್ಲಿ, ಕೇಂದ್ರ ಸರ್ಕಾರವು ದೇಶೀಯ ಲಸಿಕೆ ಉತ್ಪಾದನಾ ಕಂಪನಿಗಳಿಂದ 75% ಲಸಿಕೆಯನ್ನು ಎಲ್ಲಾ ಮೂಲಗಳಿಂದಲೂ ಖರೀದಿಸಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ವಿತರಿಸುತ್ತಿದೆ.

ಲಸಿಕೆ ಡೋಸ್ ಗಳಲ್ಲಿ

10 ಆಗಸ್ಟ್ 2021

ಪೂರೈಕೆಯಾದ ಲಸಿಕೆ ಪ್ರಮಾಣ

52,56,35,710

ಸದ್ಯದಲ್ಲೇ ಲಭ್ಯವಾಗಲಿರುವ ಲಸಿಕೆ ಪ್ರಮಾಣ

48,43,100

ಬಳಕೆಯಾದ ಲಸಿಕೆ ಪ್ರಮಾಣ

51,09,58,562

ಲಭ್ಯವಿರುವ ಲಸಿಕೆ ಪ್ರಮಾಣ

2,07,55,852

ಕೇಂದ್ರ ಸರ್ಕಾರವು 52.56 ಕೋಟಿಗಿಂತ ಹೆಚ್ಚಿನ ಅಂದರೆ 52,56,35,710 ಡೋಸ್ ಲಸಿಕೆಯನ್ನು ಎಲ್ಲಾ ಮೂಲಗಳಿಂದ ಖರೀದಿಸಿ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ, ವಿತರಿಸಿದ್ದು, ಇನ್ನೂ 48,43,100 ಡೋಸ್ ಲಸಿಕೆ ಸದ್ಯದಲ್ಲೇ ಲಭ್ಯವಾಗಲಿದೆ.

ಇಂದು ಬೆಳಗ್ಗೆ 8 ಗಂಟೆಗೆ ಬಿಡುಗಡೆ ಆಗಿರುವ ದತ್ತಾಂಶದ ಪ್ರಕಾರ, 52.56 ಕೋಟಿ ಡೋಸ್ ಲಸಿಕೆ ಪೈಕಿ ಸವಕಳಿ ಸೇರಿದಂತೆ 51,09,58,562 ಡೋಸ್ ಲಸಿಕೆ ಬಳಕೆಯಾಗಿದೆ.

ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿದಿರುವ 2.07 ಕೋಟಿಗಿಂತ ಹೆಚ್ಚಿನ ಅಂದರೆ 2,07,55,852 ಡೋಸ್ ಲಸಿಕೆ ಇನ್ನೂ ಲಭ್ಯವಿದೆ.

**



(Release ID: 1744371) Visitor Counter : 206