ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಲಸಿಕೆ ನೀಡಿಕೆಯ ಪರಿಷ್ಕೃತ ವರದಿ
ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳಿಗೆ 45.37 ಕೋಟಿ ಡೋಸ್ ಗಿಂತ ಹೆಚ್ಚಿನ ಲಸಿಕೆ ಪೂರೈಕೆ
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿದಿರುವ 3.29 ಕೋಟಿ ಡೋಸ್ ಗಿಂತ ಹೆಚ್ಚಿನ ಲಸಿಕೆ ಲಭ್ಯ
ಪ್ರಕಟಣಾ ದಿನಾಂಕ:
25 JUL 2021 9:57AM by PIB Bengaluru
ದೇಶಾದ್ಯಂತ ಕೋವಿಡ್-19 ಲಸಿಕೆ ನೀಡಿಕೆ ಅಭಿಯಾನದ ವ್ಯಾಪ್ತಿ ಹೆಚ್ಚಿಸಲು ಮತ್ತು ಈ ಕಾರ್ಯಕ್ರಮದ ಗತಿಗೆ ವೇಗ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಅಭಿಯಾನ ಸಾರ್ವತ್ರೀಕರಣದ ಹೊಸ ಹಂತ ದೇಶಾದ್ಯಂತ 2021 ಜೂನ್ 21ರಿಂದ ಆರಂಭವಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚಿನ ಲಸಿಕೆ ಲಭ್ಯತೆ, ಲಸಿಕೆ ಲಭ್ಯತೆಯ ಮುಂಗಡ ಗೋಚರತೆ ಮತ್ತು ಪೂರೈಕೆ ಸರಪಳಿ ಸುಗಮಗೊಳಿಸುವ ಮೂಲಕ ಕೇಂದ್ರ ಸರ್ಕಾರವು ಬೃಹತ್ ಲಸಿಕಾ ಅಭಿಯಾನವನ್ನು ಹೆಚ್ಚಿಸಿದೆ.
ದೇಶವ್ಯಾಪಿ ಲಸಿಕೆ ಅಭಿಯಾನದ ಭಾಗವಾಗಿ, ಭಾರತ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್-19 ಲಸಿಕೆಯನ್ನು ಉಚಿತವಾಗಿ ವಿತರಿಸುತ್ತಿದೆ. ಕೋವಿಡ್-19 ಲಸಿಕೆ ಅಭಿಯಾನ ಸಾರ್ವತ್ರೀಕರಣಗ ಹೊಸ ಹಂತದಲ್ಲಿ, ಕೇಂದ್ರ ಸರ್ಕಾರವು ದೇಶೀಯ ಲಸಿಕೆ ಉತ್ಪಾದನಾ ಕಂಪನಿಗಳಿಂದ 75% ಲಸಿಕೆ ಖರೀದಿಸಿ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಪೂರೈಸುತ್ತಿದೆ.
|
ಲಸಿಕೆ ಡೋಸ್
|
25 ಜುಲೈ 2021
|
|
ಪೂರೈಕೆಯಾದ ಲಸಿಕೆ ಪ್ರಮಾಣ
|
45,37,70,580
|
|
ಸದ್ಯದಲ್ಲೇ ಲಭ್ಯವಾಗುವ ಲಸಿಕೆ ಪ್ರಮಾಣ
|
11,79,010
|
|
ಬಳಕೆಯಾದ ಲಸಿಕೆ ಪ್ರಮಾಣ
|
42,08,32,021
|
|
ಬಳಕೆಗೆ ಬಾಕಿ ಉಳಿದಿರುವ ಲಸಿಕೆ ಪ್ರಮಾಣ
|
3,29,38,559
|
45.37 ಕೋಟಿಗಿಂತ ಹೆಚ್ಚಿನ ಅಂದರೆ 45,37,70,580 ಡೋಸ್ ಲಸಿಕೆಯನ್ನು ಇದುವರೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸಲಾಗಿದೆ. ಹೆಚ್ಚುವರಿಯಾಗಿ 11,79,010 ಡೋಸ್ ಲಸಿಕೆ ಅತಿಶೀಘ್ರವೇ ಲಭ್ಯವಾಗಲಿದೆ.
ಇಂದು ಬೆಳಗ್ಗೆ 8 ಗಂಟೆಗೆ ಬಿಡುಗಡೆ ಆಗಿರುವ ದತ್ತಾಂಶದ ಪ್ರಕಾರ, 45.37 ಕೋಟಿ ಡೋಸ್ ಪೈಕಿ ಸವಕಳಿ ಸೇರಿದಂತೆ ಒಟ್ಟು 42,08,32,021 ಡೋಸ್ ಲಸಿಕೆ ಬಳಕೆಯಾಗಿದೆ.
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿದಿರುವ 3.29 ಕೋಟಿಗಿಂತ ಹೆಚ್ಚಿನ ಅಂದರೆ 3,29,38,559 ಡೋಸ್ ಲಸಿಕೆ ಬಳಕೆಗೆ ಲಭ್ಯವಿದೆ.
***
(ಪ್ರಕಟಣೆ ಐ.ಡಿ.: 1738913)
ವಿಸಿಟರ್ ಕೌಂಟರ್ : 232