ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಖೇಲೋ ಇಂಡಿಯಾ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರ – ಎಸ್.ಎ.ಐನ ಉತ್ತೇಜನ ಕಾರ್ಯಕ್ರಮಗಳಡಿ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಗೆ ಪ್ರತಿಭೆಗಳನ್ನು ಗುರುತಿಸುವ ಮತ್ತು ಸಜ್ಜುಗೊಳಿಸಲು ಕ್ರಮ: ಕೇಂದ್ರ ಕ್ರೀಡಾ ಸಚಿವರು

Posted On: 22 JUL 2021 4:14PM by PIB Bengaluru

ಪ್ರಮುಖ ಅಂಶಗಳು

· ಕ್ರೀಡಾಪಟುಗಳಿಗೆ ಎನ್.ಎಸ್.ಎಫ್ ಮತ್ತು ಟಾರ್ಗೆಟ್ ಒಲಿಂಪಿಕ್ ಪೊಡಿಯಂ ಯೋಜನೆ [ಟಿ.ಒ.ಪಿ.ಎಸ್] ಯಡಿ ತರಬೇತಿ ಮತ್ತು ಸ್ಪರ್ಧಾತ್ಮಕ ಮಾನ್ಯತೆ ನೀಡಲಾಗುತ್ತಿದೆ

· ಟಿ.ಒ.ಪಿ.ಎಸ್ ನಡಿ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಪಡೆಯುವ ಸಂಭವನೀಯರಿಗೆ ನಿರ್ದಿಷ್ಟ ತರಬೇತಿ

ದೇಶದ ಗ್ರಾಮೀಣ ಪ್ರದೇಶ ಒಳಗೊಂಡಂತೆ ಗುರುತಿಸಲಾದ ಪ್ರತಿಭೆಗಳು, ತಂಡಗಳಿಗೆ 2028 ರ ಒಲಿಂಪಿಕ್ಸ್ ಸೇರಿ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವವರಿಗೆ ಖೇಲೋ ಇಂಡಿಯಾ ಕಾರ್ಯಕ್ರಮ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರ [ಎಸ್.ಎ.ಐ] ದಡಿ ರಾಷ್ಟ್ರೀಯ ಉತ್ಕೃಷ್ಟ ಕೇಂದ್ರಗಳು, ಎಸ್.ಎ.ಐ ತರಬೇತಿ ಕೇಂದ್ರಗಳು, ಎಸ್.ಟಿ.ಸಿ ಗಳ ವಿಸ್ತರಣಾ ಕೇಂದ್ರಗಳು ಮತ್ತು ರಾಷ್ಟ್ರೀಯ ಕ್ರೀಡಾ ತರಬೇತಿ ಸ್ಪರ್ಧಿಗಳ ಕಾರ್ಯಕ್ರಮದಡಿ ಕ್ರೀಡಪಟುಗಳನ್ನು ಸಜ್ಜುಗೊಳಿಸಲು ಆದ್ಯತೆ ನೀಡಲಾಗುತ್ತಿದೆ.

2028 ರ ಒಲಿಂಪಿಕ್ಸ್ ಸೇರಿ ಅಂತಾರಾಷ್ಟ್ರೀಯ ಕ್ರೀಡಾ ಕೂಟಗಳಿಗೆ ಭಾರತೀಯ ಕ್ರೀಡಾಪಟುಗಳು ಮತ್ತು ತಂಡಗಳನ್ನು ಸಜ್ಜುಗೊಳಿಸುವುದು ನಿರಂತರ ಪ್ರಕ್ರಿಯೆಯಾಗಿದೆ.

ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಸ್ಪರ್ಧಾತ್ಮಕ ಮಾನ್ಯತೆ ನೀಡಲಾಗುತ್ತಿದೆ ಮತ್ತು ಎನ್.ಎಫ್.ಎಸ್ ಹಾಗೂ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಕಾರ್ಯಕ್ರಮದಡಿ ತರಬೇತಿಗಾಗಿ ನೆರವು ನೀಡಲಾಗುತ್ತಿದೆ. ಟಿ.ಒ.ಪಿ.ಎಸ್ ನಡಿ 2028 ಒಲಿಂಪಿಕ್ಸ್ ಕ್ರೀಡಾಕೂಟ ಸೇರಿ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪದಕ ಗೆಲ್ಲುವ ಸಂಭವನೀಯರಿಗೆ ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತಿದೆ. ಒಲಿಂಪಿಕ್ಸ್ ಸೇರಿ ಹಲವಾರು ಕ್ರೀಡೆಗಳಲ್ಲಿ ಸ್ಪರ್ಧಾತ್ಮಕತೆ ಮತ್ತು ತರಬೇತಿ ಅಗತ್ಯಗಳನ್ನು ಪೂರೈಸಲಾಗುತ್ತಿದೆ ಮತ್ತು ಇದಕ್ಕಾಗಿ ರಾಷ್ಟ್ರೀಯ ಕ್ರೀಡಾ ಒಕ್ಕೂಟ ಮತ್ತು ಎಸ್.ಎ.ಐ ನ ಜೊತೆ ಸಮಾಲೋಚಿಸಿ ವಾರ್ಷಿಕ ತರಬೇತಿ ಮತ್ತು ಸ್ಪರ್ಧೆ[ಎ.ಸಿ.ಟಿ.ಸಿ]ಗಳನ್ನು ಆಯೋಜಿಸಲಾಗುತ್ತಿದೆ.

ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಈ ಮಾಹಿತಿ ನೀಡಿದ್ದಾರೆ.               

***



(Release ID: 1737890) Visitor Counter : 195