ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕೆ ನೀಡಿಕೆಯ ಇಂದಿನ ವರದಿ


ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ 38.54 ಕೋಟಿಗಿಂತ ಹೆಚ್ಚಿನ ಡೋಸ್ ಲಸಿಕೆ ವಿತರಣೆ

ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿದಿರುವ 1.73 ಕೋಟಿ ಡೋಸ್ ಲಸಿಕೆ ಲಭ್ಯ

प्रविष्टि तिथि: 10 JUL 2021 9:58AM by PIB Bengaluru

ದೇಶಾದ್ಯಂತ ನಡೆಯುತ್ತಿರುವ ಬೃಹತ್ ಕೋವಿಡ್-19 ಲಸಿಕಾ ಅಭಿಯಾನದ ವ್ಯಾಪ್ತಿ ಹೆಚ್ಚಿಸಲು ಮತ್ತು ಕಾರ್ಯಕ್ರಮಕ್ಕೆ ಮತ್ತಷ್ಟು ವೇಗ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ 2021 ಜೂನ್ 21ರಿಂದ ಲಸಿಕೆ ಆಂದೋಲನ ಸಾರ್ವತ್ರೀಕರಣದ ಹೊಸ ಹಂತ ಆರಂಭವಾಗಿದೆ. ಅಧಿಕ ಪ್ರಮಾಣದ ಲಸಿಕೆ ಲಭ್ಯತೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆ ಲಭ್ಯತೆಯ ಮುಂಗಡ ಗೋಚರತೆ ಮತ್ತು ಪೂರೈಕೆ ಸರಪಳಿಯನ್ನು ಸುಗಮಗೊಳಿಸುವ ಮೂಲಕ ದೇಶಾದ್ಯಂತ ಲಸಿಕೆ ಆಂದೋಲನವನ್ನು ಹೆಚ್ಚಿಸಲಾಗಿದೆ.

ದೇಶವ್ಯಾಪಿ ಲಸಿಕೆ ಆಂದೋಲನದ ಭಾಗವಾಗಿ, ಭಾರತ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಕೋವಿಡ್-19 ಲಸಿಕೆ ವಿತರಿಸುತ್ತಿದೆ. ಆಂದೋಲನ ಸಾರ್ವತ್ರೀಕರಣದ ಹೊಸ ಹಂತದಲ್ಲಿ, ಕೇಂದ್ರ ಸರ್ಕಾರವು ದೇಶೀಯ ಲಸಿಕೆ ಉತ್ಪಾದನಾ ಕಂಪನಿಗಳಿಂದ 75% ಲಸಿಕೆಯನ್ನು ಖರೀದಿಸಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ವಿತರಿಸುತ್ತಿದೆ.

38.54 ಕೋಟಿಗಿಂತ ಹೆಚ್ಚಿನ ಅಂದರೆ 38,54,01,150 ಡೋಸ್ ಲಸಿಕೆಯನ್ನು ಇದುವರೆಗೆ ಕೇಂದ್ರ ಸರ್ಕಾರವು ಎಲ್ಲಾ ಮೂಲಗಳಿಂದ ಖರೀದಿಸಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ವಿತರಿಸಿದೆ.

38.54 ಕೋಟಿ ಡೋಸ್ ಲಸಿಕೆ ಪೈಕಿ ಸವಕಳಿ ಸೇರಿದಂತೆ 36,80,68,124 ಡೋಸ್ ಲಸಿಕೆಯನ್ನು ಬಳಸಲಾಗಿದೆ. ಇಂದು ಬೆಳಗ್ಗೆ 8 ಗಂಟೆಗೆ ಲಭ್ಯವಾಗಿರುವ ದತ್ತಾಂಶದಿಂದ ಈ ವಿಚಾರ ತಿಳಿದುಬಂದಿದೆ.

ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ದೇಶದ ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿದಿರುವ 1.73 ಕೋಟಿಗಿಂತ ಹೆಚ್ಚಿನ ಅಂದರೆ 1,73,33,026 ಡೋಸ್ ಲಸಿಕೆ ಬಳಕೆಗೆ ಲಭ್ಯವಿದೆ.

***


(रिलीज़ आईडी: 1734381) आगंतुक पटल : 231
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Gujarati , Tamil , Telugu , Malayalam