ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ [ಪಿ.ಎಂ.ಜಿ.ಕೆ.ಎ.ವೈ] – ಎಫ್.ಸಿ.ಐನಿಂದ ರಾಜ್ಯಗಳು ಎತ್ತುವಳಿ ಮಾಡಿರುವ ಆಹಾರ ಧಾನ್ಯಗಳ ಸ್ಥಿತಿಗತಿ

Posted On: 05 JUL 2021 6:02PM by PIB Bengaluru

ಕೋವಿಡ್ 19 ಸಂಕಷ್ಟ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮಹತ್ವದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ [ಪಿ.ಎಂ.ಜಿ.ಕೆ..ವೈ] ಯಡಿ ರಾಜ್ಯದ ಸುಮಾರು 4 ಕೋಟಿ ಜನರಿಗೆ ಮೂರು ತಿಂಗಳ ಕಾಲ ಉಚಿತವಾಗಿ ಆಹಾರ ಧಾನ್ಯ ವಿತರಣೆ ಮಾಡಲಾಗುವುದು ಎಂದು ಭಾರತದ ಆಹಾರ ನಿಗಮ [ಕರ್ನಾಟಕ] ವ್ಯವಸ್ಥಾಪಕ ನಿರ್ದೇಶಕ ಶ್ರೀ ಜಿ. ನರಸಿಂಹ ರಾಜು ತಿಳಿಸಿದ್ದಾರೆ.

ಅವರು ಭಾರತ ಆಹಾರ ನಿಗಮದಡಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ [ಪಿ.ಎಂ.ಜಿ.ಕೆ..ವೈ] ಚಟುವಟಿಕೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕೋವಿಡ್ 19 ವೈರಾಣು ವಿರುದ್ಧದ ಹೋರಾಟದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಕೈಗೊಂಡ ಪ್ರಮುಖ ಕ್ರಮಗಳಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ [ಪಿ.ಎಂ.ಜಿ.ಕೆ..ವೈ] ಪ್ರಮುಖ ಕಾರ್ಯಕ್ರಮವಾಗಿದ್ದು, ಅಗತ್ಯವಿರುವ ಜನಸಂಖ್ಯೆಗೆ ಉಚಿತವಾಗಿ ಆಹಾರ ಧಾನ್ಯ ಪೂರೈಸಲಾಗುತ್ತಿದೆ. ರಾಜ್ಯದ 5 ನೇ 3 ರಷ್ಟು ಜನ ಸಂಖ್ಯೆಗೆ ಆಹಾರ ಧಾನ್ಯ ಒದಗಿಸಲಾಗುತ್ತಿದೆ ಎಂದರು.

ಮುಂದಿನ ಮೂರು ತಿಂಗಳ ಕಾಲ ಆಹಾರ ಧಾನ್ಯಗಳ ಅಲಭ್ಯತೆಯಿಂದಾಗಿ ಯಾವುದೇ ವ್ಯಕ್ತಿ ಅಥವಾ ಯಾವುದೇ ಕುಟುಂಬ ತೊಂದರೆಗೆ ಒಳಗಾಗಬಾರದು. ಎಂಬುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಪ್ರಸ್ತುತ ಒದಗಿಸುತ್ತಿರುವ ಆಹಾರ ಧಾನ್ಯ ಪ್ರಮಾಣವನ್ನು ಮುಂದಿನ ಐದು ತಿಂಗಳ ಅವಧಿಗೆ ದ್ವಿಗುಣಗೊಳಿಸಿ ಉಚಿತವಾಗಿ ಪೂರೈಕೆ ಮಾಡಲಾಗುವುದು ಎಂದು ಹೇಳಿದರು

ಕೋವಿಡ್ ಸೋಂಕಿನಿಂದ ಬಾಧಿತವಾಗಿರುವ ರಾಜ್ಯದ ದುರ್ಬಲ ವರ್ಗದ ಜನರಿಗೆ ನಾಲ್ಕನೇ ಹಂತದಲ್ಲಿ ಮುಂದಿನ ನವೆಂಬರ್ ವರೆಗೆ 10.05 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಪೂರೈಸಲಾಗುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ [ಎನ್.ಎಫ್.ಎಸ್.] ಯಡಿ ಆದ್ಯತಾ ಕುಟುಂಬಗಳಿಗೆ [ಪಿ.ಎಚ್.ಎಚ್] 2021 ನವೆಂಬರ್ ವರೆಗೆ ಆಹಾರ ಧಾನ್ಯ ಒದಗಿಸಲಾಗುವುದು. ಪ್ರತಿಯೊಂದು ಅಂತ್ಯೋದಯ ಅನ್ನ ಯೋಜನೆಯ [ಎಎವೈ] ಫಲಾನುಭವಿಗಳು ಈಗಿರುವ 35 ಕೆ.ಜಿ. ಜತೆಗೆ ಹೆಚ್ಚುವರಿಯಾಗಿ 5 ಕೆ.ಜಿ. ಆಹಾರ ಧಾನ್ಯವನ್ನು ಪಡೆಯಲಿದ್ದಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರ ನ್ಯಾಯ ಬೆಲೆ ಅಂಗಡಿ [ಎಫ್.ಪಿ.ಎಸ್] ವರೆಗೆ ಫಲಾನುಭವಿಗಳಿಗೆ ಆಹಾರ ಧಾನ್ಯ ಪೂರೈಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದ್ದು, ಆಹಾರ ಧಾನ್ಯದ ಬೆಲೆ, ಖರೀದಿ, ಸಂಗ್ರಹ ಮತ್ತು ಸಾಗಾಣೆಗೆ ಒಟ್ಟು 3,919 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ. ರೈತರಿಂದ ಪ್ರತಿ ಕೆ.ಜಿ. ಅಕ್ಕಿಯನ್ನು 39 ರೂಪಾಯಿ ಮತ್ತು ಪ್ರತಿ ಕೆ.ಜಿ. ಗೋಧಿಯನ್ನು 28 ರೂಪಾಯಿಯಂತೆ ಖರೀದಿಸಿ ಫಲಾನುಭವಿಗಳಿಗೆ ಪೂರೈಸುತ್ತಿದ್ದುರಾಜ್ಯ ಸರ್ಕಾರಗಳಿಗೆ ಯಾವುದೇ ಹಣಕಾಸು ಹೊರೆ ಬೀಳುವುದಿಲ್ಲ ಎಂದು ಶ್ರೀ ಜಿ. ನರಸಿಂಹ ರಾಜು ಮಾಹಿತಿ ನೀಡಿದರು.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ [ಪಿ.ಎಂ.ಜಿ.ಕೆ..ವೈ] ಯಡಿ ಕರ್ನಾಟಕದ ಪ್ರತಿಯೊಬ್ಬ ಫಲಾನುಭವಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ [ಎಎವೈ, ಪಿಎಚ್ಎಚ್ ಮತ್ತು ಡಿಬಿಟಿ] ಪ್ರತಿ ತಿಂಗಳು ಪ್ರತಿಯೊಬ್ಬ ಫಲಾನುಭವಿಗೆ ಐದು ಕೆ.ಜಿ. ಹೆಚ್ಚುವರಿಯಾಗಿ ಆಹಾರ ಧಾನ್ಯ ಪೂರೈಸಲಾಗುವುದು ಎಂದು ಹೇಳಿದರು.

ಮೊದಲ ಹಂತದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ [ಪಿ.ಎಂ.ಜಿ.ಕೆ..ವೈ] ಯಡಿ 2020 ಏಪ್ರಿಲ್ ನಿಂದ ಜೂನ್ ಅವಧಿಯಲ್ಲಿ ಕರ್ನಾಟಕಕ್ಕೆ 6.02 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಒದಗಿಸಿದ್ದು, ಲಕ್ಷ ದ್ವೀಪಕ್ಕೆ 0.3 ಲಕ್ಷ ಮೆಟ್ರಿಕ್ ಟನ್ ಪೂರೈಸಲಾಗಿದೆ. ಎರಡೂ ರಾಜ್ಯಗಳಿಗೆ ಒಟ್ಟು 2,352 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.

ಎರಡನೇ ಹಂತದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ [ಪಿ.ಎಂ.ಜಿ.ಕೆ..ವೈ] ಯಡಿ 2020 ಜುಲೈನಿಂದ ನವೆಂಬರ್ ವರೆಗೆ 9.62 ಲಕ್ಷ ಮೆಟ್ರಿಕ್ ಟನ್ ಮತ್ತು ಲಕ್ಷ ದ್ವೀಪಕ್ಕೆ ಇದೇ ಅವಧಿಯಲ್ಲಿ 0.5 ಲಕ್ಷ ಮೆಟ್ರಿಕ್ ಟನ್ ಪೂರೈಸಿದ್ದು, ಇದಕ್ಕಾಗಿ 3,755 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ ಎಂದು ವಿವರಿಸಿದರು.

ಮೂರನೇ ಹಂತದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ [ಪಿ.ಎಂ.ಜಿ.ಕೆ..ವೈ] ಯಡಿ 2021 ಮೇ ನಿಂದ ಜೂನ್ ವರೆಗೆ ಕರ್ನಾಟಕಕ್ಕೆ 4.01 ಲಕ್ಷ ಮೆಟ್ರಿಕ್ ಟನ್ ಮತ್ತು ಲಕ್ಷ ದ್ವೀಪಕ್ಕೆ 0.2 ಲಕ್ಷ ಮೆಟ್ರಿಕ್ ಪೂರೈಕೆ ಮಾಡಿದ್ದು, ಇದಕ್ಕಾಗಿ 1,568 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ ಎಂದು ಹೇಳಿದರು.

ನಾಲ್ಕನೇ ಹಂತದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ [ಪಿ.ಎಂ.ಜಿ.ಕೆ..ವೈ] 2021 ಜುಲೈನಿಂದ ನವೆಂಬರ್ ವರೆಗೆ 10.05 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ವಿತರಿಸುತ್ತಿದ್ದು, ಈವರೆಗೆ 0.36 ಲಕ್ಷ ಟನ್ ಎತ್ತುವಳಿ ಮಾಡಲಾಗಿದೆ. ಲಕ್ಷ ದ್ವೀಪಕ್ಕೆ 0.6 ಲಕ್ಷ ಮೆಟ್ರಿನ್ ಟನ್ ವಿತರಣೆ ಮಾಡಲಾಗುತ್ತಿದೆ. ಇದಕ್ಕಾಗಿ ಒಟ್ಟು 140 ಕೋಟಿ ರೂಪಾಯಿ ಹಣವನ್ನು ಈಗಾಗಲೇ ವೆಚ್ಚ ಮಾಡಲಾಗಿದೆ ಎಂದು ಭಾರತದ ಆಹಾರ ನಿಗಮ [ಕರ್ನಾಟಕ] ವ್ಯವಸ್ಥಾಪಕ ನಿರ್ದೇಶಕ ಶ್ರೀ ಜಿ. ನರಸಿಂಹ ರಾಜು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಎಫ್.ಸಿ.ಐನ ಉಪ ವ್ಯವಸ್ಥಾಪಕ ನಿರ್ದೇಶಕ ಶ್ರೀ ಕೆ. ನಾಗೇಶ್ ಕಮಲಾಕರ್ಮತ್ತೋರ್ವ ಉಪ ನಿರ್ದೇಶಕ ಶ್ರೀ ಪಿ. ಲೋಕನದಾಮ್ ಅವರು ಉಪಸ್ಥಿತರಿದ್ದರು.

***



(Release ID: 1732877) Visitor Counter : 290


Read this release in: English