ಇಂಧನ ಸಚಿವಾಲಯ

ವಿತರಣಾ ವಲಯದ ಪರಿಷ್ಕೃತ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ; ಸುಧಾರಣೆ ಆಧಾರಿತ ಮತ್ತು ಫಲಿತಾಂಶ ಸಂಯೋಜಿತ ಯೋಜನೆ

Posted On: 30 JUN 2021 4:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಸುಧಾರಣೆ ಆಧಾರಿತ ಮತ್ತು ಫಲಿತಾಂಶ ಸಂಯೋಜಿತ, ವಿತರಣಾ ವಲಯದ ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡಿತು. ಯೋಜನೆಯು ಪೂರೈಕೆ ಮೂಲಸೌಕರ್ಯ ಬಲವರ್ಧನೆಗೆ ಖಾಸಗಿ ವಲಯದ ಡಿಸ್ಕಾಮ್ ಗಳನ್ನು ಹೊರತುಪಡಿಸಿ, ಉಳಿದ ಎಲ್ಲ ಡಿಸ್ಕಾಮ್ ಮತ್ತು ವಿದ್ಯುತ್ ಇಲಾಖೆಗೆ ಷರತ್ತುಬದ್ಧ ಹಣಕಾಸಿನ ನೆರವು ನೀಡುವ ಮೂಲಕ ಕಾರ್ಯಾಚರಣೆಯ ದಕ್ಷತೆ ಮತ್ತು ಆರ್ಥಿಕ ಸುಸ್ಥಿರತೆಯನ್ನು ಸುಧಾರಿಸಲು ಪ್ರಯತ್ನಿಸುತ್ತದೆ. ನೆರವು ಪೂರ್ವ ಅರ್ಹತಾ ಮಾನದಂಡಗಳನ್ನು ಪೂರೈಸುವುದರ ಜೊತೆಗೆ ಡಿಸ್ಕಾಮ್ ಗಳ ಮೂಲಭೂತ ಕನಿಷ್ಠ ಮಾನದಂಡಗಳನ್ನು ಮೌಲ್ಯಮಾಪನ ಮಾಡಲಾಗುವುದು, ಅದಕ್ಕೆ ಆರ್ಥಿಕ ಸುಧಾರಣೆಗೆ ಸಂಬಂಧಿಸಿದ ಒಪ್ಪಿತ ಮೌಲ್ಯಮಾಪನ ಚೌಕಟ್ಟು ಆಧಾರವಾಗಿರುತ್ತದೆ. ಯೋಜನೆಯ ಅನುಷ್ಠಾನವುಒಂದೇ ಗಾತ್ರ ಎಲ್ಲ ರಾಜ್ಯಗಳಿಗೂ ಹೊಂದುತ್ತದೆ’’ ಎನ್ನುವ ಮನೋಭಾವಕ್ಕೆ ಬದಲಾಗಿ, ಪ್ರತಿ ರಾಜ್ಯಕ್ಕೂ ರೂಪಿಸಲಾದ ಕ್ರಿಯಾ ಯೋಜನೆಯನ್ನು ಆಧರಿಸಿದೆ.

ಯೋಜನೆಯ ಒಟ್ಟು 3,03,758  ಕೋಟಿ ರೂ. ವೆಚ್ಚವಾಗಲಿದ್ದು, ಇದರಲ್ಲಿ ಕೇಂದ್ರ ಸರ್ಕಾರದ ಜಿಬಿಎಸ್ ಪಾಲು 97,631 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಸದ್ಯ ಜಾರಿಯಲ್ಲಿರುವ ಯೋಜನೆಗಳಾದ ಐಪಿಡಿಎಸ್, ಡಿಡಿಯುಜಿಜೆವೈ ಜೊತೆಗೆ ಜಮ್ಮು ಮತ್ತು ಕಾಶ್ಮೀರ(ಜೆ&ಕೆ) ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಯಲ್ಲಿರುವ ಪಿಎಂಡಿಪಿ-2015 ಒಳಗೆ ಯೋಜನೆಗಳು ಸೇರ್ಪಡೆಯಾಗಲಿವೆ ಮತ್ತು ಇದರಿಂದ ಅವುಗಳ ಉಳಿತಾಯ(ಅಂದಾಜು 17,000 ಕೋಟಿ) ಆಗಲಿದ್ದು, ಇದು ಪರಿಷ್ಕೃತ ವಿತರಣಾ ವಲಯ ಯೋಜನೆಯ ಒಟ್ಟು ಮೊತ್ತದ ಭಾಗವಾಗಿರಲಿದೆ. ಅದರಡಿ ಹಾಲಿ ಇರುವ ನಿಯಮ ಮತ್ತು ಷರತ್ತುಗಳು 2022 ಮಾರ್ಚ್ 31 ವರೆಗೆ ಮುಂದುವರಿಯಲಿದೆ. ಯೋಜನೆಗಳಡಿಯಲ್ಲಿನ ನಿಧಿಗಳು ಐಪಿಡಿಎಸ್ ಅಡಿಯಲ್ಲಿ ಗುರುತಿಸಲಾಗಿರುವ ಯೋಜನೆಗಳಿಗೆ ಲಭ್ಯವಾಗಲಿವೆ ಮತ್ತು ಪ್ರಧಾನಮಂತ್ರಿಗಳ ಅಭಿವೃದ್ಧಿ ಕಾರ್ಯಕ್ರಮ(ಪಿಎಂಡಿಪಿ) ಅಡಿಯಲ್ಲಿ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಗೆ ಐಡಿಪಿಎಸ್ ಮತ್ತು ಡಿಡಿಯುಜಿಜೆವೈ ಅಡಿಯಲ್ಲಿ 2023 ಮಾರ್ಚ್ 31 ವರೆಗೆ ಅನುಮೋದಿಸಿರುವ ಯೋಜನೆಗಳಿಗೂ ಲಭ್ಯವಾಗಲಿದೆ.

ಪರಿಷ್ಕೃತ ವಿತರಣಾ ವಲಯದ ಯೋಜನೆಯು ಕಾರ್ಯಾಚರಣೆ ದಕ್ಷತೆಯನ್ನು ಮತ್ತು ಆರ್ಥಿಕ ಸುಸ್ಥಿರತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಪೂರ್ವ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಧಾರದ ಮೇಲೆ ಪೂರೈಕೆ ಮೂಲಸೌಕರ್ಯವನ್ನು ಬಲಪಡಿಸಲು ಮತ್ತು ಮೂಲಭೂತ ಕನಿಷ್ಠ ಮಾನದಂಡಗಳನ್ನು ಸಾಧಿಸಲು ಡಿಸ್ಕಾಮ್ ಗಳಿಗೆ ಫಲಿತಾಂಶ ಸಂಯೋಜಿತ ಆರ್ಥಿಕ ನೆರವು ಒದಗಿಲಾಗುವುದು. ಯೋಜನೆ 2025-26 ವರೆಗೆ ಲಭ್ಯವಿರಲಿದೆ. ಆರ್ ಇಸಿ ಮತ್ತು ಪಿಎಫ್ ಸಿಗಳನ್ನು ಯೋಜನೆಯ ಅನುಷ್ಠಾನಕ್ಕೆ ನೆರವು ನೀಡುವ ನೋಡಲ್ ಏಜೆನ್ಸಿಗಳನ್ನಾಗಿ ನಾಮನಿರ್ದೇಶನ ಮಾಡಲಾಗಿದೆ.  

ಯೋಜನೆಯ ಉದ್ದೇಶಗಳು

     i.        ಭಾರತದಾದ್ಯಂತ 2024-25 ವೇಳೆಗೆ ಎಟಿ ಮತ್ತು ಸಿ ನಷ್ಟವನ್ನು ಶೇ.12 ರಿಂದ 15ಕ್ಕೆ ಇಳಿಕೆ ಮಾಡುವುದು.

    ii.        2024-25 ವೇಳೆಗೆ ಎಸಿಎಸ್-ಎಆರ್ ಆರ್ ಅಂತರವನ್ನು ಶೂನ್ಯಕ್ಕೆ ಇಳಿಸುವುದು

   iii.        ಆಧುನಿಕ ಡಿಸ್ಕಾಮ್ ಗಳಿಗೆ ಸಾಂಸ್ಥಿಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು.

  iv.        ಆರ್ಥಿಕವಾಗಿ ಸುಸ್ಥಿರ ಮತ್ತು ಪರಿಣಾಮಕಾರಿ ವಿತರಣಾ ಕ್ಷೇತ್ರದ ಮೂಲಕ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ವಿಶ್ವಾಸಾರ್ಹ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಸುಧಾರಿಸುವುದು.

ವಿವರಗಳು

ಯೋಜನೆ ಡಿಸ್ಕಾಮ್ ಗಳ ಸಾಧನೆಗೆ ವಾರ್ಷಿಕ ಮೌಲ್ಯಮಾಪನ ನಡೆಸಲಿದ್ದು, ಅವುಗಳಲ್ಲಿ ಎಟಿ ಮತ್ತು ಸಿ ನಷ್ಟ, ಎಸಿಎಸ್-ಎಆರ್ ಆರ್ ಅಂತರ, ಮೂಲಸೌಕರ್ಯ ಉನ್ನತೀಕರಣ ಸಾಧನೆ, ಗ್ರಾಹಕರ ಸೇವೆಗಳು, ಪೂರೈಕೆ ಸಮಯ, ಕಾರ್ಪೊರೇಟ್ ಆಡಳಿತ ಇತ್ಯಾದಿ ಅಂಶಗಳು ಸೇರಿವೆ. ಡಿಸ್ಕಾಮ್ ಗಳು ಕನಿಷ್ಠ ಶೇ.60ರಷ್ಟು ಅಂಕಗಳನ್ನು ಗಳಿಸಬೇಕು ಮತ್ತು ವರ್ಷ ಯೋಜನೆ ಅಡಿಯಲ್ಲಿ ಲಭ್ಯವಿರುವ ನೆರವು ಪಡೆಯಲು ಕೆಲವು ಕನಿಷ್ಠ ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ.   

ಯೋಜನೆ ಅಡಿ ರೈತರಿಗೆ ವಿದ್ಯುತ್ ಪೂರೈಕೆ ಸುಧಾರಿಸುವುದಕ್ಕೆ ಪ್ರಮುಖ ಒತ್ತು ನೀಡಲಾಗುವುದು ಮತ್ತು ಕೃಷಿ ಫೀಡರ್ ಗಳಿಗೆ ಸೌರಶಕ್ತಿಯ ಮೂಲಕ ಹಗಲಿನ ವೇಳೆ ವಿದ್ಯುತ್ ಪೂರೈಸುವುದಾಗಿದೆ. ಯೋಜನೆ ಅಡಿ ಸುಮಾರು 20,000 ಕೋಟಿ ರೂ. ಮೊತ್ತದಲ್ಲಿ 10,000 ಪ್ರತ್ಯೇಕ ಕೃಷಿ ಫೀಡರ್ ಗಳ ಸ್ಥಾಪನೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು. ಇದರಿಂದ ರೈತರಿಗೆ ಹೆಚ್ಚಿನ ಪ್ರಯೋಜನವಾಗುವುದಲ್ಲದೆ ಅವರಿಗೆ ನಿರ್ದಿಷ್ಟ ಕೃಷಿ ಫೀಡರ್ ಗಳ ಮೂಲಕ ವಿಶ್ವಾಸಾರ್ಹ ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದೆ. ಯೋಜನೆ ಪ್ರಧಾನಮಂತ್ರಿ ಕಿಸಾನ್ ಊರ್ಜಾ ಸುಕರ್ಷಾ ಎವೆಮ್ ಉತ್ತನ್ ಮಹಾಭಿಯಾನ(ಪಿಎಂ-ಕೆಯುಎಸ್ ಯುಎಂ) ಯೋಜನೆಯಲ್ಲಿ ವಿಲೀನವಾಗಲಿದ್ದು, ಇದರಡಿ ಎಲ್ಲ ಫೀಡರ್ ಗಳನ್ನು ಸೌರಶಕ್ತಿಗೆ ಪರಿವರ್ತಿಸುವ ಮತ್ತು ರೈತರಿಗೆ ಹೆಚ್ಚುವರಿ ಆದಾಯ ಅವಕಾಶಗಳನ್ನು ಒದಗಿಸುವ ಗುರಿ ಹೊಂದಲಾಗಿದೆ

ಯೋಜನೆಯ ಮತ್ತೊಂದು ಪ್ರಮುಖ ಅಂಶವೆಂದರೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ(ಪಿಪಿಪಿ) ವಿಧಾನದಲ್ಲಿ ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಗಳನ್ನು ಅನುಷ್ಠಾನಗೊಳಿಸುವ ಮೂಲಕ ಗ್ರಾಹಕರ ಸಬಲೀಕರಣವನ್ನು ಕೈಗೊಳ್ಳುವುದಾಗಿದೆ. ಸ್ಮಾರ್ಟ್ ಮೀಟರ್ ಗಳಿಂದಾಗಿ ಗ್ರಾಹಕರು ತಿಂಗಳ ಆಧಾರಕ್ಕೆ ಬದಲು ದಿನ ನಿತ್ಯ ತಮ್ಮ ವಿದ್ಯುತ್ ಬಳಕೆ ಮೇಲೆ ನಿಗಾವಹಿಸಬಹುದಾಗಿದೆ. ಇದರಿಂದ ಅವರು ತಮ್ಮ ಅಗತ್ಯತೆಗಳಿಗೆ ತಕ್ಕಂತೆ ಮತ್ತು ಲಭ್ಯವಿರುವ ಸಂಪನ್ಮೂಲಗಳಿಗೆ ಅನುಸಾರವಾಗಿ ವಿದ್ಯುತ್ ಬಳಕೆ ಮಾಡಲು ಸಹಾಯಕವಾಗುತ್ತದೆ. ಯೋಜನೆಯ ಅವಧಿಯಲ್ಲಿ ಒಟ್ಟಾರೆ 25 ಕೋಟಿ ಸ್ಮಾರ್ಟ್ ಮೀಟರ್ ಗಳನ್ನು ಅಳವಡಿಸುವ ಯೋಜನೆಯಿದ್ದುಮೊದಲ ಹಂತದಲ್ಲಿ ಸಮರೋಪಾದಿಯಲ್ಲಿ ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಗಳನ್ನು ಅಳವಡಿಸುವುದಕ್ಕೆ ಆದ್ಯತೆಗಳನ್ನು ನೀಡಲಾಗಿದೆ. (i) ಎಟಿ ಮತ್ತು ಟಿ ನಷ್ಟ ಶೇ.15ಕ್ಕಿಂತ ಹೆಚ್ಚಿಸುವ 500 ಅಮೃತ್ ನಗರಗಳ ಎಲ್ಲಾ ವಿದ್ಯುಚ್ಛಕ್ತಿ ವಿಭಾಗಗಳು(ii) ಎಲ್ಲಾ ಕೇಂದ್ರಾಡಳಿತ ಪ್ರದೇಶಗಳು (iii) ಎಂಎಸ್ಎಂಇಗಳು ಮತ್ತು ಎಲ್ಲಾ ಇತರ ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರು (iv) ಬ್ಲಾಕ್ ಮಟ್ಟ ಮತ್ತು ಅದಕ್ಕಿಂತ ಮೇಲಿರುವ ಎಲ್ಲಾ ಸರ್ಕಾರಿ ಕಚೇರಿಗಳು (v) ಹೆಚ್ಚಿನ ನಷ್ಟವಾಗುತ್ತಿರುವ ಇತರ ಪ್ರದೇಶಗಳು. ಮೊದಲ ಹಂತದಲ್ಲಿ 2023 ಡಿಸೆಂಬರ್ ವೇಳೆಗೆ ಅಂದಾಜು 10 ಕೋಟಿ ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಗಳ ಅಳವಡಿಕೆ ಪ್ರಗತಿಯನ್ನು ವಿಶೇಷವಾಗಿ ಸರ್ಕಾರಿ ಕಚೇರಿಗಳ ಮೇಲೆ ವಿಶೇಷ ನಿಗಾವಹಿಸಲಾಗುವುದು. ಕಾಲಮಿತಿಯಲ್ಲಿ ಅವುಗಳು ಅನುಷ್ಠಾನವಾಗುವಂತೆ ನೋಡಿಕೊಳ್ಳಲಾಗುವುದು

ಕೃಷಿ ಸಂಪರ್ಕಗಳ ಚದುರಿದ ಸ್ವರೂಪ ಮತ್ತು ಅವು ವಾಸಸ್ಥಳದಿಂದ ದೂರವಿರುವುದನ್ನು ಗಮನಿಸಿದರೆ, ಕೃಷಿ ಸಂಪರ್ಕಗಳು ಫೀಡರ್ ಮೀಟರ್ ಗಳ ಮೂಲಕ ವ್ಯಾಪ್ತಿಗೆ ಒಳಪಡುತ್ತವೆ

ಗ್ರಾಹಕರಿಗೆ ಕಾಲಮಿತಿಯಲ್ಲಿ ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಗಳ ಅನುಷ್ಠಾನದ ಜೊತೆಗೆ ಕ್ರಮೇಣ ಪಿಪಿಪಿ ಮಾದರಿಯಲ್ಲಿ ಏಕಕಾಲದಲ್ಲಿ ಸಂವಹನ ವೈಶಿಷ್ಠ್ಯದೊಂದಿಗೆ ಫೀಡರ್ ಮತ್ತು ವಿತರಣಾ ಟ್ರಾನ್ಸ್ ಫಾರ್ಮರ್(ಡಿಟಿ) ಮಟ್ಟದಲ್ಲಿ ಸಿಸ್ಟಮ್ ಮೀಟರಿಂಗ್ ಕೈಗೊಳ್ಳಲು ಉದ್ದೇಶಿಸಲಾಗಿದೆ.

ಸಿಸ್ಟಮ್ ಮೀಟರ್ ಗಳು ಸೇರಿದಂತೆ ಐಟಿ/ಒಟಿ ಸಾಧನಗಳ ಮೂಲಕ ಸಂಗ್ರಹಿಸಲಾದ ದತ್ತಾಂಶ ವಿಶ್ಲೇಷಣೆಗೆ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳಲಾಗುವುದು. ಸ್ಮಾರ್ಟ್ ಮೀಟರ್ ಗಳಲ್ಲಿ ಪ್ರತಿ ತಿಂಗಳು ಇಂಧನ ಲೆಕ್ಕ ವರದಿಗಳು ಸಿದ್ಧವಾಗುವುದರಿಂದ ಡಿಸ್ಕಾಂಗಳು ನಷ್ಟ ಕಡಿತ, ಬೇಡಿಕೆ ಅಂದಾಜು, ಟೈಮ್ ಆಫ್ ಡೆ(ಟಿಒಡಿ) ದರ, ನವೀಕರಿಸಬಹುದಾದ ಇಂದನ(ಆರ್ ) ಸೇರ್ಪಡೆ ಮತ್ತು ಇತರ ಸಂಭಾವ್ಯ ವಿಶ್ಲೇಷಣೆಗಳನ್ನು ಕೈಗೊಳ್ಳಬಹುದಾಗಿದೆ. ಇದರಿಂದ ಡಿಸ್ಕಾಂಗಳಲ್ಲಿ ಆರ್ಥಿಕ ಸುಸ್ಥಿರತೆ ಮತ್ತು ಕಾರ್ಯಾಚರಣೆ ದಕ್ಷತೆ ವೃದ್ಧಿಗೆ ಹೆಚ್ಚಿನ ಪ್ರಮಾಣದಲ್ಲಿ ನೆರವಾಗಲಿವೆ. ಯೋಜನೆ ಅಡಿ ನಿಧಿಗಳನ್ನು ವಿತರಣಾ ವಲಯದಲ್ಲಿ ಕೃತಕ ಬುದ್ಧಿಮತ್ತೆ ಬಳಕೆಗೆ ಸಂಬಂಧಿಸಿದ ಅಭಿವೃದ್ಧಿ ಯೋಜನೆಗಳಿಗೆ ಬಳಕೆ ಮಾಡಲಾಗುವುದು. ಇದರಿಂದಾಗಿ ದೇಶಾದ್ಯಂತ ವಿತರಣಾ ವಲಯದಲ್ಲಿ ನವೋದ್ಯಮಗಳ ಅಭಿವೃದ್ಧಿಗೆ ಉತ್ತೇಜನ ನೀಡಿದಂತಾಗುತ್ತದೆ.

ಪ್ರಮುಖ ಅಂಶಗಳು

     i.        ಗ್ರಾಹಕ ಮೀಟರ್ ಮತ್ತು ಸಿಸ್ಟಮ್ ಮೀಟರ್        

)         ಕೃಷಿ ಗ್ರಾಹಕರನ್ನು ಹೊರತುಪಡಿಸಿ ಎಲ್ಲಾ ಗ್ರಾಹಕರಿಗೆ ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಗಳ ಅಳವಡಿಕೆ

ಬಿ)         25 ಕೋಟಿಗೂ ಅಧಿಕ ಗ್ರಾಹಕರು ಪ್ರೀಪೇಯ್ಡ್ ಸ್ಮಾರ್ಟ್ ಮೀಟರಿಂಗ್  ವ್ಯಾಪ್ತಿಗೆ.

ಸಿ) ನಗರ ಪ್ರದೇಶಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಅಮೃತ್ ನಗರಗಳಿಗೆ ಆದ್ಯತೆ ಹಾಗೂ ಅಧಿಕ ನಷ್ಟವಾಗುತ್ತಿರುವ ಪ್ರದೇಶಗಳಿಗೆ ಪ್ರೀಪೇಯ್ಡ್ ಸ್ಮಾರ್ಟ್ ಮೀಟರಿಂಗ್ ಅಂದರೆ 2023 ವೇಳೆಗೆ 10 ಕೋಟಿ ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆ, ಉಳಿದಿದ್ದನ್ನು ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು.

ಡಿ)     ಎಲ್ಲ ಫೀಡರ್ ಮತ್ತು ವಿತರಣಾ ಟ್ರಾನ್ಸ್ ಫಾರ್ಮರ್ ಗಳಿಗೆ ಸಂವಹನ ಎಎಂಐ ಮೀಟರ್ ಗಳನ್ನು ಅಳವಡಿಸಲು ಉದ್ದೇಶಿಸಲಾಗಿದ್ದು, ಇದರಿಂದ ವಿದ್ಯುತ್ ಲೆಕ್ಕ ದೊರಕಲಿದೆ. ಡಿಸ್ಕಾಂಗಳಿಂದ ಆಗುವ ನಷ್ಟ ತಪ್ಪಿಸಲು ಉತ್ತಮ ಯೋಜನೆಗಳನ್ನು ರೂಪಿಸಬಹುದಾಗಿದೆ.

)     ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಸುವುದರಿಂದ ಡಿಸ್ಕಾಂಗಳಿಗೆ ತಮ್ಮ ಕಾರ್ಯಾಚರಣೆ ದಕ್ಷತೆ ಸುಧಾರಣೆಗೆ ನೆರವಾಗುವುದಲ್ಲದೆ, ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಡಿಸ್ಕಾಂಗಳನ್ನು ಬಲವರ್ಧನೆಗೊಳಿಸುತ್ತದೆ.

    ii.        ಪ್ರತ್ಯೇಕ ಫೀಡರ್ ವಿಭಜನೆ

)     ಯೋಜನೆ ಅಡಿ ಪ್ರತ್ಯೇಕ ಫೀಡರ್ ಗಳಿಗೆ ಆರ್ಥಿಕ ನೆರವು ನೀಡುವುದಕ್ಕೆ ಒತ್ತು ನೀಡಲಾಗಿದ್ದು, ಕುಸುಮ್ ಅಡಿಯಲ್ಲಿ ಸೌರಶಕ್ತಿ ಬಳಕೆ ಮೂಲಕ ಪ್ರತ್ಯೇಕ ಫೀಡರ್ ಗಳನ್ನು ಅಳವಡಿಸಲಾಗುವುದು.

ಬಿ) ಫೀಡರ್ ಗಳಿಗೆ ಸೌರಶಕ್ತಿ ಒದಗಿಸುವುದರಿಂದ ಅವುಗಳು ಬೆಲೆ ತುಟ್ಟಿಯಾಗುತ್ತದೆ. ನೀರಾವರಿಗೆ ಹಗಲು ವೇಳೆ ವಿದ್ಯುತ್ ಒದಗಿಸಬಹುದಾಗಿದೆ ಮತ್ತು ರೈತರಿಗೆ ಹೆಚ್ಚುವರಿ ಆದಾಯ ದೊರಕಲಿದೆ

   iii.        ನಗರ ಪ್ರದೇಶಗಳಲ್ಲಿ ವಿತರಣಾ ವ್ಯವಸ್ಥೆ ಆಧುನೀಕರಣ

) ಎಲ್ಲಾ ನಗರ ಪ್ರದೇಶಗಳಲ್ಲಿ ಮೇಲ್ವಿಚಾರಣಾ ನಿಯಂತ್ರಣ ಮತ್ತು ದತ್ತಾಂಶ ಹೊಂದುವುದು(ಎಸ್ ಸಿಎಡಿಎ)

ಬಿ) 100 ನಗರ ಕೇಂದ್ರಗಳಲ್ಲಿ ಡಿಎಂಎಸ್

  iv.        ಗ್ರಾಮೀಣ ನಗರ ಪ್ರದೇಶಗಳ ವ್ಯವಸ್ಥೆ ಬಲವರ್ಧನೆ

ವಿಶೇಷ ವರ್ಗದ ರಾಜ್ಯಗಳಿಗೆ ಅವಕಾಶ:

ಸಿಕ್ಕಿಂ ಸೇರಿದಂತೆ ಈಶಾನ್ಯ ರಾಜ್ಯಗಳು ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲಪ್ರದೇಶ, ಉತ್ತರಾಖಂಡ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಲಕ್ಷದ್ವೀಪ ಇವುಗಳು ವಿಶೇಷ ವರ್ಗದ ರಾಜ್ಯಗಳೆಂದು ಪರಿಗಣಿಸಲಾಗುವುದು.

ಪ್ರೀಪೇಯ್ಡ್ ಸ್ಮಾರ್ಟ್ ಮೀಟರಿಂಗ್  ಅಳವಡಿಕೆಗಾಗಿ 900 ರೂ. ಅಥವಾ ಪ್ರತಿ ಗ್ರಾಹಕರ ಮೀಟರ್ ಗೆ ವೆಚ್ಚವಾಗುವ ಶೇ.15ರಷ್ಟು ಯಾವುದು ಕಡಿಮೆಯೋ ಅದನ್ನು ವಿಶೇಷ ವರ್ಗಕ್ಕೆ ಸೇರಿಲ್ಲದ ರಾಜ್ಯಗಳಿಗೆ ನೀಡಲಾಗುವುದು. “ವಿಶೇಷ ವರ್ಗದ ರಾಜ್ಯಗಳಿಗೆ 1350 ರೂ. ಅಥವಾ ಪ್ರತಿ ಗ್ರಾಹಕರಿಗೆ ವೆಚ್ಚವಾಗುವ ಶೇ.22.5ರಷ್ಟು ಯಾವುದು ಕಡಿಮೆಯೋ ಅದನ್ನು ನೀಡಲಾಗುವುದು

ಇದಲ್ಲದೆ, ಡಿಸ್ಕಾಂಗಳು 2023 ಡಿಸೆಂಬರ್ ಒಳಗೆ ಸ್ಮಾರ್ಟ್ ಮೀಟರ್ ಅಳವಡಿಕೆ ನಿರ್ದಿಷ್ಟ ಗುರಿಯನ್ನು ಸಾಧಿಸಿದರೆ ಶೇ.50ರಷ್ಟು ಹೆಚ್ಚುವರಿ ವಿಶೇಷ ಪ್ರೋತ್ಸಾಹ ಧನವನ್ನು ಪಡೆಯಬಹುದಾಗಿದೆ.

ಸ್ಮಾರ್ಟ್ ಮೀಟರಿಂಗ್ ಅಳವಡಿಕೆ ಕಾರ್ಯವಲ್ಲದೆ ಇತರೆ ಕಾರ್ಯಗಳಿಗೆ ಡಿಸ್ಕಾಂಗಳಿಗೆ ಗರಿಷ್ಠ ಆರ್ಥಿಕ ನೆರವನ್ನು ನೀಡಲಾಗುವುದು. ವಿಶೇಷ ವರ್ಗಕ್ಕೆ ಒಳಪಡದ ರಾಜ್ಯಗಳ ಡಿಸ್ಕಾಂಗಳಿಗೆ ಅನುಮೋದಿತ ವೆಚ್ಚದ ಶೇ.60ರಷ್ಟು ಮತ್ತು ವಿಶೇಷ ವರ್ಗದಲ್ಲಿನ ರಾಜ್ಯಗಳಲ್ಲಿನ ಡಿಸ್ಕಾಂಗಳಿಗೆ ಅನುಮೋದಿತ ವೆಚ್ಚದ ಗರಿಷ್ಠ ಶೇ.90ರಷ್ಟು ಆರ್ಥಿಕ ನೆರವನ್ನು ನೀಡಲಾಗುವುದು.

***



(Release ID: 1731863) Visitor Counter : 179