ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ – 19 ಲಸಿಕೆ ತಾಜಾ ಮಾಹಿತಿ


ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 29.68 ಕೋಟಿ ಗೂ ಹೆಚ್ಚು ಲಸಿಕೆ ಡೋಸ್ ಗಳ ಪೂರೈಕೆ

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಬಳಿ 1.92 ಕೋಟಿ ಗೂ ಹೆಚ್ಚು ಲಸಿಕೆ ಡೋಸ್ ಗಳು ಲಭ್ಯ

Posted On: 23 JUN 2021 11:11AM by PIB Bengaluru

ದೇಶಾದ್ಯಂತ ಕೋವಿಡ್ – 19 ಲಸಿಕೆ ವ್ಯಾಪ್ತಿಯನ್ನು ವಿಸ್ತರಿಸುವ ಮತ್ತು ಈ ಪ್ರಕ್ರಿಯೆಯ ವೇಗವರ್ಧನೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಕೋವಿಡ್ – 19 ಲಸಿಕೆಯ ಸಾರ್ವತ್ರೀಕರಣದ ಹೊಸ ಹಂತ 2021 ರ ಜೂನ್ 21 ರಿಂದ ಆರಂಭಗೊಂಡಿದೆ. ಹೆಚ್ಚು ಲಸಿಕೆಯ ಲಭ್ಯತೆ ಮೂಲಕ ಲಸಿಕಾ ಅಭಿಯಾನವನ್ನು ತೀವ್ರಗೊಳಿಸಲಾಗಿದೆ. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಮುಂದಾಗಿಯೇ ಲಸಿಕೆ ಲಭ್ಯತೆ ಮಾಹಿತಿ ತಿಳಿಯುತ್ತಿದೆ. ಇದರಿಂದ ಯೋಜನೆಯನ್ನು ಉತ್ತಮಗೊಳಿಸಲು ಮತ್ತು ಲಸಿಕೆ ಪೂರೈಕೆ ಸರಪಳಿಯನ್ನು ಸುಗಮಗೊಳಿಸಲು ಸಾಧ್ಯವಾಗಲಿದೆ.   

ರಾಷ್ಟ್ರವ್ಯಾಪಿ ನಡೆಯುತ್ತಿರುವ ಲಸಿಕಾ ಅಭಿಯಾನದಡಿ ಕೇಂದ್ರ ಸರ್ಕಾರ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಕೋವಿಡ್ – 19 ಲಸಿಕೆ ಒದಗಿಸಲಾಗುತ್ತಿದೆ. ಕೋವಿಡ್ – 19 ಲಸಿಕೆಯ ಹೊಸ ಸಾರ್ವತ್ರಿಕರಣ ಅಭಿಯಾನದಡಿ ಲಸಿಕೆ ಉತ್ಪಾದಕರು ಉತ್ಪಾದಿಸುವ ಶೇ 75 ರಷ್ಟು ಲಸಿಕೆಯನ್ನು ಕೇಂದ್ರ ಸರ್ಕಾರ ಖರೀದಿಸಿ ಮತ್ತು ಪೂರೈಕೆ [ಉಚಿತವಾಗಿ] ಮಾಡುತ್ತಿದೆ.

29.68 ಕೋಟಿ (29,68,27,450) ಗೂ ಹೆಚ್ಚು ಲಸಿಕೆ ಡೋಸ್ ಗಳನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಈ ವರೆಗೆ [ಉಚಿತ ಮಾರ್ಗದ ಮೂಲಕ] ಮತ್ತು ನೇರ ಖರೀದಿ ಮಾರ್ಗದ ಮೂಲಕ ಒದಗಿಸಲಾಗಿದೆ.

ಈವರೆಗೆ ವ್ಯರ್ಥವಾದದ್ದು ಸೇರಿ ಒಟ್ಟಾರೆ ಒಟ್ಟು 27,76,26,985 ಲಸಿಕೆ ಡೋಸ್ ಗಳನ್ನು ಹಾಕಲಾಗಿದೆ. [ ಇಂದು ಬೆಳಿಗ್ಗೆ 8 ಗಂಟೆಗೆ ದೊರೆತ ಮಾಹಿತಿ ಪ್ರಕಾರ]

1.92 ಕೋಟಿ ಗೂ ಹೆಚ್ಚು (1,92,00,465) ಕೋವಿಡ್ ಲಸಿಕೆ ಡೋಸ್ ಗಳು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಬಳಿ ಲಭ್ಯವಿದೆ.  

ಮುಂದುವರಿದಂತೆ 39,07,310  ಲಸಿಕೆ ಡೋಸ್ ಗಳು ಪೂರೈಕೆ ಹಂತದಲ್ಲಿವೆ ಮತ್ತು ಮುಂದಿನ ಮೂರು ದಿನಗಳಲ್ಲಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಇವುಗಳನ್ನು ಸ್ವೀಕರಿಸಲಿವೆ.

****



(Release ID: 1729653) Visitor Counter : 178