ಅಣುಶಕ್ತಿ ಇಲಾಖೆ

ಕರ್ನಾಟಕದ ಲಿಥಿಯಂ ಖನಿಜ ನಿಕ್ಷೇಪಗಳ ಕುರಿತು ಪತ್ರಿಕಾ ಹೇಳಿಕೆ

Posted On: 17 JUN 2021 2:41PM by PIB Bengaluru

ಪರಮಾಣು ಇಂಧನ ಇಲಾಖೆಯ (ಡಿಎಇ) ಘಟಕವಾದ, ಪರಮಾಣು ಖನಿಜ ಅನ್ವೇಷಣೆ ಹಾಗು ಸಂಶೋಧನೆ ನಿರ್ದೇಶನಾಲಯ (ಎಎಮ್ಡಿ), ಮತ್ತು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ (ಜಿಎಸ್), ಖನಿಜ ಪರಿಶೋಧನೆಯಲ್ಲಿ ತೊಡಗಿರುವ ಎರಡು ಪ್ರಮುಖ ಸಂಸ್ಥೆಗಳು , ದೇಶದ ಪರಮಾಣು ವಿದ್ಯುತ್ ಕಾರ್ಯಕ್ರಮವನ್ನು ಬೆಂಬಲಿಸಲು ಯುರೇನಿಯಂ, ಥೋರಿಯಂ, ನಿಯೋಬಿಯಂ, ಟ್ಯಾಂಟಲಮ್, ಲಿಥಿಯಂ, ಬೆರಿಲಿಯಮ್ ಮತ್ತು ವಿರಳ ಧಾತು (ಆರ್ಇಇ) ಖನಿಜಗಳ ಸಂಪನ್ಮೂಲಗಳ ಸಮೀಕ್ಷೆ, ನಿರೀಕ್ಷೆ ಮತ್ತು ಅಭಿವೃದ್ಧಿಯ ಆದೇಶವನ್ನು ಎಎಮ್ಡಿ ಹೊಂದಿದೆ.

ಲಿಥಿಯಂ ಹೊಸ ತಂತ್ರಜ್ಞಾನಗಳಿಗೆ ಪ್ರಮುಖ ಅಂಶವಾಗಿದೆ ಮತ್ತು ಪಿಂಗಾಣಿ, ಗಾಜು, ದೂರಸಂಪರ್ಕ ಮತ್ತು ಏರೋಸ್ಪೇಸ್ ಉದ್ಯಮಗಳಲ್ಲಿ ಇದರ ಬಳಕೆಯನ್ನು ಕಂಡುಕೊಳ್ಳುತ್ತದೆ. ಲಿಥಿಯಂನ ಬಹುಚರ್ಚಿತ ಉಪಯೋಗಗಳು - ಲಿಥಿಯಂ ಅಯಾನ್ ಬ್ಯಾಟರಿಗಳು, ನಯಗೊಳಿಸುವ ಗ್ರೀಸ್, ರಾಕೆಟ್ ಪ್ರೊಪೆಲ್ಲೆಂಟ್ಗಳಿಗೆ ಹೆಚ್ಚಿನ ಶಕ್ತಿಯ ಸಂಯೋಜಕ, ಮೊಬೈಲ್ ಫೋನ್ಗಳಿಗೆ ಆಪ್ಟಿಕಲ್ ಮಾಡ್ಯುಲೇಟರ್ಗಳು ಮತ್ತು ಥರ್ಮೋನ್ಯೂಕ್ಲಿಯರ್ ಪ್ರತಿಕ್ರಿಯೆಗಳಿಗೆ ಕಚ್ಚಾ ವಸ್ತುವಾಗಿ ಬಳಸುವ ಟೈಶಿಯಮ್ಗೆ ಪರಿವರ್ತಕವಾಗಿದೆ. ಅಂದರೆ ಸಮ್ಮೇಳನ, ಥರ್ಮೋನ್ಯೂಕ್ಲಿಯರ್ ಉಪಯೋಗಕ್ಕೆ ಲಿಥಿಯಂ ಅನ್ನು ಪರಮಾಣು ಶಕ್ತಿ ಕಾಯ್ದೆ ೧೯೬೨ ಅಡಿಯಲ್ಲಿ ನಿಗದಿತ ವಸ್ತು" ಎಂಬುದಾಗಿ ಘೋಷಿಸಲಾಗಿದೆ. ದೇಶದ ವಿವಿಧ ಭೌಗೋಳಿಕ ಕ್ಷೇತ್ರಗಳಲ್ಲಿ ಲಿಥಿಯಂ ಅನ್ನು ಅನ್ವೇಷಿಸಲು ಎಎಮ್ಡಿಗೆ ಅನುಮತಿ ನೀಡುತ್ತದೆ. ಲಿಥಿಯಂ ಅಯಾನ್ ಬ್ಯಾಟರಿಗಳಿಗೆ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ, ಲಿಥಿಯಂನ ಅವಶ್ಯಕತೆ ಹೆಚ್ಚಾಗಿದೆ. ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಎಎಮ್ಡಿ ದೇಶದ ವಿವಿಧ ಭೌಗೋಳಿಕ ಕ್ಷೇತ್ರಗಳಲ್ಲಿ ಲಿಥಿಯಂಗಾಗಿ ಪರಿಶೋಧನೆಯನ್ನು ತೀವ್ರಗೊಳಿಸಿದೆ .

ಇತ್ತೀಚೆಗೆ, ಕರ್ನಾಟಕದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲುಕಿನ ಅಲ್ಲಪಟ್ಟಣ - ಮರ್ಲಗಲ್ಲಾ ವಲಯದಲ್ಲಿ ಲಿಥಿಯಂ ಪರಿಶೋಧನೆ ಮತ್ತು ಸಂಪನ್ಮೂಲಗಳ ಸುದ್ದಿ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ನಿಟ್ಟಿನಲ್ಲಿ ಎಎಮ್ಡಿ, ಸ್ಪೊಡುಮೆನ್ (Li-ಖನಿಜವು Liz0 ~8%) ಮತ್ತು ಪೆಗ್ನಾಟೈಟ್ ಜಿಲ್ಲೆಗಳಿಂದ ನಿಯೋಬಿಯಂ ಟ್ಯಾಂಟಲಮ್ (Nb2Os, ಮತ್ತು TazOs) ಖನಿಜಗಳ, ಏಕೈಕ ಪರಿಶೋಧನಾ ಸಂಸ್ಥೆಯಾಗಿದ್ದು ೧೯೭೯ ರಿಂದ ೧೯೯೮ ರವರೆಗೆ ( ನೇ ಹಂತ) ಮತ್ತು ಮತ್ತೆ ೨೦೧೩ ರಿಂದ ( ನೇ ಹಂತ) ಕಾರ್ಯ ನಡೆಯುತ್ತಿದೆ. ಅದರಂತೆಯೇ, ರಾಜಸ್ಥಾನ ಮತ್ತು ಗುಜರಾತ್ ಉಪ್ಪು ನೀರಿನ ಪೂಲ್ಗಳಿಂದ ಲಿಥಿಯಂ ಅನ್ನು ಹೊರತೆಗೆಯಲು ಎಎಮ್ಡಿ ನಡೆಸಿದ ಪರಿಶೋಧನಾ ಕಾರ್ಯಗಳು ಮತ್ತು ಒಡಿಶಾ ಮತ್ತು ಚಿತ್ತಿಸ್ಕಡ್ ಮೈಕಾ ಬೆಲ್ಸ್ಗಳನ್ನು ಸಹ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ , ಅಲ್ಲಿ ಎಎಮ್ಡಿ ಪರಿಶೋಧನೆಯು ಪ್ರಾಥಮಿಕ ಹಂತದಲ್ಲಿದೆ .

ಪರಿಶೋಧನೆಯು ನಿರಂತರ ಪ್ರಕ್ರಿಯೆಯಾಗಿದ್ದು, ಅಲ್ಲಿ ದತ್ತಾಂಶ ಕ್ರಿಯಾತ್ಮವಾಗಿದ್ದು ಮತ್ತು ಧನಾತ್ಮಕ ಮತ್ತು ಋಣಾತ್ಮಕ ಫಲಿತಾಂಶಗಳ ಆಧಾರದ ಮೇಲೆ ಸತತವಾಗಿ ಬದಲಾಗುತ್ತಿರುತ್ತದೆ. ಕೆಲವು ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾಗಿದ್ದು, ದಕ್ಷಿಣ ಕರ್ನಾಟಕದ ಮಂಡ್ಯ ಜಿಲ್ಲೆಯ ಸಮೀಕ್ಷೆಯ ಪ್ರದೇಶದ ಒಂದು ಸಣ್ಣ ಭಾಗದಲ್ಲಿ ಲಿಥಿಯಂ ಲೋಹದ ಅಂದಾಜು ಭಾರಿ ಪ್ರಮಾಣದ ೧೪,೧೦೦ ಟನ್ಗಳಷ್ಟಿದೆ ಎಂದು ಉಲ್ಲೇಖಿಸಲಾಗಿದೆ.

ಪರಿಶೋಧನಾ ಪ್ರಯತ್ನಗಳು ಕರ್ನಾಟಕದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲುಕಿನ ಅಲ್ಲಪಟ್ಟಣ - ಮರ್ಲಗಲ್ಲಾ ವಲಯದ ವಿಭಾಗದಲ್ಲಿ - ೧೬೦೦ ಟನ್ ಅನುಮಾನಿತ ವರ್ಗದ (ಕಡಿಮೆ ಮಟ್ಟದ ವಿಶ್ವಾಸ) ಲಿಥಿಯಂ ಅನ್ನು ಇಲ್ಲಿಯವರೆಗೆ ಸ್ಥಾಪಿಸಿದೆ ಎಂದು ಎಎಮ್ಡಿ ಸ್ಪಷ್ಟಪಡಿಸಲು ಬಯಸುತ್ತದೆ. ಇದು ಪ್ರಾಥಮಿಕ ಅಂದಾಜು ಮತ್ತು ಸಂಪನ್ಮೂಲಗಳನ್ನು ವಿಶ್ವಾಸಾರ್ಹ ಉನ್ನತ ಮಟ್ಟದ ವರ್ಗಕ್ಕೆ ಪರಿವರ್ತಿಸಲು ಮತ್ತು ಪ್ರದೇಶದಲ್ಲಿನ ಲಿಥಿಯಂ ಸಂಪನ್ಮೂಲಗಳನ್ನು ಹೆಚ್ಚಿಸುವ ಸಾಧ್ಯತೆಯನ್ನು ಅನ್ವೇಷಿಸಲು ಹೆಚ್ಚಿನ ಪರಿಶೋಧನೆ ಪ್ರಯತ್ನಗಳು ಬೇಕಾಗುತ್ತವೆ . ಇದಲ್ಲದೆ, ಅದರ ಅದಿರಿನಿಂದ ಲಿಥಿಯಂ ಅನ್ನು ಲಾಭದಾಯಕವಾಗಿ ಹೊರತೆಗೆಯಲು ಸರಿಯಾದ ತಂತ್ರಜ್ಞಾನ/ ವಿಧಾನ ಲಭ್ಯವಿಲ್ಲದಿದ್ದರೆ, ಪರಿಶೋಧನೆಯ ನಿಜವಾದ ಲಾಭವು ಇಲ್ಲದಿರಬಹುದು. ಪ್ರಸ್ತುತ ಎಎಮ್ಡಿಯೊಂದಿಗೆ ಲಭ್ಯವಿರುವ ದತ್ತಾಂಶದೊಂದಿಗೆ, ಪರಿಶೋಧನೆಯ ನಿಜವಾದ ಆರ್ಥಿಕ ಪ್ರಯೋಜನಗಳನ್ನು ಹಂತದಲ್ಲಿ ಅಂದಾಜು ಮಾಡಲು ಸಾಧ್ಯವಿಲ್ಲ

ಪ್ರಸ್ತುತ, ಎಎಮ್ಡಿ ದೇಶದ ಇತರ ಸಂಭಾವ್ಯ ಭೌಗೋಳಿಕ ಕ್ಷೇತ್ರಗಳಲ್ಲಿ ಲಿಥಿಯಂ ಸಂಪನ್ಮೂಲಗಳನ್ನು ಹೆಚ್ಚಿಸಲು ಪರಿಶೋಧನೆ ನಡೆಸುತ್ತಿದೆ ದಿಕ್ಕಿನಲ್ಲಿ ಮುಂದಿನ ಕಾರ್ಯಗಳು ಪ್ರಗತಿ ಪಥದಲ್ಲಿವೆ.

***



(Release ID: 1727886) Visitor Counter : 155


Read this release in: English