ಭೂವಿಜ್ಞಾನ ಸಚಿವಾಲಯ
ಮುಂದಿನ 5 ದಿನಗಳಲ್ಲಿ ನೈಋತ್ಯ ಪರ್ಯಾಯ ದ್ವೀಪ ಭಾರತದಲ್ಲಿ ಗುಡುಗು, ಮಿಂಚು ಮತ್ತು ರಭಸಗಾಳಿಯೊಂದಿಗೆ ವ್ಯಾಪಕ ಮಳೆ ಸಾಧ್ಯತೆ; ಏಪ್ರಿಲ್ 14 ರಿಂದ 16 ರವರೆಗೆ ತಮಿಳುನಾಡು ಮತ್ತು ಕೇರಳದ ಹಾಗೂ ಮಾಹೆಯ ದಕ್ಷಿಣ ಮತ್ತು ಘಟ್ಟ ಪ್ರದೇಶದಲ್ಲಿ ಮತ್ತು ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಮಳೆಯಾಗುವ ಸಾಧ್ಯತೆ
ಮುಂದಿನ 4-5 ದಿನಗಳಲ್ಲಿ ಮಧ್ಯಪ್ರದೇಶ, ವಿದರ್ಭ, ತೆಲಂಗಾಣ, ಛತ್ತೀಸಗಢ, ಪಶ್ಚಿಮ ಬಂಗಾಳದ ಗಂಗಾ ನದಿ ಪ್ರದೇಶ ಹಾಗೂ ಒಡಿಶಾದಲ್ಲಿ ಮತ್ತು ಜಾರ್ಖಂಡ್ ನಲ್ಲಿ ಮುಂದಿನ 24 ಗಂಟೆಗಳಲ್ಲಿ ಚದುರಿದಂತೆ ಗುಡುಗು, ಮಿಂಚು ಮತ್ತು ರಭಸ ಗಾಳಿ ಸಹಿತ ಮಳೆ ಸಾಧ್ಯತೆ
ಸೌರಾಷ್ಟ್ರ ಮತ್ತು ಕಚ್ ನಲ್ಲಿ ಏಪ್ರಿಲ್ 12ರಂದು ಚದುರಿದಂತೆ ಬಿಸಿ ಹವೆಯ ವಾತಾವರಣ ನಿರೀಕ್ಷೆ
Posted On:
12 APR 2021 2:18PM by PIB Bengaluru
ಭಾರತೀಯ ಹವಾಮಾನ ಇಲಾಖೆ (ಐ.ಎಂ.ಡಿ.) ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರದ ರೀತ್ಯ:
ಮಹತ್ವದ ಹವಾಮಾನ ವೈಶಿಷ್ಟ್ಯಗಳು
♦ ದಕ್ಷಿಣ ಪರ್ಯಾಯ ದ್ವೀಪದಲ್ಲಿ ಉಷ್ಣವಲಯದ ತಳಮಟ್ಟದಲ್ಲಿ ದಟ್ಟ/ ಚಂಡಮಾರುತ ಪರಿಚಲನೆಯ ಪ್ರಭಾವದಡಿಯಲ್ಲಿ; ಮುಂದಿನ 5 ದಿನಗಳಲ್ಲಿ ನೈಋತ್ಯ ಪರ್ಯಾಯದ್ವೀಪ ಭಾರತದಲ್ಲಿ ಗುಡುಗು, ಮಿಂಚು ಮತ್ತು ರಭಸಗಾಳಿ (ಪ್ರತಿ ಗಂಟೆಗೆ 30-40 ಕಿ.ಮೀ.)ಯೊಂದಿಗೆ ಸಾಕಷ್ಟು ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ.
ತಮಿಳುನಾಡು ಮತ್ತು ಕೇರಳ ಹಾಗೂ ಮಾಹೆಯ ದಕ್ಷಿಣ ಮತ್ತು ಘಟ್ಟ ಪ್ರದೇಶದಲ್ಲಿ ಮತ್ತು ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ 2021ರ ಏಪ್ರಿಲ್ 14ರಿಂದ 16ರವರೆಗೆ ಚದುರಿದಂತೆ ಭಾರಿ ಮಳೆ ಸಾಧ್ಯತೆ.
♦ ತಳ ಮಟ್ಟದಲ್ಲಿ ಚಂಡಮಾರುತದ ಪರಿಚಲನೆ ನೈಋತ್ಯ ಮಧ್ಯಪ್ರದೇಶ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಇರಲಿದೆ. ಇದರ ಪ್ರಭಾವದಿಂದ ಮಧ್ಯಪ್ರದೇಶ, ವಿದರ್ಭ, ತೆಲಂಗಾಣ, ಛತ್ತೀಸಗಢ, ಪಶ್ಚಿಮ ಬಂಗಾಳದ ಗಂಗಾನದಿ ಪ್ರದೇಶ ಮತ್ತು ಒಡಿಶಾದಲ್ಲಿ ಮುಂದಿನ 45 ದಿನಗಳಲ್ಲಿ ಮತ್ತು ಮುಂದಿನ 24 ಗಂಟೆಗಳಲ್ಲಿ ಜಾರ್ಖಂಡನ್ ನಲ್ಲಿ ಚದುರಿದಂತೆ ಗುಡುಗು, ಮಿಂಚು ಮತ್ತು ರಭಸ ಗಾಳಿಯೊಂದಿಗೆ (ಗಂಟೆಗೆ 30-40 ಕಿ.ಮೀ.)ಮಳೆ ಸಾಧ್ಯತೆ.
♦ ಗುಡುಗು, ಗಾಳಿಯ ಚಟುವಟಿಕೆಯಿಂದಾಗಿ ಮುಂದಿನ 4-5 ದಿನಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಗಣನೀಯ ಬದಲಾವಣೆ ಇರುವುದಿಲ್ಲ. ಆದಾಗ್ಯೂ ಸೌರಾಷ್ಟ್ರ, ಕಚ್ ನಲ್ಲಿ ಏಪ್ರಿಲ್ 12ರಂದು ಚದುರಿದಂತೆ ಬಿಸಿ ಹವೆಯ ವಾತಾವರಣ ಇರಲಿದೆ.
ಹವಾಮಾನದ ಪ್ರಮುಖ ಅವಲೋಕನ
♦ ಮಳೆ/ಗಾಳಿ ಗುಡುಗು ಸಹಿತ ಮಳೆ (ನಿನ್ನೆ 0830 ಗಂಟೆಗಳಿಂದ 1730ಗಂಟೆವರೆಗೆ): ಅರುಣಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಕ್, ಗಿಲ್ಗಿಟ್, ಬಾಲ್ಟಿಸ್ತಾನ್ ಮತ್ತು ಮುಜಾಫರಾಬಾದ್ ಮತ್ತು ಕೇರಳ ಹಾಗೂ ಮಾಹೆಯಲ್ಲಿ ಮತ್ತು ಅಸ್ಸಾಂ ಮತ್ತು ಮೇಘಾಲಯ, ಒಡಿಶಾ, ಮಧ್ಯ ಮಹಾರಾಷ್ಟ್ರ, ಕರ್ನಾಟಕದ ಉತ್ತರ ಒಳನಾಡು ಮತ್ತು ತಮಿಳುನಾಡು, ಪಾಂಡಿಚೇರಿ ಮತ್ತು ಕಾರೈಕಲ್ ನಲ್ಲಿ ದಾಖಲಾಗಿದೆ.
♦ ದಾಖಲಾದ ಮಳೆ (ನಿನ್ನೆ 0830 ಗಂಟೆಗಳಿಂದ 1730ಗಂಟೆವರೆಗೆ) (1 ಸೆ.ಮೀ. ಅಥವಾ ಹೆಚ್ಚು) ಪುನಲೂರ್ -6, ತಿರುವನಂತಪುರಂ 3, ಬೆಳಗಾವಿ -1.
♦ ಗುಡುಗು ಸಹಿತ ಮಳೆ (ನಿನ್ನೆ 1730 ಗಂಟೆಯಿಂದ ಇಂದು 0530ಗಂಟೆವರೆಗೆ): ಕರ್ನಾಟಕದ ಉತ್ತರ ಒಳನಾಡಿನ ಕೆಲವೆಡೆ ಮತ್ತು ಜಮ್ಮು, ಕಾಶ್ಮೀರ, ಲಡಾಕ್, ಗಿಲ್ಗಿಟ್, ಬಾಲ್ಟಿಸ್ತಾನ್ ಮತ್ತು ಮುಜಾಫರಾಬಾದ್, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ, ಅಸ್ಸಾಂ, ಮತ್ತು ಮೇಘಾಲಯ, ಮಧ್ಯಪ್ರದೇಶ, ಮಧ್ಯ ಮಹಾರಾಷ್ಟ್ರ, ಕರಾವಳಿ ಕರ್ನಾಟಕ, ತೆಲಂಗಾಣ ಮತ್ತು ಕೇರಳ ಮತ್ತು ಮಾಹೆಯಲ್ಲಿ ದಾಖಲಾಗಿದೆ.
ಯಾವುದೇ ದಿನಕ್ಕೆ ಮುನ್ಸೂಚನೆ ಮತ್ತು ಮುನ್ನೆಚ್ಚರಿಕೆ 0830 ಗಂಟೆಯಿಂದ ಮಾರನೆ ದಿನದ 0830ರವರೆಗೆ ಸಿಂಧುವಾಗಿರುತ್ತದೆ.
ಹೆಚ್ಚಿನ ವಿವರಗಳಿಗೆ www.imd.gov.in ತಾಣಕ್ಕೆ ಭೇಟಿ ನೀಡಿ ಅಥವಾ ಸಂಪರ್ಕಿಸಿ: +91 11 24631913, 24643965, 24629798 (1875ರಿಂದ ದೇಶದ ಸೇವೆಯಲ್ಲಿ)
ಮುಂದಿನ 5 ದಿನಗಳಿಗೆ ಹವಾಮಾನ ಮುನ್ನೆಚ್ಚರಿಕೆ *
12 ಏಪ್ರಿಲ್ (ದಿನ1): ♦ ಗುಡುಗು ಗಾಳಿ ಸಹಿತ ಹಗುರ ಮಳೆ ಮತ್ತು ರಭಸ ಗಾಳಿ (ಪ್ರತಿ ಗೆಂಗೆ 30-40 ಕಿ.ಮೀ. ವೇಗ) ಚದುರಿದಂತೆ ಪೂರ್ವ ಮಧ್ಯಪ್ರದೇಶ, ವಿದರ್ಭ, ಛತ್ತೀಸಗಢ, ಜಾರ್ಖಂಡ್, ಪಶ್ಚಿಮ ಬಂಗಾಳದ ಗಂಗಾಪ್ರದೇಶ, ಒಡಿಶಾ, ಮಧ್ಯ ಮಹಾರಾಷ್ಟ್ರ, ಮರಾಠವಾಡ, ತೆಲಂಗಾಣ ಮತ್ತು ಕೇರಳ ಮತ್ತು ಮಾಹೆಯಲ್ಲಿ ಸಾಧ್ಯತೆ, ಮತ್ತು ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್ – ಬಾಲ್ಟಿಸ್ತಾನ್ ಮತ್ತು ಮುಝಫರಾಬಾದ್, ಪೂರ್ವ ಮಧ್ಯಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ, ಕೊಂಕಣ ಮತ್ತು ಗೋವಾ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಮತ್ತು ಲಕ್ಷದ್ವೀಪದಲ್ಲಿ ಚದುರಿದಂತೆ ಹಗುರ ಮಳೆ ಸಂಭವ.
♦ ಸೌರಾಷ್ಟ್ರ ಮತ್ತು ಕಚ್ ನಲ್ಲಿ ಬಿಸಿ ಹವೆ ವಾತಾವರಣದ ಸಾಧ್ಯತೆ
13 ಏಪ್ರಿಲ್ (ದಿನ 2): ♦ ಗಾಳಿ ಗುಡುಗು ಮಿಂಚು ಸಹಿತ ಮಳೆ ಮತ್ತು ರಭಸ ಗಾಳಿ (30-40 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ)ಪೂರ್ವ ಮಧ್ಯಪ್ರದೇಶ, ವಿದರ್ಭ, ಒಡಿಶಾ, ಅಸ್ಸಾಂ ಮತ್ತು ಮೇಘಾಲಯ, ಮಧ್ಯ ಮಹಾರಾಟ್ರ, ಮರಾಠವಾಡ, ತೆಲಂಗಾಣ ಮತ್ತು ಕೇರಳ ಹಾಗೂ ಮಾಹೆಯಲ್ಲಿ ಸಾಧ್ಯತೆ. ಮಿಂಚಿನೊದಿಗೆ ಚದುರಿದಂತೆ ಛತ್ತೀಸಗಢ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರ, ಕೊಂಕಣ ಮತ್ತು ಗೋವಾ, ಕರ್ನಾಟಕದ ದಕ್ಷಿಣ ಒಳನಾಡು, ತಮಿಳುನಾಡು, ಪಾಂಡಿಚೇರಿ ಮತ್ತು ಕಾರೈಕಲ್ ಹಾಗೂ ಲಕ್ಷದ್ವೀಪದಲ್ಲಿ ಸಾಧ್ಯತೆ.
14 ಏಪ್ರಿಲ್ (ದಿನ 3):♦ ಗಾಳಿ ಮಿಂಚು, ಗುಡುಗು ಸಹಿತ ಮಳೆ, ಬಿರು ಮತ್ತು ರಭಸ ಗಾಳಿ (ಗಂಟೆಗೆ 30-40 ಕಿ.ಮೀ.) ಚದುರಿದಂತೆ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್ –ಬಾಲ್ಟಿಸ್ತಾನ್ ಮತ್ತು ಮುಜಾಫರಾಬಾದ್, ಮತ್ತು ಹಿಮಾಚಲ ಪ್ರದೇಶದಲ್ಲಿ ಸಾಧ್ಯತೆ; ಮಿಂಚು ಮತ್ತು ರಭಸ ಗಾಳಿ (ಗಂಟೆಗೆ 30-40 ಕಿ.ಮೀ) ಚದುರಿದಂತೆ ವಿದರ್ಭ, ಪಶ್ಚಿಮ ಬಂಗಾಳದ ಗಂಗಾಪ್ರದೇಶ, ಅಸ್ಸಾಂ ಮತ್ತು ಮೇಘಾಲಯ, ಮಧ್ಯ ಮಹಾರಾಷ್ಟ್ರ, ಮರಾಠವಾಡ, ತೆಲಂಗಾಣ ಮತ್ತು ಕೇರಳ ಹಾಗೂ ಮಾಹೆಯಲ್ಲಿ ಸಂಭವ, ಮತ್ತು ಚದುರಿದಂತೆ ಮಧ್ಯಪ್ರದೇಶ, ಛತ್ತೀಸಗಢ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ, ಆಂಧ್ರಪ್ರದೇಶ ಕರಾವಳಿ, ಮತ್ತು ಯನಮ್, ರಾಯಲಸೀಮಾ, ಕರ್ನಾಟಕ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಮತ್ತು ಲಕ್ಷದ್ವೀಪದಲ್ಲಿ ಮಿಂಚು ಸಹಿತ ಮಳೆ ಸಾಧ್ಯತೆ.
♦ ಪಶ್ಚಿಮ ರಾಜಾಸ್ಥಾನದಲ್ಲಿ ಚದುರಿದಂತೆ ಗುಡುಗು ಗಾಳಿ ಸಹಿತ /ಧೂಳಿನಿಂದ ಕೂಡಿದ ಗಾಳಿ ಸಾಧ್ಯತೆ.
♦ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು, ಕೇರಳ ಮತ್ತು ಮಾಹೆ ಮತ್ತು ತಮಿಳುನಾಡಿನ ದಕ್ಷಿಣ ಮತ್ತು ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸಾಧ್ಯತೆ.
15 ಏಪ್ರಿಲ್ (ದಿನ 4): ♦ ಗಾಳಿ,ಗುಡುಗು, ಮಿಂಚು ಹಾಗೂ ರಭಸ ಗಾಳಿ (ಪ್ರತಿ ಗಂಟೆಗೆ 30-40 ಕಿ.ಮೀ. ತಲುಪುವ ಸಾಧ್ಯತೆ) ಮಳೆ ಚದುರಿದಂತೆ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್ ಬಾಲ್ಟಿಸ್ತಾನ್ ಮತ್ತು ಮುಝಾಫರಾಬಾದ್, ವಿದರ್ಭ, ಜಾರ್ಖಂಡ್, ಪಶ್ಚಿಮ ಬಂಗಾಳ, ಮತ್ತು ಸಿಕ್ಕಿಂ, ಒಡಿಶಾ, ಅಸ್ಸಾಂ ಮತ್ತು ಮೇಘಾಲಯ, ತೆಲಂಗಾಣ ಮತ್ತು ಕೇರಳ ಹಾಗೂ ಮಾಹೆಯಲ್ಲಿ ಸಾಧ್ಯತೆ. ಮತ್ತು ಮಿಂಚು ಸಹಿತ ಮಳೆ ಚದುರಿದಂತೆ ಹಿಮಾಚಲ ಪ್ರದೇಶ, ಪಂಜಾಬ್, ಬಿಹಾರ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ, ಆಂಧ್ರಪ್ರದೇಶ ಮತ್ತು ಯನಮ್ ಕರಾವಳಿ, ಕರ್ನಾಟಕ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಮತ್ತು ಲಕ್ಷದ್ವೀಪದ ಕರಾವಳಿಯಲ್ಲಿ ಸಾಧ್ಯತೆ.
♦ ಜಮ್ಮು ಮತ್ತು ಕಾಶ್ಮೀರ ಮತ್ತು ಮುಜಫರಾಬಾದ್, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು, ಕೇರಳ ಮತ್ತು ಮಾಹೆ ಮತ್ತು ತಮಿಳುನಾಡಿನ ದಕ್ಷಿಣ ಮತ್ತು ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸಾಧ್ಯತೆ.
16 ಏಪ್ರಿಲ್ (ದಿನ 5): ♦ ಗಾಳಿ,ಗುಡುಗು, ಮಿಂಚು ಹಾಗೂ ರಭಸ ಗಾಳಿ (ಪ್ರತಿ ಗಂಟೆಗೆ 30-40 ಕಿ.ಮೀ. ತಲುಪುವ ಸಾಧ್ಯತೆ) ಮಳೆ ಚದುರಿದಂತೆ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್ ಬಾಲ್ಟಿಸ್ತಾನ್ ಮತ್ತು ಮುಝಾಫರಾಬಾದ್, ವಿದರ್ಭ, ಜಾರ್ಖಂಡ್, ಪಶ್ಚಿಮ ಬಂಗಾಳ, ಮತ್ತು ಸಿಕ್ಕಿಂ, ಒಡಿಶಾ, ಅಸ್ಸಾಂ ಮತ್ತು ಮೇಘಾಲಯ, ತೆಲಂಗಾಣ ಮತ್ತು ಕೇರಳ ಹಾಗೂ ಮಾಹೆಯಲ್ಲಿ ಸಾಧ್ಯತೆ. ಮತ್ತು ಮಿಂಚು ಸಹಿತ ಮಳೆ ಚದುರಿದಂತೆ ಹಿಮಾಚಲ ಪ್ರದೇಶ, ಪಂಜಾಬ್, ಬಿಹಾರ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ, ಆಂಧ್ರಪ್ರದೇಶ ಮತ್ತು ಯನಮ್, ಕರ್ನಾಟಕ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಮತ್ತು ಲಕ್ಷದ್ವೀಪ ಕರಾವಳಿಯಲ್ಲಿ ಸಾಧ್ಯತೆ.
♦ ಗುಡುಗು/ ಧೂಳಿನ ಗಾಳಿ ಚದುರಿದಂತೆ ಪಶ್ಚಿಮ ರಾಜಾಸ್ಥಾನದಲ್ಲಿ ಬೀಸುವ ಸಾಧ್ಯತೆ.
♦ ಜಮ್ಮು ಮತ್ತು ಕಾಶ್ಮೀರ ಮತ್ತು ಮುಜಫರಾಬಾದ್, ಲಢಾಕ್, ಗಿಲ್ಗಿಟ್ ಬಾಲ್ಟಿಸ್ತಾನ್, ಮತ್ತು ಮುಜಾಫರಾಬಾದ್, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು, ಕೇರಳ ಮತ್ತು ಮಾಹೆ ಮತ್ತು ತಮಿಳುನಾಡಿನ ದಕ್ಷಿಣ ಮತ್ತು ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸಾಧ್ಯತೆ.
(ಗ್ರಾಫಿಕ್ ಜೊತೆ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ)
ಸ್ಥಳ ನಿರ್ದಿಷ್ಟ ಮುನ್ನೆಚ್ಚರಿಕೆ ಮತ್ತು ಹವಾಮಾನ ಮುನ್ಸೂಚನೆಗಳಿಗಾಗಿ ಮೌಸಮ್ ಆಪ್ MAUSAM APP ಕೃಷಿ ಸಂಬಂಧಿತ ಮುನ್ಸೂಚನೆಗಳಿಗೆ ಮೇಘದೂತ್ ಆಪ್ MEGHDOOT APP ಮತ್ತು ಮಿಂಚು, ಸಿಡಿಲಿನ ಮುನ್ನೆಚ್ಚರಿಕೆಗಾಗಿ ದಾಮಿನಿ ಆಪ್ DAMINI APP ಡೌನ್ ಲೋಡ್ ಮಾಡಿಕೊಳ್ಳಿ. ಜಿಲ್ಲಾವಾರು ಹವಾಮಾನ ಮುನ್ಸೂಚನೆಗಳಿಗಾಗಿ ಎಂ.ಸಿ /ಆರ್.ಎಂ.ಸಿ. ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.
***
(Release ID: 1711817)
Visitor Counter : 203