ಉಪರಾಷ್ಟ್ರಪತಿಗಳ ಕಾರ್ಯಾಲಯ

ಜನರ ಜೀವನವದಲ್ಲಿ ಸಂತೋಷ ತರುವುದೇ ವಿಜ್ಞಾನದ ಅಂತಿಮ ಗುರಿ


ಭವಿಷ್ಯದ ಪೀಳಿಗೆಗೆ ಸಂಸ್ಥೆಯ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿ ಆತ್ಮನಿರ್ಭರ ಭಾರತಕ್ಕೆ ಅಡಿಪಾಯ:
ಉಪ ರಾಷ್ಟ್ರಪತಿ ಶ್ರೀ ಎಂ ವೆಂಕಯ್ಯ ನಾಯ್ಡು

Posted On: 29 DEC 2020 4:53PM by PIB Bengaluru

ಜನರ ಜೀವನವನ್ನು ಹಿತಕರವಾಗಿಸುವುದು ಮತ್ತು ಅವರ ಬದುಕಿನಲ್ಲಿ ಸಂತೋಷ ತರುವುದೇ ವಿಜ್ಞಾನದ ಅಂತಿಮ ಗುರಿಯಾಗಿದೆ ಎಂದು ಉಪ ರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಬೆಂಗಳೂರು ಸಮೀಪದ ಹೊಸಕೋಟೆಯಲ ಭಾರತೀಯ ಖಭೌತ (ಆಸ್ಟ್ರೋಫಿಸಿಕ್ಸ್) ವಿಜ್ಞಾನ ಸಂಸ್ಥೆಯ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಶೋಧನೆ ಮತ್ತು ಶಿಕ್ಷಣ ಕೇಂದ್ರ (CREST) ದಲ್ಲಿ ಎರಡು ಸೌಲಭ್ಯಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಖಭೌತ (ಆಸ್ಟ್ರೋಫಿಸಿಕ್ಸ್) ವಿಜ್ಞಾನ ಸಂಸ್ಥೆಯ ಪರಿಸರ ಪರೀಕ್ಷಾ ಸೌಲಭ್ಯವು ಸಣ್ಣ ಪೇಲೋಡ್ಗಳನ್ನು ಬಾಹ್ಯಾಕಾಶಕ್ಕೆ ಸೇರಿಸಲು ನೆರವಾಗುತ್ತದೆ. ಸಣ್ಣ ಪೇಲೋಡ್ಗಳನ್ನು ಅಭಿವೃದ್ಧಿಪಡಿಸಲು ವಿಶ್ವವಿದ್ಯಾಲಯಗಳು ಮತ್ತು ಉದ್ಯಮಗಳು ಇದನ್ನು ಬಳಸಲು ಮುಕ್ತಗೊಳಿಸಲಾಗುತ್ತದೆ ಸೌಲಭ್ಯಗಳು ಭವಿಷ್ಯದಲ್ಲಿ ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆಗೆ ಸಹಾಯ ಮಾಡುತ್ತವೆ ಎಂದು ಅವರು ತಿಳಿಸಿದರು.

ಭವಿಷ್ಯದ ಪೀಳಿಗೆಗೆ ಮೂಲಭೂತ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ಬದ್ಧತೆಗೆ ಸಂಸ್ಥೆಯು ಅತ್ಯುತ್ತಮ ಉದಾಹರಣೆಯಾಗಿದೆ ಮತ್ತು ಇದು ಆತ್ಮನಿರ್ಭರ ಭಾರತಕ್ಕೆ ಅಡಿಪಾಯವಾಗಿದೆ ಎಂದು ಅವರು ಹೇಳಿದರು.

2014 ರಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸರ್ಕಾರವು ಅಮೆರಿಕದ ಹವಾಯಿಯಲ್ಲಿ ಮೂವತ್ತು ಮೀಟರ್ ದೂರದರ್ಶಕವನ್ನು ನಿರ್ಮಿಸಲು ಜಪಾನ್, ಚೀನಾ, ಕೆನಡಾ ಮತ್ತು ಅಮೆರಿಕಾದೊಂದಿಗೆ ಭಾರತವೂ ಸೇರಿಕೊಳ್ಳಲು ಅನುಮೋದನೆ ನೀಡಿತು. ಅಂತರರಾಷ್ಟ್ರೀಯ ಪ್ರಯತ್ನದ ಸಾಕಾರಕ್ಕಾಗಿ ಆಪ್ಟಿಕ್ಸ್ ರೂಪಿಸುವ ಸೌಲಭ್ಯವನ್ನು ಇಂದು ಉದ್ಘಾಟಿಸುತ್ತಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು.

ಇಂತಹ ಬೃಹತ್ ವೈಜ್ಞಾನಿಕ ಯೋಜನೆಗಳಲ್ಲಿ ಭಾಗವಹಿಸುವಿಕೆಯು ಭಾರತೀಯ ವಿಜ್ಞಾನಿಗಳಿಗೆ ಉತ್ತಮ ಭೂಮಿಕೆಯನ್ನು ಒದಗಿಸುತ್ತದೆ ಮತ್ತು ಉನ್ನತ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಉದ್ಯಮಗಳಿಗೆ ಸಹಾಯ ಮಾಡುತ್ತದೆ ಎಂದರು.

ಭಾರತೀಯ ಖಭೌತ ವಿಜ್ಞಾನ ಸಂಸ್ಥೆಯು ಖಗೋಳ ಸಂಶೋಧನೆಯಲ್ಲಿ ಸುದೀರ್ಘ ಇತಿಹಾಸವನ್ನು ಹೊಂದಿದೆ ಮತ್ತು ವೈಜ್ಞಾನಿಕ ಜ್ಞಾನಕ್ಕೆ ಸಮೃದ್ಧ ಕೊಡುಗೆ ನೀಡಿದೆ. ಸೂರ್ಯನಲ್ಲಿ ಹೀಲಿಯಂ ಅಂಶದ ಉಪಸ್ಥಿತಿ ಮತ್ತು ಯುರೇನಸ್ ಗ್ರಹದ ಸುತ್ತ ಉಂಗುರಗಳು ಸೇರಿದಂತೆ ಅನೇಕ ಪ್ರಮುಖ ಆವಿಷ್ಕಾರಗಳಲ್ಲಿ ಸಂಸ್ಥೆ ಕೆಲಸ ಮಾಡಿದೆ ಎಂದು ಅವರು ತಿಳಿಸಿದರು.

ಖಗೋಳವಿಜ್ಞಾನವು ಸಮಾಜಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನ ನೀಡಿದೆ. ಖಗೋಳವಿಜ್ಞಾನದಿಂದ ಕೈಗಾರಿಕೆ, ಬಾಹ್ಯಾಕಾಶ ಮತ್ತು ಇಂಧನ ಕ್ಷೇತ್ರಗಳಿಗೆ ಅಪಾರ ಪ್ರಮಾಣದ ತಂತ್ರಜ್ಞಾನ ವರ್ಗಾವಣೆಯಾಗಿದೆ. ಇಂದು ನಾವು ಲೀಲಾಜಾಲವಾಗಿ ಬಳಸುವ ಅನೇಕ ತಂತ್ರಜ್ಞಾನಗಳು- ಎಕ್ಸ್ ರೇ ಯಂತ್ರಗಳು, ನಿಖರ ಗಡಿಯಾರಗಳು, ಸೂಪರ್ ಕಂಪ್ಯೂಟರ್ಗಳು, ಉಪಗ್ರಹ ಸಂಪರ್ಕ, ಜಿಪಿಎಸ್- ಇವೆಲ್ಲವೂ ಖಗೋಳ ವಿಜ್ಞಾನದ ಸಂಶೋಧನೆಯ ಫಲಗಳಾಗಿವೆ.

ಖಗೋಳವಿಜ್ಞಾನವು ಹಲವಾರು ಅಂತರರಾಷ್ಟ್ರೀಯ ಯೋಜನೆಗಳ ಮೂಲಕ ಜನರು ಮತ್ತು ರಾಷ್ಟ್ರಗಳನ್ನು ಒಟ್ಟುಗೂಡಿಸುತ್ತಿದೆ ಎಂದು ಉಪ ರಾಷ್ಟ್ರಪತಿ ಹೇಳಿದರು.

ಖಗೋಳ ಅಧ್ಯಯನಗಳು ಭೂಮಿಯ ವಾತಾವರಣದ ವಿಕಸನ ಮತ್ತು ಸಂಯೋಜನೆಯನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಹವಾಮಾನ ಬದಲಾವಣೆಗೆ ಸಂಬಂಧಿಸಿದ ಅಂಶಗಳು ಮತ್ತು ಅದನ್ನು ಪರಿಹರಿಸಲು ಅಗತ್ಯವಾದ ಹಂತಗಳ ಕುರಿತು ಇದು ನಮಗೆ ಪ್ರಮುಖ ಒಳನೋಟಗಳನ್ನು ಒದಗಿಸುತ್ತದೆ ಎಂದರು.

ಪುನರಾವರ್ತಿತ ಪ್ರಯೋಗಗಳ ಮೂಲಕ ಸತ್ಯಗಳನ್ನು ನಿಕಷಕ್ಕೊಡ್ಡುವ ವಿಜ್ಞಾನವು ಯಾವುದೇ ಸಮಾಜದ ಬುನಾದಿಯಾಗಿದೆ. ಸಮಾಜದಲ್ಲಿ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸುವುದು ಸಮಾಜ ಪ್ರಗತಿಗೆ ಮತ್ತು ಮಾನವ ಸಂಕುಲದ ಸುಸ್ಥಿರತೆಗೆ ಪ್ರಮುಖವಾಗಿದೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಅತ್ಯಂತ ವೇಗವಾಗಿ ಸಾಗುತ್ತಿದೆ. ಕ್ಷ ಕಿರಣ ಮತ್ತು ಮತ್ತು ಅತಿ ನೇರಳೆ ಕಿರಣಗಳ ಬಗ್ಗೆ ಸಮೀಕ್ಷೆ ಮಾಡಲು ಇಸ್ರೊದ ಬಾಹ್ಯಾಕಾಶ ಮಿಷನ್ಮಂಗಳ ಯಾನಮತ್ತು ಭಾರತದ ಖಗೋಳವಿಜ್ಞಾನ ವೀಕ್ಷಣಾಲಯಆಸ್ಟ್ರೋಸಾಟ್ (ಖಗೋಳವಿಜ್ಞಾನ ಉಪಗ್ರಹ) ಮತ್ತು ಶೀಘ್ರದಲ್ಲೇ ಉಡಾವಣೆಯಾಗಲಿರುವ ಆದಿತ್ಯ ಎಲ್ 1, ಸೌರ ಅಧ್ಯಯನ ಮಿಷನ್ ಕುರಿತು ಹೆಚ್ಚು ಮಾತನಾಡಲಾಗುತ್ತಿದೆ. ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್ ದೂರದಲ್ಲಿ ಬಾಹ್ಯಾಕಾಶದಲ್ಲಿ ಕಕ್ಷೆಗೆ ಸೇರಿಸಲಾಗುವ ಆದಿತ್ಯ ಮಿಷನ್ ಸೂರ್ಯನ ಬಗ್ಗೆ ಅಭೂತಪೂರ್ವವಾದ ತಿಳುವಳಿಕೆಯನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.

ಮಕ್ಕಳು ಮತ್ತು ಸಾರ್ವಜನಿಕರಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಮತ್ತು ಜಾಗೃತಿ ಮೂಡಿಸಲು ಕ್ಯಾಂಪಸ್ ನಲ್ಲಿ ವಿಜ್ಞಾನ ಕೇಂದ್ರವನ್ನು ಸ್ಥಾಪಿಸುವ ಯೋಜನೆಯು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಭಾರತೀಯ ಖಭೌತ ವಿಜ್ಞಾನ ಸಂಸ್ಥೆಯು ರಾಷ್ಟ್ರ ಸೇವೆಯಲ್ಲಿ 50 ವರ್ಷಗಳನ್ನು ಆಚರಿಸುತ್ತಿರುವುದಕ್ಕೆ ಉಪ ರಾಷ್ಟ್ರಪತಿಯವರು ಅಭಿನಂದನೆ ತಿಳಿಸಿದರು.

ಭವಿಷ್ಯದ ಪೀಳಿಗೆಗೆ ಪ್ರಮುಖ ವೈಜ್ಞಾನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಮಾಡಿರುವ ಅದ್ಭುತ ಕೆಲಸಗಳಿಗಾಗಿ ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳಿಗೆ ಮತ್ತು ದೂರದೃಷ್ಟಿಯ ನಾಯಕತ್ವವನ್ನು ಒದಗಿಸಿದ್ದಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಪರಮಾಣು ಶಕ್ತಿ ಇಲಾಖೆ ಮತ್ತು ಇಸ್ರೋ ಗಳಿಗೆ ಉಪ ರಾಷ್ಟ್ರಪತಿಯವರು ಅಭಿನಂದನೆ ತಿಳಿಸಿದರು.

***



(Release ID: 1684391) Visitor Counter : 162