ಪ್ರಧಾನ ಮಂತ್ರಿಯವರ ಕಛೇರಿ

ಗೃಹ ಪ್ರವೇಶ’ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

ಮಧ್ಯಪ್ರದೇಶದಲ್ಲಿ ಪಿಎಂಎವೈ-ಜಿ ಫಲಾನುಭವಿಗಳೊಂದಿಗೆ ಸಂವಾದ

Posted On: 12 SEP 2020 2:46PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಧ್ಯಪ್ರದೇಶದಲ್ಲಿ ‘ಗೃಹ ಪ್ರವೇಶ’ ಸಮಾರಂಭ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಷಣ ಮಾಡಿದರು, ಅಲ್ಲಿ 1.75 ಲಕ್ಷ ಕುಟುಂಬಗಳಿಗೆ ಪಕ್ಕಾ ಮನೆಗಳನ್ನು ಪ್ರಧಾನಮಂತ್ರಿ ವಸತಿ ಯೋಜನೆ – ಗ್ರಾಮೀಣ (ಪಿಎಂಎವೈ-ಜಿ) ಅಡಿಯಲ್ಲಿ ವಿತರಿಸಲಾಗಿದೆ.

ಶ್ರೀ ನರೇಂದ್ರ ಮೋದಿ ಮಧ್ಯಪ್ರದೇಶದಲ್ಲಿ ಪಿಎಂಎವೈ-ಜಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.

1.75 ಲಕ್ಷ ಫಲಾನುಭವಿ ಕುಟುಂಬಗಳು ಇಂದು ತಮ್ಮ ಸ್ವಂತ ಮನೆಗಳಿಗೆ ತೆರಳುತ್ತಿದ್ದಾರೆ, ಅವರು ತಮ್ಮ ಕನಸಿನ ಮನೆಯನ್ನು ಪಡೆದುಕೊಂಡಿದ್ದಾರೆ ಮತ್ತು ತಮ್ಮ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ವಿಶ್ವಾಸದಿಂದಿದ್ದಾರೆ ಎಂದರು. ಕಚ್ಚಾಮನೆ, ಕೊಳಗೇರಿ ಅಥವಾ ಬಾಡಿಗೆ ಮನೆಯ ಬದಲಿಗೆ ಕಳೆದ ಆರು ವರ್ಷಗಳಿಂದ ಸ್ವಂತ ಮನೆ ಪಡೆದುಕೊಂಡು ಅದರಲ್ಲೇ ವಾಸಿಸುತ್ತಿರುವ 2.25 ಕೋಟಿ ಕುಟುಂಬಗಳ ಶ್ರೇಣಿಗೆ ಇಂದು ಮನೆಗಳನ್ನು ಪಡೆದುಕೊಂಡ ಫಲಾನುಭವಿಗಳು ಸೇರ್ಪಡೆಯಾಗಿದ್ದಾರೆ ಎಂದು ಅವರು ಹೇಳಿದರು. ಫಲಾನುಭವಿಗಳಿಗೆ ದೀಪಾವಳಿಯ ಶುಭ ಕೋರಿದ ಅವರು,ಕೊರೊನಾ ಇಲ್ಲದಿದ್ದಿದ್ದರೆ ಅವರ ಸಂತಸ ಹಂಚಿಕೊಳ್ಳಲು ತಾವೂ ಜೊತೆಯಲ್ಲಿ ಇರುತ್ತಿದ್ದುದಾಗಿ ತಿಳಿಸಿದರು.

ಇಂದು 1.75 ಲಕ್ಷ ಬಡ ಕುಟುಂಬಗಳ ಬದುಕಿನಲ್ಲಿ ಅವಿಸ್ಮರಣೀಯ ದಿನವಷ್ಟೇ ಅಲ್ಲ, ದೇಶದ ಪ್ರತಿಯೊಬ್ಬ ವಸತಿ ರಹಿತರಿಗೂ ಪಕ್ಕಾ ಮನೆ ನೀಡುವ ಪ್ರಮುಖ ಹೆಜ್ಜೆಯೂ ಇದಾಗಿದೆ ಎಂದರು. ಇದು ದೇಶದಲ್ಲಿ ವಸತಿ ರಹಿತರ ಭರವಸೆಯನ್ನು ಬಲಪಡಿಸುತ್ತದೆ,  ಮತ್ತು ಸೂಕ್ತವಾದ ಕಾರ್ಯತಂತ್ರ ಮತ್ತು ಉದ್ದೇಶದಿಂದ ಪ್ರಾರಂಭಿಸಲಾದ ಸರ್ಕಾರಿ ಯೋಜನೆ ಉದ್ದೇಶಿತ ಫಲಾನುಭವಿಗಳನ್ನು ಹೇಗೆ ತಲುಪುತ್ತದೆ ಎಂಬುದನ್ನೂ ಇದು ಸಾಬೀತುಪಡಿಸುತ್ತದೆ ಎಂದು ಅವರು ಹೇಳಿದರು.

ಕರೋನಾ ಅವಧಿಯಲ್ಲಿನ ಸವಾಲುಗಳ ಹೊರತಾಗಿಯೂ, ಪ್ರಧಾನಮಂತ್ರಿ ವಸತಿ ಯೋಜನೆ-ಗ್ರಾಮೀಣ ಅಡಿಯಲ್ಲಿ ದೇಶಾದ್ಯಂತ 18 ಲಕ್ಷ ಮನೆಗಳ ಕಾಮಗಾರಿ ಪೂರ್ಣಗೊಂಡಿದೆ ಮತ್ತು ಅವುಗಳಲ್ಲಿ 1.75 ಲಕ್ಷ ಮನೆಗಳು ಮಧ್ಯಪ್ರದೇಶದಲ್ಲಿಯೇ ಪೂರ್ಣಗೊಂಡಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಪಿಎಂಎವೈ-ಜಿ ಅಡಿಯಲ್ಲಿ ಮನೆ ನಿರ್ಮಿಸಲು ಸರಾಸರಿ 125 ದಿನಗಳು ಬೇಕಾಗುತ್ತವೆ ಆದರೆ ಕರೋನಾದ ಈ ಅವಧಿಯಲ್ಲಿ ಕೇವಲ 45 ರಿಂದ 60 ದಿನಗಳಲ್ಲಿ ಪೂರ್ಣಗೊಂಡಿದೆ ಎಂದು ಅವರು ಹೇಳಿದರು. ನಗರಗಳಿಂದ ತಮ್ಮ ಗ್ರಾಮಗಳಿಗೆ ವಲಸೆ ಕಾರ್ಮಿಕರು ಮರಳಿದ ಕಾರಣ ಇದು ಸಾಧ್ಯವಾಗಿದೆ ಎಂದು ಅವರು ಹೇಳಿದರು. ಸವಾಲನ್ನು ಅವಕಾಶವನ್ನಾಗಿ ಪರಿವರ್ತಿಸಿದಕ್ಕೆ ಇದೊಂದು ಉತ್ತಮ ಉದಾಹರಣೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ವಲಸೆ ಕಾರ್ಮಿಕರು ಪ್ರಧಾನಮಂತ್ರಿ ಗರಿಬ್ ಕಲ್ಯಾಣ ರೋಜ್ಗಾರ್ ಅಭಿಯಾನದಡಿ ಅವರ ಸಂಪೂರ್ಣ ಲಾಭವನ್ನು ಪಡೆದುಕೊಂಡು, ತಮ್ಮ ಕುಟುಂಬದ ಕಾಳಜಿ ವಹಿಸಿದರು ಮತ್ತು ಅದೇ ಸಮಯದಲ್ಲಿ ಅವರ ಬಡ ಸಹೋದರರಿಗೆ ಮನೆಗಳನ್ನೂ ನಿರ್ಮಿಸಲು ಕೆಲಸ ಮಾಡಿದರು ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಗರಿಬ್ ಕಲ್ಯಾಣ ಅಭಿಯಾನದಡಿಯಲ್ಲಿ ಮಧ್ಯಪ್ರದೇಶ ಸೇರಿದಂತೆ ದೇಶದ ವಿವಿಧೆಡೆಗಳಲ್ಲಿ ಸುಮಾರು 23 ಸಾವಿರ ಕೋಟಿ ಮೌಲ್ಯದ ಯೋಜನೆಗಳು ಪೂರ್ಣಗೊಂಡಿವೆ ಎಂದು ಪ್ರಧಾನಮಂತ್ರಿ ಸಂತಸ ವ್ಯಕ್ತಪಡಿಸಿದರು. ಈ ಯೋಜನೆಯಡಿ, ಪ್ರತಿ ಹಳ್ಳಿಯಲ್ಲಿ ಬಡವರಿಗೆ ಮನೆಗಳನ್ನು ನಿರ್ಮಿಸಲಾಗುತ್ತಿದೆ, ಪ್ರತಿ ಮನೆಗೆ ನೀರು ಸರಬರಾಜು ಮಾಡುವ ಕಾಮಗಾರಿಗಳು ನಡೆಯುತ್ತಿವೆ, ಅಂಗನವಾಡಿಗಳು ಮತ್ತು ಪಂಚಾಯತಿಗಳಿಗೆ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದ್ದು, ದನದ ಕೊಟ್ಟಿಗೆಗಳು, ಕೊಳಗಳು, ಬಾವಿಗಳು ಇತ್ಯಾದಿಗಳನ್ನೂ ನಿರ್ಮಿಸಲಾಗುತ್ತಿದೆ ಎಂದರು.

ಇದರಿಂದ ಎರಡು ಪ್ರಯೋಜನಗಳಾಗಿವೆ, ಒಂದು ನಗರಗಳಿಂದ ತಮ್ಮ ಹಳ್ಳಿಗಳಿಗೆ ಮರಳಿದ ಲಕ್ಷಾಂತರ ವಲಸೆ ಕಾರ್ಮಿಕರಿಗೆ ಅರ್ಥಪೂರ್ಣ ಉದ್ಯೋಗ ಸಿಕ್ಕಿದೆ ಮತ್ತು ಎರಡನೆಯದು - ಇಟ್ಟಿಗೆ, ಸಿಮೆಂಟ್, ಮರಳು ಮುಂತಾದ ನಿರ್ಮಾಣಕ್ಕೆ ಸಂಬಂಧಿಸಿದ ಸರಕುಗಳನ್ನು ಮಾರಾಟವೂ ನಡೆದಿದೆ ಎಂದು ಅವರು ಹೇಳಿದರು.  ಒಂದು ರೀತಿಯಲ್ಲಿ ಪ್ರಧಾನಮಂತ್ರಿ ಗರಿಬ್ ಕಲ್ಯಾಣ ರೋಜ್ಗಾರ್ ಅಭಿಯಾನ ಈ ಕಷ್ಟದ ಸಮಯದಲ್ಲಿ ಗ್ರಾಮಗಳ ಆರ್ಥಿಕತೆಗೆ ದೊಡ್ಡ ಬೆಂಬಲವಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದರು.

ಬಡವರಿಗೆ ಮನೆಗಳನ್ನು ನಿರ್ಮಿಸಲು ದಶಕಗಳಿಂದ ದೇಶದಲ್ಲಿ ವಿವಿಧ ಯೋಜನೆಗಳನ್ನು ಪ್ರಾರಂಭಿಸಲಾಯಿತು ಎಂದ ಪ್ರಧಾನಮಂತ್ರಿ ಅವರು, ಆದರೆ ಘನತೆಯ ಜೀವನವನ್ನು ಕೊಡುವ, ಕೋಟ್ಯಂತರ ಬಡವರಿಗೆ ಮನೆ ಕೊಡುವ ಗುರಿಯನ್ನು ಎಂದಿಗೂ ಸಾಧಿಸಲಾಗಲಿಲ್ಲ. ಇದಕ್ಕೆ ಕಾರಣ, ಸರ್ಕಾರದ ಹೆಚ್ಚಿನ ಹಸ್ತಕ್ಷೇಪ, ಪಾರದರ್ಶಕತೆಯ ಕೊರತೆ ಮತ್ತು ನಿಜವಾದ ಫಲಾನುಭವಿಗಳೊಂದಿಗೆ ಯಾವುದೇ ಸಮಾಲೋಚನೆ ಇಲ್ಲದೇ ಇದ್ದುದಾಗಿತ್ತು. ಹಿಂದಿನ ಯೋಜನೆಗಳಲ್ಲಿ ಪಾರದರ್ಶಕತೆಯ ಕೊರತೆಯಿಂದಾಗಿ ಆ ಮನೆಗಳ ಗುಣಮಟ್ಟವೂ ಕಳಪೆಯಾಗಿತ್ತು ಎಂದು ಅವರು ಹೇಳಿದರು.

ಹಿಂದಿನ ಅನುಭವಗಳನ್ನು ವಿಶ್ಲೇಷಿಸಿದ ನಂತರ 2014 ರಲ್ಲಿ ಈ ಯೋಜನೆಯನ್ನು ಮಾರ್ಪಾಡು ಮಾಡಲಾಯಿತು. ಮತ್ತು ಇದನ್ನು ಹೊಸ ಕಾರ್ಯತಂತ್ರದೊಂದಿಗೆ ಪ್ರಧಾನಮಂತ್ರಿ ವಸತಿ ಯೋಜನೆಯಾಗಿ ಪ್ರಾರಂಭಿಸಲಾಯಿತು ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಫಲಾನುಭವಿಗಳ ಆಯ್ಕೆಯಿಂದ ಹಿಡಿದು ಮನೆಗಳನ್ನು ಹಸ್ತಾಂತರಿಸುವವರೆಗೂ ಸಂಪೂರ್ಣ ಕಾರ್ಯವಿಧಾನವನ್ನು ಪಾರದರ್ಶಕಗೊಳಿಸಲಾಯಿತು ಎಂದರು. ಈ ಹಿಂದೆ ಬಡವರು ಸರ್ಕಾರದ ಹಿಂದೆ ಓಡಬೇಕಿತ್ತು, ಈಗ ಸರ್ಕಾರ ಜನರನ್ನು ತಲುಪುತ್ತಿದೆ ಎಂದು ಅವರು ಹೇಳಿದರು. ಆಯ್ಕೆಯಿಂದ ಉತ್ಪಾದನೆವರೆಗೆ ವೈಜ್ಞಾನಿಕ ಮತ್ತು ಪಾರದರ್ಶಕ ವಿಧಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದರು. ಇದು ಮಾತ್ರವಲ್ಲದೆ, ಸ್ಥಳೀಯವಾಗಿ ಲಭ್ಯವಿರುವ ಮತ್ತು ಬಳಸಿದ ಸರಕುಗಳಿಗೆ, ವಸ್ತುಗಳಿಂದ ನಿರ್ಮಾಣದವರೆಗೆ ಆದ್ಯತೆ ನೀಡಲಾಗುತ್ತದೆ. ಸ್ಥಳೀಯ ಅಗತ್ಯಗಳು ಮತ್ತು ಶೈಲಿಗೆ ಅನುಗುಣವಾಗಿ ಮನೆಗಳ ವಿನ್ಯಾಸಗಳನ್ನು ಸಹ ತಯಾರಿಸಲಾಗುತ್ತಿದೆ ಎಂದರು.

ಮನೆ ನಿರ್ಮಾಣದ ಪ್ರತಿಯೊಂದು ಹಂತದ ಸಂಪೂರ್ಣ ಮೇಲ್ವಿಚಾರಣೆ ಇದೆ. ಪ್ರತಿ ಹಂತ ಮುಗಿದ ನಂತರ ವಿವಿಧ ಕಂತುಗಳ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಬಡವರಿಗೆ ಮನೆಗಳು ಮಾತ್ರವೇ ಸಿಗುತ್ತಿಲ್ಲ, ಶೌಚಾಲಯ, ಉಜ್ವಲ ಅನಿಲ ಸಂಪರ್ಕ, ಸೌಭಾಗ್ಯ ಯೋಜನೆ, ವಿದ್ಯುತ್ ಸಂಪರ್ಕ, ಎಲ್‌.ಇಡಿ ಬಲ್ಬ್, ನೀರಿನ ಸಂಪರ್ಕ ಕೂಡ ಇದರೊಂದಿಗೆ ಸಿಗುತ್ತಿದೆ ಎಂದು ಅವರು ಹೇಳಿದರು. ಗ್ರಾಮೀಣ ಸಹೋದರಿಯರ ಜೀವನವನ್ನು ಬದಲಿಸುವಲ್ಲಿ ಪ್ರಧಾನಮಂತ್ರಿ ವಸತಿ ಯೋಜನೆ, ಸ್ವಚ್ಛ ಭಾರತ ಅಭಿಯಾನದಂತಹ ಯೋಜನೆಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಅವರು ಹೇಳಿದರು. ಕೇಂದ್ರ ಸರ್ಕಾರದ ಸುಮಾರು 27 ಕಲ್ಯಾಣ ಯೋಜನೆಗಳನ್ನು ಪಿಎಂ ವಸತಿ ಯೋಜನೆಯೊಂದಿಗೆ ಸಂಪರ್ಕಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಪ್ರಧಾನಮಂತ್ರಿ ವಸತಿ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಮನೆಗಳನ್ನು ಹೆಚ್ಚಾಗಿ ಮಹಿಳೆಯರ ಹೆಸರಿನಲ್ಲಿ ನೋಂದಾಯಿಸಲಾಗುತ್ತಿದೆ ಅಥವಾ ಮನೆಯ ಮಹಿಳೆಯೊಂದಿಗೆ ಜಂಟಿಯಾಗಿ ನೋಂದಾಯಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತಿದೆ ಮತ್ತು ಅದೇ ಸಮಯದಲ್ಲಿ, ಹೆಚ್ಚಿನ ಸಂಖ್ಯೆಯ ಮಹಿಳಾ ಕಟ್ಟಡ ನಿರ್ಮಾಣಮಾಡುವವರನ್ನು ನಿರ್ಮಾಣ ಕಾರ್ಯಕ್ಕಾಗಿ ಬಳಸಲಾಗುತ್ತದೆ. ಮಧ್ಯಪ್ರದೇಶದಲ್ಲಿ 50 ಸಾವಿರಕ್ಕೂ ಹೆಚ್ಚು ಕಟ್ಟಡ ನಿರ್ಮಾಣ ಮಾಡುವವರಿಗೆ ತರಬೇತಿ ನೀಡಲಾಗಿದ್ದು, ಇದರಲ್ಲಿ 9,000 ಮಹಿಳೆಯರಾಗಿದ್ದರು ಎಂದರು. ಬಡವರ ಆದಾಯ ಹೆಚ್ಚಾದಾಗ ಅವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆದ್ದರಿಂದ ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಸಂಕಲ್ಪವೂ ಬಲಗೊಳ್ಳುತ್ತದೆ. ಈ ವಿಶ್ವಾಸವನ್ನು ಬಲಪಡಿಸಲು, 2014 ರಿಂದ ಪ್ರತಿ ಗ್ರಾಮದಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಮುಂದಿನ 1000 ದಿನಗಳಲ್ಲಿ ಸುಮಾರು 6 ಸಾವಿರ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸುವ ಬಗ್ಗೆ ಕೆಂಪು ಕೋಟೆಯ ಮೇಲಿನಿಂದ 2020 ರ ಆಗಸ್ಟ್ 15 ರಂದು ನೀಡಿದ ಭರವಸೆಯನ್ನು ಪ್ರಧಾನಮಂತ್ರಿ ಸ್ಮರಿಸಿದರು. ಈ ಕರೋನಾ ಅವಧಿಯಲ್ಲಿ, ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ರೋಜ್ಗಾರ್ ಅಭಿಯಾನದ ಅಡಿಯಲ್ಲಿ, ಈ ಕಾರ್ಯವು ವೇಗವಾಗಿ ಪ್ರಗತಿ ಸಾಧಿಸಿದೆ ಎಂದು ಅವರು ಹೇಳಿದರು. ಕೆಲವೇ ವಾರಗಳಲ್ಲಿ 116 ಜಿಲ್ಲೆಗಳಲ್ಲಿ 5000 ಕಿಲೋಮೀಟರಿಗಿಂತ ಹೆಚ್ಚು ಆಪ್ಟಿಕಲ್ ಫೈಬರ್ ಹಾಕಲಾಗಿದೆ ಎಂದು ಅವರು ಹೇಳಿದರು. ಸುಮಾರು 19 ಸಾವಿರ ಆಪ್ಟಿಕಲ್ ಫೈಬರ್ ಸಂಪರ್ಕಗಳೊಂದಿಗೆ 1250 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳನ್ನು ಸಂಪರ್ಕಿಸಲಾಗಿದೆ ಮತ್ತು ಸುಮಾರು 15 ಸಾವಿರ ವೈ-ಫೈ ಹಾಟ್‌ ಸ್ಪಾಟ್ ಒದಗಿಸಲಾಗಿದೆ ಎಂದು ಅವರು ಹೇಳಿದರು.

ಹಳ್ಳಿಗಳಿಗೆ ಉತ್ತಮ ಮತ್ತು ವೇಗವಾದ ಇಂಟರ್ನೆಟ್ ಬಂದಾಗ ಗ್ರಾಮದ ಮಕ್ಕಳಿಗೆ ಶಿಕ್ಷಣಕ್ಕೆ ಉತ್ತಮ ಅವಕಾಶಗಳು ದೊರೆಯುತ್ತವೆ ಮತ್ತು ಯುವಕರಿಗೆ ಉತ್ತಮ ವ್ಯಾಪಾರ ಅವಕಾಶಗಳು ಸಿಗುತ್ತವೆ ಎಂದರು. ಪ್ರಯೋಜನಗಳು ಸಹ ವೇಗವಾಗಿ, ಭ್ರಷ್ಟಾಚಾರವಿಲ್ಲದೆ ಮತ್ತು ಗ್ರಾಮಸ್ಥರು ಸಣ್ಣ ಕೆಲಸಕ್ಕೂ ನಗರಕ್ಕೆ ಧಾವಿಸುವುದು ತಪ್ಪುತ್ತದೆ ಎಂದರು. ಇಂದು ಸರ್ಕಾರದ ಪ್ರತಿಯೊಂದು ಸೇವೆಯನ್ನು ಆನ್‌ ಲೈನ್‌ನಲ್ಲಿ ಮಾಡಲಾಗಿದೆ ಎಂದು ಅವರು ಹೇಳಿದರು. ಹಳ್ಳಿ ಮತ್ತು ಬಡವರನ್ನು ಸಬಲೀಕರಣಗೊಳಿಸಲು ಈ ಅಭಿಯಾನವು ಈಗ ಅದೇ ವಿಶ್ವಾಸದಲ್ಲಿ ನಡೆಯಲಿದೆ ಎಂದು ಹೇಳಿದರು.

***



(Release ID: 1653635) Visitor Counter : 215