ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

`ಆಚಾರ್ಯ ದೇವೊ ಭವ' - ಶಿಕ್ಷಕರ ದಿನಾಚರಣೆ ಅಂಗವಾಗಿ ನ್ಯಾಕ್ ಆಯೋಜಿಸಿರುವ ವೆಬಿನಾರ್ ಡಿಜಿಟಲ್ ವೇದಿಕೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರಿಂದ ನೇರ ಸಂವಾದ

Posted On: 10 SEP 2020 3:20PM by PIB Bengaluru

ಬೆಂಗಳೂರಿನ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ – ನ್ಯಾಕ್, 2020 ಸೆಪ್ಟೆಂಬರ್ 11ರಂದು ಸಂಜೆ 6 ಗಂಟೆಗೆ ಆಯೋಜಿಸಿರುವ ನೇರ ವೆಬಿನಾರ್ ಕಾರ್ಯಕ್ರಮ `ಆಚಾರ್ಯ ದೇವೊ ಭವ' ಉದ್ದೇಶಿಸಿ ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ದೇಶಾದ್ಯಂತ ಉನ್ನತ ಶಿಕ್ಷಣ ಸಂಸ್ಥೆಗಳ ಬೋಧಕ ಸಿಬ್ಬಂದಿ ಜತೆ ನೇರ ಸಂವಾದ ಮಾಡಲಿದ್ದಾರೆ.

'ಆಚಾರ್ಯ ದೇವೊ ಭವ' ಕಾರ್ಯಕ್ರಮವನ್ನು ಗೌರವಾನ್ವಿತ ಸಚಿವರು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ - ಯುಜಿಸಿ ಅಧ್ಯಕ್ಷ ಪ್ರೊ. ಡಿ.ಪಿ. ಸಿಂಗ್, ನ್ಯಾಕ್ ಕಾರ್ಯಕಾರಿ ಸಮಿತಿ ಅಧ್ಯಕ್ಷ ಪ್ರೊ. ವೀರೇಂದರ್ ಎಸ್ ಚೌಹಾಣ್ ಭಾಗವಹಿಸಲಿದ್ದಾರೆ. ನ್ಯಾಕ್ ನಿದರ್ೇಶಕ ಪ್ರೊ. ಎಸ್ ಸಿ ಶಮರ್ಾ ಅವರು ಕಾರ್ಯಕ್ರಮವನ್ನು ಸಂಯೋಜಿಸಲಿದ್ದಾರೆ.

ಈ ಬೃಹತ್ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಭಾಗವಹಿಸುವವರು ನ್ಯಾಕ್ ವೆಬ್ ಸೈಟ್ ನಲ್ಲಿ ನೀಡಲಾಗಿರುವ ಲಿಂಕ್ www.naac.gov.in/ ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಕಾರ್ಯಕ್ರಮ ಯೂಟ್ಯೂಬ್ ಲಿಂಕ್ https://youtu.be/mNAH6YlUai0 ನಲ್ಲೂ ಪ್ರಸಾರವಾಗಲಿದೆ. ಫೇಸ್ ಬುಕ್ ಮತ್ತು ಟ್ವಿಟರ್ ನಲ್ಲೂ ಈ ಕಾರ್ಯಕ್ರಮದ ನೇರ ಪ್ರಸಾರ ಲಭ್ಯವಾಗಲಿದೆ.

ನ್ಯಾಕ್ ನ ಧ್ಯೇಯಗಳು, ಕಾರ್ಯಕ್ರಮಗಳು ಮತ್ತು ಮುನ್ನೋಟಗಳ ಮುಂದವರಿದ ಪರಿಷ್ಕೃತ ಭಾಗಗಳನ್ನು ವೀಕ್ಷಿಸಲು ನ್ಯಾಕ್ ವೆಬ್ ಸೈಟ್ www.naac.gov.in ಗಮನಿಸಿ.

https://twitter.com/NAAC_India/status/1302918067698061312?s=08

ಮಹತ್ವದ ಈ ಶೈಕ್ಷಣಿಕ ಕಾರ್ಯಕ್ರಮಕ್ಕೆ ವ್ಯಾಪಕ ಪ್ರಚಾರ ನೀಡುವಂತೆ ಈ ಮೂಲಕ ಕೋರಲಾಗಿದೆ.

ಹೆಚ್ಚಿನ ಮಾಹಿತಿಗೆ:

ವಿ. ಲಕ್ಷ್ಮಣ್

ಹಿರಿಯ ಸಂಪರ್ಕಾಧಿಕಾರಿ, ನ್ಯಾಕ್,

080-23005222, 9880024881

***


(Release ID: 1652981) Visitor Counter : 152