ಆಯುಷ್

ಸಾಂಪ್ರದಾಯಿಕ ವೈದ್ಯ ಪದ್ಧತಿ ಮತ್ತು ಹೋಮಿಯೋಪಥಿ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಜಿಂಬಾಬ್ವೆ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ

Posted On: 29 JUL 2020 5:24PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಗಣರಾಜ್ಯ ಮತ್ತು ಜಿಂಬಾಬ್ವೆ ಗಣರಾಜ್ಯಗಳ ನಡುವೆ ಸಾಂಪ್ರದಾಯಿಕ ವೈದ್ಯ ಪದ್ಧತಿ ಮತ್ತು ಹೋಮಿಯೋಪಥಿ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದಕ್ಕೆ ಪೂರ್ವಾನ್ವಯ ಅನುಮೋದನೆ ನೀಡಿತು. ಎಂಓಯುಗೆ 2018 ನವೆಂಬರ್ 3ರಂದು ಅಂಕಿತ ಹಾಕಲಾಗಿತ್ತು.

ವಿವರಗಳು

ಇದು ಸಾಂಪ್ರದಾಯಿಕ ವೈದ್ಯ ಪದ್ಧತಿ ಮತ್ತು ಹೋಮಿಯೋಪಥಿ ಉತ್ತೇಜನಕ್ಕಾಗಿ ಎರಡೂ ರಾಷ್ಟ್ರಗಳ ನಡುವಿನ ಸಹಕಾರಕ್ಕೆ ಚೌಕಟ್ಟು ಒದಗಿಸುತ್ತದೆ ಮತ್ತು ಸಾಂಪ್ರದಾಯಿಕ ವೈದ್ಯ ಪದ್ಧತಿಯ ಕ್ಷೇತ್ರದಲ್ಲಿ ಎರಡೂ ದೇಶಗಳಿಗೆ ಪರಸ್ಪರ ಪ್ರಯೋಜನಕಾರಿಯಾಗಲಿದೆ.

ಉದ್ದೇಶ

ತಿಳಿವಳಿಕೆ ಒಪ್ಪಂದದ ಮೂಲ ಉದ್ದೇಶವು ಎರಡೂ ದೇಶಗಳ ನಡುವೆ ಸಾಂಪ್ರದಾಯಿಕ ವೈದ್ಯ ಪದ್ಧತಿಯ ಕ್ಷೇತ್ರದಲ್ಲಿ ಸಮಾನತೆ ಮತ್ತು ಪರಸ್ಪರ ಪ್ರಯೋಜನದ ಆಧಾರದಲ್ಲಿ ಸಹಕಾರವನ್ನು ಬಲಪಡಿಸುವ, ಉತ್ತೇಜಿಸುವ ಮತ್ತು ಅಭಿವೃದ್ಧಿಪಡಿಸುವುದಾಗಿದೆ. ತಿಳಿವಳಿಕೆ ಒಪ್ಪಂದವು ಕೆಳಗಿನ ಸಹಕಾರ ಕ್ಷೇತ್ರಗಳನ್ನು ಗುರುತಿಸುತ್ತದೆ:

.) ತಿಳಿವಳಿಕೆ ಒಪ್ಪಂದದ ಸ್ವರೂಪವು ಬೋಧನೆ, ಅಭ್ಯಾಸ, ಔಷಧಗಳು ಮತ್ತು ಔಷಧರಹಿತ ಚಿಕಿತ್ಸೆಗಳ ನಿಯಂತ್ರಣದಲ್ಲಿ ಉತ್ತೇಜನವನ್ನು ಒಳಗೊಂಡಿವೆ.

ಬಿ.) ಒಪ್ಪಂದದ ಚೌಕಟ್ಟಿನೊಳಗೆ ನಿರ್ದಿಷ್ಟಪಡಿಸಿದ ಉದ್ದೇಶಗಳನ್ನು ಸಾಧಿಸುವಲ್ಲಿ ಪ್ರದರ್ಶನ ಮತ್ತು ಉಲ್ಲೇಖಕ್ಕೆ ಅಗತ್ಯವಾದ ಎಲ್ಲಾ ಔಷಧ ಸಾಮಗ್ರಿಗಳ ಮತ್ತು ದಸ್ತಾವೇಜುಗಳ ಪೂರೈಕೆ;

ಸಿ) ವೈದ್ಯಪದ್ಧತಿ ಅಭ್ಯಾಸ ಮಾಡುವವರಿಗೆ, ಅರೆ ವೈದ್ಯಕೀಯ ಸಿಬ್ಬಂದಿಗೆ, ವಿಜ್ಞಾನಿಗಳಿಗೆ, ಬೋಧನಾ ವೃತ್ತಿಪರರಿಗೆ ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ತಜ್ಞರ ವಿನಿಮಯ;

ಡಿ.) ಆಸಕ್ತಿ ಇರುವ ವಿಜ್ಞಾನಿಗಳು, ಅಭ್ಯಾಸಿಗಳು, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಸಂಶೋಧನೆ, ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮಗಳಲ್ಲಿ ಅವಕಾಶ ಕಲ್ಪಿಸುವುದು;

.) ಔಷಧಕೋಶ ಮತ್ತು ಸಂಗ್ರಹಿತ ಸೂತ್ರಗಳ ಪರಸ್ಪರ ಗುರುತಿಸುವಿಕೆ;

ಎಫ್.) ವ್ಯಕ್ತಿಗಳಿಂದ ಅಧಿಕೃತ ಮಾನ್ಯತೆ ಪಡೆದ ವೈದ್ಯ ಪದ್ಧತಿಗಳಿಗೆ ಪರಸ್ಪರ ಮಾನ್ಯತೆ;

ಜಿ) ಗುರುತಿಸಲಾದ ಸಂಸ್ಥೆಗಳಲ್ಲಿ ಶಿಕ್ಷಣಕ್ಕೆ ವಿದ್ಯಾರ್ಥಿವೇತನದ ಅವಕಾಶ;

ಎಚ್) ಆಯಾ ದೇಶಗಳ ಅಸ್ತಿತ್ವದಲ್ಲಿರುವ ಕಾನೂನುಗಳ ರೀತ್ಯ ಅರ್ಹ ವೈದ್ಯರಿಂದ ಪರಸ್ಪರ ಆಧಾರದಲ್ಲಿ ಸಾಂಪ್ರದಾಯಿಕ ಸಿದ್ಧತೆಗಳ ಗುರುತಿಸುವಿಕೆ;

) ಆಯಾ ದೇಶಗಳ ಅಸ್ತಿತ್ವದಲ್ಲಿರುವ ಕಾನೂನುಗಳ ಪ್ರಕಾರ ಅರ್ಹ ವೈದ್ಯರಿಂದ ಪರಸ್ಪರ ಆಧಾರದ ಮೇಲೆ ವೃತ್ತಿ ಅಭ್ಯಾಸ ಮಾಡಲು ಅನುಮತಿ;

ಜೆ) ವ್ಯಕ್ತಿಗಳು ಒಪ್ಪುವಂಥ ಇನ್ನಿತರ ಯಾವುದೇ ಕ್ಷೇತ್ರ ಮತ್ತು/ಅಥವಾ ಪರಸ್ಪರ ಸ್ವರೂಪದ ಸಹಕಾರ

***



(Release ID: 1642311) Visitor Counter : 133