ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

SARS-CoV-2 ಕೋರೋನ ಹರಡುವಿಕೆಯನ್ನು ತಡೆಗಟ್ಟಲು ಮುಖಗವಸು - ಮನೆಯಲ್ಲೆ ತಯಾರಿಸುವ ವಿಧಾನ

Posted On: 04 APR 2020 12:53PM by PIB Bengaluru

 

ಮುಖ ಮತ್ತು ಬಾಯಿ ರಕ್ಷಣೆಗೆ ಮನೆಯಲ್ಲೇ ಮಾಡಿದ ರಕ್ಷಾ ಕವಚದ ಬಳಕೆ ಕುರಿತ ಸಲಹೆಗಳು

1.    ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ವೈಯಕ್ತಿಕ ಶುಚಿತ್ವ ಅತ್ಯಂತ ಪ್ರಮುಖ ಅಂಶಗಳು ಎಂಬುದರ ಅರಿವು ನಮ್ಮೆಲ್ಲರಿಗಿದೆ. ಕೆಲವು ದೇಶಗಳು ಈಗಾಗಲೇ ಮನೆಯಲ್ಲೇ ಮಾಡಿದ ರಕ್ಷಾ ಕವಚಗಳಿಂದ ಸಾರ್ವಜನಿಕರಿಗೆ ಆಗಿರುವ ಅನುಕೂಲಗಳನ್ನು ತಿಳಿಸಿವೆ. ಮನೆಯಲ್ಲೇ ಸಿದ್ಧಪಡಿಸಲಾದ ಮಾಸ್ಕ್ ಗಳು ವೈಯಕ್ತಿಕ ಶುಚಿತ್ವ ನಿರ್ವಹಣೆಗೆ ಅತ್ಯುತ್ತಮ ಮಾದರಿಯಾಗಿವೆ. ಅವುಗಳ ಬಳಕೆ ಒಟ್ಟಾರೆ ಆರೋಗ್ಯ ಶುಚಿತ್ವ ಸ್ಥಿತಿ ಕಾಯ್ದುಕೊಳ್ಳಲು ಖಂಡಿತ ನೆರವಾಗುತ್ತವೆ.

2.   ಆದ್ದರಿಂದ ಯಾವುದೇ ವೈದ್ಯಕೀಯ ತೊಂದರೆಗಳಿಲ್ಲದಂತಹ ಹಾಗೂ ಉಸಿರಾಟದ ತೊಂದರೆ ಇಲ್ಲದಂತಹ ಜನರೂ ಕೂಡ ಮನೆಯಲ್ಲಿಯೇ ತಯಾರಿಸಿದ ಮರು ಬಳಕೆ ಮಾಡಬಹುದಾದ ವಿಶೇಷ ಮಾಸ್ಕ್ ಗಳನ್ನು ವಿಶೇಷವಾಗಿ ಮನೆಯಿಂದ ಹೊರಗೆ ಕಾಲಿಟ್ಟ ಸಂದರ್ಭದಲ್ಲಿ ಬಳಕೆ ಮಾಡಬಹುದಾಗಿದೆ. ಇದು ಒಟ್ಟಾರೆ ಸಮುದಾಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ.

3.  ಈ ಮಾಸ್ಕ್ ಅನ್ನು ಯಾವುದೇ ಆರೋಗ್ಯ ಕಾರ್ಯಕರ್ತರು ಅಥವಾ ಕೋವಿಡ್-19 ರೋಗಿಗಳೊಂದಿಗೆ ಸಂಪರ್ಕದಲ್ಲಿರುವವರು ಅಥವಾ ಅಂತಹ ರೋಗಿಗಳೊಂದಿಗೆ ಕಾರ್ಯನಿರ್ವಹಿಸುವಂತಹವರಿಗೆ ಶಿಫಾರಸ್ಸು ಮಾಡಿಲ್ಲ. ಅವರುಗಳು ವಿಶೇಷ ರಕ್ಷಾ ಕವಚವನ್ನು ಧರಿಸಬೇಕಾಗುತ್ತದೆ.

4.     ಅಂತಹ ಎರಡು ಸೆಟ್ ಮಾಸ್ಕ್ ಗಳನ್ನು ಬಳಸುವುದು ಸೂಕ್ತ. ಒಂದು ಶುಚಿಗೊಳಿಸಲು ಹಾಕಿದಾಗ ಮತ್ತೊಂದನ್ನು ಬಳಸಬಹುದು. ಕೈಯಿಂದ ಅದನ್ನು ಶುಚಿಗೊಳಿಸುವುದು ಅತ್ಯಗತ್ಯ ಮತ್ತು ಅವುಗಳನ್ನು ಮುಖಕ್ಕೆ ಧರಿಸುವ ಮುನ್ನ ಕೈತೊಳೆಯುವುದು ಕೂಡ ಅವಶ್ಯ. ಅಂತಹ ಮಾಸ್ಕ್ ಗಳನ್ನು ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ. ಅವುಗಳನ್ನು ಸುರಕ್ಷಿತವಾಗಿಡಬೇಕು. ಸೋಪು ಮತ್ತು ಬಿಸಿ ನೀರಿನಿಂದ ಅವುಗಳನ್ನು ಶುಚಿಗೊಳಿಸಬೇಕು ಮತ್ತು ಅವುಗಳನ್ನು ಬಳಕೆ ಮಾಡುವ ಮುನ್ನ ಚೆನ್ನಾಗಿ ಒಣಗಿಸಬೇಕು.

5.   ಈ ಮಾಸ್ಕ್ ಗಳು ಮನೆಯಲ್ಲಿ ಸಿಗುವ ಸ್ವಚ್ಛ ಬಟ್ಟೆಗಳಿಂದ ಸಿದ್ಧಪಡಿಸಲಾಗಿರುತ್ತವೆ. ಅವುಗಳನ್ನು ಹೊಲಿಯುವ ಅಥವಾ ಸಿದ್ಧಪಡಿಸುವ ಮುನ್ನ ಚೆನ್ನಾಗಿ ಶುಚಿಗೊಳಿಸಬೇಕು. ಅವುಗಳನ್ನು ಬಾಯಿ ಮತ್ತು ಮೂಗು ಸಂಪೂರ್ಣವಾಗಿ ಮುಚ್ಚಿಕೊಳ್ಳುವಂತೆ ಮತ್ತು ಸುಲಭವಾಗಿ ಮುಖಕ್ಕೆ ಕಟ್ಟಿಕೊಳ್ಳುವಂತೆ ಸಿದ್ಧಪಡಿಸಬೇಕು.

6.    ಈ ಮಾಸ್ಕ್ ಗಳು ಅಥವಾ ಮುಖಗವಸುಗಳನ್ನು ಯಾರ ಜೊತೆಯೂ ಹಂಚಿಕೊಳ್ಳಬಾರದು ಅವುಗಳನ್ನು ಒಬ್ಬರೇ ಬಳಸಬೇಕು. ಉದಾಹರಣೆಗೆ ಒಂದು ಕುಟುಂಬದಲ್ಲಿ ಹಲವು ಸದಸ್ಯರಿದ್ದರೆ, ಪ್ರತಿಯೊಬ್ಬ ಸದಸ್ಯರು ಪ್ರತ್ಯೇಕ ಮುಖಗವಸನ್ನು ಬಳಸಬೇಕು.

 

Manual_on_Masks/ Kannada.pdf



(Release ID: 1610963) Visitor Counter : 231


Read this release in: English