PIB Headquarters
ಕೋವಿಡ್ -19 ನಿಯಂತ್ರಣ - ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕ್ರಮದ ಬಗ್ಗೆ ಸೂಚನೆಗಳು
Posted On:
29 MAR 2020 8:50PM by PIB Bengaluru
ಕೋವಿಡ್ -19 ನಿಯಂತ್ರಣ - ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕ್ರಮದ ಬಗ್ಗೆ ಸೂಚನೆಗಳು
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಔಷಧೀ ಇಲ್ಲದೆ ಸೋಂಕು ತಡೆ ಮತ್ತು ನಿಯಂತ್ರಣ ಉಪಕ್ರಮವಾಗಿದ್ದು, ಇದನ್ನು ಸೋಂಕು ತಗುಲಿರುವವರು ಮತ್ತು ಸೋಂಕಿತರಲ್ಲದವರ ನಡುವಿನ ಸಂಪರ್ಕವನ್ನು ತಗ್ಗಿಸಿ/ತಪ್ಪಿಸುತ್ತದೆ, ಇದರಿಂದ ಸಮುದಾಯದಲ್ಲಿ ಕಾಯಿಲೆಯ ಸೋಂಕಿನ ಪ್ರಸರಣ ದರ ಕಡಿಮೆಯಾಗುತ್ತದೆ. ಇದು ವಸ್ತುಶಃ ಪ್ರಸರಣ, ಅಸ್ವಸ್ಥತೆ ಅಥವಾ ರೋಗದಿಂದ ಆಗುವ ಸಾವನ್ನು ತಗ್ಗಿಸುತ್ತದೆ. ಪ್ರಸ್ತಾಪಿತ ಮಧ್ಯಸ್ಥಿಕೆಗಳ ಜೊತೆಗೆ, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ತಮಗೆ ಅಗತ್ಯ ಎಂದು ಪರಿಗಣಿಸಲಾದ ಇತರ ಕ್ರಮಗಳಗಳನ್ನೂ ಸೂಚಿಸುತ್ತಾರೆ.
ಈ ಎಲ್ಲ ಪ್ರಸ್ತಾಪಿತ ಕ್ರಮಗಳು 2020ರ ಮಾರ್ಚ್ 31ರವರೆಗೆ ಜಾರಿಯಲ್ಲಿರುತ್ತವೆ. ಬದಲಾಗುವ ಪರಿಸ್ಥಿತಿಗೆ ಅನುಗುಣವಾಗಿ ಅವುಗಳನ್ನು ಪರಾಮರ್ಶಿಸಲಾಗುವುದು.
ಈ ಕೆಳಕಂಡ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ:
1. ಎಲ್ಲಾ ಶಿಕ್ಷಣ ಸಂಸ್ಥೆಗಳು (ಶಾಲೆಗಳು, ವಿಶ್ವವಿದ್ಯಾಲಯಗಳು ಇತ್ಯಾದಿ), ಜಿಮ್ ಗಳು, ವಸ್ತು ಸಂಗ್ರಹಾಲಯಗಳು, ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರಗಳು, ಈಜುಕೊಳಗಳು ಮತ್ತು ಚಿತ್ರಮಂದಿರಗಳ ಮುಚ್ಚುವಿಕೆ. ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಇರಲು ಸೂಚಿಸುವುದು. ಆನ್‌ಲೈನ್ ಶಿಕ್ಷಣವನ್ನು ಉತ್ತೇಜಿಸುವುದು.
2. ಪರೀಕ್ಷೆಗಳನ್ನು ಮುಂದೂಡುವ ಸಾಧ್ಯತೆಯನ್ನು ಬಳಸಿಕೊಳ್ಳುವುದು. ಪ್ರಸಕ್ತ ನಡೆಯುತ್ತರುವ ಪರೀಕ್ಷೆಗಳನ್ನು ವಿದ್ಯಾರ್ಥಿಗಳ ನಡುವೆ 1 ಮೀಟರ್ ಭೌತಿಕ ಅಂತರ ಕಾಯ್ದುಕೊಳ್ಳುವ ಮೂಲಕ ನಡೆಸುವುದು.
3. ಖಾಸಗಿ ವಲಯದ ಸಂಸ್ಥೆಗಳು/ಮಾಲೀಕರಿಗೆ ತಮ್ಮ ಸಿಬ್ಬಂದಿಗೆ ಮನೆಯಿಂದಲೇ ಕರ್ತವ್ಯ ನಿರ್ವಹಿಸುವಂತೆ ಮಾಡಲು ಉತ್ತೇಜಿಸುವುದು.
4. ಸಭೆಗಳನ್ನು ಎಷ್ಟು ಸಾಧ್ಯವೋ ಅಷಅಟು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸುವುದು. ಅಗತ್ಯ ಇಲ್ಲದೆ ಇದ್ದರೆ ದೊಡ್ಡ ಸಂಖ್ಯೆಯ ಜನರನ್ನೊಳಗೊಂಡ ಸಭೆಗಳನ್ನು ಕಡಿಮೆ ಮಾಡುವುದು ಇಲ್ಲವೇ ಪುನರ್ ನಿಗದಿ ಮಾಡುವುದು.
5. ರೆಸ್ಟೋರೆಂಟ್ ಗಳು ಕೈ ತೊಳೆಯುವ ಶಿಷ್ಟಾಚಾರದ ಖಾತ್ರಿಪಡಿಸಬೇಕು ಮತ್ತು ಪದೇ ಪದೇ ಮುಟ್ಟುವ ಮೇಲ್ಮೈಯನ್ನು ಸೂಕ್ತವಾಗಿ ಸ್ವಚ್ಛ ಮಾಡಬೇಕು. ಒಂದು ಟೇಬಲ್ ನಿಂದ ಮತ್ತೊಂದಕ್ಕೆ ಕನಿಷ್ಠ 1 ಮೀಟರ್ ಬೌತಿಕ ಅಂತರ ಇರುವುದನ್ನು ಖಾತ್ರಿ ಪಡಿಸಬೇಕು, ಗಾಳಿಯಾಡುವ ಮುಕ್ತ ಪ್ರದೇಶದಲ್ಲಿ ಸೂಕ್ತ ಅಂತರದ ನಡುವೆ ಆಸನದ ವ್ಯವಸ್ಥೆಗೆ ಉತ್ತೇಜನ ನೀಡಬೇಕು.
6. ಈಗಾಗಲೇ ನಿಗದಿಯಾಗಿರುವ ವಿವಾಹಗಳನ್ನು ಅತ್ಯಂತ ಕಡಿಮೆ ಜನರಿಗೆ ಸೀಮೀತಗೊಳಿಸಬೇಕು, ಎಲ್ಲ ತೀರಾ ಅನಿವಾರ್ಯವಲ್ಲದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಭೆಗಳನ್ನು ಮುಂದೂಡಬೇಕು.
7. ಕ್ರೀಡಾ ಕೂಟ ಆಯೋಜಕರೊಂದಿಗೆ ಸ್ಥಳೀಯ ಆಡಳಿತಗಳು ಮಾತುಕತೆ ನಡೆಸಿ, ದೊಡ್ಡ ಸಂಖ್ಯೆಯ ಸ್ಪರ್ಧಾಳುಗಳನ್ನು ಒಳಗೊಂಡ ಕೂಟಗಳನ್ನು ಮುಂದೂಡುವಂತೆ ಸಲಹೆ ಮಾಡಬೇಕು.
8. ಧಾರ್ಮಿಕ ನಾಯಕರು ಮತ್ತು ಅಭಿಪ್ರಾಯ ಮೂಡಿಸುವ ನಾಯಕರೊಂದಿಗೆ ಸ್ಥಳೀಯ ಆಡಳಿತಗಳು ಮಾತುಕತೆ ನಡೆಸಿ, ಸಾಮೂಹಿಕ ಸಮಾರಂಭಗಳನ್ನು ನಿಯಂತ್ರಿಸಬೇಕು ಮತ್ತು ಕನಿಷ್ಠ ಒಂದು ಮೀಟರ್ ಅಂತರವಿಲ್ಲದೆ ಜನರು ಗುಂಪುಗೂಡದಂತೆ ಎಚ್ಚರಿಕೆಯ ಖಾತ್ರಿ ಪಡಿಸಿಕೊಳ್ಳಬೇಕು.
9. ವ್ಯಾಪರ ಸಂಘಟನೆಗಳು ಮತ್ತು ಇತರ ಬಾಧ್ಯಸ್ಥರೊಂದಿಗೆ ಸ್ಥಳೀಯ ಆಡಳಿತಗಳು ಮಾತುಕತೆ ನಡೆಸಿ, ವಹಿವಾಟಿನ ಸಮಯ ನಿಯಂತ್ರಿಸಬೇಕು, ಮಾಡಬೇಕಾದ್ದು, ಮಾಡಬಾರದ್ದು ಏನು ಎಂಬುದನ್ನು ಪ್ರದರ್ಶಿಸಬೇಕು. ಅವಶ್ಯಕ ಸೇವೆಗಳನ್ನು ಒದಗಿಸುವ ತರಕಾರಿ ಮಾರುಕಟ್ಟೆ, ದಿನಸಿ ಅಗಡಿಗಳು, ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ಅಂಚೆ ಕಚೇರಿ ಇತ್ಯಾದಿಗಳಲ್ಲಿ ಸಂವಹನ ಆಂದೋಲನ ಕೈಗೊಳ್ಳಬೇಕು
10. ಎಲ್ಲ ವಾಣಿಜ್ಯ ಚಟುವಟಿಕೆಗಳಲ್ಲಿ ಗ್ರಾಹಕರ ನಡುವೆ ಒಂದು ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಮಾರುಕಟ್ಟೆಗಳಲ್ಲಿ ಜನದಟ್ಟಣೆಯಾಗುವ ಸಮಯದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.
11. ಅನಗತ್ಯವಾದ ಪ್ರಯಾಣವನ್ನು ತಪ್ಪಿಸಬೇಕು. ಬಸ್ ಗಳು, ರೈಲುಗಳು, ವಿಮಾನಗಳು ಗರಿಷ್ಠ ಪ್ರಮಾಣದ ಸಾಮಾಜಿಕ ಅಂತರ ಕಾಯಬೇಕು, ಜೊತೆಗೆ ಸಾರ್ವಜನಿಕ ಸಾರಿಗೆಯಲ್ಲಿ ನಿಯಮಿತವಾಗಿ ಸೋಂಕುಮುಕ್ತಗೊಳಿಸಲು ಮೇಲ್ಮೈಯನ್ನು ಶುಚಿಗೊಳಿಸಬೇಕು.
12. ಕೋವಿಡ್ -19 ನಿರ್ವಹಣೆಗೆ ಸಂಬಂಧಿಸಿದಂತೆ ಆಸ್ಪತ್ರೆಗಳು ಸೂಚಿತ ಅಗತ್ಯ ಶಿಷ್ಟಾಚಾರಗಳನ್ನು ಪಾಲಿಸಬೇಕು ಮತ್ತು ಕುಟುಂಬದರು/ಸ್ನೇಹಿತರು/ಮಕ್ಕಳು ಆಸ್ಪತ್ರೆಯಲ್ಲಿ ರೋಗಿಗಳನ್ನು ಭೇಟಿ ಮಾಡದಂತೆ ನಿಯಂತ್ರಿಸುವುದು.
13. ನೈರ್ಮಲ್ಯ ಮತ್ತು ಭೌತಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಶುಭಾಶಯದ ಅಂಗವಾಗಿ ಕೈಕುಲುಕುವುದು, ತಬ್ಬಿಕೊಳ್ಳುವುದನ್ನು ತಪ್ಪಿಸಬೇಕು.
14. ಆನ್ ಲೈನ್ ಆರ್ಡರ್ ಸೇವೆಯಲ್ಲಿ ಸರಕುಗಳನ್ನು ಸರಬರಾಜು ಮಾಡುವ ಪುರುಷರು/ಮಹಿಳೆಯರಿಗೆ ವಿಶೇಷ ಮುನ್ನೆಚ್ಚರಿಕೆ ಕ್ರಮವಹಿಸಬೇಕು.
15. ಸಮುದಾಯಗಳಿಗೆ ನಿರಂತರವಾಗಿ ಮತ್ತು ನಿಯಮಿತವಾಗಿ ಮಾಹಿತಿ ನೀಡಬೇಕು.
(Release ID: 1609146)