ರೈಲ್ವೇ ಸಚಿವಾಲಯ

ಕೋವಿಡ್-19: ಹಿರಿಯ ನಾಗರಿಕರ ರೈಲ್ವೆ ಪ್ರಯಾಣ ನಿಯಂತ್ರಿಸಲು ರೈಲ್ವೆ ರಿಯಾಯಿತಿ ದರ ಹಿಂತೆಗೆತ

Posted On: 19 MAR 2020 5:26PM by PIB Bengaluru

ಕೋವಿಡ್-19: ಹಿರಿಯ ನಾಗರಿಕರ ರೈಲ್ವೆ ಪ್ರಯಾಣ ನಿಯಂತ್ರಿಸಲು ರೈಲ್ವೆ ರಿಯಾಯಿತಿ ದರ ಹಿಂತೆಗೆ

ಕೊರೊನಾ ನಿಯಂತ್ರಣಕ್ಕೆ ದೀರ್ಘಕಾಲದ ಅನಾರೋಗ್ಯ ಪೀಡಿತರು ಮತ್ತು ಹಿರಿಯ ನಾಗರಿಕರ ರಕ್ಷಣೆಗೆ ಅಗತ್ಯ ಕ್ರಮ

 

ಕೋವಿಡ್ -19 ವೈರಸ್ ಹರಡುವಿಕೆ ತಡೆಗಟ್ಟಲು ಮತ್ತು ವಯಸ್ಸಾದವರ ಪ್ರಯಾಣಕ್ಕೆ ಸಂಬಂಧಿಸಿದ ಅಪಾಯಗಳನ್ನು ಕಡಿಮೆ ಮಾಡಲು, ಭಾರತೀಯ ರೈಲ್ವೆಯು ಹಿರಿಯ ನಾಗರಿಕರಿಗೆ ನೀಡುತ್ತಿದ್ದ ವಿಶೇಷ ರಿಯಾಯ್ತಿಗಳನ್ನು ತೆಗೆದುಹಾಕುವ ಮೂಲಕ ಅನಿವಾರ್ಯವಲ್ಲದ ಪ್ರಯಾಣವನ್ನು ಕೈಗೊಳ್ಳುವುದನ್ನು ತಡೆಯಲು ಕ್ರಮ ಕೈಗೊಂಡಿದೆ. ಮಾರ್ಚ್ 20 ರಾತ್ರಿ 12 ಗಂಟೆಯಿಂದ ಮುಂದಿನ ಆದೇಶದವರೆಗೆ  ಹಿರಿಯ ನಾಗರಿಕರಿಗೆ ಕಾಯ್ದಿರಿಸದ ಮತ್ತು ಕಾಯ್ದಿರಿಸಿದ ವಿಭಾಗದಲ್ಲಿನ ಟಿಕೆಟ್ ರಿಯಾಯಿತಿಯನ್ನು ಹಿಂತೆಗೆದುಕೊಳ್ಳಲಾಗಿದೆ. ಹಿರಿಯ ನಾಗರಿಕರು ಅನಿವಾರ್ಯವಲ್ಲದ ಪ್ರಯಾಣವನ್ನು ಕೈಗೊಳ್ಳದಂತೆ ಮಾಡಲು   ಕ್ರಮ ಕೈಗೊಳ್ಳಲಾಗಿದೆ.

COVID-19 ವೈರಸ್ಹರಡುವಿಕೆ ಮತ್ತು ಮರಣ ಪ್ರಮಾಣವು ಹಿರಿಯ ನಾಗರಿಕರಲ್ಲಿ ಹೆಚ್ಚಾಗಿದೆ ವಿಶ್ವ ಆರೋಗ್ಯ ಸಂಸ್ಥೆಯ ಜಂಟಿ ಮಿಷನ್ ವರದಿಯ ಅನುಸಾರ ಕೊರೋನಾ ವೈರಸ್ ಕಾಯಿಲೆಯು “60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ತೀವ್ರ ಕಾಯಿಲೆ ಮತ್ತು ಸಾವಿಗೆ ಹೆಚ್ಚಿನ ಅಪಾಯದಲ್ಲಿರುವವರುಎಂದು ಹೇಳಲಾಗಿದೆ. "ವಯಸ್ಸು ಹೆಚ್ಚಿದಂತೆಲ್ಲಾ ಮರಣ ಪ್ರಮಾಣವು ಹೆಚ್ಚಾಗುತ್ತದೆ, 80 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಅತಿ ಹೆಚ್ಚು ಮರಣಗಳು ಸಂಭವಿಸುತ್ತವೆ (ಸಿಎಫ್ಆರ್ 21.9%)." ಎಂದೂ ಸಹ ಹೇಳಲಾಗಿದೆ.

ವಿಶ್ವದಾದ್ಯಂತ COVID-19 ವೈರಸ್ ಹರಡುವಿಕೆ ಮತ್ತು ಭಾರತದಲ್ಲಿ ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ಅದರ ಹರಡುವಿಕೆಯನ್ನು ಕಡಿಮೆ ಮಾಡುವುದು ಮತ್ತು ಹೆಚ್ಚು ದುರ್ಬಲರನ್ನು ಅಂದರೆ ದೀರ್ಘಕಾಲದ ಕಾಯಿಲೆ ಇರುವವರು, ವಿಶೇಷವಾಗಿ ಹಿರಿಯ ನಾಗರಿಕರನ್ನು ರಕ್ಷಿಸುವುದು ಕಡ್ಡಾಯವಾಗಿದೆ, ರಿಯಾಯಿತಿಗಳನ್ನು ಹಿಂತೆಗೆದುಕೊಳ್ಳುವುದು ಇಂತಹವರಿಂದ ಅನಗತ್ಯ ಪ್ರಯಾಣವನ್ನು ಕಡಿತಗೊಳಿಸುವ ವ್ಯಾಪಕ ಯೋಜನೆಯ ಒಂದು ಭಾಗವಾಗಿದೆ. ಆದ್ದರಿಂದ ರೋಗಿಗಳು, ವಿದ್ಯಾರ್ಥಿಗಳು ಮತ್ತು ದಿವ್ಯಾಂಗರನ್ನು ಹೊರತುಪಡಿಸಿ ಎಲ್ಲಾ ಟಿಕೆಟ್ಗಳ ರಿಯಾಯಿತಿಯನ್ನು ಹಿಂಪಡೆಯಲಾಗಿದೆ.

***

 


(Release ID: 1607244) Visitor Counter : 152


Read this release in: English , Hindi