ಪ್ರಧಾನ ಮಂತ್ರಿಯವರ ಕಛೇರಿ

ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ಆಯೋಜಿಸಲಾಗಿದ್ದ ಬೃಹತ್ ವಿತರಣಾ ಶಿಬಿರದಲ್ಲಿ ( ಸಾಮಾಜಿಕ್ ಅಧಿಕರ್ತ ಶಿವಿರ್ ) ಪ್ರಧಾನ ಮಂತ್ರಿ ಅವರು ದಿವ್ಯಾಂಗರು ಮತ್ತು ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳನ್ನು ವಿತರಿಸಿದರು

Posted On: 29 FEB 2020 1:42PM by PIB Bengaluru

ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ಆಯೋಜಿಸಲಾಗಿದ್ದ ಬೃಹತ್ ವಿತರಣಾ ಶಿಬಿರದಲ್ಲಿ ( ಸಾಮಾಜಿಕ್ ಅಧಿಕರ್ತ ಶಿವಿರ್ ) ಪ್ರಧಾನ ಮಂತ್ರಿ ಅವರು ದಿವ್ಯಾಂಗರು ಮತ್ತು ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳನ್ನು ವಿತರಿಸಿದರು

ಪ್ರತಿಯೊಬ್ಬ ನಾಗರಿಕರಿಗೂ ಪ್ರಯೋಜನವಾಗುವಂತೆ ಮಾಡುವುದು ಮತ್ತು ಪ್ರತಿಯೊಬ್ಬರಿಗೂ ನ್ಯಾಯ ದೊರೆಯುವಂತೆ ಮಾಡುವುದು ಸರಕಾರದ ಜವಾಬ್ದಾರಿ: ಪ್ರಧಾನ ಮಂತ್ರಿ


ಕಳೆದ ಐದು ವರ್ಷಗಳಲ್ಲಿ ಸುಮಾರು 9 ಸಾವಿರ ಬೃಹತ್ ಶಿಬಿರಗಳನ್ನು ಆಯೋಜಿಸಲಾಗಿದೆ: ಪ್ರಧಾನ ಮಂತ್ರಿ

ಇದುವರೆಗೆ ಆಯೋಜಿಸಲಾಗಿರುವ ಶಿಬಿರಗಳಲ್ಲಿಯೇ ದೊಡ್ದ ಶಿಬಿರವಾದ “ಸಾಮಾಜಿಕ್ ಅಧಿಕರ್ತ ಶಿವಿರ್” ನಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸುಮಾರು 27,000 ಹಿರಿಯ ನಾಗರಿಕರು ಹಾಗು ದಿವ್ಯಾಂಗರಿಗೆ ಸಾಧನ ಸಲಕರಣೆಗಳನ್ನು ವಿತರಿಸಿದರು. ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ.

ಭಾರತ ಸರಕಾರದ ’ರಾಷ್ಟ್ರೀಯ ವಯೋಶ್ರೀ ಯೋಜನಾ-ಆರ್.ವಿ.ವೈ. ಮತ್ತು ಎ.ಡಿ.ಐ.ಪಿ ಯೋಜನೆಗಳ ಅಡಿಯಲ್ಲಿ ಹಿರಿಯ ನಾಗರಿಕರನ್ನು ಸಶಕ್ತರನ್ನಾಗಿಸುವುದಕ್ಕಾಗಿ ಈ ಬೃಹತ್ ವಿತರಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಸ್ಕೃತದ ಉಕ್ತಿಯನ್ನು ಉಲ್ಲೇಖಿಸಿದರು. ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಂ, ನ್ಯಾಯೇನ ಮಾರ್ಗೇನ, ಮಹೀಂ ಮಹೀಷಾಹಃ ಎಂದರೆ ಸಮಾನ ನ್ಯಾಯ ಒದಗಿಸುವುದು ಸರಕಾರದ ಕರ್ತವ್ಯ ಎಂದವರು ವಿವರಿಸಿದರು..
“ ಈ ಉಕ್ತಿಯು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್ ತತ್ವಕ್ಕೆ ಆಧಾರವಾಗಿದೆ ಎಂದು ಹೇಳಿದ ಪ್ರಧಾನ ಮಂತ್ರಿ ಅವರು ಈ ಸ್ಪೂರ್ತಿಯೊಂದಿಗೆ ಸಮಾಜದಲ್ಲಿಯ ಪ್ರತಿಯೊಬ್ಬರ ಕಲ್ಯಾಣ ಮತ್ತು ಅಭಿವೃದ್ದಿಗಾಗಿ ನಮ್ಮ ಸರಕಾರ ಕಾರ್ಯಾಚರಿಸುತ್ತಿದೆ, ಅವರು ಹಿರಿಯ ನಾಗರಿಕರಾಗಿರಲಿ, ದಿವ್ಯಾಂಗರಾಗಿರಲಿ, ಬುಡಕಟ್ಟು ಜನತೆ ಇರಲಿ, ಅಥವಾ ತಳಮಟ್ಟದಲ್ಲಿರುವವರಾಗಿರಲಿ ಅವರನ್ನೆಲ್ಲ ಒಳಗೊಂಡಂತೆ 130 ಕೋಟಿ ಭಾರತೀಯರ ಹಿತಾಸಕ್ತಿಗಳನ್ನು ರಕ್ಷಿಸುವುದು ತಮ್ಮ ಸರಕಾರ ಪ್ರಥಮಾಧ್ಯತೆ ಎಂದೂ ನುಡಿದರು.
ಸಾಧನ ಸಲಕರಣೆಗಳನ್ನು ವಿತರಿಸುವ ಬೃಹತ್ ಶಿಬಿರವನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ ಅವರು ಇದು ಎಲ್ಲರಿಗೂ ಉತ್ತಮ ಜೀವನಾವಕಾಶ ಒದಗಿಸುವ ಸರಕಾರದ ಪ್ರಯತ್ನದ ಭಾಗ ಎಂದರು.
“ಈ ಮೊದಲಿನ ಸರಕಾರಗಳ ಅವಧಿಯಲ್ಲಿ , ಇಂತಹ ವಿತರಣಾ ಶಿಬಿರಗಳ ಆಯೋಜನೆ ಅತ್ಯಂತ ವಿರಳವಾಗಿತ್ತು, ಮತ್ತು ಅದರಲ್ಲೂ ಇಂತಹ ಬೃಹತ್ ಶಿಬಿರಗಳು ವಿರಳಾತಿ ವಿರಳವಾಗಿದ್ದವು. ಮೊದಲ ಐದು ವರ್ಷಗಳಲ್ಲಿ ನಮ್ಮ ಸರಕಾರ ದೇಶದ ವಿವಿಧ ಭಾಗಗಳಲ್ಲಿ 9,000 ಶಿಬಿರಗಳನ್ನು ನಡೆಸಿದೆ “ ಎಂದು ಅವರು ತಿಳಿಸಿದರು.
ಕಳೆದ ಐದು ವರ್ಷಗಳಲ್ಲಿ ಸರಕಾರವು 900 ಕೋ.ರೂ. ಮೌಲ್ಯದ ಸಾಧನೆ ಸಲಕರಣೆಗಳನ್ನು ದಿವ್ಯಾಂಗರಿಗೆ ವಿತರಿಸಿದೆ ಎಂದೂ ಪ್ರಧಾನ ಮಂತ್ರಿ ಅವರು ವಿವರಿಸಿದರು.
“ನವಭಾರತ ನಿರ್ಮಾಣದಲ್ಲಿ ದಿವ್ಯಾಂಗರು, ಯುವಕರು ಮತ್ತು ಮಕ್ಕಳಿಗೆ ಸಮಾನ ಸಹಭಾಗಿತ್ವದ ಅವಕಾಶಗಳಿವೆ. ಕೈಗಾರಿಕಾ ವಲಯವಿರಲಿ, ಸೇವಾ ವಲಯವಿರಲಿ ಅಥವಾ ಕ್ರೀಡಾ ಮತ್ತು ಆಟಗಳ ಕ್ಷೇತ್ರವಿರಲಿ ಸರಕಾರವು ಅವರನ್ನು ಎಲ್ಲಾ ಕ್ಷೇತ್ರಗಳಲ್ಲೂ ಪ್ರೋತ್ಸಾಹಿಸುತ್ತದೆ” ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು.
“ಅಂಗವೈಕಲ್ಯ ಕಾಯ್ದೆಯೊಂದಿಗೆ ವ್ಯಕ್ತಿಗಳ ಹಕ್ಕುಗಳು” ಕಾಯ್ದೆಯನ್ನು ಜಾರಿ ಮಾಡಿದ ಮೊದಲ ಸರಕಾರ ನಮ್ಮದು ಎಂದು ಹೇಳಿದ ಪ್ರಧಾನ ಮಂತ್ರಿ ಅವರು ಇದರ ಮೂಲಕ ಅಂಗವೈಕಲ್ಯದ ವರ್ಗಗಳನ್ನು 7 ರಿಂದ 21 ಕ್ಕೆ ವಿಸ್ತರಿಸಲಾಗಿದೆ. ನಾವು ಉನ್ನತ ಶಿಕ್ಷಣದಲ್ಲಿ ದಿವ್ಯಾಂಗರಿಗಾಗಿ ಮೀಸಲಾತಿ ಪ್ರಮಾಣವನ್ನು 3 % ನಿಂದ 5 % ಗೇರಿಸಿದ್ದೇವೆ ಎಂದೂ ನುಡಿದರು.
ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಹಲವು ಕಟ್ಟಡಗಳು, 700 ಕ್ಕೂ ಅಧಿಕ ರೈಲ್ವೇ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳು ಅಂಗವೈಕಲ್ಯ ಇರುವವರು ಅವುಗಳನ್ನು ಬಳಸಲು ಅನುಕೂಲವಾಗುವಂತೆ ವ್ಯವಸ್ಥೆಗೊಳಿಸಲಾಗಿದೆ.ಇನ್ನುಳಿದವುಗಳನ್ನು ಸುಗಮ್ಯ ಭಾರತ್ ಅಭಿಯಾನಕ್ಕೆ ಸೇರ್ಪಡೆಗೊಳಿಸುವ ಮೂಲಕ ಆಲ್ಲಿಯೂ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಪ್ರಧಾನ ಮಂತ್ರಿ ಅವರು ಹೇಳಿದರು.
ಫಲಾನುಭವಿಗಳ ಸಂಖ್ಯೆ ಮತ್ತು ವಿತರಿಸಿದ ಸಾಧನ ಸಲಕರಣೆಗಳು ಹಾಗು ಅದರ ಮೌಲ್ಯವನ್ನು ಗಣನೆಗೆ ತೆಗೆದುಕೊಂಡರೆ ಇದು ದೇಶದಲ್ಲಿ ಇದುವರೆಗೆ ಆಯೋಜನೆಯಾದ ಅತ್ಯಂತ ದೊಡ್ದ ಸಾಧನ ಸಲಕರಣೆಗಳ ವಿತರಣಾ ಶಿಬಿರವಾಗಿದೆ.
ಈ ಬೃಹತ್ ಶಿಬಿರದಲ್ಲಿ 56,000 ಕ್ಕೂ ಅಧಿಕ ವಿವಿಧ ಸಾಧನ ಮತ್ತು ಸಲಕರಣೆಗಳನ್ನು 26,000 ಕ್ಕೂ ಅಧಿಕ ಮಂದಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ಈ ಸಾಧನ-ಸಲಕರಣೆಗಳ ಒಟ್ಟು ಮೌಲ್ಯ 19 ಕೋ.ರೂ.ಗಳಿಗೂ ಅಧಿಕ.
ಈ ಸಾಧನ ಸಲಕರಣೆಗಳ ವಿತರಣೆಯ ಉದ್ದೇಶ ಇದರ ಮೂಲಕ ದಿವ್ಯಾಂಗರು ಮತ್ತು ಹಿರಿಯ ನಾಗರಿಕರ ಸಮಾಜೋ- ಆರ್ಥಿಕ ಅಭಿವೃದ್ದಿ ಹಾಗು ದೈನಂದಿನ ಜೀವನಕ್ಕೆ ನೆರವಾಗುವುದಾಗಿದೆ.



(Release ID: 1605071) Visitor Counter : 111