ನಾಗರೀಕ ವಿಮಾನಯಾನ ಸಚಿವಾಲಯ
ಏರ್ ಇಂಡಿಯಾ ಮತ್ತು ಅದರ ಸಹ ಸಂಸ್ಥೆಗಳಿಂದ / ಜಂಟಿ ಸಹಯೋಗದ ಉದ್ಯಮಗಳಿಂದ ಹೂಡಿಕೆ ಹಿಂತೆಗೆತಕ್ಕೆ ಎಸ್.ಪಿ.ವಿ.ಸ್ಥಾಪನೆಗೆ ಸಂಪುಟದ ಅನುಮೋದನೆ.
Posted On:
28 FEB 2019 10:41PM by PIB Bengaluru
ಏರ್ ಇಂಡಿಯಾ ಮತ್ತು ಅದರ ಸಹ ಸಂಸ್ಥೆಗಳಿಂದ / ಜಂಟಿ ಸಹಯೋಗದ ಉದ್ಯಮಗಳಿಂದ ಹೂಡಿಕೆ ಹಿಂತೆಗೆತಕ್ಕೆ ಎಸ್.ಪಿ.ವಿ.ಸ್ಥಾಪನೆಗೆ ಸಂಪುಟದ ಅನುಮೋದನೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಏರ್ ಇಂಡಿಯಾ ಮತ್ತು ಅದರ ಸಹ ಸಂಸ್ಥೆಗಳಿಂದ / ಜಂಟಿ ಸಹಯೋಗದ ಉದ್ಯಮಗಳಿಂದ ಹೂಡಿಕೆ ಹಿಂತೆಗೆತಕ್ಕೆ ವಿಶೇಷ ಉದ್ದೇಶದ ವ್ಯವಸ್ಥೆಯೊಂದರ (ಎಸ್.ಪಿ.ವಿ) ಸ್ಥಾಪನೆಗೆ ಪೂರ್ವಾನ್ವಯಗೊಂಡಂತೆ ತನ್ನ ಅನುಮೋದನೆ ನೀಡಿತು.
ವಿವರಗಳು:
ಏರ್ ಇಂಡಿಯಾ ಅಸೆಟ್ಸ್ ಹೋಲ್ಡಿಂಗ್ ಲಿಮಿಟೆಡ್ (ಎ.ಐ.ಎ.ಎಚ್.ಎಲ್.) ಎಂಬ ಹೆಸರಿನಲ್ಲಿ ಎಸ್.ಪಿ.ವಿ.ಯೊಂದನ್ನು ರಚಿಸಲಾಗಿದೆ. ನಾಲ್ಕು ಸಹ ಸಂಸ್ಥೆಗಳಾದ ಏರ್ ಇಂಡಿಯಾ ಏರ್ ಟ್ರಾನ್ಸ್ ಪೋರ್ಟ್ ಸರ್ವಿಸಸ್ ಲಿಮಿಟೆಡ್ (ಎ.ಐ.ಎ.ಟಿ.ಎಸ್.ಎಲ್.) , ಏರಲೈನ್ ಅಲಾಯಿಡ್ ಸರ್ವಿಸಸ್ ಲಿಮಿಟೆಡ್ (ಎ.ಎ.ಎಸ್.ಎಲ್.) , ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್ (ಎ.ಐ.ಇ. ಎಸ್.ಎಲ್.) ಮತ್ತು ಹೊಟೇಲ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎಚ್.ಸಿ.ಐ.) ಗಳಲ್ಲಿನ ಯಾವುದೇ ಆಸ್ತಿ ಅಡಮಾನವಿಲ್ಲದ ಕಾರ್ಯಾಚರಣಾ ಬಂಡವಾಳದ ಸಾಲವನ್ನು ನಿರ್ವಹಿಸಲು ಇದನ್ನು ಸ್ಥಾಪಿಸಲಾಗಿದೆ. ಮುಖ್ಯ ವಾಹಿನಿಗೆ ಬಾರದ ಪೈಂಟಿಂಗ್ ಮತ್ತು ಕಲಾಕೃತಿಗಳು ಹಾಗು ಏರ್ ಇಂಡಿಯಾ ಲಿಮಿಟೆಡ್ ನ ಇತರ ಕಾರ್ಯಾಚರಣೆಯೇತರ ಆಸ್ತಿಗಳನ್ನೂ ಇದು ಒಳಗೊಳ್ಳುತ್ತದೆ.
ನಾಗರಿಕ ವಾಯುಯಾನ ಸಚಿವಾಲಯ ( ಎಂ.ಒ.ಸಿ.ಎ. ) ವು ಹೊಸ ಎಸ್.ಪಿ.ವಿ. ಸ್ಥಾಪನೆಗೆ ಆದೇಶವನ್ನು ಹೊರಡಿಸಿದೆ. ಏರ್ ಇಂಡಿಯಾ ಅಸೆಟ್ಸ್ ಹೋಲ್ಡಿಂಗ್ ಲಿಮಿಟೆಡ್ ಎಂಬ ಹೆಸರಿನ ಎಸ್.ಪಿ.ವಿ.ಯನ್ನು 2018 ರ ಜನವರಿ 22 ರಂದು ರಚಿಸಲಾಗಿದೆ. ಎಸ್.ಪಿ.ವಿ.ಯ ನಿರ್ದೇಶಕ ಮಂಡಳಿಯಲ್ಲಿ ಏರ್ ಇಂಡಿಯಾ ಲಿಮಿಟೆಡ್ ನ ಸಿ.ಎಂ.ಡಿ ಮತ್ತು ಎಂ.ಒ.ಸಿ.ಎ., ವೆಚ್ಚ ಇಲಾಖೆ, ಆರ್ಥಿಕ ವ್ಯವಹಾರಗಳ ಇಲಾಖೆ, ಡಿ.ಐ.ಪಿ.ಎ.ಎಂ . ಗಳ ಜಂಟಿ ಕಾರ್ಯದರ್ಶಿಗಳು, ಏರ್ ಇಂಡಿಯಾ ಲಿಮಿಟೆಡ್ ನ ಹಣಕಾಸು ನಿರ್ದೇಶಕರು ಇರುತ್ತಾರೆ.
ಇಂದಿನವರೆಗೆ ಒಂದು ಸಹ ಸಂಸ್ಥೆಯಾದ ಎ.ಐ.ಎ.ಟಿ.ಎಸ್.ಎಲ್. ಸಂಸ್ಥೆಯನ್ನು ಏರ್ ಇಂಡಿಯಾ ಲಿಮಿಟೆಡ್ ಮತ್ತು ಎ.ಐ.ಎ.ಎಚ್.ಎಲ್. ಜೊತೆಗಿನ ಶೇರು ಖರೀದಿ ಒಪ್ಪಂದದನ್ವಯ, ಸಾಲ ನೀಡಿದವರ ಅನುಮೋದನೆಯ ಷರತ್ತಿಗೊಳಪಟ್ಟಂತೆ ಎ.ಐ.ಎ.ಎಚ್.ಎಲ್. ಗೆ ವರ್ಗಾಯಿಸಲಾಗಿದೆ
ಎ.ಐ.ಎ.ಟಿ.ಎಸ್.ಎಲ್. ನ ಹೂಡಿಕೆ ಹಿಂತೆಗೆತಕ್ಕೆ ಪ್ರಾಥಮಿಕ ಮಾಹಿತಿ ಒಡಂಬಡಿಕೆಯನ್ನು (ಪಿ.ಐ.ಎಂ.) ಎ.ಐ.ಎ.ಟಿ.ಎಸ್.ಎಲ್. 12.02.2019 ರಂದು ಹೊರಡಿಸಿದ್ದು, ಆಸಕ್ತಿ ವ್ಯಕ್ತಪಡಿಸುವ ಪತ್ರ (ಇ.ಒ.ಐ.) ಸಲ್ಲಿಕೆಗೆ 26.03.2019 ಕೊನೆಯ ದಿನವಾಗಿದೆ.
ಹೊಸದಾಗಿ ರಚಿತವಾದ ಎಸ್.ಪಿ.ವಿ.ಗೆ ಈ ಕೆಳಗಿನವುಗಳನ್ನು ವರ್ಗಾಯಿಸಲು ಸರಕಾರ ನಿರ್ಧರಿಸಿದೆ.
i. ಏರ್ ಇಂಡಿಯಾ ಲಿಮಿಟೆಡ್ ನ 29,464 ಕೋ.ರೂ.ಗಳ ಮೊತ್ತದ ಸಾಲ
ii. ಏರ್ ಇಂಡಿಯಾ ದ ವ್ಯೂಹಾತ್ಮಕ ಹೂಡಿಕೆ ಹಿಂತೆಗೆತದ ಭಾಗವಾಗಿಲ್ಲದ ಸಹ ಸಂಸ್ಥೆಗಳಾದ ಎ.ಐ.ಎ.ಟಿ.ಎಸ್.ಎಲ್., ಎ.ಐ.ಇ. ಎಸ್.ಎಲ್., ಎ.ಎ.ಎಸ್.ಎಲ್. ಗಳನ್ನೂ ಎಸ್.ಪಿ.ವಿ.ಗೆ ವರ್ಗಾವಣೆ ಮಾಡಲಾಗುವುದು.
iii. ಪ್ರಮುಖವಲ್ಲದ ಆಸ್ತಿಗಳಾದ ಪೈಂಟಿಂಗ್ ಗಳು ಮತ್ತು ಕಲಾಕೃತಿಗಳು ಹಾಗು ಏರ್ ಇಂಡಿಯಾ ಲಿಮಿಟೆಡ್ ನ ಕಾರ್ಯಾಚರಣೇತರ ಆಸ್ತಿಗಳು
ಪರಿಣಾಮ:
ಈ ಅನುಮೋದನೆಯು ಏರ್ ಇಂಡಿಯಾದ ಸಹ ಸಂಸ್ಥೆಗಳಾದ ಎ.ಐ.ಎ.ಟಿ.ಎಸ್.ಎಲ್., ಎ.ಐ.ಇ.ಎಸ್.ಎಲ್., ಎ.ಎ.ಎಸ್.ಎಲ್. , ಮತ್ತು ಎಚ್.ಸಿ.ಐ. ಗಳನ್ನು ಏರ್ ಇಂಡಿಯಾದಿಂದ ಪ್ರತ್ಯೇಕಿಸಿ ನೂತನವಾಗಿ ಸ್ಥಾಪಿಸಲಾದ ಎಸ್.ಪಿ.ವಿ. ಕಂಪೆನಿಗೆ ವರ್ಗಾಯಿಸಲು ಅನುಕೂಲತೆಯನ್ನು ಮಾಡಿಕೊಡುತ್ತದೆ. ಹೂಡಿಕೆ ಹಿಂತೆಗೆತದಿಂದ ಬರುವ ಪ್ರತಿಫಲವನ್ನು ಮತ್ತು ಇದೇ ಎಸ್.ಪಿ.ವಿ. ಯಲ್ಲಿ ಲಗತ್ತು ಮಾಡಲಾದ ಆಸ್ತಿಯನ್ನು , ಯಾವುದೇ ಆಸ್ತಿಯ ಬೆಂಗಾವಲು ಇಲ್ಲದೆ ಏರ್ ಇಂಡಿಯಾ ಹೊಂದಿರುವ ಕಾರ್ಯಾಚರಣಾ ಬಂಡವಾಳದ ಮೇಲಿನ ಸಾಲ ಬಾಧ್ಯತೆಯನ್ನು ತೀರಿಸಲು ಬಳಸಿಕೊಳ್ಳಲಾಗುವುದು
(Release ID: 1566945)
Visitor Counter : 89