ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ  ಮತ್ತು ಅಧ್ಯಕ್ಷ ಶ್ರೀ ಪುಟಿನ್  ಪರಸ್ಪರ ಶುಭಾಶಯ ವಿನಿಮಯ.

Posted On: 07 JAN 2019 5:51PM by PIB Bengaluru

ಪ್ರಧಾನಮಂತ್ರಿ  ಮತ್ತು ಅಧ್ಯಕ್ಷ ಶ್ರೀ ಪುಟಿನ್  ಪರಸ್ಪರ ಶುಭಾಶಯ ವಿನಿಮಯ.

 

ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿ ಮತ್ತು ರಶ್ಯಾ ಅಧ್ಯಕ್ಷ  ಶ್ರೀ ವ್ಲಾದಮೀರ್ ಪುಟಿನ್ ಅವರು ಇಂದು ದೂರವಾಣಿ ಸಂಭಾಷಣೆಯ ಮೂಲಕ 2019ನೇ ವರ್ಷದ ಹಾರ್ದಿಕ ಶುಭಾಶಯ ವಿನಿಮಯ ಮಾಡಿಕೊಂಡರು. ಪ್ರಧಾನಮಂತ್ರಿ  ಅವರು ರಶ್ಯಾದಲ್ಲಿ ಇಂದು ಕ್ರಿಸ್ಮಸ್  ಆಚರಣೆಯ ಹಿನ್ನೆಲೆಯಲ್ಲಿ ಅಧ್ಯಕ್ಷರಿಗೆ ಮತ್ತು ರಶ್ಯಾದ ಜನತೆಗೆ ಕ್ರಿಸ್ಮಸ್ ಶುಭಾಶಯ ಕೋರಿದರು. 

 

ಕಳೆದ ವರ್ಷದ ಅವಧಿಯಲ್ಲಿ ಉಭಯ ದೇಶಗಳು ವಿಶೇಷವಾಗಿ ಮತ್ತು ಸ್ವತಂತ್ರವಾಗಿ ವ್ಯೂಹಾತ್ಮಕ ಸಹಭಾಗಿತ್ವದಲ್ಲಿ ಸಾಧಿಸಿದ ಮೈಲಿಗಲ್ಲುಗಳ ಬಗ್ಗೆ ಇಬ್ಬರು ನಾಯಕರೂ ತೃಪ್ತಿ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದರು. ವಿಸ್ತ್ರತ  ಯಶಸ್ವೀ ಮಾತುಕತೆಗಳನ್ನು ಸ್ಮರಿಸಿಕೊಂಡ ಇಬ್ಬರು ನಾಯಕರೂ ಮೇ ತಿಂಗಳಲ್ಲಿ ಸೋಚಿಯಲ್ಲಿ ನಡೆದ ಮತ್ತು ವಾರ್ಷಿಕ ಶೃಂಗಕ್ಕಾಗಿ ಅಕ್ಟೋಬರ್ ತಿಂಗಳಲ್ಲಿ ಅಧ್ಯಕ್ಷ ಶ್ರೀ ಪುಟಿನ್ ಅವರು  ಹೊಸದಿಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಮಾತುಕತೆಗಳನ್ನು ನೆನಪಿಸಿಕೊಂಡು ದ್ವಿಪಕ್ಷೀಯ ಸಂಬಂಧಗಳಲ್ಲಿ ಚಲನೆಯನ್ನು ಕಾಪಾಡಿಕೊಂಡು ಹೋಗಲು ಒಪ್ಪಿಕೊಂಡರು. ಅಧ್ಯಕ್ಷ ಶ್ರೀ ಪುಟಿನ್  ಅವರು 2019 ರ ಸೆಪ್ಟೆಂಬರ್ ತಿಂಗಳಲ್ಲಿ ಪೂರ್ವ ಆರ್ಥಿಕ ವೇದಿಕೆಯ ವಾರ್ಷಿಕ ಶೃಂಗದ ಆಹ್ವಾನವನ್ನು ಪುನರುಚ್ಚರಿಸಿದರು. 

 

ರಕ್ಷಣಾ ಮತ್ತು ಭಯೋತ್ಪಾದನಾ ನಿಗ್ರಹ ಸಹಿತ ಪ್ರಮುಖ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ಕುರಿತಂತೆ ಚರ್ಚಿಸಲಾಯಿತು. 

 

ಉಭಯ ನಾಯಕರೂ ಭಾರತ –ರಶ್ಯಾ ಸಹಕಾರವು ಜಾಗತಿಕ ಬಹು-ಆಯಾಮದ ವ್ಯವಸ್ಥೆಯಲ್ಲಿ  ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಒಪ್ಪಿಕೊಂಡರು. ಆದುದರಿಂದ ಉಭಯ ದೇಶಗಳೂ ವಿಶ್ವ ಸಂಸ್ಥೆ , ಬ್ರಿಕ್ಸ್ ಮತ್ತು ಎಸ್.ಸಿ.ಒ. ಹಾಗೂ ಇತರ ಬಹು-ಆಯಾಮದ ಸಂಸ್ಥೆಗಳಲ್ಲಿ ತಮ್ಮ ನಿಕಟ ಸಮಾಲೋಚನೆಯನ್ನು ಮುಂದುವರಿಸಲಿವೆ. 



(Release ID: 1559014) Visitor Counter : 71