ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ವರ್ಷಾಂತ್ಯದ ಪರಾಮರ್ಶೆ 2018 – (ಗ್ರಾಹಕ ವ್ಯವಹಾರಗಳ ಇಲಾಖೆ)

Posted On: 14 DEC 2018 5:25PM by PIB Bengaluru

ವರ್ಷಾಂತ್ಯದ ಪರಾಮರ್ಶೆ 2018 – (ಗ್ರಾಹಕ ವ್ಯವಹಾರಗಳ ಇಲಾಖೆ)
 

ಗ್ರಾಹಕ ವ್ಯವಹಾರಗಳ ಸಚಿವಾಲಯ, ಆಹಾರ ಮತ್ತು ಸಾರ್ವಜನಿಕ ವಿತರಣೆ

1.  ತೂಕ ಮತ್ತು ಅಳತೆ ಘಟಕ

 (1) ಗ್ರಾಹಕರ ಹಿತ ಕಾಪಾಡಲು ಮತ್ತು ಸುಗಮ ವಾಣಿಜ್ಯ ನಡೆಸಲು ಕಾನೂನು ಮಾಪಕ (ಪೊಟ್ಟಣ ಮಾಡಲಾದ ಸಾಮಗ್ರಿಗಳು) ಕಾಯಿದೆ 2011ಕ್ಕೆ ತಿದ್ದುಪಡಿ ತರಲಾಗಿದ್ದು, 01.01.2018ರಿಂದ ಅನ್ವಯವಾಗುವಂತೆ ಜಾರಿಗೆ ಬಂದಿದೆ.  ಇ- ವಾಣಿಜ್ಯ ವೇದಿಕೆಗಳಲ್ಲಿ ಗ್ರಾಹಕರು ಪ್ರದರ್ಶಿಸುವ ಸರಕುಗಳು ನಿಯಮಾನುಸಾರ ಅಗತ್ಯವಾದ ಘೋಷಣೆಗಳನ್ನು ಹೊಂದಿರಬೇಕು.

Ø ಯಾವುದೇ ವ್ಯಕ್ತಿ ಒಂದೇ ರೀತಿಯ ಮೊದಲೇ ಪೊಟ್ಟಣ ಮಾಡಲಾದ ಸರಕುಗಳ ಮೇಲೆ  ವಿಭಿನ್ನ ಎಂ.ಆರ್.ಪಿಗಳನ್ನು (ಉಭಯ ಎಂ.ಆರ್.ಪಿ.) ಘೋಷಿಸುವಂತಿಲ್ಲ ಎಂದು ನಿಯಮದಲ್ಲಿ  ನಿರ್ದಿಷ್ಟ ಪ್ರಸ್ತಾಪವನ್ನು ಮಾಡಲಾಗಿದೆ.

Ø ಈ ಘೋಷಣೆಗೆ ಅಕ್ಷರ ಮತ್ತು ಅಂಕಿಗಳ ಗಾತ್ರವನ್ನು ಹೆಚ್ಚಿಸಲಾಗಿದೆ, ಹೀಗಾಗಿ ಗ್ರಾಹಕರು ಇದನ್ನು ಸುಲಭವಾಗಿ ಓದಬಹುದಾಗಿದೆ.

Ø ನಿವ್ವಳ ಪ್ರಮಾಣದ ಪರೀಕ್ಷೆಯನ್ನು ಹೆಚ್ಚು ವೈಜ್ಞಾನಿಕಗೊಳಿಸಲಾಗಿದೆ.

Ø ಬಾರ್ ಕೋಡ್/ಕ್ಯುಆರ್ ಕೋಡಿಂಗ್ ಅನ್ನು ಸ್ವಯಂಪ್ರೇರಣೆಯ ಆಧಾರದಲ್ಲಿ ಅನುಮತಿಸಲಾಗಿದೆ.

Øಆಹಾರ ಉತ್ಪನ್ನಗಳಿಗೆ ಸಂಬಂಧಿಸಿದ ಘೋಷಣೆಯ ನಿಯಮಾವಳಿಗಳನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ ಅಡಿಯ ನಿಯಂತ್ರಣದೊಂದಿಗೆ ಸಾಮರಸ್ಯಗೊಳಿಸಲಾಗಿದೆ.

Ø ಔಷಧ ಎಂದು ಘೋಷಿಸಲಾದ ವೈದ್ಯಯಕೀಯ ಸಾಧನಗಳನ್ನು ನಿಯಮದಡಿಯಲ್ಲಿ ಮಾಡಬೇಕಾದ ಘೋಷಣೆಯ ವ್ಯಾಪ್ತಿಗೆ ತರಲಾಗಿದೆ.

Ø ದೊಡ್ಡ ಪ್ರಮಾಣದ ಪೊಟ್ಟಣ ಮಾಡಲಾದ ವಸ್ತುಗಳು ತಮ್ಮ ಬಳಿ ಉಳಿದಿವೆ ಎಂಬ ಕೈಗಾರಿಕೆಗಳು ಮತ್ತು ಅವರ ಸಂಘಟನೆಗಳ ಮನವಿಗಳ ಮೇಲೆ, 31.07.2018ರವರೆಗೆ ಸ್ಟಿಕ್ಕರ್ ಅಂಟಿಸಲು ಅಥವಾ ಸ್ಟ್ಯಾಂಪ್ ಹಾಕಲು ಅಥವಾ ಆನ್ ಲೈನ್ ಮುದ್ರಣಕ್ಕೆ ತಿದ್ದುಪಡಿಯಾದ ನಿಯಮಾವಳಿಗಳ ರೀತ್ಯ ಈ ಇಲಾಖೆಯಿಂದ ಅನುಮತಿ ನೀಡಲಾಗಿದೆ. ಸುಗಮ ವಹಿವಾಟು ಮುಂದುವರಿಕೆಗೆ ಮತ್ತು ಸುಗಮ ವಾಣಿಜ್ಯ ನಡೆಸಲು ರಾಜ್ಯ ಸರ್ಕಾರಗಳ ಕಾನೂನು ಮಾಪಕ ನಿಯಂತ್ರಕರುಗಳಿಗೆ ಅಕ್ಷರ ಗಾತ್ರಕ್ಕೆ ಸಂಬಂಧಿಸಿದಂತೆ 31.07.2018ರವರೆಗೆ ಕೈಗಾರಿಕೆಗಳ ವಿರುದ್ಧ ನಿರ್ಬಂಧಿತ ಕ್ರಮ ಕೈಗೊಳ್ಳದಂತೆ ಸಲಹೆ ಸೂಚನೆಗಳನ್ನೂ ಹೊರಡಿಸಲಾಗಿದೆ.

(2) ಜಿ.ಎಸ್.ಟಿ. ದರಗಳ ಇಳಿಕೆಯ ಹಿನ್ನೆಲೆಯಲ್ಲಿ 2018ರ ಡಿಸೆಂಬರ್ 31ರವರೆಗೆ ಪರಿಷ್ಕೃತ ಎಂ.ಆರ್.ಪಿ. ಪ್ರದರ್ಶಿಸಲು ಅನುಮತಿ:

Ø 2017ರ ಜುಲೈ 1ರಿಂದ ಅನ್ವಯವಾಗುವಂತೆ ಜಿ.ಎಸ್.ಟಿ.  ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಮೊದಲೇ ಪೊಟ್ಟಣ ಮಾಡಿದ ಸರಕುಗಳ ಚಿಲ್ಲರೆ ಮಾರಾಟ ದರದಲ್ಲಿ ಬದಲಾವಣೆ ಮಾಡಬೇಕಾದ ಪ್ರಸಂಗಗಳು ಎದುರಾಗಿವೆ. ಈ ನಿಟ್ಟಿನಲ್ಲಿ, ಉತ್ಪಾದಕರು ಅಥವಾ ಪೊಟ್ಟಣಮಾಡುವವರು ಅಥವಾ ಮೊದಲೇ ಪೊಟ್ಟಣ ಮಾಡಿದ ಉತ್ಪನ್ನಗಳನ್ನು ಆಮದುಮಾಡಿಕೊಳ್ಳುವವರಿಗೆ ಹಾಲಿ ಇರುವ ಗರಿಷ್ಠ ಚಿಲ್ಲರೆ ಮಾರಾಟ ದರ (ಎಂ.ಆರ್.ಪಿ.) ಜೊತೆಗೆ ಪರಿಷ್ಕೃತ ಚಿಲ್ಲರೆ ಮಾರಾಟ ದರವನ್ನು ಮೂರು ತಿಂಗಳವರೆಗೆ ಘೋಷಿಸಲು ಅಂದರೆ  ಜುಲೈ 1 2017ರಿಂದ 30 ಸೆಪ್ಟೆಂಬರ್ 2017ರವರೆಗೆ ಅವಕಾಶ ನೀಡಲಾಗಿತ್ತು. ಬದಲಾದ ಚಿಲ್ಲರೆ ಮಾರಾಟ ದರ (ಎಂ.ಆರ್.ಪಿ.)ವನ್ನು ಸ್ಟ್ಯಾಂಪ್ ಮಾಡುವ ಮೂಲಕ ಅಥವಾ ಸ್ಟಿಕ್ಕರ್ ಅಂಟಿಸುವ ಮೂಲಕ ಅಥವಾ ಆನ್ ಲೈನ್ ಮುದ್ರಣದ ಮೂಲಕ ಆಯಾ ಪ್ರಕರಣಕ್ಕೆ ಅನುಮತಿ ನೀಡಲಾಗಿದೆ.

Ø ಖಾಲಿಯಾಗದೆ ಉಳಿದ ಪೊಟ್ಟಣ ಸಾಮಗ್ರಿ/ಮುದ್ರಿತ ಹಾಳೆಗಳನ್ನು ಸಹ ಅಗತ್ಯ ತಿದ್ದುಪಡಿಗಳನ್ನು ಮಾಡಿ 2017ರ ಸೆಪ್ಟೆಂಬರ್ 30ರವರೆಗೆ ಬಳಸಲು ಅವಕಾಶ ನೀಡಲಾಗಿದೆ.

Ø ಜಿ.ಎಸ್.ಟಿ. ಜಾರಿ ಹಿನ್ನೆಲೆಯಲ್ಲಿ ಇನ್ನೂ ಕೆಲ ಕಾಲ ಸ್ಟ್ಯಾಂಪಿಂಗ್ ಅಥವಾ ಸ್ಟಿಕ್ಕರ್ ಹಾಕುವ ಅಥವಾ ಆನ್ ಲೈನ್ ಮುದ್ರಣದ ಮೂಲಕ ಹಾಕುವ ಅವಧಿ ವಿಸ್ತರಣೆ ಮಾಡಲು ಬಂದ ಮನವಿಗಳನ್ನು ಪರಿಗಣಿಸಿ, ಪರಿಷ್ಕೃತ ಎಂ.ಆರ್.ಪಿ.ಗಳನ್ನು ಹಾಕಲುಮತ್ತೆ 2018ರ ಮಾರ್ಚ್ 31ರವರೆಗೆ ವಿಸ್ತರಿಸಲಾಗಿತ್ತು.

Ø ಸರ್ಕಾರ ನಿರ್ದಿಷ್ಟ ಪದಾರ್ಥಗಳ ಮೇಲಿನ ಜಿ.ಎಸ್.ಟಿ. ದರವನ್ನು ಇಳಿಕೆ ಮಾಡಿದ ತರುವಾಯ, ಕಾನೂನು ಮಾಪನ (ಪೊಟ್ಟಣ ಮಾಡಿದ ಪದಾರ್ಥಗಳ) ಕಾಯಿದೆ 2011ರ ನಿಯಮ 6ರ ಉಪ ನಿಯಮ (3) ಅಡಿಯಲ್ಲಿ ಮೊದಲೇ ಪೊಟ್ಟಣ ಮಾಡಲಾದ ವಸ್ತುಗಳ ಮೇಲೆ ಹೆಚ್ಚುವರಿ ಸ್ಟಿಕ್ಕರ್ ಅಂಟಿಸಲು ಅಥವಾ ಸ್ಟ್ಯಾಂಪಿಂಗ್ ಅಥವಾ ಆನ್ ಲೈನ್ ಮುದ್ರಣದ ಮೂಲಕ ಕಡಿಮೆಯಾದ ಎಂ.ಆರ್.ಪಿ. ಘೋಷಿಸಲು  ಅನುಮತಿ ನೀಡಲಾಯಿತು. ಈ ಪ್ರಕರಣದಲ್ಲಿ ಸಹ ಹಿಂದಿನ ಎಂ.ಆರ್.ಪಿ.ಯ ಲೇಬಲ್/ಸ್ಟಿಕ್ಕರ್ ಗೋಚರಿಸುವಂತಿರಬೇಕು.

Ø ಈ ವಿನಾಯಿತಿಯು 2017ರ ಜುಲೈ 1ರ ಬಳಿಕ ಜಿ.ಎಸ್.ಟಿ. ದರ ಇಳಿಕೆಯ ಕಾರಣ ಎಂ.ಆರ್.ಪಿ. ದರ ಇಳಿದ ಹಿನ್ನೆಲೆಯಲ್ಲಿ 2017ರ ಜುಲೈ 1ರ ತರುವಾಯ ಮಾರಾಟವಾಗದೇ ಉಳಿದ ದಾಸ್ತಾನು ಉತ್ಪಾದಿತ/ಪೊಟ್ಟಣ ಮಾಡಿದ/ಆಮದು ಮಾಡಿಕೊಂಡ ವಸ್ತುಗಳಿಗೂ ಅನ್ವಯಿಸುತ್ತದೆ.

Ø ಮೇಲಿನ ಅನುಮತಿ/ವಿನಾಯಿತಿಯನ್ನು 2018ರ ಮಾರ್ಚ್ 31ರವರೆಗೆ ವಿಸ್ತರಿಸಲಾಯಿತು.

Ø ಸರ್ಕಾರ ಕೆಲವು ನಿರ್ದಿಷ್ಟ ವಸ್ತುಗಳ ಮೇಲಿನ ಜಿ.ಎಸ್.ಟಿ. ದರಗಳನ್ನು ಮತ್ತಷ್ಟು ಇಳಿಕೆ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಳಿಕೆಯಾದ ಎಂ.ಆರ್.ಪಿ. ದರವನ್ನು ಮೊದಲೇ ಪೊಟ್ಟಣ ಮಾಡಲಾದ ಸರಕುಗಳ ಮೇಲೆ 2018ರ ಡಿಸೆಂಬರ್ 31ರವರೆಗೆ ಹೆಚ್ಚುವರಿ ಸ್ಟಿಕ್ಕರ್ ಅಥವಾ ಸ್ಟ್ಯಾಂಪ್ ಹಾಕಲು ಅಥವಾ ಆನ್ ಲೈನ್ ಮುದ್ರಣಕ್ಕೆ ಅನುಮತಿಯನ್ನು ನೀಡಲಾಗಿದೆ. ಆದಾಗ್ಯೂ ಈ ಹಿಂದಿನ ಎಂ.ಆರ್.ಪಿ.ಯ ಲೇಬಲ್/ಸ್ಟಿಕ್ಕರ್ ಗೋಚರಿಸುವಂತಿರಬೇಕು.

Ø 2018ರ ಜುಲೈ 27ರಿಂದ ಜಾರಿಗೆ ಬರುವಂತೆ ಜಿಎಸ್ಟಿ ದರ ಇಳಿಕೆಯಿಂದ ಎಂ.ಆರ್.ಪಿ. ಇಳಿಕೆಯಾದ ಹಿನ್ನೆಲೆಯಲ್ಲಿ ಈ ವಿನಾಯಿತಿಯು ಮಾರಾಟವಾಗದ ಉತ್ಪಾದಿತ ಸರಕುಗಳು/ಪೊಟ್ಟಣ ಮಾಡಿದ/ಆಮದಾದ ವಸ್ತುಗಳಿಗೆ ಅನ್ವಯಿಸುತ್ತದೆ. ಜಿ.ಎಸ್.ಟಿ.ಯ ಇಳಿಕೆಯ ಕಾರಣದಿಂದಾಗಿ ಚಿಲ್ಲರೆ ಮಾರಾಟ ದರ (ಎಂ.ಆರ್.ಪಿ.) ಇಳಿಕೆಯ ತಿದ್ದುಪಡಿ ಮಾಡುವ ಅಗತ್ಯವಿರುವ ಹಿನ್ನೆಲೆಯಲ್ಲಿ ತಿದ್ದುಪಡಿ ಮಾಡಿದ ತರುವಾಯ ತಮ್ಮ ಬಳಿ ಬಳಕೆಯಾಗಿದೆ ಉಳಿದಿರುವ ಪೊಟ್ಟಣ ಸಾಮಗ್ರಿ ಅಥವಾ  ಸುತ್ತುಹಾಳೆಗಳನ್ನು ಉತ್ಪಾದಕರು ಅಥವಾ ಪೊಟ್ಟಣ ಮಾಡುವವರು ಅಥವಾ ಆಮದುದಾರರು 2018ರ ಡಿಸೆಂಬರ್ 31ರವರೆಗೆ ವಸ್ತುಗಳನ್ನು ಪೊಟ್ಟಣ ಮಾಡಲು ಅಥವಾ ತಮ್ಮಲ್ಲಿರುವ ಪೊಟ್ಟಣ ಸಾಮಗ್ರಿ ಅಥವಾ ಸುತ್ತುಹಾಳೆ ಮುಗಿಯುವವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಬಳಸಬಹುದಾಗಿದೆ.

 (3) ರಾಜ್ಯ ಸರ್ಕಾರಗಳಿಗೆ ಬೆಂಬಲ:

Ø ತೂಕ ಮತ್ತು ಅಳತೆಯ ಕಾಯಿದೆಯನ್ನು ಸಮರ್ಥವಾಗಿ ಅನುಷ್ಠಾನಗೊಳಿಸಲು ಪ್ರಯೋಗಾಲಯ ಕಟ್ಟಡಗಳ ನಿರ್ಮಾಣಕ್ಕಾಗಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಧನ ಸಹಾಯವನ್ನು ಬಿಡುಗಡೆ ಮಾಡಲಾಗುತ್ತಿದೆ.

Ø ಗ್ರಾಹಕರಿಗೆ  ಸರಿಯಾದ ಪ್ರಮಾಣದ ವಿತರಣೆಯಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತೂಕದ ಉಪಕರಣ ಮತ್ತು ಅಳತೆಯ ಸಾಧನಗಳ ಮತ್ತು ಮಾಪನಾಂಕ ನಿರ್ಣಯಪರಿಶೀಲನೆ ಮತ್ತು ತೂಕ ಮತ್ತು ಅಳತೆಗಳ ಸ್ಟ್ಯಾಂಪಿಂಗ್ ಗಾಗಿ ಕಾನೂನು ಗುಣಮಟ್ಟದ ಉಪಕರಣಗಳನ್ನು ರಾಜ್ಯ ಸರ್ಕಾರಗಳಿಗೆ ಸರಬರಾಜು ಮಾಡಲಾಗಿದೆ.

Ø ರಾಜ್ಯ ಸರ್ಕಾರಗಳ ಜಾರಿ ಅಧಿಕಾರಿಗಳಿಗಾಗಿ ನವದೆಹಲಿಯ ರಾಷ್ಟ್ರೀಯ ಭೌತಿಕ ಪ್ರಯೋಗಾಲಯದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

(4) ಅಹಮದಾಬಾದ್ಬೆಂಗಳೂರುಭುವನೇಶ್ವರಫರಿದಾಬಾದ್ಗುವಾಹಟಿ ಮತ್ತು ರಾಂಚಿಯ ಭಾರತೀಯ ಕಾನೂನು ಮಾಪನ ಸಂಸ್ಥೆಯಲ್ಲಿಪ್ರಾದೇಶಿಕ ಗುಣಮಟ್ಟ ಪರಾಮರ್ಶೆ ಪ್ರಯೋಗಾಲಯಕ್ಕಾಗಿ ಕೈಗೊಂಡ ಉಪಕ್ರಮಗಳು

Ø ಎಲ್ಲ ಆರ್.ಆರ್.ಎಸ್.ಎಲ್.ಗಳು ಮತ್ತು ರಾಂಚಿಯ ಭಾರತೀಯ ಕಾನೂನು ಮಾಪನ ಸಂಸ್ಥೆ ಪ್ರಯೋಗಾಲಯಗಳ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್.ಎ.ಬಿ.ಎಲ್.)ಯಿಂದ ಮಾನ್ಯತೆ ಪಡೆದಿವೆ,

Ø ಉತ್ತರ ಪ್ರದೇಶದ ವಾರಾಣಸಿ  ಮತ್ತು ಮಹಾರಾಷ್ಟ್ರದ ನಾಗಪುರದಲ್ಲಿ ಎರಡು ಹೊಸ ಪ್ರಾದೇಶಿಕ ಗುಣಮಟ್ಟ ಪರಾಮರ್ಶೆ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಈ ಎರಡೂ ಪ್ರಯೋಗಾಲಯಗಳಿಗೆ ಭೂಮಿಯನ್ನು ಈಗಾಗಲೇ ಆಯಾ ರಾಜ್ಯ ಸರ್ಕಾರಗಳಿಂದ ಖರೀದಿಸಲಾಗಿದ್ದು, ನಿರ್ಮಾಣ ಕಾಮಗಾರಿ ಆರಂಭವಾಗಬೇಕಿದೆ.

Ø  ಬೆಂಗಳೂರಿನ ಪ್ರಾದೇಶಿಕ ಗುಣಮಟ್ಟ ಪರಾಮರ್ಶೆ ಪ್ರಯೋಗಾಲಯವನ್ನು ಕಾನೂನು ಮಾಪನ ಕ್ಷೇತ್ರದ ಅತ್ಯುತ್ತಮ ಅಂತಾರಾಷ್ಟ್ರೀಯ ಪ್ರಯೋಗಾಲಯಗಳಿಗೆ ಸಮನಾಗಿ ಮೇಲ್ದರ್ಜೆಗೇರಿಸುವ ಕಾರ್ಯ ಪ್ರಗತಿಯಲ್ಲಿದೆ.

 

(5) ಸಲಹೆ ಸೂಚನೆ:

(i) ಹೆಚ್ಚಿನ ದರ ಮತ್ತು ದ್ವಿ ಎಂ.ಆರ್.ಪಿ. ವಿರುದ್ಧ ರಾಜ್ಯಗಳು ಕ್ರಮ ಕೈಗೊಂಡಿರುವುದಕ್ಕೆ ಗ್ರಾಹಕರ ಹಿತದೃಷ್ಟಿಯಿಂದ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಕಾನೂನು ಮಾಪನ ನಿಯಂತ್ರಕರುಗಳಿಗೆ ಸೂಚನೆಗಳನ್ನು ನೀಡಲಾಗಿದೆ.

 (ii)  ಗ್ರಾಹಕರ ಹಿತ ಕಾಪಾಡಲು ಎಲ್ಲ ವೈದ್ಯಕೀಯ ಸಾಧನಗಳ ಮೇಲೆ ಎಂ.ಆರ್.ಪಿ. ಸೇರಿದಂತೆ ಎಲ್ಲ ಘೋಷಣೆಗಳ ಖಾತ್ರಿಗೆ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚನೆಗಳನ್ನು ನೀಡಲಾಗಿದೆ.

 (iii) ಏಕ ಬ್ರಾಂಡ್ ಚಿಲ್ಲರೆ ಮಾರಾಟ ಕಾಯಗಳಿಗೆ ದಿನಾಂಕ 04.12.2017ರ ಆದೇಶ ಸಂಖ್ಯೆ.ಡಬ್ಯ್ಲ.ಎಂ.-10(54)/2016ರಂತೆ ಚಿಲ್ಲರೆ ಮಾರಟ ದರ ಘೋಷಣೆಯ ಸ್ವರೂಪವನ್ನು ಸಡಿಲಗೊಳಿಸಿ ಅನುಮತಿ ನೀಡಲಾಗಿದ್ದು, 31.07.2019ರವರೆಗೆ ವಿಸ್ತರಣೆಮಾಡಲಾಗಿದೆ.

 (iv) ಸಮ್ಮಿಶ್ರಿತ ಖಾದ್ಯ ತೈಲ ಸೇರಿದಂತೆ ಖಾದ್ಯ ತೈಲಗಳ ಮಾರಾಟ /ವಿತರಣೆಯಲ್ಲಿ  ಕಾನೂನು ಮಾಪನ (ಪೊಟ್ಟಣ ಮಾಡಲಾದ ಪದಾರ್ಥಗಳು) ಕಾಯಿದೆ 2011ರ ಅನುಸರಣೆಗೆ ರಾಜ್ಯಗಳು/ಕೇಂದ್ರಾಂಡಳಿತ ಪ್ರದೇಶಗಳ ಕಾನೂನು ಮಾಪನ ನಿಯಂತ್ರಕರುಗಳಿಗೆ ಸೂಚನೆ ನೀಡಲಾಗಿದೆ.

(6) ಪೆಟ್ರೋಲ್/ಡೀಸೆಲ್ ವಿತರಣಾ ಘಟಕಗಳಲ್ಲಿ ಮೋಸದ ರೂಢಿಗಳನ್ನು ತಡೆಯಲು ಕೈಗೊಂಡ ಕ್ರಮ:

(1) ಇ-ಮಾರಾಟಪೆಟ್ರೋಲ್/ಡೀಸೆಲ್ ವಿತರಣಾ ಘಟಕಗಳಲ್ಲಿ ಅವ್ಯವಹಾರಗಳನ್ನು ತಡೆಯಲು, ರಾಜ್ಯ ಸರ್ಕಾರಗಳ ಕಾನೂನು ಮಾಪನ ಅಧಿಕಾರಿಗಳು, ತೈಲ ಮಾರುಕಟ್ಟೆ ಕಂಪನಿಗಳ ಪ್ರತಿನಿಧಿಗಳು, ಮೂಲ ಸಾಧನ ತಯಾರಕರು ಮತ್ತು ಕೇಂದ್ರ ಸರ್ಕಾರದ ಕಾನೂನು ಮಾಪನ ಅಧಿಕಾರಿಗಳನ್ನು ಸೇರಿಸಿ ಪೆಟ್ರೋಲ್/ಡೀಸೆಲ್ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಪ್ರಾಯೋಗಿಕವಾಗಿ ಇ – ಮಾರಾಟವನ್ನು ಪರಿಚಯಿಸಲಾಗಿದೆ.

 (2) ಒಎಂಸಿಗಳಿಗೆ ಹಾಲಿ ವಿತರಣಾ ಮಳಿಗೆಗಳನ್ನು ಈ ಕೆಳಕಂಡ ಅಂಶಗಳಂತೆ ಮೇಲ್ದರ್ಜೆಗೇರಿಸುವಂತೆ ಸೂಚಿಸಲಾಗಿದೆ:

(i) ಯಾವುದೇ ಯಂತ್ರಾಂಶ ಬದಲಾವಣೆ, ಪಲ್ಸರ್ ಮೌಲ್ಯಮಾಪನ ಮತ್ತು ಮಾಪನಾಂಕ ನಿರ್ಣಯಕ್ಕಾಗಿ ಓಟಿಪಿ ಸೃಜಿಸುವ ವ್ಯವಸ್ಥೆ ಹೊಂದಲು.

 (ii) ಹಾಲಿ ಇರುವ ಪಲ್ಸರ್ ಗಳನ್ನು ತೆರೆಯಲಾಗದ, ಸೆಲ್ಫ್ ಡೆಸ್ಟ್ರಾಕ್ಟ್ಯೂ ಪಾಟೆಡ್ ಮ್ಯಾಗ್ನೆಟಿಕ್  ಪಲ್ಸರ್ ಗಳೊಂದಿಗೆ ಬದಲಾಯಿಸಲು.

 (iii)  ಕುಟುಂಬದ ವಿಶ್ವಾಸಾರ್ಹತೆಗಾಗಿ

(iv) ತಂತ್ರಾಂಶಗಳ ಗೂಢಲಿಪೀಕರಣವನ್ನು ಮೇಲ್ದರ್ಜೆಗೇರಿಲು.

 (3). ಹಸಿರು ಪರಿಸರಕ್ಕಾಗಿ ಆವಿಯ ಪುನರ್ ಸಂಪಾದನೆ ವ್ಯವಸ್ಥೆಯನ್ನು ಸ್ಥಾಪಿಸಲು ಮತ್ತು ಪೆಟ್ರೋಲ್ ಆವಿಯನ್ನು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ತಗ್ಗಿಸಲು ಅನುಮತಿ ನೀಡಲಾಗಿದೆ.

(7) ಕಾಲ ಪ್ರಸರಣ:

Ø ದೇಶದಲ್ಲಿ ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್ ಪ್ರಸರಣವನ್ನು ಸಕ್ರಿಯಗೊಳಿಸಲುಎನ್.ಪಿ.ಎಲ್.ನ ಸಹಯೋಗದಲ್ಲಿ ಅಹಮದಾಬಾದ್ಬೆಂಗಳೂರುಭುವನೇಶ್ವರಫರಿದಾಬಾದ್ ಮತ್ತು ಗುವಾಹಟಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾದೇಶಿಕ ಗುಣಮಟ್ಟ  ಪರಾಮರ್ಶಾ ಪ್ರಯೋಗಾಲಯಗಳಿಗೆ ಈ ಇಲಾಖೆ ಆಯವ್ಯಯದಲ್ಲಿ ಹಣ ಹಂಚಿಕೆ ಮಾಡಿದೆ.

Ø ಯಾವುದೇ ಪರಿಮಾಣಾತ್ಮಕ ಮಾಪನಕ್ಕೆ ಏಳು ಆಧಾರ ಮಾಪನ ಮಾನದಂಡಗಳು ಇರುತ್ತವೆಇದು ಅಂತಾರಾಷ್ಟ್ರೀಯ ವ್ಯವಸ್ಥೆಗಳ ಮಾನದಂಡಗಳಲ್ಲಿ (ಎಸ್ಐ ಮಾನದಂಡ) ಘನವಸ್ತುವಿಗೆ ಕಿಲೋಗ್ರಾಂ,ಉದ್ದದ ಅಳತೆಗೆ ಮೀಟರ್ಸಮಯಕ್ಕೆ ಸಮಯಕ್ಕೆ ಸೆಕೆಂಡ್, ವಿದ್ಯುತ್ ಪ್ರವಾಹಕ್ಕೆ ಆಂಪಿಯರ್ತಾಪಮಾನಕ್ಕಾಗಿ ಕೆಲ್ವಿನ್ಬೆಳಕಿನ ತೀವ್ರತೆಗೆ  ಕ್ಯಾಂಡೆಲಾ ಮತ್ತು ವಸ್ತುವಿನ ಪ್ರಮಾಣಕ್ಕೆ ಮೋಲ್ ಆಗಿರುತ್ತದೆ. ತೂಕ ಮತ್ತು ಅಳತೆಯ ಮಾಪನಗಳ ಅವಕಾಶಗಳನ್ನು ಕಾನೂನು ಮಾಪನ ಕಾಯಿದೆ 2009ರ ಅಡಿಯಲ್ಲಿ ಒದಗಿಸಲಾಗಿದೆ.

Ø ಭಾರತದಲ್ಲಿಏಳು ಮೂಲ ಘಟಕಗಳಲ್ಲಿ ಒಂದಾದ ನವ ದೆಹಲಿಯ ಎನ್.ಪಿ.ಎಲ್.ನಲ್ಲಿ ಕೇವಲ ಒಂದು ಹಂತದಲ್ಲಿ ಕಾಲದ ಪ್ರಸರಣವನ್ನು ನಿರ್ವಹಿಸಲಾಗುತ್ತಿದೆ. ಸಂಪುಟ ಸಚಿವಾಲಯ 2016ರಲ್ಲಿ ರಚಿಸಿದ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ಕಾರ್ಯದರ್ಶಿಗಳ ಗುಂಪು "ಪ್ರಸ್ತುತಇಂಡಿಯನ್ ಸ್ಟ್ಯಾಂಡರ್ಡ್ ಟೈಮ್ (ಐಎಸ್.ಟಿ) ಅನ್ನು ಎಲ್ಲಾ ಟೆಲಿಕಾಂ ಸೇವೆ ಒದಗಿಸುವವರು (ಟಿಎಸ್.ಪಿ.ಗಳುಮತ್ತು 'ಇಂಟರ್ನೆಟ್ ಸೇವಾ ಪೂರೈಕೆದಾರರು' (ಐ.ಎಸ್.ಪಿ.ಗಳುಕಡ್ಡಾಯವಾಗಿ ಅಳವಡಿಸಿಕೊಂಡಿರುವುದಿಲ್ಲ ಎಂದು ತಿಳಿಸಿರುತ್ತಾರೆ. ವಿವಿಧ ವ್ಯವಸ್ಥೆಗಳಲ್ಲಿ ಸಮಯದ ಏಕರೂಪತೆ ಇಲ್ಲದಿರುವುದರಿಂದ ಕಾನೂನು ಜಾರಿ ಸಂಸ್ಥೆಗಳು (ಎಲ್.ಇ.ಎ.ಗಳು) ನಡೆಸುವ ಸೈಬರ್ ಅಪರಾಧದ ತನಿಖೆಯಲ್ಲಿ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ರಾಷ್ಟ್ರದೊಳಗಿನ ಎಲ್ಲಾ ಜಾಲಗಳು ಮತ್ತು ಕಂಪ್ಯೂಟರ್ ಗಳು ಅದರಲ್ಲೂ ವಿಶೇಷವಾಗಿ ಆಯಕಟ್ಟಿನ ಕ್ಷೇತ್ರ ಮತ್ತು ರಾಷ್ಟ್ರೀಯ ಭದ್ರತೆಯ ನೈಜ ಸಮಯ ಅನ್ವಯಿಕಗಳಿಗೆ ರಾಷ್ಟ್ರದ ಗಡಿಯಾರದೊಂದಿಗೆ ಸಮನ್ವಯತೆ ಅತ್ಯಗತ್ಯವಾಗಿರುತ್ತದೆ ಎಂದು ಶಿಫಾರಸು ಮಾಡಿದೆ.

Ø ನಿಖರವಾದ ಸಮಯ ಪ್ರಸಾರ ಮತ್ತು ನಿಖರವಾದ ಸಮಯ ಸಮನ್ವಯತೆ ಎಲ್ಲಾ ಸಾಮಾಜಿಕಕೈಗಾರಿಕಾವ್ಯೂಹಾತ್ಮಕ ಮತ್ತು ಇತರ ವಲಯಗಳು ಅಂದರೆ ವಿದ್ಯುತ್ ಗ್ರಿಡ್ ವಿಫಲತೆಗಳ ನಿಗಾ,ಅಂತಾರಾಷ್ಟ್ರೀಯ ವ್ಯಾಪಾರಬ್ಯಾಂಕಿಂಗ್ ವ್ಯವಸ್ಥೆಗಳುರಸ್ತೆ ಮತ್ತು ರೈಲ್ವೆಗಳ ಸ್ವಯಂಚಾಲಿತ ಸಂಕೇತಹವಾಮಾನ ಮುನ್ಸೂಚನೆವಿಪತ್ತು ನಿರ್ವಹಣೆಭೂಮಿಯ  ಒಳಗಿರುವ ನೈಸರ್ಗಿಕ ಸಂಪನ್ಮೂಲಗಳ ಶೋಧನೆ ಮೇಲೆ ಗಣನೀಯ ಪರಿಣಾಮ ಹೊಂದಿದ್ದು, ಇದಕ್ಕೆ ದೃಢವಾದವಿಶ್ವಾಸಾರ್ಹ ಮತ್ತು ನಿಖರವಾದ ಸಮಯ ವ್ಯವಸ್ಥೆಗಳ ಅಗತ್ಯವಿರುತ್ತದೆ.

2.     ದರ ಸ್ಥಿರತೆ ನಿಧಿ (ಪಿ.ಎಸ್.ಎಫ್.)

·  ಬೆಲೆಯ ಸ್ಥಿರೀಕರಣಕ್ಕಾಗಿ ಮತ್ತು ಸಮರ್ಥ ಮಾರುಕಟ್ಟೆ ಮಧ್ಯಪ್ರವೇಶಕ್ಕಾಗಿ 20.50 ಲಕ್ಷ ಟನ್ ಗಳವರೆಗಿನ ಬೇಳೆಕಾಳುಗಳ ಕಾಪು ದಾಸ್ತಾನನ್ನು ದೇಶೀಯ ಸಂಗ್ರಹಣೆ ಮತ್ತು ಆಮದು ಮೂಲಕ ಮಾಡಲಾಗಿದೆ.

o    20.50 ಲಕ್ಷ ಟನ್ ಗಳ ಪೈಕಿ 16.73 ಲಕ್ಷ ಟನ್ ವಿಲೇವಾರಿಯ ಬಳಿಕ ಈ ದಿನಾಂಕದವರೆಗೆ, ಕಾಪು ದಾಸ್ತಾನಿನಲ್ಲಿ 3.77 ಲಕ್ಷ ಮೆಟ್ರಿಕ್ ಟನ್ ಬೇಳೆಕಾಳುಗಳು ಲಭ್ಯವಿರುತ್ತದೆ. ಈ ಪೈಕಿ 3.79 ಲಕ್ಷ ಟನ್ ಆಮದು ಮಾಡಿಕೊಳ್ಳಲಾಗಿದ್ದರೆ, 16.71 ಲಕ್ಷ ಟನ್ ಗಳನ್ನು ದೇಶೀಯವಾಗಿ ದಾಸ್ತಾನು ಮಾಡಲಾಗಿದೆ.

o    ದೇಶೀಯವಾಗಿ ದಾಸ್ತಾನು ಮಾಡಲಾದ 16.71 ಲಕ್ಷ ಟನ್ ಗಳ ಪೈಕಿ, 13.67 ಲಕ್, ಟನ್ ಗಳನ್ನು 2016-17 ಮತ್ತು 2017-18ರ ಅವಧಿಯಲ್ಲಿ ಎಂ.ಎಸ್.ಪಿ.ಯಡಿ ಸಂಗ್ರಹಿಸಲಾಗಿದ್ದು, ಇದರಿಂದ 8.49 ಲಕ್ಷ ರೈತರಿಗೆ ಪ್ರಯೋಜನವಾಗಿದೆ.

o    ಈರುಳ್ಳಿ ದರ ಸ್ಥಿರತೆಗಾಗಿ ಎನ್.ಎ.ಎಫ್.ಇ.ಡಿ, ಎಸ್.ಎಫ್.ಎ.ಸಿ. ಮತ್ತು ಎಂ.ಎಂ.ಟಿ.ಸಿ. ಮೂಲಕ ಈರುಳ್ಳಿಯ ದಾಸ್ತಾನು ಮತ್ತು ಆಮದು ಮಾಡಿಕೊಳ್ಳಲಾಗಿದೆ.

§  2018-19ರಲ್ಲಿ ಪಿ.ಎಸ್.ಎಫ್. ಅಡಿಯಲ್ಲಿ 13,508 ಮೆಟ್ರಿಕ್ ಟನ್ ಈರುಳ್ಳಿಯ ದೇಶೀಯ ದಾಸ್ತಾನು ಮಾಡಲಾಗಿದೆ.

§  2017-18ರಲ್ಲಿ  5,131 ಮೆಟ್ರಿಕ್ ಟನ್ ಈರುಳ್ಳಿಯ ದೇಶೀಯ ದಾಸ್ತಾನು ನಡೆದಿದೆ.

·  ತಮ್ಮ ಯೋಜನೆಗಳ ಅಡಿಯಲ್ಲಿ ರಾಜ್ಯಗಳಿಗೆ ವಿತರಿಸಲು ಕಾಪು ದಾಸ್ತಾನಿನಿಂದ ಬೇಳೆಕಾಳುಗಳನ್ನು ಬಳಸಲಾಗುತ್ತಿದೆ; ಪೌಷ್ಟಿಕಾಂಶದ ಅಂಶಗಳು ಮತ್ತು ಆತಿಥ್ಯ ಸೇವೆಗಳನ್ನು ನೇರವಾಗಿ ಅಥವಾ ಖಾಸಗಿ ಏಜೆನ್ಸಿಗಳ ಮೂಲಕ ಒದಗಿಸುವ ಯೋಜನೆಗಳನ್ನು ಸಚಿವಾಲಯಗಳು / ಕೇಂದ್ರ ಸರಕಾರದ ಇಲಾಖೆಗಳು ಹೊಂದಿವೆ.

·   ಇದರ ಜೊತೆಗೆ, ಕಾಪು ದಾಸ್ತಾನಿನ ಬೇಳೆಕಾಳುಗಳನ್ನು ಸೇನೆ ಮತ್ತು ಅರೆ ಸೇನಾ ಪಡೆಗಳ ಬೇಳೆಕಾಳು ಅಗತ್ಯವನ್ನು ಪೂರೈಸಲೂ ಬಳಸಲಾಗುತ್ತಿದೆ. ಆಫ್ಘಾನಿಸ್ತಾನಕ್ಕೆ ಆಹಾರದ ನೆರವು ಒದಗಿಸಲಾಗಿದೆ ಮತ್ತು ಕೇರಳದಲ್ಲಿ ಪ್ರವಾಹ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ.  ಬೇಳೆಕಾಳುಗಳನ್ನು ಮಾರುಕಟ್ಟೆಯಲ್ಲಿ ಹರಾಜಿನ ಮೂಲಕ ವಿಲೇವಾರಿ ಮಾಡಲಾಗಿದೆ.

·  ಈ ಮಧ್ಯಸ್ಥಿಕೆಗಳುಆಂತರಿಕ ಕ್ರಮವರ್ಷಪೂರ್ತಿ ದ್ವಿದಳ ಧಾನ್ಯಗಳು ಮತ್ತು ಈರುಳ್ಳಿ ಬೆಲೆಗಳು ಸಮಂಜಸ ಮಟ್ಟದಲ್ಲಿ ಉಳಿಯುವುದನ್ನು ಖಾತರಿಪಡಿಸಿವೆ.

·   ದರ ನಿಗಾ ಘಟಕ (ಪಿಎಂಸಿ) ದ ಬಲವರ್ಧನೆ:

2018-19ರ ಆರ್ಥಿಕ ವರ್ಷದಿಂದ ರಾಜ್ಯ ಮಟ್ಟದಲ್ಲಿ ದರ ನಿಗಾ ಘಟಕ (ಪಿ.ಎಂ.ಸಿ.) ಬಲವರ್ಧನೆಗೆ ಹೊಸ ರೂಪದ ಆರ್ಥಿಕ ಬೆಂಬಲವನ್ನು ಸೇರಿಸಲಾಗಿದೆ. ಇದರಲ್ಲಿ ಡಾಟಾ ಎಂಟ್ರಿ ಆಪರೇಟರ್ (ಡಿ.ಇ.ಓ.) ಗಳ ಮಟ್ಟದಲ್ಲಿ ಗುತ್ತಿಗೆ ನೌಕರಿರಿಗೆ ಸಂಭಾವನೆ ಮತ್ತು ದರ ಸಂಗ್ರಹಣೆಗಾಗಿ ಒಂದು ಸಿಮ್ ಕಾರ್ಡ್ ಅಳವಡಿಸಲಾದ ಮತ್ತು ಜಿಯೋ ಟ್ಯಾಗಿಂಗ್ ವ್ಯವಸ್ಥೆಯುಳ್ಳ ಕೈಯಲ್ಲಿ ಹಿಡಿಯಬಹುದಾದ ಸಾಧನ ಒದಗಿಸುವುದೂ ಒಳಗೊಂಡಿದೆ.

3.  ಗ್ರಾಹಕ ಸಂರಕ್ಷಣೆ ಘಟಕ

2018ರ ಜನವರಿ 5ರಂದು ಗ್ರಾಹಕ ಸಂರಕ್ಷಣೆ ಮಸೂದೆ 2018ನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಈ ಮಸೂದೆ ಕೆಳಗಿನ ಅಂಶ ಒಳಗೊಂಡಿದೆ:-

i)  ಹಾಲಿ ಕಾಯಿದೆಯನ್ನು ಬಲಪಡಿಸುವುದು.

ii) ಗ್ರಾಹಕರ ಕುಂದುಕೊರತೆಯನ್ನು ತ್ವರಿತವಾಗಿ ಇತ್ಯರ್ಥಪಡಿಸುವುದು.

iii) ಗ್ರಾಹಕರ ಸಬಲೀಕರಣ ಮತ್ತು

iv) ಮಾರುಕಟ್ಟೆಯಲ್ಲಿ ಆಗುತ್ತಿರುವ ಬದಲಾವಣೆಯೊಂದಿಗೆ ವೇಗ ಕಾಯ್ದುಕೊಳ್ಳಲು ಶಾಸನದ ಆಧುನೀಕರಣ.

 

  4.  ಭಾರತೀಯ ಮಾನಕಗಳ ಶಾಖೆ (ಬಿ.ಐ.ಎಸ್.)

ಭಾರತೀಯ ಮಾನಕ ಶಾಖೆ ಕಾಯಿದೆ 2016, ಭಾರತೀಯ ರಾಷ್ಟ್ರೀಯ ಗುಣಮಟ್ಟ ಕಾಯವಾಗಿ  ಭಾರತೀಯ ಮಾನಕ ಸಂಸ್ಥೆಯನ್ನು ಸ್ಥಾಪನೆಗೆ ಅವಕಾಶ ನೀಡಿದ್ದು, 2017ರ ಅಕ್ಟೋಬರ್ 12ರಿಂದ ಅನ್ವಯವಾಗುವಂತೆ ಜಾರಿಗೆ ಬಂದಿದೆ. ಬಿ.ಐ.ಎಸ್. ಕಾಯಿದೆ ಅಡಿಯಲ್ಲಿ ಈ ಕೆಳಗಿನ ನಿಯಮ ಮತ್ತು ನಿಯಮಾವಳಿಗಳನ್ನು ರೂಪಿಸಿ ಅಧಿಸೂಚನೆ ಹೊರಡಿಸಲಾಗಿದೆ:

1.     ಬಿ.ಐ.ಎಸ್. (ಖಾತ್ರಿಯ ನಿರ್ಧರಣೆ) ನಿಬಂಧನೆಗಳು, 2018ನ್ನು 2018ರ ಜೂನ್ 4ರಂದು ಅಧಿಸೂಚಿಸಲಾಗಿದೆ.

2.     ಬಿ.ಐ.ಎಸ್. (ಸಲಹಾ ಸಮಿತಿಗಳು) ನಿಬಂಧನೆಗಳು, 2018ನ್ನು 2018ರ ಜೂನ್ 7ರಂದು ಅಧಿಸೂಚಿಸಲಾಗಿದೆ.

3.     ಬಿ.ಐ.ಎಸ್. (ಹಾಲ್ ಮಾರ್ಕಿಂಗ್) ನಿಬಂಧನೆಗಳು, 2018ನ್ನು 2018ರ ಜೂನ್ 14ರಂದು ಅಧಿಸೂಚಿಸಲಾಗಿದೆ.

4.     ಬಿ.ಐ.ಎಸ್. ನಿಯಮ, 2018ನ್ನು 2018ರ ಜೂನ್ 25ರಂದು ಅಧಿಸೂಚಿಸಲಾಗಿದೆ.

5.     ಬಿ.ಐ.ಎಸ್. (ಮಹಾ ನಿರ್ದೇಶಕರ ಅಧಿಕಾರ ಮತ್ತು ಕರ್ತವ್ಯಗಳು) ನಿಬಂಧನೆಗಳು, 2018ನ್ನು 2018ರ ಆಗಸ್ಟ್ 29ರಂದು ಅಧಿಸೂಚಿಸಲಾಗಿದೆ.

6.     ಬಿ.ಐ.ಎಸ್. (ತಿದ್ದುಪಡಿ) ನಿಯಮ, 2018ನ್ನು 2018ರ ನವೆಂಬರ್ 6ರಂದು ಅಧಿಸೂಚಿಸಲಾಗಿದೆ.

ಮೇಲೆ ತಿಳಿಸಲಾಗಿರುವುದರ ಹೊರತಾಗಿ, ಚಿನ್ನ ಮತ್ತು ಬೆಳ್ಳಿ ಕಲಾಕೃತಿಗಳನ್ನು ಸಹ ಹಾಲ್ ಮಾರ್ಕ್ ಸಂಕೇತದೊಂದಿಗೆ ಗುರುತಿಸಲು ಬೆಲೆಬಾಳುವ ಲೋಹದ ವಸ್ತುಗಳೆಂದು 2018ರ ಜೂನ್ 14ರಂದು ಅಧಿಸೂಚಿಸಲಾಗಿದೆ.

*****


(Release ID: 1557109) Visitor Counter : 185


Read this release in: English