ಬಾಹ್ಯಾಕಾಶ ವಿಭಾಗ

ಅಂಚೆ ಕ್ಷೇತ್ರದಲ್ಲಿ ಭಾರತ ಮತ್ತು ಜಪಾನ್ ನಡುವಿನ ಸಹಕಾರ ಜ್ಞಾಪನಾ ಪತ್ರಕ್ಕೆ ಸಚಿವ ಸಂಪುಟ ಒಪ್ಪಿಗೆ

Posted On: 06 DEC 2018 9:29PM by PIB Bengaluru

ಅಂಚೆ ಕ್ಷೇತ್ರದಲ್ಲಿ ಭಾರತ ಮತ್ತು ಜಪಾನ್ ನಡುವಿನ ಸಹಕಾರ ಜ್ಞಾಪನಾ ಪತ್ರಕ್ಕೆ ಸಚಿವ ಸಂಪುಟ ಒಪ್ಪಿಗೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅಂಚೆ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಸಹಕಾರ ಜ್ಞಾಪನಾ ಪತ್ರಕ್ಕೆ ಪೂರ್ವಾನ್ವಯ ಒಪ್ಪಿಗೆ ನೀಡಿದೆ. ಈ ಎಂಒಸಿಯು ಎರಡೂ ರಾಷ್ಟ್ರಗಳ ನಡುವೆ ಅಂಚೆ ಸೇವೆಗಳ ಸುಧಾರಣೆಗೆ ನೆರವಾಗಲಿದೆ.

 

ಲಾಭಗಳು

 

ಸಹಕಾರ ಜ್ಞಾಪನಾ ಪತ್ರವು ಭಾರತ ಮತ್ತು ಜಪಾನ್ ನಡುವೆ ಅಂಚೆ ಕ್ಷೇತ್ರದಲ್ಲಿನ ಸೇವೆಗಳಲ್ಲಿ ಸುಧಾರಣೆ ತರಲು ನೆರವಾಗಲಿದೆ.

 

•              ಅಂಚೆ ನೀತಿಗೆ ಸಂಬಂಧಿಸಿದ ಮಾಹಿತಿ ಮತ್ತು ದೃಷ್ಟಿಕೋನಗಳನ್ನು ತಮ್ಮ ಅನುಭವಗಳ ಆಧಾರದ ಮೇಲೆ ಪರಸ್ಪರ ವಿನಿಮಯ ಮಾಡಿಕೊಳ್ಳುವುದು.

 

•              ಸಹಕಾರ ಸಂಬಂಧವನ್ನು ನಿರ್ಮಿಸಲು ಚರ್ಚೆಗಳನ್ನು ಉತ್ತೇಜಿಸುವುದು.

 

•              ಪರಸ್ಪರರು ನಿರ್ಧರಿಸಿದ ನಿರ್ದಿಷ್ಟ ವಿಷಯಗಳನ್ನು ಮುಂದುವರಿಸಿಕೊಂಡು ಹೋಗಲು  ಅಂಚೆಸೇವೆಯ ಸಂವಾದವನ್ನು ಸ್ಥಾಪಿಸುವುದು.

 

ಈ ಎಂಒಸಿಯು ಭಾರತ ಮತ್ತು ಜಪಾನ್ ನಡುವಿನ ಸಹಕಾರ ಉತ್ತೇಜಿಸಲಿದ್ದು ಎರಡೂ ರಾಷ್ಟ್ರಗಳಲ್ಲಿನಅಂಚೆ ಕಾರ್ಯಾಚರಣೆಗಳು ಲಾಭ ಪಡೆಯಲಿವೆ.



(Release ID: 1555357) Visitor Counter : 42


Read this release in: English , Tamil