ಕೃಷಿ ಸಚಿವಾಲಯ

ಪ್ರಧಾನಮಂತ್ರಿ ಫಸಲು ವಿಮಾ ಯೋಜನೆಯ ಪ್ರಥಮ ರಾಷ್ಟ್ರೀಯ ಪರಿಶೀಲನಾ ಸಮಾವೇಶ ವನ್ನು ಬೆಂಗಳೂರಲ್ಲಿಂದು ಉದ್ಘಾಟಿಸಲಾಯಿತು.

Posted On: 16 NOV 2018 3:31PM by PIB Bengaluru

ಪ್ರಧಾನಮಂತ್ರಿ ಫಸಲು ವಿಮಾ ಯೋಜನೆಯ ಪ್ರಥಮ ರಾಷ್ಟ್ರೀಯ ಪರಿಶೀಲನಾ ಸಮಾವೇಶ ವನ್ನು 

ಬೆಂಗಳೂರಲ್ಲಿಂದು ಉದ್ಘಾಟಿಸಲಾಯಿತು.

 

ಬೆಂಗಳೂರು , ನವೆಂಬರ್ 16, 2018 

 

ಪ್ರಧಾನಮಂತ್ರಿ ಫಸಲು ವಿಮಾ ಯೋಜನೆಯ ಪ್ರಥಮ ರಾಷ್ಟ್ರೀಯ ಪರಿಶೀಲನಾ ಸಮಾವೇಶವನ್ನು  ಐ.ಆರ್.ಡಿ.ಎ., ಕಾರ್ಯಾಧ್ಯಕ್ಷ ಶ್ರೀ ಸುಭಾಶ್ ಚಂದ್ರ ಕುಂಟಿಯಾ ಅವರು ಇಂದು ದೀಪ ಬೆಳಗಿಸಿ ಉದ್ಘಾಟಿಸಿದರು. 

 

ಸಮಾರಂಭದಲ್ಲಿ ಮಾತನಾಡಿದ ಶ್ರೀ ಸುಭಾಶ್ ಚಂದ್ರ ಕುಂಟಿಯಾ ಅವರು, ಕೃಷಿ ವಲಯ ದೇಶದ  ಉದ್ಯೋಗ ವಲಯಕ್ಕೆ ಶೇ 50ರಷ್ಟು ಕೊಡುಗೆ ನೀಡಿದೆ  . ಕೃಷಿಕರ ಬೆಳೆಹಾನಿಗೆ ಆರ್ಥಿಕ ಪರಿಹಾರವನ್ನು ನೀಡುವ  ಉದ್ದೇಶದಿಂದ ಸರ್ಕಾರ ಪ್ರಧಾನಮಂತ್ರಿ ಫಸಲು  ವಿಮಾ ಯೋಜನೆಯನ್ನು ಜಾರಿಗೊಳಿಸಿದೆ. ಇದು ವಿಶ್ವದ ಅತಿದೊಡ್ಡ ಬೆಳೆ ವಿಮಾ ಯೋಜನೆಯಾಗಿದೆ ಎಂದು ಶ್ರೀ. ಕುಂಟಿಯಾ ಹೇಳಿದರು.   ರೈತರಿಗೆ ಬೆಳೆ ಹಾನಿ ಮತ್ತು ಇತರ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಆಗುತ್ತಿರುವ ವಿಳಂಬ ಮತ್ತು ತೊಂದರೆಗಳನ್ನು ನಿವಾರಿಸುವ ಕ್ರಮಗಳತ್ತ ವಿಮಾ ಸಂಸ್ಥೆಗಳು ಗಮನಹರಿಸಬೇಕು. ಪರಿಹಾರ ಕಾರ್ಯಯೋಜನೆಗಳು ಅತಿ ಶೀಘ್ರಗತಿಯಲ್ಲಾಗಬೇಕು ಎಂದು ಶ್ರೀ ಸುಭಾಶ್ ಚಂದ್ರ ಕುಂಟಿಯಾ ಅವರು  ಈ ಸಂದರ್ಭದಲ್ಲಿ ಹೇಳಿದರು. 

 

ಕಾಲ್ ಸೆಂಟರ್ ( ಸಹಾಯವಾಣಿ) ಗಳನ್ನು ಸ್ಥಾಪಿಸುವ ಮೂಲಕ ಕೃಷಿಕರ ಪ್ರಶ್ನೆಗಳಿಗೆ ತ್ವರಿತವಾಗಿ ಉತ್ತರಿಸುವ ವ್ಯವಸ್ಥೆಯಾಗಬೇಕು. ವಿಮಾಸಂಸ್ಥೆಗಳು ಮತ್ತು ರಾಜ್ಯ ಸರಕಾರಗಳು ಹಾಗೂ ಬ್ಯಾಂಕುಗಳು ಪ್ರಧಾನಮಂತ್ರಿ ಫಸಲು ವಿಮಾ ಯೋಜನೆಯ ಕುರಿತಾಗಿ ಸಣ್ಣ ಮತ್ತು ಮದ್ಯಮ ಮಟ್ಟದ ರೈತರಲ್ಲಿ ಅರಿವು ಮೂಡಿಸಲು ಸ್ಥಳೀಯ ಮಟ್ಟದಲ್ಲಿ ಸಿಬ್ಬಂದಿಗಳನ್ನು ನೇಮಿಸಬೇಕು. ಇದರಿಂದಾಗಿ ರೈತರು ವಿಮಾಯೋಜನೆಯ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ  . ವಿಮಾಸಂಸ್ಥೆಗಳು ಬೆಳೆ ಕೊಯ್ಲು ಪ್ರಯೋಗ (ಸಿ.ಸಿ.ಇ)ವನ್ನು ಪಾರದರ್ಶಕ ರೀತಿಯಲ್ಲಿ ನಡೆಸಬೇಕು ಎಂದು ಶ್ರೀ ಸುಭಾಶ್ ಚಂದ್ರ ಕುಂಟಿಯಾ ಅವರು ಹೇಳಿದರು.  

 

ಪ್ರಧಾನಮಂತ್ರಿ ಫಸಲು ವಿಮಾಯೋಜನೆಯಡಿ ವಿಮಾ ಪರಿಹಾರವನ್ನು ಆದಷ್ಟು ಬೇಗನೆ ವಿಲೇವಾರಿ ಮಾಡುವ ವ್ಯವಸ್ಥೆಯಾಗಬೇಕು. ಕೇಂದ್ರ ಮತ್ತು ರಾಜ್ಯಗಳು ಜಂಟಿಯಾಗಿ ಪ್ರಧಾನಮಂತ್ರಿ ಫಸಲು ವಿಮಾ ಯೋಜನೆಯಡಿ ವಿಮೆಯನ್ನು ಅನುಷ್ಠಾನಗೊಳಿಸಬೇಕು. ಪ್ರತಿರೋಧ ವಾತಾವರಣದ ಸಂದರ್ಭದಲ್ಲಿ ಕಷ್ಟನಷ್ಟ ಮತ್ತು ಬೆಳೆ ಹಾನಿ ಕಡಿಮೆ ಮಾಡುವ ಹಾಗೂ ಬೆಳೆ ಸಂರಕ್ಷಣೆಗಾಗಿ ಸಕಾಲಿಕ ಸೂಚನೆ ನೀಡುವ ವ್ಯವಸ್ಥೆಯಾಗಬೇಕು ಎಂದು ಶ್ರೀ ಸುಭಾಶ್ ಚಂದ್ರ ಕುಂಟಿಯಾ ಅವರು ಹೇಳಿದರು.  

 

ಕರ್ನಾಟಕ ಸರಕಾರದ ಕೃಷಿ ಇಲಾಖೆಯ ಕಾರ್ಯದರ್ಶಿ ಶ್ರೀ ಮಹೇಶ್ವರ ರಾವ್ .ಎಮ್ ಅವರು ಮಾತನಾಡುತ್ತಾ, ವಿಮಾ ಸಂಸ್ಥೆಗಳು ಪ್ರತಿ ಜಿಲ್ಲೆಯಲ್ಲೂ ಒಬ್ಬ ಪ್ರತಿನಿಧಿಯನ್ನು ನಿಯೋಜಿಸುವ ಮೂಲಕ ರೈತರ ವಿಮಾ ಸಂಬಂಧಿತ ಸಮಸ್ಯೆಗಳಿಗೆ ವಿಮಾ ಅಧಿಕಾರಿಗಳು ಸುಲಭವಾಗಿ ಲಭ್ಯವಿದ್ದು   ಕೂಡಲೇ ಸಮಸ್ಯೆಗಳನ್ನು ಪರಿಹರಿಸುವ ವ್ಯವಸ್ಥೆಗೆ ಪ್ರಯತ್ನಿಸಬೇಕು ಎಂದರು.   

 

“ರೈತರಲ್ಲಿ ಪಿ.ಎಮ್.ಫ್.ಬಿ.ವೈ.ಯ ಕುರಿತಾಗಿ ಸಾಮಾನ್ಯ ಅರಿವು ಮೂಡಿಸುವ ಅಗತ್ಯವಿದೆ” ಎಂದು ಮಹಾರಾಷ್ಟ್ರದ ಕೃಷಿ ಆಯುಕ್ತ ಶ್ರೀ ಸಚೀಂದ್ರ ಪ್ರತಾಪ್ ಸಿಂಗ್ ಅವರು ಹೇಳಿದರು

 

ಕೇಂದ್ರ ಕೃಷಿ ಸಚಿವಾಲಯ ಸೆಪ್ಟೆಂಬರ್ 2018ರಂದು ಕಳೆದ ತ್ರೈಮಾಸಿಕ ಅವಧಿಯಲ್ಲಿ ಅಂತರ್ಜಾಲ ತಾಣಗಳ ಸಮೀಕ್ಷೆಯಲ್ಲಿ ಉನ್ನತ ಸ್ಥಾನ ಗಳಿಸಿದ ಹೆಚ್.ಡಿ.ಎಫ್.ಸಿ. ಆರ್ಗೊ ಜನರಲ್ ಇನ್ಶ್ಯೂರೆನ್ಸ್ ಕಂಪನಿ ಲಿಮಿಟೆಡ್, ಭಾರತೀಯ ಕೃಷಿ ವಿಮಾ ಸಂಸ್ಥೆ, ಓರಿಯಂಟಲ್ ಇನ್ಶ್ಯೂರೆನ್ಸ್ ಕಂಪನಿ ಲಿಮಿಟೆಡ್ ಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

 

ಪ್ರಧಾನಮಂತ್ರಿ  ಫಸಲು ವಿಮಾ ಯೋಜನೆಯ ಕಾರ್ಯ ನಿರ್ವಹಣೆಯ ಮೌಲ್ಯಮಾಪನ ಜಾಗತಿಕ ಮಟ್ಟದಲ್ಲಿ ಬೆಳೆ ವಿಮೆಯಲ್ಲಿ ತಂತ್ರಜ್ಞಾನದ ಪಾತ್ರ, ಮಾಹಿತಿ, ಶಿಕ್ಷಣ ಮತ್ತು ಪಿ.ಎಮ್.ಫ್.ಬಿ.ವೈ.ಯ ಸಂವಹನ ವ್ಯೂಹರಚನೆ, ಬೆಳೆ ವಿಮೆಯ ಅನುಷ್ಠಾನದಲ್ಲಿನ ಸಮಸ್ಯೆಗಳು ಮತ್ತು ಸವಾಲುಗಳು , ಬ್ಯಾಂಕುಗಳು ಪಿ.ಎಮ್.ಫ್.ಬಿ.ವೈ.ಯನ್ನು ಅನುಷ್ಠಾನಗೊಳಿಸುವ ಉತ್ತಮ ಶಿಷ್ಟಾಚಾರಗಳು, ಇತ್ಯಾದಿ ವಿಷಯಗಳ ಕುರಿತಾಗಿ ಎರಡು ದಿನಗಳ ಸಮಾವೇಶ ನಡೆಯಲಿದೆ. 

 

ಸಮಾರಂಭದ ಸಂದರ್ಭದಲ್ಲಿ ಪೂರ್ವ ನಿರ್ಧರಿತ ರಾಜ್ಯಗಳೊಂದಿಗೆ ಪಿ.ಎಮ್.ಫ್.ಬಿ.ವೈ.ಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂವಾದ ನಡೆಸಲಿದ್ದಾರೆ. ವಿವಿಧ ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಗಳ,ಭಾರತ ಸರಕಾರ, ರಾಜ್ಯ ಸರ್ಕಾರಗಳು, ವಿಮಾಸಂಸ್ಥೆಗಳು, ಬ್ಯಾಂಕುಗಳು, ರಾಜ್ಯ ಸಹಕಾರಿ ಸಂಸ್ಥೆಗಳು ಮತ್ತು ಕ್ಷೇತ್ರದ ಇತರ ಪಾಲುದಾರರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.



(Release ID: 1552997) Visitor Counter : 81


Read this release in: English