ಪ್ರಧಾನ ಮಂತ್ರಿಯವರ ಕಛೇರಿ

ಒಡಿಶಾದಲ್ಲಿ ಪ್ರಧಾನಮಂತ್ರಿ: ತಲ್ಚೇರ್ ರಸಗೊಬ್ಬರ ಕಾರ್ಖಾನೆ ಪುನಶ್ಚೇತನ ಕೆಲಸ ಪ್ರಾರಂಭ, ಝಾರ್ಸುಗುಡಾ ವಿಮಾನ ನಿಲ್ದಾಣ ಉದ್ಘಾಟನೆ 

Posted On: 22 SEP 2018 5:13PM by PIB Bengaluru

ಒಡಿಶಾದಲ್ಲಿ ಪ್ರಧಾನಮಂತ್ರಿ: ತಲ್ಚೇರ್ ರಸಗೊಬ್ಬರ ಕಾರ್ಖಾನೆ ಪುನಶ್ಚೇತನ ಕೆಲಸ ಪ್ರಾರಂಭ, ಝಾರ್ಸುಗುಡಾ ವಿಮಾನ ನಿಲ್ದಾಣ ಉದ್ಘಾಟನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾಕ್ಕೆ ಭೇಟಿ ನೀಡಿದರು. ತಲ್ಚೇರ್ ನಲ್ಲಿ, ತಲ್ಚೇರ್ ರಸಗೊಬ್ಬರ ಕಾರ್ಖಾನೆ ಪುನಶ್ಚೇತನ  ಕಾರ್ಯಾರಂಭವಾದ ಸಂಕೇತವಾಗಿ ಫಲಕವನ್ನು ಅನಾವರಣ ಮಾಡಿದರು.  

 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹತ್ವಪೂರ್ಣ ರಸಗೊಬ್ಬರ ಕಾರ್ಖಾನೆಯ ಪುನಶ್ಚೇತನ ಕಾಮಗಾರಿ ಆರಂಭವಾಗಿದ್ದು, ಇದು ಸಂತಸದ ವಿಷಯವಾಗಿದೆ. ಈ ಹಿಂದೆ ಎಂದೋ ಪುರ್ಣವಾಗಬೇಕಿದ್ದ ಜನತೆಯ ಆಶೋತ್ತರವನ್ನು ನಾವೂ ಇಂದು ಪೂರ್ತಿಗೊಳಿಸಿದ್ದೇವೆ. ಸರಕಾರ ಭಾರತವನ್ನು ಪ್ರಗತಿಯ ನೂತನ  ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶ ಹೊಂದಿದೆ. ಈ ಕಾರ್ಖಾನೆ ಅತ್ಯಾಧುನಿಕ ತಂತ್ರಜ್ಞಾನವನ್ನೂ ಹೊಂದಿದೆ ಮತ್ತು ಮುಂಬರುವ ದಿನಗಳಲ್ಲಿ ಈ ರಸಗೊಬ್ಬರ ಕಾರ್ಖಾನೆ ಭಾರತದ ಯಶೋಗಾಥೆಯ ಕೇಂದ್ರಬಿಂದುವಾಗಲಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.

 

ಝಾರ್ಸುಗುಡಾದಲ್ಲಿ, ಪ್ರಧಾನಮಂತ್ರಿ ಅವರು ಝಾರ್ಸುಗುಡಾ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು ಮತ್ತು ಝಾರ್ಸುಗುಡಾದಿಂದ ರಾಯಿಪುರ್ ಮೊದಲ ವಿಮಾನಕ್ಕೆ ಹಸಿರು ನಿಶಾನೆ ತೋರಿದರು.  ಅವರು ಗರ್ಜನ್ ಬಹಾಲ್ ಕಲ್ಲಿದ್ದಲ್ಲು ಗಣಿಯ ಮತ್ತು ಝಾರ್ಸುಗುಡಾ-ಬಾರಾಪಲಿ-ಸರ್ದೆಗಾ ರೈಲು ಹಳಿಗಳನ್ನು ಲೋಕಾರ್ಪಣೆ ಮಾಡಿದರು.  ದುಲಂಗಾ ಕಲ್ಲಿದ್ದಲ್ಲು ಗಣಿಯ ಉತ್ಪಾದನೆ ಮತ್ತು ಸಾಗಾಟಗಳ ಪ್ರಾರಂಭದ ಸಂಕೇತವಾಗಿ ಫಲಕವನ್ನು ಅನಾವರಣಮಾಡಿದರು.

 

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ವಿಮಾನ ನಿಲ್ದಾಣ ಮತ್ತು ಇತರ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಗಾಗಿ ಝಾರ್ಸುಗುಡಾದಲ್ಲಿರಲು ನನಗೆ ಬಹಳ ಸಂತಸವಾಗುತ್ತದೆ ಎಂದು  ತಿಳಿಸಿದರು. ಈ ಅಭಿವೃದ್ಧಿಕಾರ್ಯಗಳು ಒಡಿಶಾದ ಜನತೆಗೆ ಬಹಳಷ್ಟು ಪ್ರಯೋಜನಕಾರಿಯಾಗಲಿವೆ ಎಂದೂ ಅವರು ಹೇಳಿದರು.  

 

ಭಾರತ ವಿಮಾನಯಾನ ಕ್ಷೇತ್ರವು ಬಹಳ ತೀವ್ರಗತಿಯಲ್ಲಿ ಬದಲಾಗುತ್ತಿದೆ ಇದು 125 ಕೋಟಿ ಭಾರತೀಯರಿಗೆ ಶುಭದಾಯಕವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. 

 

ಒಡಿಶಾದ ಜನತೆಯ ಸೇವೆಗಾಗಿ ಝಾರ್ಸುಗುಡಾ ವಿಮಾನನಿಲ್ದಾಣವು ಅತ್ಯುತ್ತಮ ಪ್ರದೇಶದಲ್ಲಿದೆ. ಸರ್ವತೋಮುಖ ಅಭಿವೃದ್ದಿಗೆ ಉತ್ತಮ ಸಂಪರ್ಕವೇ ಮೂಲಾಧಾರ. ದೇಶದಾದ್ಯಂತ ಸಂಪರ್ಕವನ್ನು ವೃದ್ಧಿಸಲು ಕೇಂದ್ರ ಸರಕಾರ ಕಠಿಣ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು. 



(Release ID: 1547172) Visitor Counter : 99


Read this release in: English , Marathi , Tamil , Telugu