ಉಕ್ಕು ಸಚಿವಾಲಯ

ಜಾಗತಿಕ ಉಕ್ಕು ಉದ್ಯಮದಲ್ಲಿ ಭಾರತದ ಸ್ಥಾನ ಹಾಗೂ ಭಾರತದಲ್ಲಿ ಉಕ್ಕಿಗೆ ಬೇಡಿಕೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ - ಕೇಂದ್ರ ಉಕ್ಕು ಖಾತೆಯ ಸಚಿವರಾದ ಶ್ರೀ ಚೌಧರಿ ಬೀರೇಂದರ್ ಸಿಂಗ್

Posted On: 29 JUN 2018 2:57PM by PIB Bengaluru

ಭಾರತ ಸರಕಾರದ ವಾರ್ತಾ ಶಾಖೆ
ಬೆಂಗಳೂರು

 

ಪತ್ರಿಕಾ ಹೇಳಿಕೆ

 

ಭಾರತ ಸರ್ಕಾರ

ಉಕ್ಕು ಸಚಿವಾಲಯ

 
ಬೆಂಗಳೂರು, 29 ಜೂನ್ 2018 
 
ಕೇಂದ್ರ ಸರ್ಕಾರದ ಉಕ್ಕು ಖಾತೆಯ ಸಚಿವರಾದ ಶ್ರೀ  ಚೌಧರಿ ಬೀರೇಂದರ್ ಸಿಂಗ್ ಅವರು ಇಂದು ಬೆಂಗಳೂರಿನಲ್ಲಿ ನಡೆದ ಇತ್ತೀಚೆಗೆ ರಚನೆಯಾದ ಉಕ್ಕುಸಚಿವಾಲಯ ದ ರಾಷ್ಟ್ರೀಯ ಉಕ್ಕು ಗ್ರಾಹಕರ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಆಯಕಟ್ಟಿನ ಸ್ಥಾನದಲ್ಲಿದ್ದು ಕರ್ನಾಟಕ ಮಾತ್ರವಲ್ಲ, ನೆರೆಹೊರೆಯ ದಕ್ಷಿಣದ ರಾಜ್ಯಗಳ ದೃಷ್ಟಿಯಲ್ಲೂ ಮುಖ್ಯವಾದದ್ದಾಗಿದೆ. ಸಭೆಯಲ್ಲಿ ಭಾರತ ಸರ್ಕಾರದ ಉಕ್ಕು ಸಚಿವಾಲಯ ದ ಕಾರ್ಯದರ್ಶಿ ಶ್ರೀ ಬಿನೊಯ್ ಕುಮಾರ್ ಸೇರಿದಂತೆ ಉಕ್ಕು   ಸಚಿವಾಲಯ ದ ಹಿರಿಯ ಅಧಿಕಾರಿಗಳು, ರಾಜ್ಯ ಸರ್ಕಾರದ ಅಧಿಕಾರಿಗಳು ಹಾಗೂ ಉಕ್ಕು ಉದ್ಯಮದ ಮುಖಂಡರು ಪಾಲ್ಗೊಂಡಿದ್ದರು.
 
ಉಕ್ಕು ಸಚಿವಾಲಯ ದ ಅಡಿಯಲ್ಲಿರುವ ಸಾರ್ವಜನಿಕ ಕ್ಷೇತ್ರದ ಉದ್ಯಮವಾದ ಎಂಎಸ್‍ಟಿಸಿಯ ಮೊಬೈಲ್ ಆ್ಯಪ್-ಎಂ3(ಎಂಎಸ್‍ಟಿಸಿ ಮೆಟಲ್ ಮಂಡಿ)ನ್ನು ಇದೇ ವೇಳೆ ಬಿಡುಗಡೆಗೊಳಿಸಲಾಯಿತು. ವ್ಯಾಪಾರಿ  ಹಾಗೂ ಗ್ರಾಹಕರನ್ನು ಹತ್ತಿರ ತರುವ ಉದ್ದೇಶವಿರುವ ಈ ಆ್ಯಪ್, ಸಣ್ಣ ಪ್ರಮಾಣದ ಗ್ರಾಹಕರ ಅಡೆತಡೆಗಳನ್ನು ನಿವಾರಿಸಲಿದೆ. ಇದು ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಉಪಕ್ರಮಕ್ಕೆ ಅನುಗುಣವಾಗಿದೆ.
 
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಸಚಿವ ಶ್ರೀ ಸಿಂಗ್, ಜಾಗತಿಕ ಉಕ್ಕು ಉದ್ಯಮದಲ್ಲಿ ಭಾರತದ ಸ್ಥಾನ ಹಾಗೂ ಭಾರತದಲ್ಲಿ ಉಕ್ಕಿಗೆ ಬೇಡಿಕೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ಕುರಿತು ಉಲ್ಲೇಖಿಸಿದರು.
 
ಭಾರತದಲ್ಲಿ ತಲಾವಾರು ಉಕ್ಕು ಬಳಕೆ 68 ಕೆಜಿ ಇದ್ದು, ಜಾಗತಿಕ ತಲಾವಾರು ಪ್ರಮಾಣ 208 ಕೆಜಿಗೆ ಹೋಲಿಸಿದರೆ, 1/3 ಪಾಲು ಮಾತ್ರ ಇದೆ. ಈ ಹಿನ್ನೆಲೆಯಲ್ಲಿ ಉಕ್ಕು ಗ್ರಾಹಕರ ಮಂಡಳಿಯಂಥ ಒಕ್ಕೂಟಗಳು ಪ್ರಮುಖ ಪಾತ್ರ ವಹಿಸಬಹುದಾಗಿದೆ. ಉತ್ಪಾದಕರು ಹಾಗೂ  ಗ್ರಾಹಕರು ಒಂದೆ ವೇದಿಕೆಯಡಿ ಬಂದು, ಅನ್ವೇಷಕ ಹಾಗೂ ಚೌಕಟ್ಟಿನಿಂದ ಹೊರಗಿನ ಆಲೋಚನೆಗಳ ಮೂಲಕ ಉದ್ಯಮವನ್ನು ಮುಂದಕ್ಕೆ ಒಯ್ಯಬಹುದಾಗಿದೆ. ಬೇಡಿಕೆ, ಪೂರೈಕೆ, ಉತ್ಪನ್ನದ ಅನ್ವೇಷಣೆ ಹಾಗೂ ಸಾಗಣೆ ಇನ್ನಿತರ ವಿಷಯ ಕುರಿತು ಗಂಭೀರ ಚರ್ಚೆ ನಡೆಯಬೇಕಿದೆ. ಸರಕು ಸಾಗಣೆ ಸೂಕ್ಷ್ಮ ವಿಷಯವಾಗಿದ್ದು, ಗ್ರಾಹಕ ಮಂಡಳಿಯು ನಕ್ಷೆಯೊಂದನ್ನು ರಚಿಸುವ ಮೂಲಕ ಕಾರ್ಯನೀತಿಯನ್ನು ರೂಪಿಸುವವರ ಗಮನವನ್ನು ಈ ದಿಕ್ಕಿನೆಡೆಗೆ ಸೆಳೆಯಬೇಕಿದೆ. ಪ್ರಮುಖ ಉಪಕ್ರಮಗಳಾದ ಮೇಕ್ ಇನ್ ಇಂಡಿಯಾ, ಪ್ರಧಾನ ಮಂತ್ರಿ ಆವಾಸ್ ಯೋಜನಾ, ಪ್ರಧಾನ ಮಂತ್ರಿ ಗ್ರಾಮೀಣ್ ವಿಕಾಸ್ ಯೋಜನಾ ಮತ್ತು ರಕ್ಷಣಾ ಕ್ಷೇತ್ರದ ಅಗತ್ಯಗಳಿಗೆ ಉತ್ತಮ ಗುಣಮಟ್ಟದ ಹಾಗೂ ಮೌಲ್ಯವರ್ಧಿತ ಉಕ್ಕು ಬೇಕಾಗಿರುವುದರಿಂದ, ದೇಶದಲ್ಲಿ ಉಕ್ಕಿಗೆ ಬೇಡಿಕೆ ಹೆಚ್ಚಳವನ್ನು ನಿರೀಕ್ಷಿಸಲಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಅನ್ವೇಷಣೆಯ ಅಗತ್ಯಗಳನ್ನು ಪೂರೈಸಲು ಉಕ್ಕು ಸಚಿವಾಲಯ ವು ಉಕ್ಕು ಸಂಶೋಧನೆ ಮತ್ತು ತಂತ್ರಜ್ಞಾನ ಮಿಷನ್‍ನ್ನು ಸೃಷ್ಟಿಸಿದೆ.
 
"ಮೇಕ್ ಇನ್ ಇಂಡಿಯಾ' ಮತ್ತು "ಪ್ರಧಾನ ಮಂತ್ರಿ ಆವಾಸ್ ಯೋಜನಾ(  2022ರೊಳಗೆ ಎಲ್ಲರಿಗೂ ಮನೆ )' ದಂತ ಉಪಕ್ರಮಗಳು ದೇಶದೆಲ್ಲೆಡೆ ಉಕ್ಕಿನ ಬೇಡಿಕೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಸರ್ಕಾರದ ಕಾರ್ಯನೀತಿಯಲ್ಲಿನ ಬದಲಾವಣೆಗಳು ಅಂದರೆ, ಸಾಮಾನ್ಯ ವಿತ್ತ ನಿಯಮಗಳಿಗೆ ತಿದ್ದುಪಡಿ ತಂದು ಸರ್ಕಾರದ ಖರೀದಿಯಲ್ಲಿ ಯೋಜನೆಯ ಜೀವನವೃತ್ತದ ವೆಚ್ಚವನ್ನು ಪರಿಗಣಿಸುವಿಕೆ, 2030-31ರೊಳಗೆ ಉಕ್ಕು ಉತ್ಪಾದನೆನ್ನು 300 ಎಂಟಿಗೆ ಹೆಚ್ಚಿಸುವ ರಾಷ್ಟ್ರೀಯ ಉಕ್ಕು ಕಾರ್ಯನೀತಿ-2017 ಅಧಿಸೂಚನೆ ಹಾಗೂ ಸರ್ಕಾರದ ಖರೀದಿಯಲ್ಲಿ ದೇಶಿ ಉತ್ಪಾದಕರಿಂದಲೇ ಕಬ್ಬಿಣ ಹಾಗೂ ಉಕ್ಕು ಖರೀದಿಸಬೇಕೆಂಬ ಮೈಲು ಗಲ್ಲು ಕಾರ್ಯನೀತಿಯ ಅನುಷ್ಠಾನ ಹಾಗೂ ಸರ್ಕಾರವು ಮೂಲಸೌಲಭ್ಯ ಅಭಿವೃದ್ಧಿಗೆ ಒತ್ತು ನೀಡಿರುವುದರಿಂದ, ದೇಶದಲ್ಲಿ ಉಕ್ಕಿಗೆ ಬೇಡಿಕೆ ಖಂಡಿತವಾಗಿಯೂ ಹೆಚ್ಚಲಿದೆ.
 
ಭಾರತದ ಜಿಡಿಪಿಯಲ್ಲಿ ಉಕ್ಕಿನ ಪಾಲು ಶೇ 2. ಭಾರತದ ಆರ್ಥಿಕತೆಯು ಬೆಳವಣಿಗೆಯ ಪಥದಲ್ಲಿದೆ. ಸರ್ಕಾರವು ಮೂಲಸೌಲಭ್ಯವನ್ನು ಆದ್ಯತೆಯ ಕ್ಷೇತ್ರ ಎಂದು ಪರಿಗಣಿಸಿದ್ದು, ಅದು ಜಿಡಿಪಿ ಬೆಳವಣಿಗೆ ದರವನ್ನು ಉತ್ತೇಜಿಸಲಿದೆ. ಉಕ್ಕನ್ನು ಆಧರಿಸಿದ ನಿರ್ಮಿತಿಗಳ ಉಪಯೋಗಗಳು, ಅಂದರೆ, ಕಡಿಮೆ ಜೀವಿತಾವಧಿ ವೆಚ್ಚ, ವಿನ್ಯಾಸದಲ್ಲಿ ಸ್ಥಿತಿಸ್ಥಾಪಕತ್ವದೊಡನೆ ಉತ್ತಮ ಸೌಂದರ್ಯ ಇತ್ಯಾದಿಯನ್ನು ಪರಿಗಣಿಸಿದರೆ, ಮೂಲಸೌಲಭ್ಯ  ಅಭಿವೃದ್ಧಿಯಲ್ಲಿ ಉಕ್ಕು ಬಳಕೆಯ ಪ್ರಮುಖ ವಸ್ತು ಆಗಲಿದೆ. ಅತಿ ಪ್ರಮುಖ ಯೋಜನೆಗಳಾದ 100 ಚತುರ ನಗರಗಳ ಮಿಷನ್, ಎಲ್ಲರಿಗೂ ಮನೆ, ಅಟಲ್ ಮಿಷನ್ ಫಾರ್ ರಿಜುವಿನೇಷನ್ ಆಂಡ್ ಅರ್ಬನ್ ಟ್ರಾನ್ಸ್‍ಫರ್ಮೇಷನ್ , ರೈಲ್ವೆಯ ಉನ್ನತೀಕರಣ ಹಾಗೂ ರಕ್ಷಣಾ ಕ್ಷೇತ್ರದ ಆಧುನಿಕೀಕರಣದಲ್ಲಿ ಸ್ವದೇಶಿ ಉಕ್ಕು ಬಳಕೆಯಾಗಲಿದೆ.
 
ನಾನಾ ಪ್ರಮುಖ ಕ್ಷೇತ್ರಗಳಲ್ಲಿ ಸರ್ಕಾರ ಯೋಜಿಸಿದ ಉಪಕ್ರಮಗಳು ದೇಶದ ಜಿಡಿಪಿಯನ್ನು ಹೆಚ್ಚಿಸುವ ಸಾಧ್ಯತೆಯಿದ್ದು, ಇದು ಅಂತಿಮವಾಗಿ ದೇಶದಲ್ಲಿ ಉಕ್ಕಿನ ಬೇಡಿಕೆಯನ್ನು ಅಲ್ಪ ಕಾಲದಿಂದ ಮಧ್ಯಮ ಕಾಲದವರೆಗೆ ಹೆಚ್ಚಿಸಲು ಬೇಕಾದ ತಳ್ಳುವಿಕೆಯನ್ನು ಒದಗಿಸಲಿದೆ. ಉಕ್ಕು ಉದ್ಯಮ ಹಾಗೂ ಬಳಕೆದಾರರು ಒಟ್ಟುಗೂಡಿ, ಬೆಟ್ಟ ಪ್ರದೇಶದಲ್ಲಿ ಡಿಕ್ಕಿ ಪ್ರತಿಬಂಧಕಗಳು, ರೈಲ್ವೆ, ವೈದ್ಯಕೀಯ ಉದ್ದೇಶಗಳು ಹಾಗೂ ಇಂಧನ ಕ್ಷೇತ್ರದಲ್ಲಿ ಬಳಕೆಗೆ ವಿಶೇಷ ಗುಣಮಟ್ಟದ ಉಕ್ಕನ್ನು ಅಭಿವೃದ್ಧಿ ಪಡಿಸುವುದು ಇತ್ಯಾದಿ ಕ್ಷೇತ್ರಗಳಲ್ಲಿ ಉಕ್ಕಿನ ಬಳಕೆಯನ್ನು ಉತ್ತೇಜಿಸಬೇಕಿದೆ.         
 
*************


(Release ID: 1537162) Visitor Counter : 120


Read this release in: English