ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಆಹಾರ ಸಂಸ್ಕರಣ ಕೈಗಾರಿಕಾ ಸಚಿವರ ಜೊತೆಯಲ್ಲಿ ಎಸ್.ಜಿ.ಪಿ.ಸಿ. ನಿಯೋಗದಿಂದ ಪ್ರಧಾನ ಮಂತ್ರಿಗಳ ಭೇಟಿ.

प्रविष्टि तिथि: 08 JUN 2018 3:23PM by PIB Bengaluru

ಆಹಾರ ಸಂಸ್ಕರಣ ಕೈಗಾರಿಕಾ ಸಚಿವರ ಜೊತೆಯಲ್ಲಿ ಎಸ್.ಜಿ.ಪಿ.ಸಿ. ನಿಯೋಗದಿಂದ ಪ್ರಧಾನ ಮಂತ್ರಿಗಳ ಭೇಟಿ.

 

ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವರಾದ ಶ್ರೀಮತಿ ಹರ್ಶಿಮ್ರಾತ್ ಕೌರ್ ಬಾದಲ್ ನೇತೃತ್ವದಲ್ಲಿ ನಿಯೋಗವು ಇಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು. ನಿಯೋಗದಲ್ಲಿ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯ ಸದಸ್ಯರು ಇದ್ದರು.

 

ನಿಯೋಗವು ಕೇಂದ್ರ ಸರಕಾರದ ಯೋಜನೆಯಾದ  ’ಸೇವಾ ಭೋಜ ಯೋಜನಾ’ ಕ್ಕಾಗಿ  ಪ್ರಧಾನ ಮಂತ್ರಿಯವರನ್ನು ಅಭಿನಂದಿಸಿತು. ಗುರುದ್ವಾರಗಳು ಸೇರಿದಂತೆ ಧಾರ್ಮಿಕ ದತ್ತಿ ಸಂಸ್ಥೆಗಳು ಉಚಿತವಾಗಿ ನೀಡುವ ಪ್ರಸಾದ ಮತ್ತು ಭೋಜನ ವಸ್ತುಗಳ ಮೇಲಿನ ಸಿ.ಜಿ.ಎಸ್.ಟಿ. ಮತ್ತು ಐ.ಜಿ.ಎಸ್.ಟಿ. ಪಾಲನ್ನು ಈ ಯೋಜನೆ ಮರುಪಾವತಿಸುತ್ತದೆ.

 

ಕಬ್ಬು ಬೆಳೆಗಾರರ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಸರಕಾರವು ಕೈಗೊಂಡಿರುವ ಸರಣಿ ಕ್ರಮಗಳಿಗಾಗಿ ನಿಯೋಗವು ಪ್ರಧಾನ ಮಂತ್ರಿ ಅವರಿಗೆ ಕೃತಜ್ಞತೆ ಸಲ್ಲಿಸಿತು.


(रिलीज़ आईडी: 1535148) आगंतुक पटल : 161
इस विज्ञप्ति को इन भाषाओं में पढ़ें: English