ಉಪರಾಷ್ಟ್ರಪತಿಗಳ ಕಾರ್ಯಾಲಯ

ಕ್ಷಿಪ್ರವಾಗಿ ಬದಲಾಗುತ್ತಿರುವ ಜ್ಞಾನ ಆರ್ಥಿಕತೆಯ ಸವಾಲುಗಳನ್ನು ಎದುರಿಸಲು ಭಾರತೀಯ ಉನ್ನತ ಶಿಕ್ಷಣ ವ್ಯವಸ್ಥೆ ಮರುಸಂಶೋಧನೆ ಅಗತ್ಯ - ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಶ್ರೀ ಎಂ.ವೆಂಕಯ್ತನಾಯ್ಡು ಪ್ರತಿಪಾದನೆ

Posted On: 12 APR 2018 4:04PM by PIB Bengaluru

ತ್ವರಿತವಾಗಿ ಬದಲಾಗುತ್ತಿರುವ ಜ್ಞಾನ ಆರ್ಥಿಕತೆಯಿಂದ ಉದ್ಭವಿಸುತ್ತಿರುವ  ಸವಾಲುಗಳನ್ನು ಎದುರಿಸಲು 
ಭಾರತೀಯ ಉನ್ನತ ಶಿಕ್ಷಣ ವ್ಯವಸ್ಥೆ  ಪುನರ್ಶೋಧನೆಗೆ ಒಳಪಡಬೇಕಿದೆ
- ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು

 

 

ಬೆಂಗಳೂರು, ಏಪ್ರಿಲ್ 12, 2018     

ತ್ವರಿತವಾಗಿ ಬದಲಾಗುತ್ತಿರುವ ಜ್ಞಾನ ಆರ್ಥಿಕತೆಯಿಂದ ಉದ್ಭವಿಸುತ್ತಿರುವ  ಸವಾಲುಗಳನ್ನು ಎದುರಿಸಲು ಭಾರತೀಯ ಉನ್ನತ ಶಿಕ್ಷಣ ವ್ಯವಸ್ಥೆ  ತನ್ನನ್ನು ತಾನು ಪುನರ್ಶೋಧನೆಗೆ ಒಳಪಡಿಸಿಕೊಳ್ಲಬೇಕಿದೆ ಎಂದು ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರಿ ವೆಂಕಯ್ಯ ನಾಯ್ಡು ಅವರು ಹೇಳಿದ್ದಾರೆ. ಅವರು ಇಂದು ಇಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ 20 ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಘಟಿಕೋತ್ಸವ  ಭಾಷಣ ಮಾಡಿದರು.

 

ನಮ್ಮ ದೇಶದಲ್ಲಿ ಆರೋಗ್ಯ ರಕ್ಷಣಾ ಸೇವೆಗಳ  ಬೇಡಿಕೆ  ನಿಸ್ಸಂಶಯವಾಗಿ ಏರುತ್ತಿದೆ. ಮತ್ತು ದೊಡ್ಡ ಸಂಖ್ಯೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಅದರಿಂದ ವೃತ್ತಿಪರ ಕೌಶಲ್ಯಗಳೂ ವೃದ್ದಿಯಾಗುತ್ತವೆ. ಆರೋಗ್ಯ ರಕ್ಷಣಾ ಕ್ಷೇತ್ರದ ವೃತ್ತಿಪರರು ತಮ್ಮ  ಜ್ಞಾನವನ್ನು ಮೇಲ್ದರ್ಜೆಗೇರಿಸುತ್ತಾ ಹೋದರೆ ಮತ್ತು ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಲಭ್ಯ ಇರುವ ಇತ್ತೀಚಿನ ಆಧುನಿಕ ಶೋಧಗಳ ಬಗ್ಗೆ ಗಮನಹರಿಸಿ ಕಲಿತುಕೊಂಡರೆ, ಆಗ ಅವರು ತಮ್ಮ ವೃತ್ತಿಯಲ್ಲಿ ನಾಯಕರಾಗಿ ಹೊರಹೊಮ್ಮುವುದು ಖಚಿತ ಎಂದು ಶ್ರೀ ನಾಯ್ಡು ಅವರು ಹೇಳಿದರು. 

 

ಪದವೀಧರರಾಗುತ್ತಿರುವವರಿಗೆ ಇದು ಒಂದು ಪರಿವರ್ತನೆಯ ಸಂಧಿ ಕಾಲ, ಅವರು ಪೂರ್ಣ ಸನ್ನಧರಾಗಿ ಆರೋಗ್ಯ ರಕ್ಷಣಾ ಕ್ಷೇತ್ರದ ವೃತ್ತಿಪರರಾಗುತ್ತಿರುವ ಹಂತ. ಅವರು ಜೀವನದ ಸಮಗ್ರ ಭಾಗವಾಗಿ ಎದುರಾಗಲಿರುವ ಸತತ ಮತ್ತು ನೈಜ ಸವಾಲುಗಳಿಗೆ ತಮ್ಮನ್ನು ಒಡ್ಡಿಕೊಳ್ಳಲು ಸಿದ್ದರಾಗುವ ಹಂತ ಇದು ಎಂದವರು ಹೇಳಿದರು.

 

ಕಳೆದೆರಡು ದಶಕಗಳಲ್ಲಿ ಭಾರತವು ಬಡತನದಲ್ಲಿ ಬದುಕುವ ಅನುಪಾತವನ್ನು ಅರ್ಧದಷ್ಟು  ಕಡಿಮೆ ಮಾಡುವ ಮೂಲಕ ದಾಪುಗಾಲನ್ನಿಕ್ಕಿದೆ. ಆದಾಗ್ಯೂ ಸಮೃದ್ಧತೆ ಹೆಚ್ಚುತ್ತಿರುವ ಈ ಅವಧಿಯನ್ನು “ದ್ವಿಮುಖ ರೋಗಗಳ ಹೊರೆ” ಕಾಡುತ್ತಿದೆ. ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳು  ಅಥವಾ ’ಜೀವನ ಶೈಲಿ”ಯ ರೋಗಗಳು ಸತತವಾಗಿ ಏರುತ್ತಿವೆ. ನಾವು ಈ ಎರಡೂ ಆರೋಗ್ಯ ಸಂಬಂಧಿ ಕಳವಳಗಳನ್ನು ಎದುರಿಸಬೇಕಾಗಿದೆ ಎಂದವರು ಹೇಳಿದರು.

 

ವಿಶ್ವವಿದ್ಯಾನಿಲಯದ ಕುಲಪತಿಗಳು  ಹಾಗು ಕರ್ನಾಟಕ ರಾಜ್ಯಪಾಲರಾದ ಶ್ರೀ ವಜೂಭಾಯಿವಾಲಾ, ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಎಂ.ಕೆ. ರಮೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

…………………………….



(Release ID: 1528933) Visitor Counter : 108


Read this release in: English