ಸಂಪುಟ

ಕೃಷಿ ಮತ್ತು ಪೂರಕ ಕ್ಷೇತ್ರಗಳಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಇರಾನ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 14 MAR 2018 6:56PM by PIB Bengaluru

ಕೃಷಿ ಮತ್ತು ಪೂರಕ ಕ್ಷೇತ್ರಗಳಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಇರಾನ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಇರಾನ್ ನಡುವೆ ಕೃಷಿ ಮತ್ತು ಪೂರಕ ವಲಯಗಳ ಸಹಕಾರ ಕುರಿತಂತೆ ಆಗಿರುವ ತಿಳಿವಳಿಕೆ ಒಪ್ಪಂದ (ಎಂ.ಓ.ಯು.) ಕ್ಕೆ ಪೂರ್ವಾನ್ವಯ ಅನುಮೋದನೆ ನೀಡಿದೆ. ಈ ಎಂ.ಓ.ಯು.ಗೆ ಇರಾನ್ ರಾಷ್ಟ್ರಾಧ್ಯಕ್ಷರು ಭಾರತ ಭೇಟಿ ನೀಡಿದ್ದ ಸಂದರ್ಭದಲ್ಲಿ 2018ರ ಫೆಬ್ರವರಿ 17ರಂದು ಅಂಕಿತ ಹಾಕಲಾಗಿತ್ತು. 

ಈ ತಿಳಿವಳಿಕೆ ಒಪ್ಪಂದವು ಕೃಷಿ ಬೆಳೆಗಳು, ಕೃಷಿ ವಿಸ್ತರಣೆ, ತೋಟಗಾರಿಕೆ, ಯಂತ್ರೋಪಕರಣ, ಸುಗ್ಗಿ ನಂತರದ ತಂತ್ರಜ್ಞಾನ, ಸಸಿ ನಿರ್ಬಂಧ ಕ್ರಮಗಳು, ಸಾಲ ಮತ್ತು ಸಹಕಾರ ಕುರಿತ ಕ್ಷೇತ್ರಗಳಲ್ಲಿ ಸಹಕಾರ ಒದಗಿಸುತ್ತದೆ. ಇದು ಮಣ್ಣಿನ ಸಂರಕ್ಷಣೆ ಮತ್ತು ಜಲ ನಿರ್ವಹಣೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಬೀಜ ತಂತ್ರಜ್ಞಾನ ಮತ್ತು ಕೃಷಿ ಮಾರುಕಟ್ಟೆಯ ಸಹಕಾರವನ್ನು ಒದಗಿಸುತ್ತದೆ. ಜಾನುವಾರು ಸುಧಾರಣೆ, ಹೈನುಗಾರಿಕೆ ಅಭಿವೃದ್ಧಿ, ಪ್ರಾಣಿಗಳ ಆರೋಗ್ಯ ಮತ್ತು ಪರಸ್ಪರರು ಒಪ್ಪಿಗೆ ಸೂಚಿಸುವ ಇತರೆ ಯಾವುದೇ ಕ್ಷೇತ್ರ ಈ ತಿಳಿವಳಿಕೆ ಒಪ್ಪಂದದ ಸ್ವರೂಪದೊಳಗೆ ಬರುತ್ತದೆ. ತಜ್ಞರ, ಸರಕುಗಳ ಮತ್ತು ಮಾಹಿತಿಯ ವಿನಿಮಯ ಮತ್ತು ತರಬೇತಿ ಪಡೆಯುವವರ ಹಾಗೂ ವಿಜ್ಞಾನಿಗಳನ್ನು ಅಧ್ಯಯನ ಪ್ರವಾಸ / ತರಬೇತಿ ಕಾರ್ಯಕ್ರಮಗಳು, ಸೂಕ್ತ ಸಮಾವೇಶಗಳ ಮತ್ತು ಕಾರ್ಯಾಗಾರಗಳ ಆಯೋಜನೆ ಮತ್ತು ಪರಸ್ಪರರು ಒಪ್ಪುವ ಇತರೆ ಯಾವುದೇ ಮಾರ್ಗದ ಮೂಲಕವೂ ಈ ಸಹಕಾರವನ್ನು ಜಾರಿ ಮಾಡಬಹುದಾಗಿದೆ. 

ಈ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ ತಿಳಿವಳಿಕೆ ಒಪ್ಪಂದದ ಪೂರ್ಣಗೊಳಿಸುವಿಕೆಗಾಗಿ ಕೈಗೊಳ್ಳಲಾಗಿರುವ ಚಟುವಟಿಕೆಗಳ ಬಗ್ಗೆ ನಿಗಾ ಇಡಲು ಜಂಟಿ ಕಾರ್ಯ ಗುಂಪು (ಜೆ.ಡಬ್ಲ್ಯು.ಜಿ)ಯನ್ನು ರಚಿಸಲಾಗುತ್ತದೆ. ಈ ಜಂಟಿ ಕಾರ್ಯ ಗುಂಪು ಇರಾನ್ ಮತ್ತು ಭಾರತದಲ್ಲಿ ಪರ್ಯಾಯವಾಗಿ ಪ್ರತಿ ಎರಡು ವರ್ಷಗಳಿಗೊಮ್ಮೆ ಸಭೆಗಳನ್ನು ಏರ್ಪಡಿಸುತ್ತದೆ. ಈ ತಿಳಿವಳಿಕೆ ಒಪ್ಪಂದವು ಆರಂಭಿಕವಾಗಿ ಐದು ವರ್ಷಗಳವರೆಗೆ ಸಿಂಧುವಾಗಿದ್ದು, ಯಾವುದೇ ಪಕ್ಷಕಾರರು ಮತ್ತೊಬ್ಬ ಪಕ್ಷಕಾರರಿಗೆ ಈ ಒಪ್ಪಂದ ರದ್ದುಪಡಿಸುವ ಇಂಗಿತ ವ್ಯಕ್ತಪಡಿಸದೇ ಹೋದಲ್ಲಿ, ಅದು ತಂತಾನೆ ಮತ್ತೆ ಮುಂದಿನ ಐದು ವರ್ಷಗಳ ಅವಧಿಗೆ ವಿಸ್ತರಣೆಯಾಗುತ್ತದೆ. 



(Release ID: 1524826) Visitor Counter : 100