ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತ್ ನಲ್ಲಿ ನಾಳೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರನ್ನು ಬರಮಾಡಿಕೊಳ್ಳಲಿರುವ ಪ್ರಧಾನಿ ಮೋದಿ

Posted On: 16 JAN 2018 6:41PM by PIB Bengaluru

ಗುಜರಾತ್ ನಲ್ಲಿ ನಾಳೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರನ್ನು ಬರಮಾಡಿಕೊಳ್ಳಲಿರುವ ಪ್ರಧಾನಿ ಮೋದಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಗುಜರಾತ್ ಗೆ ಭೇಟಿ ನೀಡುತ್ತಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಶ್ರೀಮತಿ ಸಾರಾ ನೆತನ್ಯಾಹು ಅವರೊಂದಿಗೆ ಸೇರಿಕೊಳ್ಳಲಿದ್ದಾರೆ.

ಅಹಮದಾಬಾದ್ ನಗರ ಶ್ರೀಮತಿ ಮತ್ತು ಶ್ರೀ ನೆತನ್ಯಾಹು ಅವರನ್ನು ಸ್ವಾಗತಿಸಲು ಸಜ್ಜಾಗಿದ್ದು, ಅವರು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಸಬರಮತಿ ಆಶ್ರಮಕ್ಕೆ ತೆರಳಲಿದ್ದಾರೆ. ಅವರು ಸಬರಮತಿ ಆಶ್ರಮದಲ್ಲಿ ಮಹಾತ್ಮಾಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.

ಪ್ರಧಾನ ಮಂತ್ರಿ ಮೋದಿ ಮತ್ತು ಪ್ರಧಾನ ಮಂತ್ರಿ ನೇತನ್ಯಾಹು ಅವರು ಅಹಮದಾಬಾದ್ ನಲ್ಲಿ ಡಿಯೋ ಧೋಲೇರಾ ಗ್ರಾಮದಲ್ಲಿ ಐ ಕ್ರಿಯೇಟ್ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ನವೋದ್ಯಮ ವಸ್ತುಪ್ರದರ್ಶನಕ್ಕೆ ಭೇಟಿ ನೀಡಲಿರುವ ಅವರು, ನಾವಿನ್ಯದಾರರು ಮತ್ತು ನವೋದ್ಯಮಗಳ ಸಿಇಓಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಇಬ್ಬರೂ ಪ್ರಧಾನಮಂತ್ರಿಗಳು, ವಿಡಿಯೋ ಲಿಂಕ್ ಮೂಲಕ ಬನಸ್ಕಾಂತ ಜಿಲ್ಲೆಯ ಸುಯ್ಗಮ್ ತಾಲೂಕಿಗೆ ಸಂಚಾರಿ ಜಲ ಶುದ್ಧೀಕರಣ ವಾಹನವನ್ನು ಸಮರ್ಪಿಸಲಿದ್ದಾರೆ. ಇಬ್ಬರೂ ನಾಯಕರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಪ್ರಧಾನಮಂತ್ರಿ ನೆತನ್ಯಾಹು ಮತ್ತು ಪ್ರಧಾನಿ ಮೋದಿ ಅವರು ಬನಸ್ಕಾಂತ ಜಿಲ್ಲೆಯ ವದ್ರದ್ ನಲ್ಲಿನ ತರಕಾರಿಗಳ ಕುರಿತ ಶ್ರೇಷ್ಠತೆಯ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಕೇಂದ್ರದ ಕಾರ್ಯಯೋಜನೆಗಳ ಬಗ್ಗೆ ಅವರಿಗೆ ಸಂಕ್ಷಿಪ್ತವಾಗಿ ವಿವರಿಸಲಾಗುತ್ತದೆ. ಬುಜ್ ಜಿಲ್ಲೆಯ ಕುಕಮಾದಲ್ಲಿ ಅವರು ವಿಡಿಯೋ ಲಿಂಕ್ ಮೂಲಕ ಖರ್ಜೂರ ವೃಕ್ಷದ ಶ್ರೇಷ್ಠತೆಯ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಇಬ್ಬರೂ ಪ್ರಧಾನಮಂತ್ರಿಯವರು ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ನೆತನ್ಯಾಹು ಅವರು ಮುಂಬೈಗೆ ಪ್ರಯಾಣ ಬೆಳೆಸಲಿದ್ದಾರೆ.

***



(Release ID: 1516909) Visitor Counter : 160


Read this release in: English , Assamese