ಪ್ರಧಾನ ಮಂತ್ರಿಯವರ ಕಛೇರಿ

"ಆರ್ಥಿಕ ನೀತಿ – ಮುಂದಿನ ಹಾದಿ" ಕುರಿತ ನೀತಿ ಆಯೋಗದ ಅರ್ಥಶಾಸ್ತ್ರಜ್ಞರು ಮತ್ತು ತಜ್ಞರೊಂದಿಗಿನ ಸಂವಾದದಲ್ಲಿ ಭಾಗಿಯಾದ ಪ್ರಧಾನಿ

Posted On: 10 JAN 2018 7:20PM by PIB Bengaluru

"ಆರ್ಥಿಕ ನೀತಿ – ಮುಂದಿನ ಹಾದಿ" ಕುರಿತ ನೀತಿ ಆಯೋಗದ ಅರ್ಥಶಾಸ್ತ್ರಜ್ಞರು ಮತ್ತು ತಜ್ಞರೊಂದಿಗಿನ ಸಂವಾದದಲ್ಲಿ ಭಾಗಿಯಾದ ಪ್ರಧಾನಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ನೀತಿ ಆಯೋಗ ಆರ್ಥಿಕ ನೀತಿ – ಮುಂದಿನ ಹಾದಿ ಕುರಿತ ವಿಷಯದ ಮೇಲೆ ಆಯೋಜಿಸಿದ್ದ 40 ಕ್ಕೂ ಹೆಚ್ಚು ಆರ್ಥಶಾಸ್ತ್ರಜ್ಞರು ಇತರ ತಜ್ಞರೊಂದಿಗಿನ ಸಂವಾದದಲ್ಲಿ ಭಾಗಿಯಾದರು.

ಈ ಸಂವಾದದ ವೇಳೆ, ಭಾಗಿಯಾದವರು ವಿವಿಧ ಆರ್ಥಿಕ ವಿಷಯಗಳು ಅಂದರೆ, ಬೃಹತ್ ಆರ್ಥಿಕತೆ, ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ, ಉದ್ಯೋಗ, ಆರೋಗ್ಯ ಮತ್ತು ಶಿಕ್ಷಣ, ಉತ್ಪಾದನೆ ಮತ್ತು ರಫ್ತು, ನಗರಾಭಿವೃದ್ಧಿ, ಮೂಲಸೌಕರ್ಯ ಮತ್ತು ಸಂಪರ್ಕ ಕುರಿತ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಕೇಂದ್ರ ಹಣಕಾಸು ಸಚಿವ ಶ್ರೀ ಅರುಣ್ ಜೇಟ್ಲಿ ಅವರು ಇದರಲ್ಲಿ ಭಾಗಿಯಾದ ಎಲ್ಲರಿಗೂ ಅವರ ಚಿಂತನಶೀಲ ಸಲಹೆಗಳಿಗೆ ಧನ್ಯವಾದ ಅರ್ಪಿಸಿದರು.

ಈ ಸಂವಾದದ ವೇಳೆ , ಪ್ರಧಾನಿಯವರು, ಆರ್ಥಿಕತೆಯ ವಿವಿಧ ಆಯಾಮಗಳ ಕುರಿತಂತೆ ಅನೇಕ ತಜ್ಞರ ಸಲಹೆಗಳು ಮತ್ತು ಅಭಿಪ್ರಾಯಗಳಿಗೆ ಧನ್ಯವಾದ ಅರ್ಪಿಸಿದರು. ಅದರಲ್ಲೂ ವಿವಿಧ ವಿಷಯ ತಜ್ಞರು ನೀಡಿದ ಗುಣಮಟ್ಟದ ಸಲಹೆಗಳಿಗೆ ಅವರು ಮೆಚ್ಚುಗೆ ಸೂಚಿಸಿದರು.

ಈ ಸಭೆಯಲ್ಲಿ ಆರ್ಥಿಕ ವಿಚಾರಗಳನ್ನು ನೋಡಿಕೊಳ್ಳುವ ಕೇಂದ್ರದ ಅನೇಕ ಸಚಿವರು ಪಾಲ್ಗೊಂಡಿದ್ದರು. ನೀತಿ ಆಯೋಗದ ಉಪಾಧ್ಯಕ್ಷ ಶ್ರೀ ರಾಜೀವ್ ಕುಮಾರ್, ಮತ್ತು ನೀತಿ ಆಯೋಗದ ಹಾಗೂ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಸಹ ಹಾಜರಿದ್ದರು.

***



(Release ID: 1516407) Visitor Counter : 154


Read this release in: Telugu , English